ರಶ್ಮಿಯನ್ನು ಆಫೀಸ್‌ನಲ್ಲಿ ಪ್ರತಿಯೊಬ್ಬರೂ ನೋಟೀಸ್ ಮಾಡುತ್ತಾರೆ. ಮಹಿಳೆಯರೂ ಸಹ. ಏಕೆಂದರೆ ಅವಳು ಬಹಳ ಸ್ಟೈಲಿಶ್ ಆಗಿದ್ದಾಳೆ. ಪ್ರತಿದಿನ ಬ್ರ್ಯಾಂಡೆಡ್ ಡ್ರೆಸ್ ಧರಿಸಿ ಆಫೀಸಿಗೆ ಬರುತ್ತಾಳೆ. ಕಾಲೇಜ್‌ನಲ್ಲಿ ಆರತಿ ಮಾತಾಡುತ್ತಿದ್ದರೆ ಎಲ್ಲರ ದೃಷ್ಟಿಯೂ ಅವಳ ಮೇಲೆ ಹೋಗುತ್ತದೆ. ಅದಕ್ಕೆ ಕಾರಣ ಅವಳು ಮಾತನಾಡುವ ಸ್ಟೈಲ್. ಅವಳು ಇಂಗ್ಲಿಷ್‌ನ್ನು ಸುಸೂತ್ರವಾಗಿ ಮಾತಾಡುತ್ತಾಳೆ. ಮಾಲಾ ಅತ್ತಿಗೆ ಎಲ್ಲರ ಫೇವರಿಟ್. ಮನೆಯಲ್ಲಿ ಎಲ್ಲ ಕೆಲಸಗಳಿಗೂ ಅವಳ ಸಲಹೆಯನ್ನೇ ಕೇಳಿ ಮಾಡುತ್ತಾರೆ. ಎಲ್ಲಿಯವರೆಗೆಂದರೆ ಯಾರಿಗೆ ಯಾವ ಗಿಫ್ಟ್ ಕೊಡಬೇಕು ಎಂದು ಸಹ ಅವರನ್ನೇ ಕೇಳುತ್ತಾರೆ. ಅಂದಹಾಗೆ ಅವರು ಬಹಳ ಸ್ಟೈಲಿಶ್ ಆಗಿದ್ದಾರೆ.
ಸ್ಟೈಲಿಶ್ ಆಗುವುದೆಂದರೆ ಏನು?
ಬರೀ ಒಳ್ಳೆಯ ಬ್ರ್ಯಾಂಡ್‌ನ ಬಟ್ಟೆ ಧರಿಸುವುದರಿಂದ ಯಾರೇ ಆಗಲಿ ಸ್ಟೈಲಿಶ್ ಆಗಬಹುದು ಅಥವಾ ಇಂಗ್ಲಿಷ್‌ನಲ್ಲಿ `ಧಸ್ ಪುಸ್' ಎಂದು ಮಾತಾಡುವುದರಿಂದ ಅಥವಾ ಎಲ್ಲರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಯಾರನ್ನಾದರೂ ಸ್ಟೈಲಿಶ್ ಎನ್ನುವ ಶ್ರೇಣಿಯಲ್ಲಿಡುತ್ತದೆಯೇ? ಬಹುಶಃ ಇಲ್ಲ. ಸ್ಟೈಲಿಶ್ ಆಗುವುದೆಂದರೆ, ನಿಮ್ಮ ಅಂದಾಜನ್ನು ಬೇರೊಂದು ಅಂದಾಜಿನಲ್ಲಿ ಜನರ ಮುಂದೆ ಪ್ರಸ್ತುತಪಡಿಸುವುದು. ಇದನ್ನು ಸಾದಾ ಉಡುಪು ಧರಿಸಿದರು, ಕನ್ನಡದಲ್ಲಿ ಮಾತಾಡುವವರು ಕೂಡ ಮಾಡಬಹುದು. ಆದರೆ ಮಹಿಳೆಯ ವಿಷಯ ಬಂದಾಗ ಸ್ಟೈಲಿಶ್ ಪ್ರಮಾಣ ಕೊಂಚ ಬದಲಾಗುತ್ತದೆ. ಏಕೆಂದರೆ ಮಹಿಳೆಯರಲ್ಲಿ ಸೌಂದರ್ಯ ಮತ್ತು ಶಾರೀರಿಕ ಅಲಂಕಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಮಹಿಳೆಯರಲ್ಲಿ ತಾವು ಸುಂದರವಾಗಿದ್ದರೆ ಸ್ಟೈಲಿಶ್ ಕೂಡ ಆಗಿದ್ದೇವೆಂಬ ಭ್ರಮೆ ಇರುತ್ತದೆ. ವಾಸ್ತವವೇನೆಂದರೆ ಎಲ್ಲ ಸುಂದರ ಮಹಿಳೆಯರೂ ಸ್ಟೈಲಿಶ್ ಆಗಿರುವುದಿಲ್ಲ. ಅದಕ್ಕೆ ಕಾರಣ ಹೇಳುತ್ತಾ, ಓರಿಫ್ಲೇಮ್ ಇಂಡಿಯಾದ ಬ್ಯೂಟಿ ಮತ್ತು ಮೇಕಪ್ ತಜ್ಞೆ ಆಕೃತಿ ಹೀಗೆ ಹೇಳುತ್ತಾರೆ, ``ನಾವು ದೈಹಿಕ ಸೌಂದರ್ಯವನ್ನು ಸ್ಟೈಲಿಶ್‌ಆಗುವ ಪ್ರಮಾಣವೆಂದು ಒಪ್ಪುವುದಿಲ್ಲ. ಏಕೆಂದರೆ ಸುಂದರವಾಗಿ ಇರುವುದರೊಂದಿಗೆ ನಿಮ್ಮ ವರ್ತನೆ, ಸಂಗಾತಿಯೊಂದಿಗೆ ಬಾಳುವಿಕೆ, ಆಹಾರ, ಉಡುಗೆ, ಮಾತು ಸ್ಟೈಲಿಶ್ ಆಗಿರುವುದು ಅಗತ್ಯ.''
ಮಹಿಳೆ ಸ್ಟೈಲಿಶ್ ಆಗಿ ಕಾಣಿಸುವ ನಿಟ್ಟಿನಲ್ಲಿ ದುಬಾರಿ ಹಾಗೂ ಬ್ರ್ಯಾಂಡೆಡ್ ಉಡುಪನ್ನು ತೊಡುತ್ತಾರೆ. ಆದರೆ ಅದನ್ನು ಕ್ಯಾರಿ ಮಾಡುವ ವಿಧಾನ ಅವರಿಗೆ ತಿಳಿದಿರುವುದಿಲ್ಲ. ಆ ಔಟ್‌ಫಿಟ್‌ನ್ನು ಕಾಂಪ್ಲಿಮೆಂಟ್ ಮಾಡುವ ಆ್ಯಕ್ಸೆಸರೀಸ್, ಫುಟ್‌ವೇರ್ ಮತ್ತು ಸ್ಟೈಲ್‌ನ ಅಭಾವದಲ್ಲಿ ಅವರ ಲುಕ್ಸ್ ಸಪ್ಪಗೆ ಕಾಣುತ್ತದೆ. ಕೆಲವು ಮಹಿಳೆಯರು ಲುಕ್ಸ್ ನಲ್ಲಿ ಸ್ಟೈಲಿಶ್ ಆಗಿರುತ್ತಾರೆ. ಆದರೆ ಅವರ ನಡವಳಿಕೆ ಅವರನ್ನು ಇನ್‌ಡೀಸೆಂಟ್ ಮಾಡಿಬಿಡುತ್ತದೆ. ಸ್ಟೈಲಿಶ್ ಔಟ್‌ಫಿಟ್ ಮತ್ತು ಆ್ಯಕ್ಸೆಸರೀಸ್‌ನ್ನು ಕ್ಯಾರಿ ಮಾಡಿದರೂ ಕೂರುವ, ಏಳುವ ವಿಧಾನ ಸರಿಯಾಗಿಲ್ಲದೆ ಅವರು ಸ್ಟೈಲಿಶ್ ಆಗುವ ರೇಸ್‌ನಿಂದ ಹೊರಗೆ ಉಳಿಯುತ್ತಾರೆ. ಅಂತಹ ಮಹಿಳೆಯರ ಬಗ್ಗೆ ಆಕೃತಿ ಹೀಗೆ ಹೇಳುತ್ತಾರೆ, ``ಔಟ್‌ಫಿಟ್‌ಗೆ ಮ್ಯಾಚ್ ಆಗುವ ಆ್ಯಕ್ಸೆಸರೀಸ್ ಇದ್ದರೆ ಸಾಲದು. ಅದನ್ನು ಕ್ಯಾರಿ ಮಾಡುವ ವಿಧಾನ, ಕೂರುವ ಏಳುವ ವಿಧಾನ, ಜೊತೆಗೆ ಮಾತನಾಡುವ ವಿಧಾನ ಬರಬೇಕು. ನೀವು ಒನ್‌ಪೀಸ್ ಧರಿಸಿ ನಿಮ್ಮ ಕೈಕಾಲುಗಳನ್ನು ನಿಯಂತ್ರಿಸಿ ಮಾತಾಡಲು ಸಾಧ್ಯವಾಗದಿದ್ದರೆ ಅದನ್ನು ಇನ್‌ಡೀಸೆಂಟ್ ವಿಧಾನವೆಂದು ಹೇಳುತ್ತಾರೆ. ಒಂದುವೇಳೆ ಸ್ಟೈಲಿಶ್ ಔಟ್‌ಫಿಟ್ ಧರಿಸಿದರೂ ಅದಕ್ಕೆ ತಕ್ಕನಾದ ಪರಿಸರ ಇಲ್ಲದಿದ್ದರೆ ನಿಮ್ಮನ್ನು ಸ್ಟೈಲಿಶ್ ಅಲ್ಲ ಮೂರ್ಖರ ಶ್ರೇಣಿಯಲ್ಲಿ ಇಡಲಾಗುವುದು.