ಬ್ಯೂಟಿ ಮತ್ತು ಫ್ಯಾಷನ್‌ನ  ಹೆಚ್ಚುತ್ತಿರುವ ಮಾರುಕಟ್ಟೆ ಹೇಗೆ ಹಬ್ಬಗಳು ಮತ್ತು ಅವನ್ನು ಆಚರಿಸುವ ವಿಧಾನಗಳನ್ನು ಬದಲಾಯಿಸಿದೆ ಎನ್ನುವುದನ್ನು ಅಗತ್ಯವಾಗಿ ತಿಳಿದುಕೊಳ್ಳಿ.

ಫೆಸ್ಟಿವಲ್ ಅಂದರೆ ಹಬ್ಬಗಳು ಈಗ ಮೊದಲಿನಂತಿಲ್ಲ. ಅವನ್ನು ಆಚರಿಸುವ ವಿಧಾನ ಈಗ ಬದಲಾಗಿದೆ. ಹಿಂದೆ ಮನೆಯವರಿಗೆ 1 ಜೋಡಿ ಹೊಸ ಡ್ರೆಸ್‌ ಖರೀದಿಸುವುದು, ಮನೆಯನ್ನು ಸ್ವಚ್ಛಗೊಳಿಸುವುದು, ಹಬ್ಬದಂದು ಕೆಲವು ಭಕ್ಷ್ಯಗಳನ್ನು ತಯಾರಿಸುವುದು..... ಅಲ್ಲಿಗೆ ಹಬ್ಬ ಮುಗಿಯಿತು. ಆದರೆ ಸಮಯ ಸರಿದಂತೆ ಹಬ್ಬ ಆಚರಿಸುವ ಕಲ್ಚರ್‌ ಕೂಡ ಬದಲಾಗಿದೆ. ಈ ಬದಲಾವಣೆ ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಕಂಡುಬರುತ್ತದೆ.

ಹಿಂದೆ ಹಬ್ಬಗಳಲ್ಲಿ ಮಹಿಳೆಯರು ಮನೆ ಅಲಂಕರಿಸಲು ಹಾಗೂ ಅಡುಗೆ ಮಾಡಲು ತೊಡಗಿರುತ್ತಿದ್ದರು. ಈಗ ಅವರು ಹೆಚ್ಚು ಪ್ರಭಾವಿಗಳಾಗಿ ಹಬ್ಬದ ಆನಂದ ಪಡೆಯುತ್ತಿದ್ದಾರೆ. ಫ್ಯಾಷನೆಬಲ್ ಬಟ್ಟೆಗಳಿಂದ ಹಿಡಿದು ಮೇಕಪ್‌ ಮತ್ತು ಖರೀದಿಯವರೆಗೆ ಅವರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿರುತ್ತದೆ. ಹೀಗಾಗಿ ಹಬ್ಬ ಬರುತ್ತಲೇ ಎಲ್ಲ ಕಡೆ ಕಾಂತಿ ಬರುತ್ತದೆ. ಅಕ್ಟೋಬರ್‌ನಿಂದ ಹಿಡಿದು ಜನವರಿಯವರೆಗೆ ಹಬ್ಬದ ಸೀಸನ್‌ ಇರುತ್ತದೆ. ಮೊದಲು ದಸರಾ, ದೀಪಾವಳಿ ನಂತರ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸೆಲೆಬ್ರೇಷನ್‌ ಅಂದರೆ ಅಕ್ಟೋಬರ್‌ತಿಂಗಳು ಶುರುವಾಗುತ್ತಲೇ ಮಾರುಕಟ್ಟೆಗಳಲ್ಲಿ ಹೊಳಪು ಮೂಡುತ್ತದೆ.

ಹಲವಾರು ವ್ಯಾಪಾರಿಗಳ ಬಳಿ ಮಾತುಕಥೆ ನಡೆಸಿದಾಗ ಅವರು, ಇಡೀ ವರ್ಷದಲ್ಲಿ ಎಷ್ಟು ಸಂಪಾದಿಸುತ್ತಾರೋ ಅಷ್ಟನ್ನು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಸಂಪಾದಿಸುತ್ತೇವೆಂದು ಹೇಳಿದರು. ಹಬ್ಬಗಳಲ್ಲಿ ಫ್ಯಾಷನ್‌ ಮತ್ತು ಬ್ಯೂಟಿ ಮಾರುಕಟ್ಟೆಗಳದೇ ಪ್ರಧಾನ ಪಾತ್ರ. ಹಿಂದೆ ಜನ ಡಿಸೈನರ್‌ ಬಟ್ಟೆಗಳನ್ನು ಅಷ್ಟಾಗಿ ತೊಡುತ್ತಿರಲಿಲ್ಲ. ಕಾರಣ ಅವು ಬಹಳ ದುಬಾರಿಯಾಗಿದ್ದವು. ಅದಕ್ಕೆ ಕಾರಣ ಅವು ಕೈಯಿಂದ ತಯಾರಾಗುತ್ತಿದ್ದವು. ನಂತರ ಡಿಸೈನರ್‌ಗಳಿಗೆ ಬಟ್ಟೆಗಳು ಅಗ್ಗವಾಗುವವರೆಗೆ ಹೆಚ್ಚು ಜನ ಇನ್ನು ಖರೀದಿಸುವುದಿಲ್ಲವೆಂದು ತಿಳಿಯಿತು. ಈ ಕಾರಣದಿಂದಾಗಿ ಈಗ ಡಿಸೈನರ್‌ಗಳು ಬಟ್ಟೆಗಳನ್ನು ಮೆಷಿನ್‌ನಿಂದ ತಯಾರಿಸುತ್ತಿದ್ದಾರೆ. ಅದರಿಂದ ಅವು ಅಗ್ಗವಾಗಿ ಜನಸಾಮಾನ್ಯರಿಗೂ ತಲುಪುವಂತಾಯಿತು.

ಬರೀ ಒಳ್ಳೆಯ ಡ್ರೆಸ್‌ ಧರಿಸುವುದರಿಂದ ಏನೂ ಆಗುವುದಿಲ್ಲ. ನೀವು ಸುಂದರವಾಗಿ ಕಾಣಿಸುವುದು ಅಗತ್ಯ. ಆದ್ದರಿಂದ ಫ್ಯಾಷನ್ ಜೊತೆ ಜೊತೆಗೆ ಬ್ಯೂಟಿ ಮಾರುಕಟ್ಟೆಯೂ ಬೆಳೆಯಿತು. ಆದರೆ ಅಲಂಕರಿಸಿಕೊಂಡು ಮನೆಯಲ್ಲೂ ಕೂರಲಾಗುವುದಿಲ್ಲ. ಹೀಗಾಗಿ ಶಾಪಿಂಗ್‌ ಕೂಡ ಚೆನ್ನಾಗಿ ಆಗತೊಡಗಿತು.

ಫ್ಯಾಷನ್‌ ಬಣ್ಣಗಳಲ್ಲಿ ಮಿಂದೆದ್ದ ಹಬ್ಬ ಫೆಸ್ಟಿವಲ್ ಸೀಸನ್‌ನ ವಿಷಯ ಬಂದಕೂಡಲೇ ಎಲ್ಲಕ್ಕೂ ಮೊದಲು ಹೊಸ ಫ್ಯಾಷನ್‌ ಟ್ರೆಂಡ್ ಏನು ಎಂದು ಯೋಚಿಸಲಾಗುತ್ತದೆ. ಫ್ಯಾಷನ್‌ ಡಿಸೈನರ್‌ ಅದಿತಿ ಹೀಗೆ ಹೇಳುತ್ತಾರೆ, ``ಹಬ್ಬಗಳಲ್ಲಿ ಹಿಂದೆ ಬರೀ ಸೀರೆಗಳ ಖರೀದಿ ಇರುತ್ತಿತ್ತು. ಕಾಲ ಬದಲಾದಂತೆ ಡಿಸೈನರ್‌ ಸಲ್ವಾರ್‌ ಸೂಟ್‌ಗಳ ಖರೀದಿ ಹೆಚ್ಚಾಯಿತು. ಈಗಂತೂ ಎಂಬ್ರಾಯಿಡರಿ ಇರುವ ಫ್ಲೋರ್‌ ಲೆಂತ್‌ ಗೌನ್‌, ಎಂಬ್ರಾಯಿಡರಿ ಇರುವ ಸ್ಕರ್ಟ್‌ ಟಾಪ್‌, ಲಂಗ ರವಿಕೆ, ಲಾಂಗ್‌ ಸ್ಕರ್ಟ್‌, ಶಾರ್ಟ್‌ ಕುರ್ತಾ ಇತ್ಯಾದಿ ಹಬ್ಬಗಳಲ್ಲಿ ಧರಿಸಲಾಗುತ್ತಿದೆ. ಡಿಸೈನರ್‌ ಸಲ್ವಾರ್‌ ಸೂಟ್‌ ಬಹಳಷ್ಟು ಡಿಸೈನ್‌ಗಳಲ್ಲೇ ಬರುತ್ತದೆ. ವಿಶೇಷವೆಂದರೆ ಎಲ್ಲ ನಿಮ್ಮ ಬಜೆಟ್‌ನೊಳಗೇ ಸಿಗುತ್ತದೆ. ಅದಕ್ಕೆ ದೊಡ್ಡ ನಗರಕ್ಕೆ ಹೋಗುವ ಅಗತ್ಯವಿಲ್ಲ. ಎಲ್ಲ ನಿಮ್ಮ ಊರಿನಲ್ಲಿಯೇ ಸಿಗುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ