ಐಶ್ವರ್ಯಾ ರೈ, ಸನೀ ಲಿಯೋನ್, ವಿದ್ಯಾಬಾಲನ್, ಕರೀನಾ ಕಪೂರ್ ಮುಂತಾದವರಿಂದ ಸೋನಾಕ್ಷಿ ಸಿನ್ಹಾರವರೆಗೂ ಹೊಸ ಹೊಸ ವಿಧಾನಗಳಲ್ಲಿ ಸೀರೆ ಉಟ್ಟು ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಹೊಸ ಮೋಡಿ ಏಕೆ ಸಾಧ್ಯವಿಲ್ಲ ಹೇಳಿ…. 6 ಗಜದ ಉದ್ದದ ಈ ಸೀರೆ ತನ್ನ ಚಾರ್ಮ್ ಗ್ರೇಸ್ ಕಳೆದುಕೊಳ್ಳದೆ ಇಲ್ಲಿಯವರೆಗೆ ಸಾಗಿಬಂದಿದೆ.
ಇಂದಿಗೂ ಟ್ರೆಂಡ್ನಲ್ಲಿ……
ಆ ಕಾಲದಿಂದ ಈ ಕಾಲದವರೆಗೆ ಎಷ್ಟೇ ಬದಲಾವಣೆಗಳಾಗಿದ್ದರೂ ಸೀರೆಯ ಗ್ಲಾಮರ್ ಮಾತ್ರ ಒಂದಿಷ್ಟೂ ತಗ್ಗಿಲ್ಲ. ಹಬ್ಬಹರಿದಿನಗಳು, ಮುಂಜಿ ಮದುವೆಗಳಂಥ ಶುಭ ಸಮಾರಂಭಗಳಲ್ಲಿ ಹೆಂಗಸರಿಗೆ ಸಾಂಪ್ರದಾಯಿಕ ಲುಕ್ಸ್ ಜೊತೆ ಗ್ಲಾಮರಸ್‌ಆಗಿ ಕಾಣಿಸಿಕೊಳ್ಳುವುದು ನಿಜಕ್ಕೂ ಸವಾಲೇ ಸರಿ. ಆದರೆ ಇಂಥ ಗೆಟಪ್‌ನಲ್ಲಿ ನಿಮ್ಮ ಫಿಗರ್ ಹೇಗೇ ಇರಲಿ, ಸೀರೆ ನಿಮ್ಮ ಸರಳ ವ್ಯಕ್ತಿತ್ವ, ಸಭ್ಯತೆಗಳ ಪ್ರತೀಕವಾಗಿರುತ್ತದೆ. ಕಾಲಕ್ಕೆ ತಕ್ಕಂತೆ ಇಂದೂ ಸಹ ಸೀರೆಯ ಸ್ಟೈಲ್ ಅಗತ್ಯ ಬದಲಾಗಿದೆ…..
ಆದರೆ ಭಾರತದಾದ್ಯಂತ ಮಾತ್ರವಲ್ಲದೆ, ವಿದೇಶದಲ್ಲೂ ಸೀರೆ ಇಂದಿಗೂ ತನ್ನ ಟ್ರೆಂಡ್ ಉಳಿಸಿಕೊಂಡಿದೆ. ಬನ್ನಿ, ಸೀರೆ ಉಡುವುದರಲ್ಲಿನ ವಿಭಿನ್ನ ಸ್ಟೈಲ್‌ಗಳ ಬಗ್ಗೆ ಸ್ಯಾರಿ ಡ್ರೇಪಿಂಗ್ ಎಕ್ಸ್ ಪರ್ಟ್ಸ್ ಏನೇನು ಸಲಹೆ ನೀಡಿದ್ದಾರೋ ಗಮನಿಸೋಣ.
ಸೀರೆಗಳ ಹೊಸ ಲುಕ್
ಎಷ್ಟೋ ವರ್ಷಗಳಿಂದ ಒಂದೇ ಶೈಲಿಯಲ್ಲಿ ನಾವು ಉಟ್ಟುಕೊಳ್ಳುತ್ತಿರುವ ಸೀರೆಗೆ ಫ್ಯಾಷನ್ ಡಿಸೈನರ್‌ಗಳು ಟ್ರೆಂಡಿ ಲುಕ್ ನೀಡಿ ಬದಲಾಯಿಸಿದ್ದಾರೆ. ಈಗಂತೂ ಸೀರೆಗಳನ್ನು ವಿಭಿನ್ನ ಶೈಲಿಗಳಲ್ಲಿ ಉಡುತ್ತಾರೆ. ಕುರ್ತಾ ಸ್ಟೈಲ್ ಸೀರೆ, ನೆಕ್‌ಲೇಸ್ ಲುಕ್ ಸೀರೆ, ಗೌನ್ ಸ್ಟೈಲ್ ಸೀರೆ, ಬೆಲ್ಟ್ ಸ್ಟೈಲ್ ಸೀರೆ, ಜ್ಯಾಕೆಟ್ ಸ್ಟೈಲ್ ಸೀರೆ, ಡೆನಿಂ ಲೆಗಿಂಗ್ ಸ್ಟೈಲ್ ಸೀರೆ…. ಇತ್ಯಾದಿ.
ಸೀರೆಯ ಟ್ರೆಂಡಿ ಅವತಾರ
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಇಂದಿನ ಹೆಂಗಸರ ಅಭಿರುಚಿ ನೋಡಿಕೊಂಡು ಡಿಸೈನರ್‌ಗಳು ಸೀರೆಗೆ ಟ್ರೆಂಡಿ ಅವತಾರ ಕೊಟ್ಟಿದ್ದಾರೆ. ಈಗ ಸೀರೆಯ ಜೊತೆ ಒಂದಕ್ಕಿಂತ ಒಂದು ಮಿಗಿಲಾದ ಸ್ಟೈಲಿಶ್ ಬ್ಲೌಸ್ ಮಿಂಚುತ್ತಿರುತ್ತವೆ. ಜೊತೆಗೆ ಟೀನೇಜ್ ಗರ್ಲ್ಸ್ ಬ್ಲೌಸ್ ಬದಲಿಗೆ ಬಿಕಿನಿ, ಜ್ಯಾಕೆಟ್ಸ್, ವೇಸ್ಟ್ ಕೋಸ್ಟ್ ಇತ್ಯಾದಿ ಧರಿಸುತ್ತಾರೆ. ಇದರ ಜೊತೆಗೆ ಪೆಟಿಕೋಟ್ ಬದಲು ಪ್ಯಾಂಟ್, ಲೆಗ್ಗಿಂಗ್ ಹಾಗೂ ಡೆನಿಂ. ಈ ಟ್ರೆಂಡಿ ಅವತಾರದ ಸೀರೆಗಳನ್ನು ನೀವು ಮಾಡರ್ನ್ ಪಾರ್ಟಿ, ಫಂಕ್ಷನ್, ಮದುವೆ ಇತ್ಯಾದಿಗಳಿಗೆ ಧರಿಸಬಹುದು. ಈ ಸೀರೆಗಳ ಫ್ಯೂಷನ್ ಲುಕ್ಸ್ ನ್ನು ಬಾಲಿವುಡ್ ಫ್ಯಾಷನ್‌ನಲ್ಲಿ ದಿಯಾ ಮಿರ್ಜಾ, ಸೋನಂ ಕಪೂರ್, ಸೋಹಾ ಅಲಿ ಖಾನ್ ಮುಂತಾದವರು ಸೀರೆಗಳಲ್ಲಿ ಗಮನಿಸಬಹುದಾಗಿದೆ.
ಸೀರೆಗಳ ಅಳಿಯದ ಬೆಡಗು
ಕುರ್ತಾ ಸ್ಟೈಲ್ ಸೀರೆ : ಈ ಸೀರೆಯನ್ನು ಸೊಂಟದ ಬಳಿ ಪೆಟಿಕೋಟ್ ಜೊತೆ ಟ್ಯಾಗ್ ಮಾಡಿ. ನಂತರ ಪ್ಲೀಟ್ಸ್ ಮಾಡಿ ಸೀರೆಯನ್ನು 2 ರೌಂಡ್ಸ್ ನಲ್ಲಿ ಸುತ್ತಬೇಕು. ಸೆರಗನ್ನು ಹೆಗಲಿನವರೆಗೂ ಕೊಂಡುಹೋಗಿ, ಮತ್ತೆ ಕೆಳಗಿನಿಂದ ಒಂದು ರೌಂಡ್ ತೆಗೆದುಕೊಂಡು ಸೆರಗಿನವರೆಗೂ ತಲುಪಿಸಿ. ಇದು ಮುಂಭಾಗದಿಂದ ಪಾಯಿಂಟೆಡ್ ಸೆರಗಿನಂತೆ ಕಾಣುತ್ತದೆ.
ನೆಕ್‌ಲೇಸ್ ಲುಕ್ ಸೀರೆ : ನೀವು ಹೇಗೆ ಎಂದಿನಂತೆ ನಾರ್ಮಲ್ ಆಗಿ ಸೀರೆ ಉಡುತ್ತೀರೋ, ಅದೇ ರೀತಿ ಈ ಶೈಲಿಗೂ ಉಟ್ಟುಕೊಳ್ಳಿ. ನಂತರ ಸೀರೆಯ ಸೆರಗಿನ ಪ್ಲೀಟ್ಸ್ ಮಾಡಿಕೊಳ್ಳಿ. ಅದನ್ನು ಕುತ್ತಿಗೆಗೆ ಒತ್ತರಿಸಿ, ಸೆರಗಿನ ಅಂಚನ್ನು ಮುಂಭಾಗಕ್ಕೆ ತನ್ನಿ ಹಾಗೂ ಹೆಗಲಿನ ಬಳಿ ಪಿನ್‌ನಿಂದ ಚೆನ್ನಾಗಿ ಸೆಟ್ ಮಾಡಿ. ಇದರಲ್ಲಿ ತೆಳು ಬಾರ್ಡರ್‌ನ ಸೀರೆ ಇದ್ದರೆ, ನೆಕ್ ಬಳಿ ಸೀರೆಯ ಲುಕ್ ಇನ್ನಷ್ಟು ಸೊಗಸಾಗಿರುತ್ತದೆ. ಆಗ ನಿಮಗೆ ನೆಕ್ ಪೀಸ್ ಧರಿಸಬೇಕಾದ ಅಗತ್ಯ ಇರುವುದಿಲ್ಲ.
ಗೌನ್ ಸ್ಟೈಲ್ ಸೀರೆ : ಫಾರ್ಮಲ್ ಸೀರೆ ಉಟ್ಟುಕೊಳ್ಳಿ. ನಂತರ ಸೀರೆಯ ಸೆರಗನ್ನು ಒಂದು ಕೈಯ ಕೆಳಭಾಗದಿಂದ ಬರುವಂತೆ ತೆಗೆದುಕೊಂಡು ಇನ್ನೊಂದು ಕಡೆಯ ಹೆಗಲಿಗೆ ತಂದು ಟ್ಯಾಗ್ ಮಾಡಿ.
ಬೆಲ್ಟ್ ಸ್ಟೈಲ್ ಸೀರೆ : ಇಂಥ ಶೈಲಿಯಲ್ಲಿ ಸೀರೆಯನ್ನು ಉಡಲು, ಸೊಂಟದ ಬಳಿ ಬೆಲ್ಟ್ ಅಥವಾ ಸ್ಕಾರ್ಫ್ ಕಟ್ಟಿಕೊಳ್ಳಿ. ಇದರಲ್ಲಿ ಸೀರೆಯನ್ನು ಸೊಂಟದ ಮೇಲ್ಭಾಗದ ಬ್ಲೌಸ್ ಲೈನ್ ಬಳಿ ಹಾಗೂ ಸೊಂಟದ ಕೆಳಗೆ ಹಿಪ್‌ಗಿಂತ ತುಸು ಮೇಲೆ ಕಟ್ಟಿಕೊಳ್ಳಬೇಕು. ಸ್ಕಾರ್ಫ್ ಜೊತೆ ಸೀರೆಯನ್ನು ಸ್ಟೈಲಿಶ್‌ಗೊಳಿಸಲು, ಇದನ್ನು ಆಯತಾಕಾರವಾಗಿ ಮಡಿಸಿ ಸೊಂಟಕ್ಕೆ ಸುತ್ತಿಕೊಳ್ಳಬಹುದು. ನೀವು ಸ್ಕಾರ್ಫ್ ಬದಲಿಗೆ ಬ್ರೊಕೇಡ್ ಬಟ್ಟೆ ಅಥವಾ ಲೇಸ್ ಬಳಸಬಹುದು.
ಜ್ಯಾಕೆಟ್ ಸ್ಟೈಲ್ ಸೀರೆ : ಸೀರೆಯ ಲುಕ್ಸ್ ಅದರ ಬ್ಲೌಸ್‌ನಿಂದ ಹೊರಹೊಮ್ಮುತ್ತದೆ. ಹೀಗಾಗಿ ಸೀರೆಯನ್ನು ಟ್ರೆಂಡಿಗೊಳಿಸಲು ಜ್ಯಾಕೆಟ್ ಸ್ಟೈಲ್ ಸ್ಟಿಚ್ ಬ್ಲೌಸ್ ಅಥವಾ ಒಂದು ಸಿಂಪಲ್ ಬ್ಲೌಸ್ ಮಾತ್ರವಲ್ಲದೆ, ಒಂದು ವಿಭಿನ್ನ ಒನ್ ಟೋನ್ ಜ್ಯಾಕೆಟ್ ಜೊತೆ ಧರಿಸಬಹುದು. ಆದರೆ ಬ್ಲೌಸ್ ಕಲರ್ ಕಾಂಟ್ರಾಸ್ಟ್ ಆಗಿರಬೇಕೆಂಬುದನ್ನು ನೆನಪಿಡಿ.
ಡೆನಿಂ ಲೆಗಿಂಗ್ ಸ್ಟೈಲ್ ಸೀರೆ : ಟ್ರೆಂಡಿ ಅವತಾರಕ್ಕಾಗಿ ನೀವು ಇದನ್ನು ಸ್ಕಿನ್ ಫಿಟ್ ಡೆನಿಂ ಅಥವಾ ಲೆಗಿಂಗ್ ಜೊತೆ ಧರಿಸಬಹುದು. ಇದರಿಂದ ಸೀರೆ ಸಿಕ್ಕಿಹಾಕಿಕೊಳ್ಳುವ, ತೊಡರುವ ಸಮಸ್ಯೆ ಇರುವುದಿಲ್ಲ. ನಡೆಯಲಿಕ್ಕೂ ಅನುಕೂಲ. ಇದರಲ್ಲಿ ನೀವು ಸೀರೆಯನ್ನು ಡೆನಿಂ ಅಥವಾ ಲೆಗಿಂಗ್‌ನ ಮೇಲ್ಭಾಗದಲ್ಲೇ ಡ್ರೇಪ್ ಮಾಡಿ ಹಾಗೂ ಸೀರೆಯ ಪ್ಲೀಟ್ಸ್ ನ್ನು ಎಡಗಾಲಿನ ಕಡೆ ಬರುವಂತೆ ಮಾಡಿ. ಬಲಗಾಲಿನ ಬದಿಯಿಂದ ಡೆನಿಂ ಅಥವಾ ಲೆಗಿಂಗ್ ಕಾಣುವಂತೆ ಮಾಡಿ. ಈ ಲುಕ್‌ನಲ್ಲಿ ಸೀರೆಯ ಸೆರಗನ್ನು ಎಡ ಹೆಗಲಿನ ಕಡೆಯಿಂದ ಪಿನ್ ಅಪ್ ಮಾಡಿ.
ಸೀರೆ ಆರಿಸುವಾಗ ಎಚ್ಚರ : ಯಾವಾಗ ಸೀರೆ ಖರೀದಿಸಿದರೂ ಲೈಟ್ ಫ್ಯಾಬ್ರಿಕ್ಸ್ ಇರುವಂಥದ್ದನ್ನೇ ಆರಿಸಿ. ಅಂದರೆ ಕ್ರೇಪ್, ಶಿಫಾನ್, ಜಾರ್ಜೆಟ್, ನೆಟ್ ಇತ್ಯಾದಿ.
ಬಾಡಿ ಸ್ಟೈಲ್ಗೆ ತಕ್ಕಂತೆ ಸೀರೆಯ ಆಯ್ಕೆ
ಸ್ಲಿಮ್ ಬಾಡಿ : ನೀವು ಸ್ಲಿಮ್ ಟ್ರಿಮ್ ಪ್ರಕೃತಿಯವರಾದರೆ ಕಾಟನ್, ಆರ್‌ಗೆಂಝಾ, ಸಿಲ್ಕ್ ಇತ್ಯಾದಿ ಉಟ್ಟುಕೊಳ್ಳಬಹುದು. ಇದರಲ್ಲಿ ತೆಳುಬಣ್ಣ ಹಾಗೂ ಭಾರಿ ಸೀರೆ ಜೊತೆ ದೊಡ್ಡ ಪ್ರಿಂಟ್ಸ್ ವುಳ್ಳ ಸೀರೆ ಇರಲಿ.
ಹೆಚ್ಚು ಹೆವಿ ಬಾಡಿ : ಹೆಚ್ಚು ಸ್ಥೂಲರಾದ ಮಹಿಳೆಯರು ಎಂದೂ ಗಂಜಿ ಹಾಕಿದ ಗರಿಗರಿ ಸೀರೆಯ ವ್ಯಾಮೋಹಕ್ಕೆ ಮರುಳಾಗಬಾರದು. ಅಂಥವರು ಸಿಲ್ಕ್, ಶಿಫಾನ್, ಹ್ಯಾಂಡ್‌ಲೂಮ್ ಸೀರೆಗಳನ್ನೇ ಆರಿಸಬೇಕು.
ಪೇರಲ್ ಶೇಪ್ ಬಾಡಿ : ಯಾವ ಹೆಂಗಸರ ಬಾಡಿ ಪೇರಲ್ ಶೇಪ್ ಇರುತ್ತದೋ ಅಂಥವರು ಶಿಫಾನ್, ಜಾರ್ಜೆಟ್, ಕ್ರೇಪ್ ಸೀರೆಗಳನ್ನೇ ಉಡಬೇಕು. ಅದೂ ಬ್ರೈಟ್ ಕಲರ್ ಹಾಗೂ ಬಲಬದಿಗೆ ಸೆರಗು ಹೊದೆಯುವಂತಿರಬೇಕು.
ಆ್ಯಪಲ್ ಶೇಪ್ ಬಾಡಿ : ಇಂಥ ಮಹಿಳೆಯರು ಸದಾ ಉದ್ದನೆಯ ಬ್ಲೌಸ್ ಜೊತೆ ಅತಿ ಉತ್ತಮ ಗುಣಮಟ್ಟದ ಸೀರೆ ಉಡಬೇಕು. ಎಂದೂ ಪಾರದರ್ಶಕ ಸೀರೆ ಉಡಬೇಡಿ. ನಿಮ್ಮ ಬಾಡಿ ಸಂಪೂರ್ಣ ಕವರ್ ಆಗುವಂತಹ ಸೀರೆಯನ್ನೇ ಆರಿಸಿ.
ಬ್ಲೌಸ್ ಮೇಲೂ ಪ್ರಯೋಗ : ನೀವು ಹಾಟ್‌ಗ್ಲಾಮರಸ್ ಲುಕ್ ಬಯಸಿದರೆ, ನಿಮ್ಮ ಬ್ಲೌಸ್ ಮೇಲೆ ಪ್ರಯೋಗ ಮಾಡಿ. ಏಕೆಂದರೆ ಸೀರೆ ಸಿಂಪಲ್ ಆಗಿದ್ದು ಬ್ಲೌಸ್ ಬೆಸ್ಟ್ ಆಗಿರುತ್ತದೆ. ಲಗ್ಶುರಿ ಲುಕ್ಸ್ ಗಾಗಿ ನೀವು ಜರೀ ವರ್ಕ್ ಇರುವ ಹಾಲ್ಟರ್ ನೆಕ್ ಬ್ಲೌಸ್‌ನ್ನು ಪ್ಲೇನ್ ಸೀರೆಯ ಜೊತೆ ಟ್ರೈ ಮಾಡಿ. ಟ್ರೆಡಿಶನಲ್ ಲುಕ್ಸ್ ಜೊತೆ ಸೆಕ್ಸೀ ಲುಕ್ಸ್ ಬೇಕೆನಿಸಿದರೆ ನೀವು ನೆಟೆಡ್ ಸ್ಲೀವ್ಸ್ ನ ವೆಲ್ವೆಟ್‌ಬ್ಲೌಸ್, ಲೈಟ್ ಶಿಮರೀ ಬಾರ್ಡರ್‌ನ ಆ್ಯಲ್ಟೋ ಬ್ಲೌಸ್ ಧರಿಸಿರಿ.
– ಪ್ರಭಾ ಮಾಧವ್