ಈಗ ಪರ್ಫೆಕ್ಟ್ ಫಿಗರ್‌ ಹಾಗೂ ಅದರ ಮೇಲೆ ಧರಿಸುವ ನಿಮ್ಮ ಪರ್ಫೆಕ್ಟ್ ಲಿಂಜರಿಯ ಕಾಲವಾಗಿದೆ. ಅದು ಸರಿ ಇಲ್ಲದಿದ್ದರೆ ನೀವು ಫ್ಯಾಷನ್‌ ಫಾಲೋ ಮಾಡುತ್ತಿದ್ದೀರಿ ಎಂಬುದನ್ನು ಮರೆತುಬಿಡಿ. ಒಂದು ವೇಳೆ ಲಿಂಜರಿ ಸರಿಯಿಲ್ಲದಿದ್ದರೆ ನಿಮ್ಮ ಡ್ರೆಸ್‌ನ ಗೆಟಪ್ ಹಾಳಾಗುತ್ತದೆ. ಆದರೆ ನೀವು ಖರೀದಿಸುತ್ತಿರುವ ಲಿಂಜರಿಯ ಬಗ್ಗೆ ನಿಮಗೆಷ್ಟು ತಿಳಿದಿದೆ ಎಂದು ಗಮನಿಸುವುದೂ ಮುಖ್ಯ. ಇಲ್ಲಿ ಲಿಂಜರಿಯ ಬಗ್ಗೆ ನಿಮಗೆ ಕೆಲವು ಉಪಯುಕ್ತ ಮಾಹಿತಿ ನೀಡುತ್ತಿದ್ದೇವೆ.

ಪ್ಲೇಬಾಯ್ಲಿಂಜರಿ

ಪ್ಲೇಬಾಯ್‌ನಲ್ಲಿ ನಿಮಗೆ ವೆರೈಟಿ ಲಿಂಜರಿ ಸಿಗುತ್ತದೆ. ಅವು ನಿಮ್ಮ ಫಿಗರ್‌ಗೆ ಪರ್ಫೆಕ್ಟ್  ಶೇಪ್‌ ಕೊಡುತ್ತದೆ. ಒಂದು ವೇಳೆ ನೀವು ಬ್ರಾ ಖರೀದಿಸುತ್ತಿದ್ದರೆ ನಿಮಗೆ ಫಿಟ್‌ ಆಗುವ, ಕಂಫರ್ಟೆಬಲ್ ಅನ್ನಿಸುವ ಬ್ರಾವನ್ನೇ ಖರೀದಿಸಿ. ಅವುಗಳ ಕಲೆಕ್ಷನ್‌ನಲ್ಲಿ ನಿಮಗೆ ಬಹಳಷ್ಟು ವೆರೈಟಿಗಳು ಸಿಗುತ್ತವೆ.

ಪ್ಲೇಬಾಯ್ಕಲೆಕ್ಷನ್ಹೊಳಪು

ಸ್ಪೈಸಿ ಲಿಂಜರಿ ಸೆಟ್‌ : ನಿಮಗೆ ಹೊಸದಾಗಿ ಮದುವೆಯಾಗಿದ್ದರೆ ನಿಮ್ಮ ಕಲೆಕ್ಷನ್‌ಗೆ ಈ ಸೆಟ್‌ ಖರೀದಿಸಲು ಮರೆಯದಿರಿ. ನಿಮ್ಮ ಗೋಲ್ಡನ್‌ ನೈಟ್‌ನಂದು ಇದನ್ನು ಧರಿಸಿದರೆ ರೊಮ್ಯಾಂಟಿಕ್‌ ಆಗಿ ಕಂಡುಬರುತ್ತೀರಿ. ಸ್ಪೈಸಿ ಲುಕ್‌ ಕೊಡುವ ಈ ಲಿಂಜರಿ ರೆಡ್ ಕಲರ್‌ನೊಂದಿಗೆ ಸಿಗುತ್ತದೆ. ಇದರಲ್ಲಿ ಬ್ಲ್ಯಾಕ್‌ ಕಲರ್‌ನ ಪೋಲ್ಕಾ ಡಾಟ್ಸ್ ಇವೆ. ಜೊತೆಗೆ ಟಾಪ್‌ನಲ್ಲಿ ಒಂದು ಸ್ವೀಟಾದ ಲೇಸ್‌ಇದೆ. ನಿಮಗೆ ಬ್ರಾ ಕಂಫರ್ಟೆಬ್‌ ಆಗಿರಲು ಒಳಗಿನ ಭಾಗದಲ್ಲಿ ಕಾಟನ್‌ನಿಂದ ಕವರ್‌ ಮಾಡಿರುತ್ತಾರೆ.

ಪಿಂಕ್ಕಲೆಕ್ಷನ್‌ : ಈ ಲಿಂಜರಿ ಗ್ಲಾಮರ್‌ ಮತ್ತು ಫಂಕಿ ಲುಕ್‌ ಕೊಡುತ್ತದೆ. ಇದು ಪಿಂಕ್‌ ಕಲರ್‌ನಲ್ಲಿ ಬರುತ್ತದೆ ಹಾಗೂ ಪ್ರಿಂಟೆಡ್ ಆಗಿರುತ್ತದೆ. ಇದನ್ನು ಧರಿಸಿದಾಗ ನಿಮಗೆಷ್ಟು ಕಂಫರ್ಟ್‌ನ ಅನುಭವವಾಗುತ್ತಿದೆ ಎಂದು ತಿಳಿಯಿರಿ. ಇದರಲ್ಲಿರುವ ಪ್ಲೇಬಾಯ್ ಬ್ರ್ಯಾಂಡ್‌ನ ಲೇಬಲ್, ಎಲ್ಲವನ್ನೂ ಮಾಡುವ ಮತ್ತು ಭಯವನ್ನು ಓಡಿಸುವ  ಧೈರ್ಯ ಕೊಡುತ್ತದೆ. ಬ್ರಾದ ಕಪ್‌ ನಿಮ್ಮ ಬ್ರೆಸ್ಟ್ ನ್ನು ಸಂಪೂರ್ಣ ಕವರ್‌ ಮಾಡುತ್ತದೆ. ಜೊತೆಗೆ ಇದು ಸೀವ್ ಲೆಸ್ ಕೂಡ ಆಗಿದೆ. ಇದನ್ನು ನೀವು ಟೀಶರ್ಟ್‌ ಬ್ರಾನಂತೆಯೂ ಯೂಸ್ ಮಾಡಬಹುದು. ಪ್ಯಾಂಟಿಯ ಡಿಸೈನ್‌ ಕೂಡ ಸೇವ್‌. ಜೊತೆಗೆ ಇದು ಬ್ರೀಥೆಬಲ್ ಆಗಿದ್ದು, ಅದರಿಂದ ನಿಮಗೆ ಉಷ್ಣವಾಗುವುದಿಲ್ಲ.

ವೈಟ್ಕಲೆಕ್ಷನ್‌ : ಸುಂದರ ಫಿಗರ್‌ ಕಾಣಿಸಲು ಪ್ಲೇಬಾಯ್‌ನ ವೈಟ್‌ ಕಲೆಕ್ಷನ್‌ ಒಳ್ಳೆಯದು. ಇದರಲ್ಲಿ ನಿಮ್ಮ ಬ್ರೆಸ್ಟ್ ಸೆಕ್ಸಿ ಮತ್ತು ಬ್ಯೂಟಿಫುಲ್ ಆಗಿ ಕಾಣುತ್ತದೆ. ಏಕೆಂದರೆ ಇದರಲ್ಲಿರುವ ಪ್ಯಾಡ್‌ ನಿಮ್ಮ ಬ್ರೆಸ್ಟ್ ಗೆ ಸಂಪೂರ್ಣ ಸಪೋರ್ಟ್‌ ಕೊಟ್ಟು ಫಿಟ್‌ ಆಗುತ್ತದೆ. ಜೊತೆಗೆ ಇದರಲ್ಲಿ ನಿಮಗೆ ಸ್ಟ್ರ್ಯಾಪ್‌ಲೆಸ್‌ ಬ್ರಾ ಕೂಡ ಸಿಗುತ್ತದೆ. ಸ್ತನಗಳು ಚಿಕ್ಕದಾಗಿರುವ ಯುವತಿಯರಿಗಾಗಿ ಈ ಬ್ರಾ ಡಿಸೈನ್ ಮಾಡಲಾಗಿದೆ. ಇದರ ಪ್ಯಾಂಟಿಯ ಟಾಪ್‌ ಮೇಲೆ ಬನ್ನೀ ಲೇಸ್‌ ಇದ್ದು ಒಳ್ಳೆಯ ಲುಕ್‌ ಕೊಡುತ್ತದೆ.

ಎಂಬ್ರಾಯಿಡರಿ ಲಿಂಜರಿ ಸೆಟ್‌ : ಈ ಲಿಂಜರಿ ನೆಟ್‌ ಮತ್ತು ಲೇಸ್‌ನಿಂದ ತಯಾರಾಗಿದೆ. ಇದು ಡಿಫರೆಂಟ್‌ ಕಲರ್‌ಗಳಲ್ಲಿ ಲಭ್ಯವಿದೆ. ಇದರ ಬ್ರಾದ ಕಪ್‌ಬ್ರೆಸ್ಟ್ ನ್ನು ಸಂಪೂರ್ಣವಾಗಿ ಕವರ್‌ ಮಾಡುತ್ತದೆ. ಆದ್ದರಿಂದ ಇದನ್ನು ಮೇಲೆ ಬ್ಲೌಸ್‌ ಇರುವಂತಹ ವೇರ್‌ನ ಒಳಗೆ ಧರಿಸಿ. ಇದರ ಕಪ್‌ ನೆಟ್‌ ಎಂಬ್ರಾಯಿಡರಿಯಿಂದ ತಯಾರಾಗಿದೆ. ಅದು ನಿಮಗೆ ಪರ್ಫೆಕ್ಟ್ ಲುಕ್‌ ಕೊಡುತ್ತದೆ. ಇದರ ಪ್ಯಾಂಟಿ ನೆಟ್‌ನಿಂದ ತಯಾರಾಗಿದೆ. ಜೊತೆಗೆ ಇದರ ಮೇಲೆ ಬನ್ನೀ ಎಂಬ್ರಾಯಿಡರಿ ಮಾಡಲಾಗಿದೆ. ಇದಲ್ಲದೆ ಲಿಂಜರಿಯಲ್ಲಿ ಪ್ಲೇಬಾಯ್‌ನ ಇನ್ನಷ್ಟು ವೆರೈಟಿಗಳು ಸಿಗುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ