ಆಟದ ಜೊತೆ ಗ್ಲಾಮರ್ ಮಜಾ : ಅಮೆರಿಕಾದ ಜನಪ್ರಿಯ ಆಟ ಫುಟ್‌ಬಾಲ್‌ನ ಮುಖ್ಯ ಮ್ಯಾಚ್‌ `ಸೂಪರ್‌ ಬಾಲ್ ‌’ ಮೂಲಕ ಗಾಯಕಿ ಬಿಯಾನ್ಸ್ ಹಾಡುಗಾರಿಕೆಯ ಮನರಂಜನೆ ಒದಗಿಸಿದರು. ಅಮೆರಿಕಾದ ಜನರಂತೂ ಈ ಆಟಕ್ಕಾಗಿ ಹೇಗೆ ಮುಗಿಬಿದ್ದಿದ್ದಾರೆ ಎಂದರೆ, ಇದರ ರಿಲೇ ಸಮಯದಲ್ಲಿ ಗಂಟೆಗಟ್ಟಲೆ ಟಿ.ವಿ. ಮುಂದೆ ಕುಳಿತು ಬಿಡುತ್ತಾರೆ. ಕೇವಲ ಆಟಗಾರರ ಅಭಿಮಾನಿಗಳು ಮಾತ್ರವಲ್ಲದೆ ಇವರು ಇಂಥ ಗಾಯಕಿ, ನರ್ತಕಿಯರ ಅಖಂಡ ಅಭಿಮಾನಿಗಳೂ ಕೂಡ!

ಮೋಜಿಗೆ ಮಿತಿಯುಂಟೇ? : ತಮ್ಮ ಮೋಜುಮಸ್ತಿಯ ವ್ಯವಹಾರದಿಂದ ಖ್ಯಾತರಾದ ವಿಜಯ್‌ ಮಲ್ಯ ಯುನೈಟೆಡ್‌ ಬ್ರಿವರೇಜ್‌ನ ಮಾಜಿ ಮಾಲೀಕರು. ಅವರು ಮೊದಲು ತಮ್ಮ ಕಂಪನಿ ಮಾರಿಬಿಟ್ಟರು, ದೊಡ್ಡ ಮೊತ್ತದ ರೊಕ್ಕ ಗಿಟ್ಟಿಸಿ ನಂತರ ಡೈರೆಕ್ಟರ್‌ಪದವಿಯನ್ನೂ ತ್ಯಜಿಸಿದರು. ಇವರ ಕಂಪನಿಗೆ ಸಾಲ ಕೊಟ್ಟರು ಈಗ ನಷ್ಟ ತುಂಬಿಸುತ್ತಿದ್ದಾರೆ, ಆದರೇನಂತೆ? ವಿಜಯ್‌ ಮಲ್ಯಾರ ಮೋಜಿಗೇನೂ ಕೊರತೆಯಿಲ್ಲ.

ಶಾಪಿಂಗ್ಜೊತೆ ಧಾರಾಳ ಮಜಾ : ಶಾಪಿಂಗ್‌ ಜೊತೆ ತುಸು ಆ್ಯಕ್ಟಿವ್‌ ಸಹ ಆಗಿರಬೇಕಾದ ಗುಣ ಕಲಿಯಿರಿ. ಅಮೆರಿಕಾದ ದೊಡ್ಡ ಸ್ಟೋರ್‌ ಜೆಸ್ಸಿ ಪ್ಯಾನಿಯು ಮ್ಯಾಕ್ಸಿಂ ಚಮೇರಕೋಸ್ಕಿ ಹಾಗೂ ಪೀಟಾ ಮುರ್ಗಟರಾಯ್ಡ್ ಇಬ್ಬರನ್ನೂ ತನ್ನ ಗ್ರಾಹಕರಿಗೆ ಡ್ಯಾನ್ಸ್ ಸ್ಟೆಪ್‌ ಕಲಿಸಲು ಕರೆಸಿಕೊಂಡಿದೆ. ಈ ಕಂಪನಿಯಲ್ಲಿ ಆ್ಯಕ್ಟಿವ್ ಶಾಪಿಂಗ್‌ ನಡೆಸುವ ಗ್ರಾಹಕರು ಹಾಯಾಗಿ ಈಗ ಖರೀದಿಸುವಿಕೆ ಜೊತೆ ಇಂಥ ಸ್ಟಾರ್‌ ಕೊರಿಯೋಗ್ರಾಫರ್‌ಗಳಿಂದ ಡ್ಯಾನ್ಸ್ ಸಹ ಕಲಿಯಬಹುದು. ನೀವು ಏಕೆ ಅಲ್ಲಿ ಶಾಪಿಂಗ್‌ ಮಾಡಬಾರದು?

ನಮ್ಮ ಕಥೆಯನ್ನೂ ಕೇಳಿ : ಇಂಡಿಯನ್‌ ಪೀನಲ್ ಕೋಡ್‌ನ ಕಲಂ 377 ಅಸಿಂಧುವೋ ಅಲ್ಲವೋ ಎಂಬುದರ ಕುರಿತು ಸುಪ್ರೀಂಕೋರ್ಟ್‌ ಮತ್ತೆ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸಲಿಂಗ ಕಾಮಿಗಳ ಸಮುದಾಯ ಉದಾರ ನಿರ್ಣಯ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ನ್ನು ಒತ್ತಾಯಿಸುತ್ತಾ ಎಲ್ಲಾ ಮಹಾನಗರಗಳಲ್ಲೂ ದೊಡ್ಡ ಮೆರವಣಿಗೆ ನಡೆಸುತ್ತಿದೆ. ದಟ್ಟ ಕಂದಾಚಾರ ತುಂಬಿರುವ ಭಾರತದಂಥ ದೇಶಗಳಲ್ಲಿ ಇವರ ಕೂಗು ಮುಟ್ಟೀತೇ?

ಶಿಕ್ಷೆ ಏನೋ ಮುಗಿಯಿತು ಕಲೆ ಮಾಸುವುದೆಂದು? : ಸಂಜಯ್‌ ದತ್ 3 ವರ್ಷಗಳ ಕಠಿಣ ಶಿಕ್ಷೆ ಅನುಭವಿಸಿ ಹೊರಬಂದರು. 1993ರಲ್ಲಿ ತಮ್ಮ ಬಳಿ ಎಕೆ47 ಹೊಂದಿದ್ದರು ಎಂಬ ಕಾರಣಕ್ಕಾಗಿ ಇವರನ್ನು ಬಂಧಿಸಲಾಗಿತ್ತು,  ನರ್ಗಿಸ್‌ ಸುನೀಲ್ ‌ದತ್ ರ ದೊಡ್ಡ ಮಗನಾದ ಇವರಿಗೆ ಎಲ್ಲಿ ಹಿಂದೂಗಳು ತಮ್ಮ ಮನೆಯ ಮೇಲೆ ದಾಳಿ ನಡೆಸುತ್ತಾರೋ ಎಂಬ ಭಯವಿತ್ತು. ಕಾನೂನು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕನ್ಹಯ್ಯ ಕುಮಾರ್‌ನ ಕೇಸ್‌ನಲ್ಲಿ ನಾವು ಗಮನಿಸಿದ್ದೇವೆ. ಇದರಲ್ಲಿ ಆ ವಕೀಲರಿಗಂತೂ ಏನೂ ಹೇಳಲೇ ಇಲ್ಲ. ಅವರುಗಳು ಕೋರ್ಟಿನಲ್ಲಿ ಕನ್ಹಯ್ಯನನ್ನು ಚೆನ್ನಾಗಿಯೇ ದಬಾಯಿಸಿದ್ದರು. ಆದರೆ ಜಾಮೀನು ಕೊಡಬೇಕಾದ ಹೈಕೋರ್ಟ್‌ನ ಜಡ್ಜ್ ಕನ್ಹಯ್ಯನಿಗೆ, ಆತ ದೇಶದ್ರೋಹಿ ಅಲ್ಲ ಎಂದು ಮುಂದಿನ 6 ತಿಂಗಳೊಳಗೆ ಸಾಬೀತುಪಡಿಸಬೇಕೆಂದು ಹೇಳಿದರು. ಸಂಜಯ್‌ ದತ್ ಏಕೆ ಹೆದರಿದ್ದರು, ಈ ಕುರಿತಾಗಿ ಯಾರೂ ಏನೂ ಹೇಳಲಿಲ್ಲ. ಆದರೆ ಅವರನ್ನು ದೇಶದ್ರೋಹಿ ಎಂಬ ಹಣೆಪಟ್ಟಿ ಅಂಟಿಸಿ ಜೈಲಿಗೆ ಕಳುಹಿಸಲಾಗಿತ್ತು.

ತೆರೆದ ದೇಹ ಪ್ರದರ್ಶಿಸುವಂಥ ಉಡುಗೆಯೇ ಸೂಪರ್‌! : ಕಪ್ಪು ಉಡುಗೆ ಸಹ ಆಕರ್ಷಕ ಎನಿಸುತ್ತದೆ. ಆದರೆ ಯಾವಾಗ ಅದರ ರಚನೆ ಸಂಪೂರ್ಣ ಪಾರದರ್ಶಕವಾಗಿದ್ದು, ಒಳಗಿನ ದೇಹ ಕಾಣಿಸುವಂತಿದ್ದಾಗ ಮಾತ್ರ ಅದು ಸೂಪರ್‌! ಈ ವಿಶಿಷ್ಟ ಕ್ರಿಯೇಶನ್‌ಮಿಯಾನ್‌ನ ಫ್ಯಾಷನ್‌ ವೀಕ್‌ನಲ್ಲಿ ಕಂಡುಬಂತು.

Tags:
COMMENT