ಪರ್ಫೆಕ್ಟ್ ಆಫೀಸ್‌ವೇರ್‌ ಯಾವುದು ಅಂತೀರಾ? ಅದು ನೋಡಲು ಆಕರ್ಷಕ, ಧರಿಸಲು ಆರಾಮದಾಯಕ ಹಾಗೂ ಗೆಟಪ್ ಸ್ಟೈಲಿಶ್‌ ಆಗಿರುವುದರ ಜೊತೆ ಲೇಟೆಸ್ಟ್ ಫ್ಯಾಷನ್‌ ಸಹ ಆಗಿರಬೇಕು, ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವಂತಿರಬೇಕು. ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್ ನಿಮ್ಮ ಫರ್ಸನಾಲ್ಟಿಯ ಪ್ರತಿಬಿಂಬವೇ ಸರಿ.

ನೀವು ಆಫೀಸ್‌ನಲ್ಲಿ ನಿಮ್ಮ ಅಗತ್ಯ ಹಾಗೂ ಇಂದಿನ ಫ್ಯಾಷನ್‌ಗೆ ತಕ್ಕಂತೆ ಹಲವು ಆಪ್ಶನ್ಸ್ ಟ್ರೈ ಮಾಡಬಹುದು :

ಜೀನ್ಸ್/ಪ್ಯಾಂಟ್‌/ಲೆಗಿಂಗ್ಸ್ ಜೊತೆ ಕುರ್ತಿಗಳು : ಇತ್ತೀಚೆಗೆ ಎಲ್ಲಾ ಉದ್ಯೋಗಸ್ಥ ವನಿತೆಯರು ಕುರ್ತಿಗಳನ್ನು ಧರಿಸಲು ಬಯಸುತ್ತಾರೆ. ಏಕೆಂದರೆ ಇದರಲ್ಲಿ ದುಪಟ್ಟಾ ಸರಿಪಡಿಸಿಕೊಳ್ಳುವ ಸಮಸ್ಯೆ ಇಲ್ಲ ಅಥವಾ ಸೀರೆ ತರಹ ಭಾರಿ ಉಡುಗೆಯನ್ನು ಹೊರಬೇಕಾದ ಅನಿವಾರ್ಯತೆ ಇಲ್ಲ. ಜೀನ್ಸ್/ಪ್ಯಾಂಟ್‌/ಲೆಗಿಂಗ್ಸ್ ಜೊತೆ ಕಾಟನ್‌ ಅಥವಾ ಸಿಲ್ಕ್ ನ ಶಾರ್ಟ್‌/ಲಾಂಗ್‌ ಕುರ್ತಿ ಧರಿಸಿ ಸ್ಮಾರ್ಟ್‌ ಆಗಿ ರೆಡಿ ಆಗಬಹುದು. ಈ ಡ್ರೆಸ್‌ ಆಫೀಸ್‌ ವಾತಾವರಣದಲ್ಲಿ ಫಾರ್ಮ್‌ ಎನಿಸುತ್ತದೆ, ಎಲಿಗೆಂಟ್‌ ಲುಕ್ಸ್ ಸಹ ಕೊಡುತ್ತದೆ. ಲೋ ಬಜೆಟ್‌ ಆಗಿರುವುದರ ಜೊತೆ ಹೆಚ್ಚಿನ ಓಡಾಟದ ಕೆಲಸಕ್ಕೂ ಇದು ಹಿತಕರ.

ಫಾರ್ಮಲ್ ಶರ್ಟ್ವಿತ್ಜೀನ್ಸ್ : ಈ ಡ್ರೆಸ್‌ ಸಾಕಷ್ಟು ಪ್ರೊಫೆಶನಲ್ ಲುಕ್‌ ಕೊಡುತ್ತದೆ. ಸ್ಲಿಮ್ ಯುವತಿಯರು ಶರ್ಟ್‌ ಇನ್‌ ಮಾಡಿ ಸ್ಮಾರ್ಟ್‌ ಲುಕ್‌ ಪಡೆಯಬಹುದು. ಅಕಸ್ಮಾತ್‌ ದಪ್ಪ ಅನಿಸಿದರೆ ಶರ್ಟ್‌ನ್ನು ಔಟ್‌ ಆಗಿ ಬಿಟ್ಟರೆ ಸರಿ, ಕೂಲ್ ‌ಎನಿಸುತ್ತದೆ. ಆಫೀಸ್‌ವೇರ್‌ಗಾಗಿ ಪೇಸ್ಟಲ್ ನ್ಯೂಟ್ರಲ್ ಶೇಡ್ಸ್ ನ ಪ್ಲೇನ್‌/ಸ್ಟ್ರೈಪ್ಡ್ ಶರ್ಟ್‌ ಉತ್ತಮ ಅನಿಸುತ್ತದೆ. ಲೈಟ್‌ ಪಿಂಕ್‌, ಸ್ಕೈ ಬ್ಲೂ, ಯೆಲ್ಲೋ, ವೈಟ್‌ ಕಲರ್‌ಗಳನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ತುಸು ಡಿಫರೆಂಟ್‌ ಆಗಿ ತೋರ್ಪಡಿಸಲು ಬ್ರೈಟ್‌ ಕಲರ್ಸ್ ಬಳಸಬಹುದು. ಇದರ ಮೇಲೆ ತೆಳು ಬಣ್ಣದ ಬ್ಲೇಝರ್‌ ಧರಿಸಬಹುದು. ಜೀನ್ಸ್ ಮಾತ್ರ ಟ್ರೌಸರ್ಸ್‌ ಕೂಡ ಆಫೀಸ್‌ವೇರ್‌ಗೆ ಚೆನ್ನಾಗಿರುತ್ತದೆ.

ಸ್ಕರ್ಟ್‌ : ಸ್ಟೈಲಿಶ್‌ ಲುಕ್ಸ್ ಗಾಗಿ, ನೀಟ್‌ ಸ್ಲಿಮ್ ಫಿಟೆಡ್‌ ಸ್ಕರ್ಟ್‌ ಸಹ ಚೆನ್ನಾಗಿರುತ್ತದೆ. ಒಂದೇ ಬಣ್ಣದ ಲಾಂಗ್‌ ಸ್ಕರ್ಟ್‌ ಅಥವಾ ಟ್ಯೂನಿಕ್‌ ಜೊತೆ ಕಾಂಟ್ರಾಸ್ಟ್ ಪ್ಲೇನ್‌ ಶಾರ್ಟ್ಸ್ ಬಹಳ ಉತ್ತಮ ಎನಿಸುತ್ತದೆ. ನೀವು ಆಫೀಸ್‌ಗಾಗಿ ಹಲವು ಬಗೆಯ ಸ್ಕರ್ಟ್‌ ಟ್ರೈ ಮಾಡಬಹುದು. ಪೆನ್ಸಿಲ್ ‌ಸ್ಕರ್ಟ್‌, ಸಾದಾಸೀದಾ, ಸಿಂಪಲ್ ಫಿಟೆಡ್‌ ಆಗಿರುತ್ತದೆ. ವೇಸ್ಟ್ ಬ್ಯಾಂಡ್‌ನಿಂದ ಸೈಡ್‌ ಫ್ಲೇಯರ್ಡ್‌ ಸ್ಕರ್ಟ್‌ನಲ್ಲಿ ಫ್ರಂಟ್‌ ಸೈಡ್‌ ಅಥವಾ ಬ್ಯಾಕ್‌ನಲ್ಲಿ 2 ಸ್ಲಿಟ್ಸ್ ಇನ್ನಷ್ಟು ಸ್ಟೈಲಿಶ್‌ ಲುಕ್ಸ್ ಕೊಡುತ್ತವೆ. ಇದರ ಹೊರತಾಗಿ ರಾಪ್‌ರೌಂಡ್‌ ಸ್ಕರ್ಟ್‌ ಅಥವಾ ರಾಜಾಸ್ಥಾನಿ ಪ್ರಿಂಟ್ಸ್ ವುಳ್ಳ ಸ್ಟ್ರೈಪ್ಡಾ ಲಾಂಗ್‌ ಸ್ಕರ್ಟ್‌ ಸಹ ಕುರ್ತಿ ಜೊತೆ ಫ್ರೆಶ್‌ ಲುಕ್ಸ್ ನೀಡುತ್ತವೆ.

ಫ್ರಾಕ್ಸೂಟ್‌ : ಇತ್ತೀಚೆಗೆ ಮಾರುಕಟ್ಟೆಯಲ್ಲಿ ಫ್ರಾಕ್‌ ಸೂಟ್‌ ಬಹಳ ಜನಪ್ರಿಯ ಎನಿಸಿದೆ. ಉದ್ದನೆ ಗೆರೆಗಳುಳ್ಳ, ಆಕರ್ಷಕ ವರ್ಕ್‌ನಿಂದ ಸುಸಜ್ಜಿತಗೊಂಡ ನೆಟ್‌ನ ಪೂರ್ತಿ ತೋಳಿನ ಫ್ರಾಕ್‌ ಸೂಟ್‌ ಇರಲಿ ಅಥವಾ ಶಾರ್ಟ್‌ ಸ್ಲೀವ್ಸ್ ನ ವೈಟ್‌ ಸ್ಟ್ರೈಪ್ಸ್ ನ ಪ್ಯಾಚ್ ವರ್ಕ್‌ನಿಂದ ಅಲಂಕರಿಸಿದ ಕಾಟನ್‌ ಫ್ರಾಕ್‌ ಸೂಟ್‌ ಇರಲಿ, ಇದರಲ್ಲಿ ಯಾವುದನ್ನು ಧರಿಸಿದರೂ ನೀವು ಡೀಸೆಂಟ್‌ಗಾರ್ಜಿಯಸ್ ಎನಿಸುತ್ತೀರಿ.

ಸೀರೆ : ಆಯಾ ಸಂದರ್ಭಕ್ಕೆ ಅನುಸಾರ, ಡಿಸೈನರ್‌ ಬ್ಲೌಸ್‌ ಜೊತೆ ಸ್ಟೈಲಿಶ್‌ ಆಗಿ ಉಟ್ಟ ಸೀರೆ ನಿಮಗೆ ಆಕರ್ಷಕ ಲುಕ್ ಕೊಡುತ್ತದೆ. ಆಫೀಸ್‌ಗೆ ಹೋಗುವಾಗ ಸಿಂಪಲ್ ಸೋಬರ್‌ ಲುಕ್ಸ್ ನ ಸೀರೆಯೇ ಸರಿ, ಭಾರಿ ಜರಿಯ ಸೀರೆಗಳು ಬೇಡ.

ಆಫೀಸ್‌ಗಾಗಿ ಕಾಟನ್‌, ಶಿಫಾನ್‌, ಜಾರ್ಜೆಟ್‌ ಸೀರೆಗಳು ಚೆನ್ನಾಗಿರುತ್ತವೆ. ದಾವಣಗೆರೆ, ಬೆಂಗಳೂರು, ತಮಿಳುನಾಡು, ಕೋಲ್ಕತಾ, ಅಹಮದಾಬಾದ್‌ ಮೂಲದ ಕಾಟನ್‌ ಸೀರೆಗಳು ಹಾಗೂ ಬಂಧೇಜ್‌, ಲಹರಿಯಾ, ಪ್ರಿಂಟೆಡ್‌ ಶಿಫಾನ್‌ನ ಸೀರೆಗಳನ್ನು ಪೇಸ್ಟಲ್, ಬೇಜ್‌, ಐವರಿ ಇತ್ಯಾದಿ ಬಣ್ಣಗಳಲ್ಲಿ ಆರಿಸಿ ಆಫೀಸ್‌ಗೆ ಉಟ್ಟುಕೊಳ್ಳಿ.

ಡಿಫರೆಂಟ್ಆಗಿ ಕಾಣಿಸಲು : ಮಂಡಿಯವರೆಗಿನ ಲೆಂತ್‌ವುಳ್ಳ ನೆಹರೂ ಜಾಕೆಟ್‌ ಜೊತೆ ಫ್ಲ್ಯಾಜೋ ಧರಿಸಿ. ಲೆಂಥ್‌ಕಟ್‌ ಹಾಗೂ ಡ್ರೆಸ್‌ಪ್ಲೀಟ್ಸ್ ಜೊತೆ ಎಕ್ಸ್ ಪಿರಿಮೆಂಟ್‌ ಮಾಡಿ. ಒಮ್ಮೊಮ್ಮೆ ಟ್ಯೂನಿಕ್‌ ಸಹ ಟ್ರೈ ಮಾಡಬಹುದು. ಅದರ ಮೇಲೆ ಜಾಕೆಟ್‌ ಧರಿಸಿ ಸ್ಮಾರ್ಟ್‌ ಲುಕ್ಸ್ ಪಡೆಯಿರಿ. ಯಾವುದಾದರೂ ವಿಶೇಷ ಸಮಾರಂಭಗಳಿದ್ದರೆ, ಆಫ್‌ ಶೋಲ್ಡರ್‌ ಅಥವಾ ಸಿಂಗಲ್ ಶೋಲ್ಡರ್‌ ಡ್ರೆಸ್ ಧರಿಸಬಹುದು.

ಹಲವು ಬಗೆಯ ಆ್ಯಕ್ಸೆಸರೀಸ್‌ ಧರಿಸಿ, ನಿಮ್ಮ ಡ್ರೆಸ್‌ಗೆ ಹೊಸ ಲುಕ್ಸ್ ಕೊಡಬಹುದು. ಬೀಡ್ಸ್ ಸ್ಟೋನ್‌ನಿಂದ ಸಜ್ಜುಗೊಂಡ ಡ್ರೆಸ್ ಜೊತೆ ಬ್ರೇಸ್‌ಲೆಟ್‌, ಇಯರ್‌ ರಿಂಗ್ಸ್ ಧರಿಸುವುದರಿಂದ ಡಿಫರೆಂಟ್‌ ಲುಕ್ಸ್ ಪಡೆಯಬಹುದು.

ಆಫೀಸ್‌ಗಾಗಿ ವಿಭಿನ್ನ ಡ್ರೆಸ್‌ಗಳು ಪ್ರತಿದಿನ ಒಂದೇ ತರಹದ ಡ್ರೆಸ್‌ ಧರಿಸುವುದರಿಂದ ಬೇಸರ ಆಗುವಂತೆ, ಮತ್ತೆ ಮತ್ತೆ ಒಂದೇ ಬಗೆಯ ಮೇಕಪ್‌ ಸಹ ಬೋರಿಂಗ್‌ ಅನಿಸುತ್ತದೆ.

ಬೀ ಸಿಂಪಲ್ ಇನ್ಫಾರ್ಮಲ್ ಕುರ್ತಿ : ಇತ್ತೀಚೆಗೆ ಹೆಚ್ಚು ಹೆಚ್ಚು ಹುಡುಗಿಯರು ಲಾಂಗ್‌ ಕುರ್ತಿಗಳನ್ನು ವಿತ್‌ ಪ್ಲಾಜೋ, ಲೆಗಿಂಗ್ಸ್ ಅಥವಾ ಜೀನ್ಸ್ ಜೊತೆ ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಈ ಡ್ರೆಸ್‌ ಜೊತೆ ನೀವು ನಿಮ್ಮನ್ನು ಅರ್ದನ್‌ ಶೇಡ್ಸ್ ನಿಂದ ಅಲಂಕರಿಸಿಕೊಳ್ಳಿ. ಇದಕ್ಕಾಗಿ ಕಂಗಳ ಮೇಲೆ ಬ್ರೌನ್‌ ಐ ಶ್ಯಾಡೋ ಹಚ್ಚಿರಿ. ಐ ಲಿಡ್‌ಗೆ ಬ್ಲ್ಯಾಕ್‌ ಶೇಡ್‌ ಆ್ಯಕ್ಸೆಂಟಿಡ್‌ ಲೈನರ್‌ನಿಂದ ಡಿಫೈನ್‌ ಮಾಡಿ. ಇತ್ತೀಚೆಗೆ ಈ ಲೈನರ್‌ ಟ್ರೆಂಡ್‌ನಲ್ಲಿದೆ. ಮೆಸಿ ಸ್ಟೈಲ್‌ನ್ನು ಫಾಲೋ ಮಾಡುತ್ತಾ, ಕೂದಲನ್ನು ಟೈಟ್‌ಪೋನಿಯಿಂದ ಕಟ್ಟಿಕೊಳ್ಳಿ ಹಾಗೂ ಲುಕ್‌ನ್ನು ಕಾಂಪ್ಲಿಮೆಂಟ್‌ಗೊಳಿಸಲು ಜಂಕ್‌ ಜ್ಯೂವೆಲರಿಯ ಸಹಾಯ ಪಡೆಯಿರಿ. ಕೊನೆಯಲ್ಲಿ ಕಂಗಳಿಗೆ ಸ್ಮಜ್‌ ಬೋಲ್ಡ್ ಕಾಜಲ್ ಹಾಗೂ ಹಣೆಗೆ ಸಣ್ಣ ಬ್ಲ್ಯಾಕ್‌ ಬಿಂದಿ ಇರಿಸಿ, ನಿಮ್ಮ ಈ ಎಥ್ನಿಕ್‌ ಲುಕ್‌ನ್ನು ಕಂಪ್ಲೀಟ್‌ ಮಾಡಿ.

ಪಿಂಕ್ಲುಕ್ವಿತ್ಶರ್ಟ್ಎಂಡ್ಟ್ರೌಸರ್‌ : ಆಫೀಸ್‌ ವಾತಾವರಣಕ್ಕೆ ಹೊಂದುವ ಟ್ರೌಸರ್‌ ಶರ್ಟ್‌, ನಿಮ್ಮ ಗರ್ಲಿಶ್‌ ಲುಕ್‌ನ್ನು ಹೈಡ್‌ ಮಾಡದಿರಲಿ, ಎಂಬುದಕ್ಕಾಗಿ ನೀವು ಪಿಂಕ್‌ ಲುಕ್ಸ್ ಫಾಲೋ ಮಾಡಿ. ಫ್ಲಾಲೆಸ್‌ ಲುಕ್‌ಗಾಗಿ ಫೇಸ್‌ ಮೇಲೆ ಸೂಫ್ಲೆ ಬಳಸಿರಿ. ಪಿಂಕ್‌ ಐ ಶ್ಯಾಡೋ ಹಚ್ಚಿರಿ ಹಾಗೂ ಕಂಗಳ ಕೆಳಗೆ ಕಾಡಿಗೆ ತೀಡಿ ಸ್ಮಜ್‌ ಮಾಡಿ. ಪಿಂಕ್‌ ಲುಕ್‌ನಲ್ಲಿ ತುಸು ಕಾಂಟ್ರಾಸ್ಟ್ ಆ್ಯಡ್ ಮಾಡಲು ಐ ಲಿಡ್‌ ಬ್ಲ್ಯಾಕ್‌ ಲೈನರ್‌ ಹಚ್ಚಿರಿ. ಕೆನ್ನೆಗಳ ಮೇಲೆ ಪಿಂಕ್‌ ಬ್ಲಶ್‌ ಆನ್‌ ಹಚ್ಚಿರಿ ಹಾಗೂ ತುಟಿಗಳಿಗೆ ಪಿಂಕ್‌ ಶೇಡ್‌ನ ಲಿಪ್‌ಸ್ಟಿಕ್‌ ತೀಡಿ ಲುಕ್‌ ಆಕರ್ಷಕವಾಗುವಂತೆ ಮಾಡಿ. ಕೂದಲನ್ನು ಹೈ ಪೋನಿಟೇಲ್‌ನಿಂದ ಕಟ್ಟಿಬಿಡಿ. ಕೂದಲು ಹರಡದಂತೆ ಅದಕ್ಕೆ ಜೆಲ್ ‌ಹಚ್ಚಿರಿ. ಬೇಕಿದ್ದರೆ ಮುಂಭಾಗದಿಂದ ಟಿಕ್‌ಟ್ಯಾಕ್‌ ಪಿನ್ಸ್ ಬಳಸಿ, ಹಿಂಬದಿಯ ಕೂದಲನ್ನು ಹಾಗೇ ಓಪನ್‌ ಬಿಡಿ.

ಸಾಫ್ಟ್ ಸ್ಮೋಕಿ ವಿತ್ಪೆನ್ಸಿಲ್ ಸ್ಕರ್ಟ್‌ :  ಪೆನ್ಸಿಲ್ ‌ಸ್ಕರ್ಟ್‌ ಮತ್ತು ಸಾಫ್ಟ್ ಸ್ಮೋಕಿ ಎರಡೂ ಕಾರ್ಪೋರೇಟ್‌ ಕಲ್ಚರ್‌ನ ಹಿಟ್‌ ಲುಕ್ಸ್ ಎನಿಸಿವೆ. ಈ ಲುಕ್ಸ್ ಗಾಗಿ ಕಂಗಳ ಮೇಲ್ಭಾಗದಲ್ಲಿ ಲೈಟ್‌ ಬ್ರೌನ್‌ ಶೇಡ್‌ನ್ನು ಚೆನ್ನಾಗಿ ಬ್ಲೆಂಡ್‌ ಮಾಡಿ ಮತ್ತು ಲ್ಯಾಶೆಸ್‌ ಬಳಿ ಡಾರ್ಕ್‌ ಬ್ರೌನ್‌ ಕಲರ್‌ನ್ನು ಸ್ಮಜ್‌ ಮಾಡಿ ಹಚ್ಚಿರಿ. ನಿಮ್ಮ ಕಂಗಳ ಶೇಪ್‌ ಡಿಫೈನ್‌ ಮಾಡಲು ಐ ಲ್ಯಾಶೆಸ್‌ ಜಾಯಿನರ್ ಬಳಸಬಹುದು. ಇದರಿಂದ ಕಂಗಳು ದೊಡ್ಡದಾಗಿ ಹಾಗೂ ನೈಸರ್ಗಿಕವಾಗಿ ದಟ್ಟವಾಗಿರುವಂತೆ ಕಾಣಿಸುತ್ತದೆ. ಐ ಬ್ರೋಸ್‌ ಕೆಳಗೆ ವೆನಿಲಾ ಶೇಡ್‌ನಿಂದ ಹೈಲೈಟ್‌ ಮಾಡಿ. ಕೂದಲಿಗೆ ಫ್ರಂಟ್‌ಮೆಸಿ ಬ್ರೆಡ್‌, ಚೀಕ್ಸ್ ಮೇಲೆ ಪೀಚ್‌ ಬ್ಲಶ್‌ ಆನ್‌ ಹಾಗೂ ಪೀಚ್‌ ಲಿಪ್ಸ್ ಜೊತೆ ನಿಮ್ಮ ಲುಕ್‌ ಸೀಲ್ ಮಾಡಿ.

ಪ್ರೊಫೆಶನಲ್ ಸೀರೆ ವಿತ್ಬ್ರಾಂಝ್ ಟಚ್‌ : ಹಾಸ್ಪಿಟಾಲಿಟಿ ಇಂಡಸ್ಟ್ರಿಯಲ್ಲಿ ಜಾಬ್‌ ಮಾಡುವ ಮಹಿಳೆಯರು ಪ್ರೊಫೆಶನಲ್ ಸೀರೆ ಜೊತೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕು. ಇಂಥದರಲ್ಲಿ ಈ ಲುಕ್‌ ಜೊತೆ ನೀವು ಕಲರ್ಡ್‌ ಲೈನರ್‌ ಹಚ್ಚಬಹುದು. ಅಗತ್ಯವೆನಿಸಿದರೆ ವಿಂಗ್ಡ್ ಲೈನರ್‌ ಸಹ. ಇದಕ್ಕಾಗಿ ನೀವು ವಿಂಗ್‌ಗಾಗಿ ಎಷ್ಟು ಲೆಂಥ್‌ ಬಯಸುವಿರೋ ಅಷ್ಟು ಉದ್ದದ ಲೈನ್‌ನ್ನು ಕನ್ನಡಿ ನೋಡಿಕೊಳ್ಳುತ್ತಾ ಹೊರಗಿನ ಕಡೆ ಮತ್ತು ಮೇಲ್ಭಾಗದಲ್ಲಿ ಎಳೆಯಿರಿ.

ಇದಾದ ಮೇಲೆ ಒಳಗಿನ ಕಾರ್ನರ್‌ನಿಂದ ತೆಳು ಲೈನ್‌ ಎಳೆದು ಸೆಂಟರ್‌ನಲ್ಲಿ ನಿಲ್ಲಿಸಿ. ಹಿಂಭಾಗದಲ್ಲಿ ಎಳೆಯಲಾದ ವಿಂಗ್‌ ಅಥವಾ ಲೈನ್‌ನ್ನು ಸೆಂಟರ್‌ನಲ್ಲಿ ರೂಪಿಸಲಾದ ಲೈನ್‌ ಜೊತೆ ಜೋಡಿಸಿ ಹಾಗೂ ಖಾಲಿ ಸ್ಪೇಸ್‌ ತುಂಬಿಸಿ. ವಿಂಗ್ಡ್ ಲೈನರ್‌ನ ವೈಶಿಷ್ಟ್ಯವೆಂದರೆ ನೀವು ನಿಮ್ಮ ಲುಕ್‌ನ್ನು ನಿಮ್ಮಿಷ್ಟದಂತೆ ಲೈಟ್‌ ಅಥವಾ ಡಾರ್ಕ್‌ ಆಗಿ ತೋರಿಸಬಹುದು.

ಲೋಯರ್‌ ಲ್ಯಾಶೆಸ್‌ ಮೇಲೆ ಬ್ಲ್ಯಾಕ್‌ ಐ ಪೆನ್ಸಿಲ್‌ಗೆ ಬದಲಾಗಿ ವೈಟ್‌ ಪೆನ್ಸಿಲ್ ‌ಬಳಸಿರಿ. ನೀವು ರೆಡ್‌, ಕೋರಲ್ ಅಥವಾ ಪಿಂಕ್ ಇತ್ಯಾದಿ ಫ್ಯಾಷನೆಬಲ್ ಶೇಡ್ಸ್ ನ್ನು ನಿಮ್ಮ ಲಿಪ್‌ಸ್ಟಿಕ್‌ಗೆ ತಕ್ಕಂತೆ ಆರಿಸಿಕೊಳ್ಳಿ. ಟ್ರೆಡಿಶನಲ್ ವೇರ್‌ ಮತ್ತು ಸೆನ್ಶುಯಸ್‌ ಮೇಕಪ್‌ನ ಈ ಕಾಂಬಿನೇಶನ್‌ ನಿಮಗೆ ಚೆನ್ನಾಗಿ ಒಪ್ಪುತ್ತದೆ. ಕೂದಲಿಗೆ ಸೈಡ್‌ ಮೆಸಿ ಅಥವಾ ಸ್ಲೀಕ್‌ ಬನ್‌ ನಿಮ್ಮ ಈ ಓವರ್‌ ಆಲ್ ಲುಕ್‌ಗೆ ಚೆನ್ನಾಗಿ ಸೂಟ್‌ ಆಗುತ್ತದೆ.

ಗಿರಿಜಾ ಶಂಕರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ