ಗಂಡ : ಇವತ್ತು ಹೊರಗೆ ಊಟ ಮಾಡೋಣ.

ಹೆಂಡತಿ : ಹಾಗಿದ್ರೆ ಇರಿ... ನಾನು ಬೇಗ 2 ನಿಮಿಷದಲ್ಲಿ ರೆಡಿ ಆಗಿ ಬರ್ತೀನಿ.

ಗಂಡ : ನಾನು ಹೇಳಿದ್ದು ಹೊರಗೆ ಅಂಗಳದಲ್ಲಿ ತಣ್ಣಗೆ ಗಾಳಿ ಬೀಸ್ತಿದೆ. ಅಲ್ಲಿ ಚಾಪೆ ಹಾಸ್ತೀನಿ, ಅಲ್ಲೇ ಊಟ ಮಾಡೋಣ ಅಂತ.

ಪತ್ನಿ ತನ್ನ ಪತಿಗೆ ಮೆಸೇಜ್‌ ಕಳುಹಿಸಿದಳು, ಐ ಆ್ಯಮ್ ಡೈಯಿಂಗ್‌.

ಪತಿ ಖುಷಿಯಿಂದ ಸಂಭ್ರಮಿಸುತ್ತಾ  ರಿಪ್ಲೈ ಕೊಟ್ಟ, ಸ್ವೀಟ್‌ ಹಾರ್ಟ್‌, ಹೌ ಕ್ಯಾನ್‌ ಐ ಲಿವ್ ‌ವಿತ್‌ಔಟ್‌ ಯೂ?

ಅವಳು ತಕ್ಷಣ ಜಬರಿಸಿದಳು, `ರೀ... ನಾನು ಹೇಳಿದ್ದು ಡೈ ಹಚ್ಚಿಕೊಳ್ತಾ ಇದ್ದೀನಿ,' ಅಂತ.

ಪತಿ : ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 4ಜಿ ಬಳಸಿದರು ಯಾರು?

ಪತ್ನಿ : ಬಹುಶಃ ... ಅನಿಲ್ ‌ಕಪೂರ್‌ ಇರಬೇಕು. `ರಾಮ್ ಲಖನ್‌` ಚಿತ್ರದಲ್ಲಿ ಏಜಿ, ಓಜಿ, ಯೋಜಿ, ಸುನೋಜಿ ಅಂತ 4 ಸಲ....

ಪತ್ನಿ : ಏನ್ರಿ, ಕೇಳಿಸ್ಕೊಳ್ಳಿ. ನಮ್ಮ ಮಗ ಸಹ ಮುಂದೆ ನಿಮ್ಮ ತರಹ ಪುಢಾರಿ ಆಗ್ತಾನೇ ಅನ್ಸುತ್ತೆ.

ಪತಿ : ಅದನ್ನು ಹೇಗೆ ಹೇಳ್ತೀಯಾ?

ಪತ್ನಿ : ನೀವು ಸಂಸತ್ತಿನಿಂದ ಹೇಗೆ ಲಾಕ್‌ಔಟ್‌ ಮಾಡ್ತೀರೋ ಹಾಗೇ, ತನ್ನ ಪಾಠ ಅರ್ಥವಾಗದಿದ್ದಾಗೆಲ್ಲ ಅವನು ಕ್ಲಾಸಿನಿಂದ ಲಾಕ್‌ಔಟ್‌ ಮಾಡ್ತಿರ್ತಾನೆ ಅಂತ ಟೀಚರ್‌ ಶಾಲೆಯ ಡೈರೀಲಿ ಬರೆದು ಕಳಿಸಿದ್ದಾರೆ!

ಒಬ್ಬ ಮಹಿಳೆಯನ್ನು ಸಂದರ್ಶಿಸುತ್ತಾ ಒಬ್ಬ ವರದಿಗಾರ ಪ್ರಶ್ನೆಗಾರಂಭಿಸಿದ.

ಪತ್ರಕರ್ತ : ನಿಮ್ಮ ಹುಟ್ಟಿದ ದಿನಾಂಕ?

ಮಹಿಳೆ : 15ನೇ ಜೂನ್‌.

ಪತ್ರಕರ್ತ : ಮತ್ತೆ ವರ್ಷ....?

ಮಹಿಳೆ : ವರ್ಷ ವರ್ಷ ಅದೇ ದಿನ! ನಾನು ಹಾಗೆಲ್ಲ ಒಮ್ಮೆ ಕೊಟ್ಟ ಮಾಹಿತಿಯನ್ನು ಬದಲಾಯಿಸೋಲ್ಲ.

ನ್ಯಾಯಾಧೀಶರು : ನಿಮ್ಮ ಕುರಿತಾಗಿ ಏನು ಹೇಳಲು ಬಯಸುವಿರಿ?

ಆಪಾದಿತೆ : ಏನೆಂದು ಹೇಳಲಿ... ಏನೇನು ಹೇಳಿ? ನನ್ನ ಬಗ್ಗೆ ನಾನೇ ಹೊಗಳಿಕೊಳ್ಳಬಾರದು. ನನ್ನ ಬಾಲ್ಯದಿಂದ ಆರಂಭಿಸಿ ಇಲ್ಲಿಯವರೆಗಿನ ಎಲ್ಲಾ ವಿಷಯ ಹೇಳಬಯಸುತ್ತೇನೆ. ಆದರೆ ಕೋರ್ಟಿಗೆ ಅಷ್ಟೂ ಕೇಳಿಸಿಕೊಳ್ಳಲು ಧಾರಾಳ ಸಮಯ ಇರಬೇಕಷ್ಟೆ.

ಇಬ್ಬರು ಹೆಂಗಸರಿಗೆ 1-1 ವರ್ಷದ ಕಠಿಣ ಶಿಕ್ಷೆಯ ನಂತರ ಬಿಡುಗಡೆ ಆಯಿತು. 1 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಅಗಲಬೇಕಾದಾಗ ಇಬ್ಬರೂ ಹೇಳಿಕೊಂಡರು, ``ಬಿಡು, ಉಳಿದ ವಿಷಯವನ್ನು ವಿವರವಾಗಿ ಫೋನಿನಲ್ಲಿ ಮಾತನಾಡಿಕೊಳ್ಳೋಣ.''

ನೀರಜಾಳ ಬರ್ತ್‌ಡೇ ಬಂದಿತು. ಗಂಡ ರಂಗನನ್ನು ಏನಾದರೂ ಗಿಫ್ಟ್ ಕೊಡಿಸುವಂತೆ ಪೀಡಿಸುತ್ತಲೇ ಇದ್ದಳು. ಬರ್ತ್‌ಡೇ ದಿನ ಗಂಡ ಅವಳಿಗಾಗಿ ಹಾಡತೊಡಗಿದ.

ರಂಗ : ಬಂಗಾರದೊಡವೆ ಬೇಕೇ... ನೀರೇ... ಬಂಗಾರದೊಡವೆ ಬೇಕೇ....

ನೀರಜಾ : ಹೂಂ... ಹೂಂ... ಅದನ್ನೇ ಕೊಡಿಸಿ ಸಾಕು.

ರಂಗ : ಆಯ್ತಲ್ಲ ಗಿಫ್ಟ್ ಕೊಟ್ಟಿದ್ದು?

ನೀರಜಾ : ಎಲ್ಲಿ ಕೊಟ್ರಿ?

ರಂಗ : ಹಾಡನ್ನೇ ಗಿಫ್ಟ್ ಆಗಿ ಕೊಟ್ಟಿದ್ದು!

ಪತಿ : ಇವತ್ತು ಬೆಳಗ್ಗೆ ಎದ್ದಾಗ ಯಾರ ಮುಖ ನೋಡಿದೆನೋ ಗೊತ್ತಿಲ್ಲ. ಇಷ್ಟು ಹೊತ್ತಾದ್ರೂ ಕಾಫಿ ಇಲ್ಲ ತಿಂಡಿ ಇಲ್ಲ. ಸ್ವಲ್ಪ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯ ಆಗಿಬಿಡುತ್ತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ