ತನ್ನ ಹೆಂಡತಿ ತಾರಾ ಐ.ಸಿ.ಯು.ನಲ್ಲಿ ನರಳುತ್ತಿದ್ದಾಳೆಂದು ಪತಿ ಪ್ರಕಾಶ್‌ ಬಹಳ ಒದ್ದಾಡುತ್ತಿದ್ದ.

ಡಾಕ್ಟರ್‌ : ನಾವು ನಮ್ಮ ಕೈಲಾದ ಪ್ರಯತ್ನವೆಲ್ಲ ಮಾಡಿದ್ದಾಯ್ತು. ಆಕೆ ತಮ್ಮ ಕಡೆಯಿಂದ ರೆಸ್ಪಾನ್ಸ್ ಕೊಡಬೇಕು. ಮಾತೇ ಆಡ್ತಿಲ್ಲ.... ನೋಡೋಣ, ಎಲ್ಲಕ್ಕೂ ಕಾಲವೇ ಪರಿಹಾರ...

ಪತಿ : ಛೇ....ಛೇ... ಅವಳಿನ್ನೂ 40 ಸಹ ದಾಟಿಲ್ಲ ಸರ್‌....

ಪತ್ನಿ : ಅಲ್ಲ.... ನಾನಿನ್ನೂ 39.... (ಕ್ಷೀಣ ದನಿಯಲ್ಲಿ)

ಪತಿ : ಕ್ರಿಕೆಟ್‌ ಮ್ಯಾಚ್‌ ಬರುವಂಥ ಚ್ಯಾನಲ್ ಹಾಕು.

ಪತ್ನಿ : ಬೇಕಾಗಿಲ್ಲ..... ಸೀರಿಯಲ್ ಮುಖ್ಯ!

ಪತಿ : ನೋಡ್ಕೋತೀನಿ ಇರು....

ಪತ್ನಿ : ಏನ್ರಿ ನೀವು ನೋಡ್ಕೋಳೋದು?!

ಪತಿ : ಅದೇ... ನೀನು ಹಾಕಿದ ಚ್ಯಾನೆಲ್....

ಪತಿ : ಇವತ್ತು ಆಫೀಸ್‌ ಕೆಲಸ ಸಾಕು ಸಾಕಾಯ್ತು.... ಬೇಗ ಒಂದು ಚೊಂಬು ನೀರು ಕೊಡು!

ಪತ್ನಿ : ಯಾಕೆ? ಬಾಯಾರಿಕೆ ಆಗ್ತಿದೆಯೇ?

ಪತಿ : ಇಲ್ಲ.....! ಗಂಟಲು ಸರಿಯಾಗಿದೆಯೇ ಎಂದು ಸ್ವಲ್ಪ ಪರೀಕ್ಷಿಸಬೇಕಿದೆ.... ಲೀಕ್‌ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಬೇಕು.

ಪತಿ : ಬಹಳ ತಲೆ ನೋಯುತ್ತಿದೆ... ಪಕ್ಕದ ಮನೆ ಪರಮೇಶಿ ಬಳಿ ಅಯೋಡೆಕ್ಸ್ ತಗೊಂಬಾ.

ಪತ್ನಿ : ಯಾವಾಗ್ಲೂ ಕೇಳ್ತಾ ಇರ್ತೀವಿ ಅಂತ ಮೊನ್ನೆ ಕೇಳಿದಾಗಲೇ ಇಲ್ಲ ಅಂದುಬಿಟ್ಟರು.

ಪತಿ : ಇಂಥ ಜಿಪುಣರೂ ಉಂಟೇ? ಹಾಳಾಗಿಹೋಗಲಿ.... ಬೀರುವಿನಲ್ಲಿರೋ ನಮ್ಮ ಮನೆಯದ್ದನ್ನೇ ತೆಗೆದುಕೊಂಡು ಬಾ... ತಲೆ ಸಿಡೀತಿದೆ.

ರಾತ್ರಿ 2 ಗಂಟೆಗೆ ಇದ್ದಕ್ಕಿದ್ದಂತೆ ಪತ್ನಿ ಪತಿಯನ್ನು ಎಬ್ಬಿಸಿ ಕೇಳತೊಡಗಿದಳು.

ಪತ್ನಿ : `ತ್ರಿದೇವ್‌' ಹಿಂದಿ ಸಿನಿಮಾದಲ್ಲಿ ಮೂವರು ನಾಯಕಿಯರು ಯಾರು?

ಪತಿ : ಮಾಧುರಿ, ಸೋನಂ, ಸಂಗೀತ ಬಿಜಲಾನಿ.

ಪತ್ನಿ : `ದಿಲ್ ವಾಲೆ...' ಶಾರುಖ್‌ ಸಿನಿಮಾದಲ್ಲಿ ನಾಯಕಿ ಕಾಜೋಲ್ ಳ ಹೆಸರೇನು?

ಪತಿ : ಸಿಮ್ರನ್‌.

ಪತ್ನಿ : ಮುಂದಿನ ಅಪಾರ್ಟ್‌ಮೆಂಟಿಗೆ ಬಂದಿರು ಹೊಸ ಹುಡುಗಿ ಕವಿತಾ ಆ ಫ್ಲಾಟಿಗೆ ಬಂದು ಎಷ್ಟು ದಿನ ಆಯಿತು?

ಪತಿ : 2 ತಿಂಗಳ ಮೇಲೆ 12 ದಿನ.... ಆದರೆ ಇದನ್ನೆಲ್ಲ ಇಷ್ಟು ಹೊತ್ತಿನಲ್ಲಿ ಯಾಕೆ ಕೇಳುತ್ತಿರುವೆ?

ಪತ್ನಿ : ಇಷ್ಟೆಲ್ಲ ಗೊತ್ತಿರುವ ನಿಮಗೆ ಇವತ್ತು ನಮ್ಮ ಆ್ಯನಿವರ್ಸರಿ ಅಂತ ನೆನಪಿಲ್ವಾ?

ಪತಿ : .............

ಪತಿ : ಡಾರ್ಲಿಂಗ್‌.... ನಾನು ನಿನ್ನನ್ನು ಎಷ್ಟು ಲವ್ ಮಾಡ್ತೀನಿ ಗೊತ್ತಾ?

ಪತ್ನಿ : ನಾನು ಮಾತ್ರ ಇನ್ನೇನು? ನಿಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೇಮಿಸುತ್ತೇನೆ. ನಿಮಗಾಗಿ ಇಡೀ ವಿಶ್ವದೊಂದಿಗೆ ಹೋರಾಡಲು ನಾನು ಸದಾ ಸಿದ್ಧ.....

ಪತಿ : ಮತ್ತೆ .... ನೀನು ನನ್ನೊಂದಿಗೆ ಸದಾ ಜಗಳ ಅಡುತ್ತೀಯಲ್ಲ.

ಪತ್ನಿ : ಮತ್ತೆ... ನೀವೇ ತಾನೇ ನನ್ನ ಪ್ರಪಂಚ?

ಪತ್ನಿ : ಈ ಭಿಕಾರಿ ಬಲು ಕೆಟ್ಟವನು. ಇವನನ್ನು ಕಂಡರೆ ನನಗೆ ಕೆಟ್ಟ ಕೋಪ.

ಪತಿ : ಅದೇಕೆ?

ಪತ್ನಿ : ಮಹಾ ದುಷ್ಟ ಬಿಡಿ... ಅಲ್ಲ, ಪಾಪ ಅಂತ ನಿನ್ನೆ ಮಿಕ್ಕಿದ್ದ ತಂಗಳು ಹಾಕಿ ಕಳುಹಿಸಿದರೆ, ಇವತ್ತು `ಒಳ್ಳೆಯ ಅಡುಗೆ ಮಾಡುವುದು ಹೇಗೆ?' ಅನ್ನುವ ಪುಸ್ತಕ ತಂದುಕೊಡುವುದೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ