ಪಾರ್ಟಿಗಳಲ್ಲಿ ಡ್ಯಾನ್ಸ್ ನ ಪ್ರದರ್ಶನ ಒಂದು ಭವ್ಯ ಮನರಂಜನೆ. ಇದು ಸಂತಸ ಅಭಿವ್ಯಕ್ತಿಗೊಳಿಸಲು ಉತ್ತಮ ವೇದಿಕೆ. ಯಾವುದೇ ಪಾರ್ಟಿ ಸಂಪೂರ್ಣ ಕಳೆಗಟ್ಟಲು ಅದಕ್ಕೆ ಮಸ್ತಿ ಬೆರೆತ ಡ್ಯಾನ್ಸ ಟಚ್‌ ಅತ್ಯಗತ್ಯ. ಇತ್ತೀಚೆಗೆ ಎಲ್ಲರೂ ಬಾಲಿವುಡ್‌ತಾರೆಯರಂತೆ ಡ್ಯಾನ್ಸ್ ಪಾರ್ಟಿಗಳಲ್ಲಿ ಮೆರುಗು ತುಂಬಿಸಲು ಯತ್ನಿಸುತ್ತಾರೆ. ಅದು ಬರ್ಥ್‌ಡೇ, ಮ್ಯಾರೇಜ್‌ ಆ್ಯನಿವರ್ಸರಿ, ಬ್ಯಾಚಲರ್‌ ಅಥವಾ ಇನ್ನಾವುದೇ ಬಗೆಯ ಪಾರ್ಟಿ ಆಗಿರಬಹುದು. ನಿಮ್ಮ ಪಾರ್ಟಿವೇರ್‌ ಡ್ಯಾನ್ಸ್ಗೆ ತಕ್ಕಂತೆ ಕಂಫರ್ಟೆಬಲ್ ಆಗಿರಬೇಕಾದುದು ಅನಿವಾರ್ಯ.

ನೀವು ಸಹ ಈ ರೀತಿ ಡ್ಯಾನ್ಸಿಂಗ್‌ ದೀವಾ ಆಗಿ, ಪಾರ್ಟಿ ಡ್ಯಾನ್ಸ್ ನ ಕೇಂದ್ರಬಿಂದು ಆಗಬಯಸಿದರೆ ಫ್ಯಾಷನ್‌ಸ್ಟೈಲ್‌ನ ಈ ಫಂಡಾಗಳನ್ನು ಅನುಸರಿಸಿ ಡ್ಯಾನ್ಸಿಂಗ್‌ ಕ್ವೀನ್‌ ಆಗಬಹುದು.

ಬ್ಯಾಚಲರ್ಡ್ಯಾನ್ಸ್ ಪಾರ್ಟಿ : ಮದುವೆಯ ಚಿರಬಂಧನದಲ್ಲಿ ಬೆಸೆಯುವ ಮೊದಲು, ಫ್ರೆಂಡ್ಸ್ ಜೊತೆ ಮೋಜುಮಸ್ತಿ ಮಾಡುವುದಕ್ಕಾಗಿ ನಡೆಸಲಿರುವ ಡ್ಯಾನ್ಸ್ ಪಾರ್ಟಿಯಲ್ಲಿ, ನೀವು ಧರಿಸಲಿರುವ ಪಾರ್ಟಿ ಡ್ರೆಸ್‌ ನಿಮ್ಮನ್ನು ಅತ್ಯಂತ ಸ್ಟೈಲಿಶ್‌ ಆಗಿ ಪ್ರಸ್ತುತಪಡಿಸಿ, ಕಂಫರ್ಟೆಬಲ್ ಆಗಿಯೂ ಇರಿಸಬೇಕು. ಇದು ಮುಖ್ಯವಾಗಿ ಬ್ಯಾಚುಲರ್‌ ಪಾರ್ಟಿ ಆದ್ದರಿಂದ, ನೀವಿಲ್ಲಿ ವೆಸ್ಟರ್ನ್‌ ಸ್ಟೈಲ್ ‌ಟ್ರೈ ಮಾಡಬಹುದು. ವೆಸ್ಟರ್ನ್‌ ವೇರ್‌ನಲ್ಲಿ ನೀವು ಯಾವುದೇ ಬ್ರೈಟ್‌ ಕಲರ್‌ನ ಫಿಶ್‌ಕಟ್‌ ಗೌನ್‌ನ್ನು ಸುಲಭವಾಗಿ ಕ್ಯಾರಿ ಮಾಡಬಹುದು. ಆದರೆ ಈ ಡ್ರೆಸ್‌ ಜೊತೆ ಜ್ಯೂವೆಲರಿ ಆದಷ್ಟೂ ಕಡಿಮೆ ಇರಲಿ. ಕೇವಲ ಸ್ಟೇಟ್‌ಮೆಂಟ್‌ ಇಯರ್‌ರಿಂಗ್ಸ್ ಹಾಗೂ ಒಂದು ಕೈಗೆ ಹ್ಯಾಂಡ್‌ ಕಪ್‌ ಧರಿಸಿ. ನೀವು ಗ್ಲಾಮರಸ್‌ ಲುಕ್‌ ಬಯಸಿದರೆ, ಸೈಡ್‌ ಸ್ಟಿಚ್‌ವುಳ್ಳ ಗೌನ್‌ ಅಥವಾ ಮ್ಯೂಲೆಟ್‌ ಡ್ರೆಸ್ ಧರಿಸಿ. ಹೇರ್‌ಸ್ಟೈಲ್‌ಗಾಗಿ ಫಿಶ್‌ ಟೇಲ್ ‌ಅಥವಾ ಮೆಸಿ ಬನ್‌ ಹಾಕಿಕೊಳ್ಳಿ. ನೀವು ನಂಬಲಾರಿರಿ, ಈ ಲುಕ್ಸ್ ಜೊತೆ ನೀವು ಡ್ಯಾನ್ಸ್ ನಲ್ಲಿ ಹಾಕುವ ಸ್ಟೆಪ್ಸ್ ನಿಮ್ಮನ್ನು ಎಲ್ಲಿಗೋ ಕೊಂಡೊಯ್ಯುತ್ತದೆ.

ಎಂಗೇಜ್ಮೆಂಟ್ಪಾರ್ಟಿ : ಬಿಗ್‌ ಫ್ಯಾಟ್‌ ಅಥವಾ ರಿಚ್‌ ಇಂಡಿಯನ್‌ ವೆಡ್ಡಿಂಗ್ಸ್ ನಲ್ಲಿ ಲಗ್ನಪತ್ರಿಕೆ ಅಥವಾ ಎಂಗೇಜ್‌ಮೆಂಟ್ ಪಾರ್ಟಿ ಒಂದು ಮುಖ್ಯ ಆಕರ್ಷಣೆಯಾಗಿದೆ. ಇಲ್ಲಿ ವಧೂವರರು ತಮ್ಮ ಸ್ನೇಹಿತರು, ಬಂಧು ಬಾಂಧವರೊಡನೆ ಬೆರೆಯುತ್ತಾರೆ, ಹೊಸ ಪರಿಚಯ ಬೆಳೆಯುತ್ತದೆ. ಇದರಲ್ಲಿ ಹಾಡು, ಕುಣಿತ, ಜೋಕ್ಸ್, ಸುಗ್ರಾಸ ಭೋಜನ, ಮೋಜುಮಸ್ತಿಗಳೊಡನೆ ಪಾರ್ಟಿ ಭರ್ಜರಿಯಾಗಿ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ನೀವು ಇಂಡಿಯನ್‌ ಡ್ರೆಸ್‌ ಧರಿಸ ಬಯಸಿದರೆ ನಿಮ್ಮ ಬಳಿ ನೂರಾರು ಆಯ್ಕೆಗಳಿವೆ. ಟ್ರೆಡಿಷನ್‌ ಲುಕ್ಸ್ ಗಾಗಿ ಎಂಬ್ರಾಯಿಡರ್ಡ್‌ ರೇಷ್ಮೆ ಸೀರೆ, ಲಂಗಾ ದಾವಣಿ, ಇದಕ್ಕೆ ಗ್ಲಾಮರಸ್‌ ಟಚ್‌ ನೀಡಲು ಸೀಕ್ವೆನ್ಡ್ ಬ್ಲೌಸ್‌, ಪಂಜಾಬಿ ಸೂಟ್‌ಗೆ ನಿಯಾನ್‌ ಕಲರ್‌ ದುಪಟ್ಟಾ, ಅನಾರ್ಕಲಿ ಡ್ರೆಸ್‌..... ಇತ್ಯಾದಿಗಳೊಂದಿಗೆ ಬೋಲ್ಡ್ ಜ್ಯೂವೆಲರಿಯಲ್ಲಿ ಬೀಡೆಡ್‌ ನೆಕ್‌ಲೇಸ್‌, ಡ್ರಾಪ್‌ ಇಯರ್‌ ರಿಂಗ್ಸ್ ಮತ್ತು ಹೈಹೀಲ್ ಸ್ಯಾಂಡಲ್ಸ್ ಧರಿಸಿ. ಇದರ ಬದಲು ಇಂಡೋ ವೆಸ್ಟರ್ನ್‌ ಅಥವಾ ಫ್ಯೂಷನ್‌ ಲುಕ್‌ ಬಯಸಿದರೆ ಶಿಮರಿ ಸೀರೆಯ ಜೊತೆ ಹಾಲ್ಟರ್‌ ನೆಕ್‌ ಸ್ಲೀವ್ ಲೆಸ್ ಬ್ಲೌಸ್‌ ಮತ್ತು ಭಾರಿ ಜ್ಯೂವೆಲರಿ ಬದಲು ಫ್ಯಾಷನ್‌ ಜ್ಯೂವೆಲರಿ ಧರಿಸಿ. ನೆಕ್‌ಪೀಸ್‌ ಬದಲಿಗೆ ಕಿವಿಗಳಿಗೆ ಡ್ಯಾಂಗ್ಲರ್ಸ್‌ ಧರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ