ದಿನವಿಡೀ ಮಾನಸಿಕ ಆಯಾಸ, ಜಡ ಶರೀರ, ಉದುರು ಕೂದಲು ಮತ್ತು ತಲೆನೋವಿಗೆ ಉತ್ತಮ ಚಿಕಿತ್ಸೆಯೆಂದರೆ ತಲೆಯ ಮಸಾಜ್‌. ಬಹಳ ಹಿಂದಿನಿಂದಲೇ ಮಸಾಜ್‌ಗೆ ಮಹತ್ವವಿದೆ. ಆದರೆ ಇಂದು ಉದ್ಯೋಗಸ್ಥ ಮಹಿಳೆಯರು ಕೂದಲಿಗೆ ಎಣ್ಣೆ ಹಚ್ಚಿಕೊಂಡು ಆಫೀಸಿಗೆ ಹೋಗುವುದಿಲ್ಲ. ಎಣ್ಣೆ ಕೂದಲಿಗೆ ಪ್ರಾಕೃತಿಕ ರೂಪದಲ್ಲಿ ಪೋಷಣೆ ನೀಡುತ್ತದೆ. ಹೆಚ್ಚುತ್ತಿರುವ ಕೂದಲಿನ ಸಮಸ್ಯೆಗಳನ್ನು ನೋಡಿದರೆ ನಿಯಮಿತವಾಗಿ ಎಣ್ಣೆ ಹಚ್ಚುವುದು ಬಹಳ ಅಗತ್ಯ ಎಂದು ತಿಳಿಯುತ್ತದೆ. ಏಕೆಂದರೆ ಅದರಿಂದ ಶರೀರದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಕೂದಲಿನ ಬುಡದ ಶುಷ್ಕತನ ದೂರವಾಗುತ್ತದೆ. ಅದರಿಂದ ಹೊಸ ಕೂದಲು ಮತ್ತೆ ಹುಟ್ಟುತ್ತದೆ. ಎಣ್ಣೆಯಿಲ್ಲದ ಕೂದಲು ಸಿಕ್ಕು ಸಿಕ್ಕಾಗಿ, ಒರಟು ಹಾಗೂ ಶುಷ್ಕತನದಿಂದ ಕೂಡಿರುತ್ತದೆ. ಎಣ್ಣೆ ಕೂದಲನ್ನು ಮಾಯಿಶ್ಚರೈಸ್‌ ಮಾಡುತ್ತದೆ.

ಕೂದಲಿಗೆ ಲಾಭಕರ

ಕೆಲವು ಮಹಿಳೆಯರು ತಮ್ಮ ಕೂದಲಿಗೆ ಎಣ್ಣೆ ಹಚ್ಚಲು ಇಚ್ಛಿಸುತ್ತಾರೆ. ಆದರೆ ವ್ಯಸ್ತತೆಯಿಂದಾಗಿ ಎಣ್ಣೆ ಹಚ್ಚಲಾಗುವುದಿಲ್ಲ. ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ‌ಆಯಿಲ್ ‌ಯಾವುದೇ ಆಗಲಿ ಎಲ್ಲ ಕೂದಲಿಗೆ ಲಾಭಕರವೇ. ಮಹಿಳೆಯರು ಪ್ರತಿದಿನ ಸುಂದರವಾಗಿ ಕಾಣಬೇಕೆಂದುಕೊಳ್ಳುತ್ತಾರೆ. ಅದಕ್ಕಾಗಿ ಅವರು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಸಂತೋಷವಾಗಿರಬೇಕು. ಸ್ಟ್ರೆಸ್‌ ಲೆವೆಲ್‌ನ್ನು ಕಡಿಮೆಗೊಳಿಸಲು ಕೂದಲಿಗೆ ಎಣ್ಣೆಯ ಮಸಾಜ್‌ ಬಹಳ ಲಾಭಕರ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ. ವಾರದಲ್ಲಿ 1-2 ಬಾರಿ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಅಗತ್ಯ ಎಂದು ಡಾ. ರೋಹಿಣಿ ಹೇಳುತ್ತಾರೆ.

ಎಣ್ಣೆಯನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ನಂತರ ಬೆರಳುಗಳ ತುದಿಯಿಂದ ಗುಂಡಗೆ ತಿರುಗಿಸುತ್ತಾ ಮಸಾಜ್‌ ಮಾಡಿ. ಅದರಿಂದ ಮಾನಸಿಕ ಆಯಾಸ ಪರಿಹಾರವಾಗುವುದು ಹಾಗೂ ಕೂದಲಿಗೆ ಸರಿಯಾದ ಪೋಷಣೆಯೂ ಸಿಗುತ್ತದೆ.

ಬೇರೆ ಬೇರೆ ಎಣ್ಣೆಗಳ ಲಾಭಗಳು

ಕೂದಲಿನ ಮಸಾಜ್‌ಗೆ ಉಪಯೋಗಿಸುವ ಎಲ್ಲ ಎಣ್ಣೆಗಳು ಆರೋಗ್ಯ ಉಂಟುಮಾಡುತ್ತವೆ. ಎಲ್ಲದರಲ್ಲೂ ಅದರದೇ ಆದ ವಿಶೇಷ ಗುಣವಿರುತ್ತದೆ.

ಸಾಸುವೆ ಎಣ್ಣೆಯಲ್ಲಿ ಬೀಟಾ ಕೆರಾಟಿನ್‌ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದು, ಅದು ಕೂದಲನ್ನು ಉದ್ದಗೊಳಿಸುವಲ್ಲಿ ಸಹಾಯ ಮಾಡುತ್ತದೆ.  ಅದರಿಂದ ನಿಯಮಿತವಾಗಿ ಮಸಾಜ್‌ ಮಾಡಿದರೆ ಶುಷ್ಕ ಹಾಗೂ ನಿರ್ಜೀವ ಕೂದಲಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಗರ್ಭಾವಸ್ಥೆಯಲ್ಲಿ ಬಾದಾಮಿ ಎಣ್ಣೆಯಿಂದ ಮಸಾಜ್‌ ಮಾಡಿದರೆ ಕೂದಲುದುರುವ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ವಿಟಮಿನ್ `ಡಿ,' `ಈ' ಹೇರಳವಾಗಿರುವ ಈ ಹೇರ್‌ ಆಯಿಲ್ ‌ಕೂದಲಿಗೆ ಹೊಳಪನ್ನು ತರುತ್ತದೆ.

ಕೊಬ್ಬರಿ ಎಣ್ಣೆ ಕೂದಲಿಗೆ ಪ್ರಾಕೃತಿಕ ಕಂಡೀಶನರ್‌ ಆಗಿದೆ. ಏಕೆಂದರೆ ಇದರಲ್ಲಿ ಫ್ಯಾಟಿ ಆ್ಯಸಿಡ್‌ ಇರುತ್ತದೆ. ಅದು ಕೂದಲಿಗೆ ಆರ್ದ್ರತೆ ಹಾಗೂ ಪೋಷಣೆ ಕೊಡುತ್ತದೆ.

ನೆಲ್ಲಿಕಾಯಿಯಲ್ಲಿ ವಿಟಮಿನ್‌`ಸಿ' ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಹೇರಳವಾಗಿರುತ್ತವೆ. ಅವು ಕೂದಲನ್ನು ಬಲಹೀನವಾಗದಂತೆ ಹಾಗೂ ಬೆಳ್ಳಗಾಗದಂತೆ ರಕ್ಷಿಸುತ್ತವೆ.

ತೊಂದರೆಗಳಿಂದ ರಕ್ಷಣೆ ಡಾ. ರೋಹಿಣಿ ಮುಂದುವರಿಸುತ್ತಾ, ``ಇಂದು ಹೆಚ್ಚಿನ ಮಹಿಳೆಯರು ಹೇರ್‌ ಫಾಲ್ ‌ಸಮಸ್ಯೆಯಿಂದ ಪೀಡಿತರಾಗುತ್ತಿದ್ದಾರೆ. ಅವರು ಕೂದಲಿನ ಸ್ವಚ್ಛತೆಯ ಬಗ್ಗೆ ಗಮನ ಕೊಡುವುದಿಲ್ಲ. ಪೌಷ್ಟಿಕ ಹಾಗೂ ಸಮತೋಲಿತ ಆಹಾರ ಸೇವಿಸುವುದಿಲ್ಲ. ಅದರಿಂದ ಅವರ ಕೂದಲು ಶುಷ್ಕವಾಗಿ, ನಿರ್ಜೀವವಾಗಿ, ನಿಸ್ಸಾರವಾಗಿರುತ್ತದೆ. ಸ್ಕಾಲ್ಪ್ ನ ತ್ವಚೆ ಶುಷ್ಕವಾದಾಗ ಡ್ಯಾಂಡ್ರಫ್‌ನ ಸಮಸ್ಯೆಯುಂಟಾಗುತ್ತದೆ. ಆದ್ದರಿಂದ ಎಣ್ಣೆ ಹಚ್ಚುವುದರಿಂದ ಶುಷ್ಕ ತ್ವಚೆ ಆರ್ದ್ರತೆಯಿಂದ ಕೂಡಿರುತ್ತದೆ. ಮೃತಕೋಶಗಳು ಜೀವಂತವಾಗುತ್ತವೆ. ಆಯಿಲ್ ‌ಉಪಯೋಗಿಸುವುದರಿಂದ ಹೇರ್‌ ಫಾಲ್ ಮತ್ತು ಡ್ಯಾಂಡ್ರಫ್‌ ಎರಡೂ ತೊಂದರೆಗಳಿಂದ ರಕ್ಷಿಸುತ್ತದೆ,'' ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ