ಐಶ್ವರ್ಯಾ ರೈ, ಸನೀ ಲಿಯೋನ್‌, ವಿದ್ಯಾಬಾಲನ್‌, ಕರೀನಾ ಕಪೂರ್‌ ಮುಂತಾದವರಿಂದ ಸೋನಾಕ್ಷಿ ಸಿನ್ಹಾರವರೆಗೂ ಹೊಸ ಹೊಸ ವಿಧಾನಗಳಲ್ಲಿ ಸೀರೆ ಉಟ್ಟು ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಹೊಸ ಮೋಡಿ ಏಕೆ ಸಾಧ್ಯವಿಲ್ಲ ಹೇಳಿ.... 6 ಗಜದ ಉದ್ದದ ಈ ಸೀರೆ ತನ್ನ ಚಾರ್ಮ್ ಗ್ರೇಸ್‌ ಕಳೆದುಕೊಳ್ಳದೆ ಇಲ್ಲಿಯವರೆಗೆ ಸಾಗಿಬಂದಿದೆ.

ಇಂದಿಗೂ ಟ್ರೆಂಡ್ನಲ್ಲಿ......

ಆ ಕಾಲದಿಂದ ಈ ಕಾಲದವರೆಗೆ ಎಷ್ಟೇ ಬದಲಾವಣೆಗಳಾಗಿದ್ದರೂ ಸೀರೆಯ ಗ್ಲಾಮರ್‌ ಮಾತ್ರ ಒಂದಿಷ್ಟೂ ತಗ್ಗಿಲ್ಲ. ಹಬ್ಬಹರಿದಿನಗಳು, ಮುಂಜಿ ಮದುವೆಗಳಂಥ ಶುಭ ಸಮಾರಂಭಗಳಲ್ಲಿ ಹೆಂಗಸರಿಗೆ ಸಾಂಪ್ರದಾಯಿಕ ಲುಕ್ಸ್ ಜೊತೆ ಗ್ಲಾಮರಸ್‌ಆಗಿ ಕಾಣಿಸಿಕೊಳ್ಳುವುದು ನಿಜಕ್ಕೂ ಸವಾಲೇ ಸರಿ. ಆದರೆ ಇಂಥ ಗೆಟಪ್‌ನಲ್ಲಿ ನಿಮ್ಮ ಫಿಗರ್‌ ಹೇಗೇ ಇರಲಿ, ಸೀರೆ ನಿಮ್ಮ ಸರಳ ವ್ಯಕ್ತಿತ್ವ, ಸಭ್ಯತೆಗಳ ಪ್ರತೀಕವಾಗಿರುತ್ತದೆ. ಕಾಲಕ್ಕೆ ತಕ್ಕಂತೆ ಇಂದೂ ಸಹ ಸೀರೆಯ ಸ್ಟೈಲ್ ‌ಅಗತ್ಯ ಬದಲಾಗಿದೆ.....

ಆದರೆ ಭಾರತದಾದ್ಯಂತ ಮಾತ್ರವಲ್ಲದೆ, ವಿದೇಶದಲ್ಲೂ ಸೀರೆ ಇಂದಿಗೂ ತನ್ನ ಟ್ರೆಂಡ್‌ ಉಳಿಸಿಕೊಂಡಿದೆ. ಬನ್ನಿ, ಸೀರೆ ಉಡುವುದರಲ್ಲಿನ ವಿಭಿನ್ನ ಸ್ಟೈಲ್‌ಗಳ ಬಗ್ಗೆ ಸ್ಯಾರಿ ಡ್ರೇಪಿಂಗ್‌ ಎಕ್ಸ್ ಪರ್ಟ್ಸ್ ಏನೇನು ಸಲಹೆ ನೀಡಿದ್ದಾರೋ ಗಮನಿಸೋಣ.

ಸೀರೆಗಳ ಹೊಸ ಲುಕ್

ಎಷ್ಟೋ ವರ್ಷಗಳಿಂದ ಒಂದೇ ಶೈಲಿಯಲ್ಲಿ ನಾವು ಉಟ್ಟುಕೊಳ್ಳುತ್ತಿರುವ ಸೀರೆಗೆ ಫ್ಯಾಷನ್‌ ಡಿಸೈನರ್‌ಗಳು ಟ್ರೆಂಡಿ ಲುಕ್‌ ನೀಡಿ ಬದಲಾಯಿಸಿದ್ದಾರೆ. ಈಗಂತೂ ಸೀರೆಗಳನ್ನು ವಿಭಿನ್ನ ಶೈಲಿಗಳಲ್ಲಿ ಉಡುತ್ತಾರೆ. ಕುರ್ತಾ ಸ್ಟೈಲ್ ಸೀರೆ, ನೆಕ್‌ಲೇಸ್‌ ಲುಕ್‌ ಸೀರೆ, ಗೌನ್‌ ಸ್ಟೈಲ್ ಸೀರೆ, ಬೆಲ್ಟ್ ಸ್ಟೈಲ್ ‌ಸೀರೆ, ಜ್ಯಾಕೆಟ್‌ ಸ್ಟೈಲ್ ಸೀರೆ, ಡೆನಿಂ ಲೆಗಿಂಗ್‌ ಸ್ಟೈಲ್ ‌ಸೀರೆ.... ಇತ್ಯಾದಿ.

ಸೀರೆಯ ಟ್ರೆಂಡಿ ಅವತಾರ

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಇಂದಿನ ಹೆಂಗಸರ ಅಭಿರುಚಿ ನೋಡಿಕೊಂಡು ಡಿಸೈನರ್‌ಗಳು ಸೀರೆಗೆ ಟ್ರೆಂಡಿ ಅವತಾರ ಕೊಟ್ಟಿದ್ದಾರೆ. ಈಗ ಸೀರೆಯ ಜೊತೆ ಒಂದಕ್ಕಿಂತ ಒಂದು ಮಿಗಿಲಾದ ಸ್ಟೈಲಿಶ್‌ ಬ್ಲೌಸ್‌ ಮಿಂಚುತ್ತಿರುತ್ತವೆ. ಜೊತೆಗೆ ಟೀನೇಜ್‌ ಗರ್ಲ್ಸ್ ಬ್ಲೌಸ್‌ ಬದಲಿಗೆ ಬಿಕಿನಿ, ಜ್ಯಾಕೆಟ್ಸ್, ವೇಸ್ಟ್ ಕೋಸ್ಟ್ ಇತ್ಯಾದಿ ಧರಿಸುತ್ತಾರೆ. ಇದರ ಜೊತೆಗೆ ಪೆಟಿಕೋಟ್‌ ಬದಲು ಪ್ಯಾಂಟ್‌, ಲೆಗ್ಗಿಂಗ್‌ ಹಾಗೂ ಡೆನಿಂ. ಈ ಟ್ರೆಂಡಿ ಅವತಾರದ ಸೀರೆಗಳನ್ನು ನೀವು ಮಾಡರ್ನ್‌ ಪಾರ್ಟಿ, ಫಂಕ್ಷನ್‌, ಮದುವೆ ಇತ್ಯಾದಿಗಳಿಗೆ ಧರಿಸಬಹುದು. ಈ ಸೀರೆಗಳ ಫ್ಯೂಷನ್‌ ಲುಕ್ಸ್ ನ್ನು ಬಾಲಿವುಡ್‌ ಫ್ಯಾಷನ್‌ನಲ್ಲಿ ದಿಯಾ ಮಿರ್ಜಾ, ಸೋನಂ ಕಪೂರ್‌, ಸೋಹಾ ಅಲಿ ಖಾನ್‌ ಮುಂತಾದವರು ಸೀರೆಗಳಲ್ಲಿ ಗಮನಿಸಬಹುದಾಗಿದೆ.

ಸೀರೆಗಳ ಅಳಿಯದ ಬೆಡಗು

ಕುರ್ತಾ ಸ್ಟೈಲ್ ಸೀರೆ : ಈ ಸೀರೆಯನ್ನು ಸೊಂಟದ ಬಳಿ ಪೆಟಿಕೋಟ್‌ ಜೊತೆ ಟ್ಯಾಗ್‌ ಮಾಡಿ. ನಂತರ ಪ್ಲೀಟ್ಸ್ ಮಾಡಿ ಸೀರೆಯನ್ನು 2 ರೌಂಡ್ಸ್ ನಲ್ಲಿ ಸುತ್ತಬೇಕು. ಸೆರಗನ್ನು ಹೆಗಲಿನವರೆಗೂ ಕೊಂಡುಹೋಗಿ, ಮತ್ತೆ ಕೆಳಗಿನಿಂದ ಒಂದು ರೌಂಡ್‌ ತೆಗೆದುಕೊಂಡು ಸೆರಗಿನವರೆಗೂ ತಲುಪಿಸಿ. ಇದು ಮುಂಭಾಗದಿಂದ ಪಾಯಿಂಟೆಡ್‌ ಸೆರಗಿನಂತೆ ಕಾಣುತ್ತದೆ.

ನೆಕ್ಲೇಸ್ಲುಕ್ಸೀರೆ : ನೀವು ಹೇಗೆ ಎಂದಿನಂತೆ ನಾರ್ಮಲ್ ಆಗಿ ಸೀರೆ ಉಡುತ್ತೀರೋ, ಅದೇ ರೀತಿ ಈ ಶೈಲಿಗೂ ಉಟ್ಟುಕೊಳ್ಳಿ. ನಂತರ ಸೀರೆಯ ಸೆರಗಿನ ಪ್ಲೀಟ್ಸ್ ಮಾಡಿಕೊಳ್ಳಿ. ಅದನ್ನು ಕುತ್ತಿಗೆಗೆ ಒತ್ತರಿಸಿ, ಸೆರಗಿನ ಅಂಚನ್ನು ಮುಂಭಾಗಕ್ಕೆ ತನ್ನಿ ಹಾಗೂ ಹೆಗಲಿನ ಬಳಿ ಪಿನ್‌ನಿಂದ ಚೆನ್ನಾಗಿ ಸೆಟ್‌ ಮಾಡಿ. ಇದರಲ್ಲಿ ತೆಳು ಬಾರ್ಡರ್‌ನ ಸೀರೆ ಇದ್ದರೆ, ನೆಕ್‌ ಬಳಿ ಸೀರೆಯ ಲುಕ್‌ ಇನ್ನಷ್ಟು ಸೊಗಸಾಗಿರುತ್ತದೆ. ಆಗ ನಿಮಗೆ ನೆಕ್‌ ಪೀಸ್‌ ಧರಿಸಬೇಕಾದ ಅಗತ್ಯ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ