ತನ್ನ ಹೆಂಡತಿ ತಾರಾ ಐ.ಸಿ.ಯು.ನಲ್ಲಿ ನರಳುತ್ತಿದ್ದಾಳೆಂದು ಪತಿ ಪ್ರಕಾಶ್‌ ಬಹಳ ಒದ್ದಾಡುತ್ತಿದ್ದ.

ಡಾಕ್ಟರ್‌ : ನಾವು ನಮ್ಮ ಕೈಲಾದ ಪ್ರಯತ್ನವೆಲ್ಲ ಮಾಡಿದ್ದಾಯ್ತು. ಆಕೆ ತಮ್ಮ ಕಡೆಯಿಂದ ರೆಸ್ಪಾನ್ಸ್ ಕೊಡಬೇಕು. ಮಾತೇ ಆಡ್ತಿಲ್ಲ…. ನೋಡೋಣ, ಎಲ್ಲಕ್ಕೂ ಕಾಲವೇ ಪರಿಹಾರ…

ಪತಿ : ಛೇ….ಛೇ… ಅವಳಿನ್ನೂ 40 ಸಹ ದಾಟಿಲ್ಲ ಸರ್‌….

ಪತ್ನಿ : ಅಲ್ಲ…. ನಾನಿನ್ನೂ 39…. (ಕ್ಷೀಣ ದನಿಯಲ್ಲಿ)

ಪತಿ : ಕ್ರಿಕೆಟ್‌ ಮ್ಯಾಚ್‌ ಬರುವಂಥ ಚ್ಯಾನಲ್ ಹಾಕು.

ಪತ್ನಿ : ಬೇಕಾಗಿಲ್ಲ….. ಸೀರಿಯಲ್ ಮುಖ್ಯ!

ಪತಿ : ನೋಡ್ಕೋತೀನಿ ಇರು….

ಪತ್ನಿ : ಏನ್ರಿ ನೀವು ನೋಡ್ಕೋಳೋದು?!

ಪತಿ : ಅದೇ… ನೀನು ಹಾಕಿದ ಚ್ಯಾನೆಲ್….

ಪತಿ : ಇವತ್ತು ಆಫೀಸ್‌ ಕೆಲಸ ಸಾಕು ಸಾಕಾಯ್ತು…. ಬೇಗ ಒಂದು ಚೊಂಬು ನೀರು ಕೊಡು!

ಪತ್ನಿ : ಯಾಕೆ? ಬಾಯಾರಿಕೆ ಆಗ್ತಿದೆಯೇ?

ಪತಿ : ಇಲ್ಲ…..! ಗಂಟಲು ಸರಿಯಾಗಿದೆಯೇ ಎಂದು ಸ್ವಲ್ಪ ಪರೀಕ್ಷಿಸಬೇಕಿದೆ…. ಲೀಕ್‌ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಬೇಕು.

ಪತಿ : ಬಹಳ ತಲೆ ನೋಯುತ್ತಿದೆ… ಪಕ್ಕದ ಮನೆ ಪರಮೇಶಿ ಬಳಿ ಅಯೋಡೆಕ್ಸ್ ತಗೊಂಬಾ.

ಪತ್ನಿ : ಯಾವಾಗ್ಲೂ ಕೇಳ್ತಾ ಇರ್ತೀವಿ ಅಂತ ಮೊನ್ನೆ ಕೇಳಿದಾಗಲೇ ಇಲ್ಲ ಅಂದುಬಿಟ್ಟರು.

ಪತಿ : ಇಂಥ ಜಿಪುಣರೂ ಉಂಟೇ? ಹಾಳಾಗಿಹೋಗಲಿ…. ಬೀರುವಿನಲ್ಲಿರೋ ನಮ್ಮ ಮನೆಯದ್ದನ್ನೇ ತೆಗೆದುಕೊಂಡು ಬಾ… ತಲೆ ಸಿಡೀತಿದೆ.

ರಾತ್ರಿ 2 ಗಂಟೆಗೆ ಇದ್ದಕ್ಕಿದ್ದಂತೆ ಪತ್ನಿ ಪತಿಯನ್ನು ಎಬ್ಬಿಸಿ ಕೇಳತೊಡಗಿದಳು.

ಪತ್ನಿ : `ತ್ರಿದೇವ್‌’ ಹಿಂದಿ ಸಿನಿಮಾದಲ್ಲಿ ಮೂವರು ನಾಯಕಿಯರು ಯಾರು?

ಪತಿ : ಮಾಧುರಿ, ಸೋನಂ, ಸಂಗೀತ ಬಿಜಲಾನಿ.

ಪತ್ನಿ : `ದಿಲ್ ವಾಲೆ…’ ಶಾರುಖ್‌ ಸಿನಿಮಾದಲ್ಲಿ ನಾಯಕಿ ಕಾಜೋಲ್ ಳ ಹೆಸರೇನು?

ಪತಿ : ಸಿಮ್ರನ್‌.

ಪತ್ನಿ : ಮುಂದಿನ ಅಪಾರ್ಟ್‌ಮೆಂಟಿಗೆ ಬಂದಿರು ಹೊಸ ಹುಡುಗಿ ಕವಿತಾ ಆ ಫ್ಲಾಟಿಗೆ ಬಂದು ಎಷ್ಟು ದಿನ ಆಯಿತು?

ಪತಿ : 2 ತಿಂಗಳ ಮೇಲೆ 12 ದಿನ…. ಆದರೆ ಇದನ್ನೆಲ್ಲ ಇಷ್ಟು ಹೊತ್ತಿನಲ್ಲಿ ಯಾಕೆ ಕೇಳುತ್ತಿರುವೆ?

ಪತ್ನಿ : ಇಷ್ಟೆಲ್ಲ ಗೊತ್ತಿರುವ ನಿಮಗೆ ಇವತ್ತು ನಮ್ಮ ಆ್ಯನಿವರ್ಸರಿ ಅಂತ ನೆನಪಿಲ್ವಾ?

ಪತಿ : ………….

ಪತಿ : ಡಾರ್ಲಿಂಗ್‌…. ನಾನು ನಿನ್ನನ್ನು ಎಷ್ಟು ಲವ್ ಮಾಡ್ತೀನಿ ಗೊತ್ತಾ?

ಪತ್ನಿ : ನಾನು ಮಾತ್ರ ಇನ್ನೇನು? ನಿಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೇಮಿಸುತ್ತೇನೆ. ನಿಮಗಾಗಿ ಇಡೀ ವಿಶ್ವದೊಂದಿಗೆ ಹೋರಾಡಲು ನಾನು ಸದಾ ಸಿದ್ಧ…..

ಪತಿ : ಮತ್ತೆ …. ನೀನು ನನ್ನೊಂದಿಗೆ ಸದಾ ಜಗಳ ಅಡುತ್ತೀಯಲ್ಲ.

ಪತ್ನಿ : ಮತ್ತೆ… ನೀವೇ ತಾನೇ ನನ್ನ ಪ್ರಪಂಚ?

ಪತ್ನಿ : ಈ ಭಿಕಾರಿ ಬಲು ಕೆಟ್ಟವನು. ಇವನನ್ನು ಕಂಡರೆ ನನಗೆ ಕೆಟ್ಟ ಕೋಪ.

ಪತಿ : ಅದೇಕೆ?

ಪತ್ನಿ : ಮಹಾ ದುಷ್ಟ ಬಿಡಿ… ಅಲ್ಲ, ಪಾಪ ಅಂತ ನಿನ್ನೆ ಮಿಕ್ಕಿದ್ದ ತಂಗಳು ಹಾಕಿ ಕಳುಹಿಸಿದರೆ, ಇವತ್ತು `ಒಳ್ಳೆಯ ಅಡುಗೆ ಮಾಡುವುದು ಹೇಗೆ?’ ಅನ್ನುವ ಪುಸ್ತಕ ತಂದುಕೊಡುವುದೇ?

ಪತಿ : ಆಫೀಸಿನಿಂದ ಬಸ್ಸು ಹಿಡಿದು ಬರುವಷ್ಟರಲ್ಲಿ ಸಾಕು ಸಾಕಾಯ್ತು. ಆಮೇಲೆ ಕೇಳಿಲ್ಲಿ…. ನನ್ನ ಫ್ರೆಂಡ್‌ ಒಬ್ಬ 1 ಗಂಟೆ ಬಿಟ್ಟುಕೊಂಡು ಬರ್ತೀನಿ ಅಂತ ಹೇಳಿದ್ದಾನೆ. ರಾತ್ರಿ ಇಲ್ಲೇ ಊಟ ಮಾಡ್ತಾನೆ. ಬೇಗ ಏನಾದ್ರೂ ಮಾಡು.

ಪತ್ನಿ : ಏನು ಮಾತು ಹೇಳ್ತಿದ್ದೀರಿ? ಇವತ್ತು ಕೆಲಸದವಳು ಬಂದೇ ಇಲ್ಲ. ಬೆಳಗ್ಗೆಯಿಂದ ನಾನೇ ಪಾತ್ರೆ ಪಡಗ ಅಂತ ಎಲ್ಲಾ ಕೆಲಸ ಮಾಡಿಕೊಂಡಿದ್ದೀನಿ. ಮೊನ್ನೆ ಸಾಂಬಾರು, ನಿನ್ನೆ ಅನ್ನ ಮಿಕ್ಕಿದ್ದರಲ್ಲಿ ರಾತ್ರಿ ಕಾಲ ಕಳೆಯೋಣ ಅಂತ ಇದ್ದೀನಿ. ನಾಳೆ ಮಕ್ಕಳಿಗೆ ಟೆಸ್ಟ್. ಅವರ ಪಾಠದ ಕಡೆ ನೋಡ್ಲಾ… 1 ಗಂಟೆ ಒಳಗೆ ಅಡುಗೆ ಮಾಡಿ ಮನೆ ಕ್ಲೀನ್‌ ಮಾಡ್ಲಾ?

ಪತಿ : ಅದಕ್ಕೆ ಅನ್ನ ಬರಲಿ ಅಂದಿದ್ದು… ಭಡವಾ ಬೇಡ ಅಂದ್ರೂ ಮದುವೆ ಅಂತ ಕುಣೀತಿದ್ದಾನೆ. ಇಲ್ಲಿನ ವೈಭವ ನೋಡಿದ ಮೇಲಾದ್ರೂ ಸರಿಯಾದ ನಿರ್ಧಾರ ಕೈಗೊಳ್ಳಲಿ….

ಗುಂಡ ತನ್ನ ಹೆಂಡತಿ ಪುಟ್ನಂಜಿಯನ್ನು ಒಮ್ಮೆ ಜಾತ್ರೆಗೆ ಕರದೊಯ್ದ.

ಆ ಜಾತ್ರೆಯಲ್ಲಿ ಹೆಗಲಿಗೆ ಕ್ಯಾಮೆರಾ ತೂಗುಹಾಕಿಕೊಂಡಿದ್ದ ಫೋಟೋಗ್ರಾಫರ್‌ ಒಬ್ಬ ಇವರ ಬಳಿ ಬಂದು, “ಸ್ವಾಮಿ, ದಯವಿಟ್ಟು ಮೇಡಂ ಅವರ ಒಂದು ಫೋಟೋ ತೆಗೆಸಿ. ಎಂಥ ಅದ್ಭುತವಾಗಿ ಬರುತ್ತದೆ ಅಂದ್ರೆ ಫೋಟೋ ಮಾತಾಡುವಂತಿರಬೇಕು…..”

ಗುಂಡ ಅವನನ್ನು ತಡೆಯುತ್ತಾ, “ಬೇಡಪ್ಪ ಬೇಡ…. ಇವಳು ಬಾಯಿ ತೆರೆದರೆ ನಿಲ್ಲಿಸುವುದೇ ಕಷ್ಟ. ಇನ್ನು ಇವಳ ಫೋಟೋ ಸಹ ಮಾತನಾಡಲು ಆರಂಭಿಸಿದರೆ, ನನ್ನ ಗತಿ ಏನು…?” ಎಂದಾಗ ಆತ ಕಕ್ಕಾಬಿಕ್ಕಿ.

ಮಾಡರ್ನ್‌ ಮಾಲತಿ ಠಪ್‌ ಠಪ್‌ ಎಂದು ತನ್ನ ಹೈಹೀಲ್ಸ್ ಬಡಿಯುತ್ತಾ ಫೋಟೋ ತೆಗಿಸಲು ಸ್ಟುಡಿಯೋಗೆ ಬಂದಳು.

ಅವಳು ಫೋಟೋಗ್ರಾಫರ್‌ ಬಳಿ ಬಂದು ಗುಸಗುಸನೆ ಹೇಳಿದ್ದನ್ನು ಕೇಳಿ ಆತ ಸ್ವಲ್ಪ ಹೊತ್ತಿಗೆ ಮೂರ್ಛೆ ಹೋಗಿ ಬಿದ್ದೇಬಿಟ್ಟ. ಹಾಗೆ ಅವಳು ಹೇಳಿದ್ದಾದರೂ ಏನು?

“ದಯವಿಟ್ಟು ನನ್ನ ಪಾಸ್‌ಪೋರ್ಟ್‌ಸ್ಟ್ಯಾಂಪ್‌ ಸೈಜ್‌ ಫೋಟೋ ತೆಗೆಯಿರಿ. ಆದರೆ ಅದರಲ್ಲಿ ಅಗತ್ಯವಾಗಿ ನನ್ನ ಹೊಸ ಹೀಲ್ಸ್  ಕಾಣಿಸಲೇಬೇಕು!” ಎನ್ನುವುದೇ?

ಪೊಲೀಸರು ಇಂದ್ರಾಣಿ ಮುಖರ್ಜಿಯ ವಿಚಾರಣೆ ನಡೆಸುತ್ತಾ ಕೇಳಿದರಂತೆ :

ಮೇಡಂ, ನೀವು ಇಷ್ಟು ಮಂದಿ ಗಂಡಂದಿರ ಹೆಸರನ್ನು ನಿಮ್ಮ ಮೊಬೈಲ್‌ನಲ್ಲಿ ಹೇಗೆ ಸೇವ್ ‌ಮಾಡುತ್ತಿದ್ದಿರಿ?

ಇಂದ್ರಾಣಿ ಅದಕ್ಕೆ, `ಬಲು ಈಝಿ. ಅದನ್ನು ನಾನು ಈ ರೀತಿ ಮಾಡುತ್ತಿದ್ದೆ :

  1. ಮೋನಿ ಬದಲಿಗೆ ವೋನಿಕಾ
  2. ಚಂದರ್‌ ಬದಲಿಗೆ ಚಂದ್ರಿಕಾ
  3. ಹಸ್‌ಬೆಂಡ್‌ ಬದಲಿಗೆ ಹೌಸ್‌ ಬ್ಯಾಂಡ್‌.
  4. ಜಾನಿ ಬದಲಿಗೆ ಜಾನಕಿ
  5. ಕಿರಣ್‌ ಬದಲು ಕಿರನ್‌

ತಾಯಿ : ಎಲ್ಲಿ…. ಟಿಪ್ಪು ಸುಲ್ತಾನ್‌ ಯಾರ ಮಗ, ಹೇಳು ನೋಡೋಣ.

ಮಗ : ನನಗೆ ಗೊತ್ತಿಲ್ಲ.

ತಾಯಿ : ಸ್ವಲ್ಪ ಓದಿನ ಕಡೆ ಗಮನ ಕೊಡು, ತಾನಾಗಿ ನಿನಗೆ ತಿಳಯುತ್ತೆ.

ಮಗ : ವಿನುತಾ ಅಂದ್ರೆ ಯಾರು ಅಂತ ನಿನಗೆ ಗೊತ್ತಾ?

ತಾಯಿ : ಇಲ್ಲವಲ್ಲ…. ಯಾರು ಈ ಹೊಸ ಆಂಟಿ?

ಮಗ : ಆಗಾಗ ಡ್ಯಾಡಿ ಕಡೆ ಗಮನಕೊಡು, ಇಲ್ಲಾಂದ್ರೆ ಆಕೆ ನನಗೇ ಆಂಟಿ ಆಗ್ತಾರೆ.

ಪತ್ನಿ : ನಿನ್ನೆ ರಾತ್ರಿ ನೀವು ಎಷ್ಟು ಹೊತ್ತಿಗೆ ಮಲಗಿದಿರಿ?

ಪತಿ : ನಾನು ರಾತ್ರಿ 10.30ಕ್ಕೆ ಮತ್ತೆ ನೀನು ಇನ್ನೂ ಸೀರಿಯಲ್ ನೋಡ್ತಿದ್ದೆ.

ಪತ್ನಿ : ನಾನು ಮಲಗಿದಾಗ 11.30 ಆಗಿತ್ತು.

ಪತಿ : ಮತ್ತಿನ್ನೇನು…..?

ಪತ್ನಿ : ಮತ್ತೆ ನಿಮ್ಮ ವಾಟ್ಸ್ಆ್ಯಪ್‌ ಯಾಕೆ ಲಾಸ್ಟ್  ಸೀನ್‌ ಟುಡೆ 2.30 ಎ.ಎಂ. ಅಂತಿದೆ….?

ಓಹೋ…. ಈ ಟುಕು…ಟುಕು…ಟುಕು ಸಹಿಸಿ ಸಾಕಾಗಿದೆ. ಹಿಂದಿನ ಕಾಲದಂತೆ ಗುರುದಕ್ಷಿಣೆಯಾಗಿ ಹೆಬ್ಬೆಟ್ಟು ಕೇಳುವ ಪರಂಪರೆ ಮತ್ತೆ ಆರಂಭಿಸಿದರೆ ಮಾತ್ರ ಇವರ ಈ ಹಾಳು ಗೀಳನ್ನು ಬಿಡಿಸಬಹುದೇನೋ….ಟುಕು…ಟುಕು…ಟುಕು…ಟುಕು…ಟುಕು…. ಟುಕು… ಟುಕು…ಟುಕು…ಟುಕು…ಟುಕು….

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ