ಯಾವ ರೀತಿ ಕೂದಲಿಗೆ ಬಣ್ಣ ಹಚ್ಚಿಸುವುದು ಹಾಗೂ ದೇಹದ ವಿಭಿನ್ನ ಅಂಗಾಂಗಗಳ ಮೇಲೆ ಟ್ಯಾಟೂ ಹಾಕಿಸುವುದು ಫ್ಯಾಷನ್ ಎನಿಸುತ್ತದೋ, ಅದೇ ರೀತಿ ನೇಲ್ ‌ಆರ್ಟ್‌ ಕಡೆಗೂ ಯುವತಿಯರ ವಿಶೇಷ ಅಭಿರುಚಿ ದಿನೇದಿನೇ ಹೆಚ್ಚುತ್ತಿದೆ.

ಹಿಂದೆಲ್ಲ ಉಗುರನ್ನು ಸುಂದರಗೊಳಿಸಲು ಅವುಗಳ ಮೇಲೆ ಬಣ್ಣ ಬಣ್ಣದ ನೇಲ್ ‌ಪಾಲಿಶ್‌ ಹಚ್ಚಲಾಗುತ್ತಿತ್ತು. ಎಷ್ಟೋ ಸಲ ಇವನ್ನು ಇನ್ನಷ್ಟು ಹೆಚ್ಚು ಆಕರ್ಷಕಗೊಳಿಸಲು ಇವುಗಳ ಮೇಲೆ 2 ಬಗೆಯ ಬಣ್ಣಗಳ ನೇಲ್ ‌ಪಾಲಿಶ್‌ ಹಚ್ಚಲಾಗುತ್ತಿತ್ತು. ಆದರೆ ಕ್ರಮೇಣ ಫ್ಯಾಷನ್‌ ಲೋಕದಲ್ಲಿ ವಿಕಾಸ ಆಗುತ್ತಿದ್ದಂತ, ಫ್ಯಾಷನ್‌ಗೆ ಸಂಬಂಧಿಸಿದ ಎಲ್ಲಾ ವಸ್ತುಗಳಲ್ಲೂ ಬದಲಾವಣೆ ಕಂಡುಬರತೊಡಗಿತು.

ತಮ್ಮ ಕೂದಲಿನಿಂದ ಹಿಡಿದು ಉಗುರಿನವರೆಗೂ ಫ್ಯಾಷನೆಬಲ್‌ಗೊಳಿಸಲು ಇಂದಿನ ಯುವತಿಯರು ಬಹಳ ಇಷ್ಟಪಡುತ್ತಾರೆ.

ಯಾವುದೇ ಬಗೆಯ ಡೆಕೋರೇಟಿವ್ ‌ಪಾಲಿಶ್‌, ಪೇಂಟ್‌ ಅಥವಾ ಇತರ ಆ್ಯಕ್ಸೆಸರೀಸ್‌ ಬಳಸಿ ಉಗುರನ್ನು ಸಿಂಗರಿಸುವುದೇ ನೇಲ್ ಆರ್ಟ್‌ನ ಮುಖ್ಯ ಉದ್ದೇಶ. ಅವನ್ನು ಆದಷ್ಟೂ ಸ್ಟೈಲಿಶ್‌ ಮಾಡಲಾಗುತ್ತದೆ. ಪ್ರತಿ ಆರ್ಟಿಸ್ಟ್ ನ ಕಲ್ಪನೆಗೆ ತಕ್ಕಂತೆ ನೇಲ್ ‌ಆರ್ಟ್ ಉಗುರಿಗೆ ಅತ್ಯಾಕರ್ಷಕ ವಿನ್ಯಾಸ ಒದಗಿಸುತ್ತದೆ. ಇದನ್ನು ಆರ್ಟಿಫಿಶಿಯಲ್ಸ್ ನೇಲ್ ಟೆಕ್ನಾಲಜಿ ಎಂದೂ ಹೇಳಲಾಗುತ್ತದೆ.

ಉಗುರಿನ ಅಲಂಕಾರ ಹೆಚ್ಚೂ ಕಡಿಮೆ ಇಂದಿಗೆ 30-40 ವರ್ಷಗಳಷ್ಟು ಹಳೆಯದು. ಕೇವಲ ನೇಲ್ ‌ಪಾಲಿಶ್‌ನಿಂದ ಆರಂಭವಾದ ಈ ಟ್ರೆಂಡ್‌ ಕ್ರಮೇಣ ಸಣ್ಣಪುಟ್ಟ ನಕ್ಷತ್ರಾಕಾರದ ಡಿಸೈನ್ಸ್, ಮುತ್ತು, ಸ್ಟೋನ್ಸ್ ಇತ್ಯಾದಿಗಳ ಬಳಕೆಯೊಂದಿಗೆ ಮುಂದುವರಿಯಿತು.

ಟ್ಯಾಟೂ ಹಾಕಿಸುವಷ್ಟೇ ಕ್ರೇಜ್‌ ಈ ನೇಲ್ ಆರ್ಟ್‌ಗೂ ಇದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಇತ್ತೀಚೆಗಂತೂ ಕಿರುಬೆರಳಿನ ಉಗುರಿನ ಮೇಲೆ ಎಲ್ಲಾ ತರಹದ ಕಲಾತ್ಮಕ ಪ್ರಯೋಗಗಳೂ ನಡೆಯುತ್ತಿರುತ್ತವೆ. ಉಗುರಿಗೆ ಅತಿ ಸಣ್ಣ ಗಾತ್ರದ ರಿಂಗ್‌ ಅಳವಡಿಕೆಯೂ ಉಂಟು.

ವಿಭಿನ್ನ ಡಿಸೈನ್ಸ್ ನೇಲ್ ‌ಆರ್ಟ್‌ ಹಲವು ವಿಧದಲ್ಲಿ ನಡೆಯುತ್ತದೆ. ಪ್ಲೇನ್‌ ಬಣ್ಣದಿಂದ ಕೂಡಿದ ಉಗುರಿನ ಮೇಲೆ ಗೋಲ್ಡ್ ಯಾ ಸಿಲ್ವರ್‌ ಹೂಗಳ ವಿನ್ಯಾಸ ಅಥವಾ ಸಣ್ಣ ಮುತ್ತುಗಳ ಅಲಂಕಾರ, ವಿಭಿನ್ನ ಶೇಡ್‌ಗಳ ಬಣ್ಣದ ಸ್ಪ್ರೇ, ಟ್ಯಾಟೂ..... ಹೀಗೆ ಅನೇಕ ವಿಧದಲ್ಲಿ ಉಗುರನ್ನು ಸಿಂಗರಿಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಯಾವ ಮೆಟೀರಿಯಲ್‌ನಿಂದ ಡ್ರೆಸ್‌ನ್ನು ಸಿಂಗರಿಸಲಾಗುತ್ತದೋ ಅದನ್ನೇ ಉಗುರಿನ ಅಲಂಕಾರಕ್ಕೂ ಬಳಸುತ್ತಾರೆ. ನೇಲ್ ‌ಆರ್ಟ್‌ಗಾಗಿ ಬೋಲ್ಡ್ ಕಲರ್ಸ್‌ ಅಂದರೆ ರೆಡ್‌, ಬ್ಲೂ, ಗೋಲ್ಡ್, ಗ್ರೀನ್‌, ಬ್ಲ್ಯಾಕ್‌ ಮುಂತಾದವುಗಳ ಬಳಕೆ ಒಳ್ಳೆಯದಿರುತ್ತದೆ.

ನೇಲ್ ಆರ್ಟ್‌ ಮಾಡಿಸುವ ಸಮಯದಲ್ಲೇ ನೇಲ್ ಪಾಲಿಶ್‌ನ ಆಯ್ಕೆ ನಡೆಯುತ್ತದೆ. ನೀವು ಎಲ್ಲಾ ಉಗುರುಗಳ ಮೇಲೂ ಒಂದೇ ತರಹದ ಡಿಸೈನ್ಸ್ ಮಾಡಿಸಬಹುದು ಅಥವಾ ಪ್ರತಿಯೊಂದು ಉಗುರಿನ ಮೇಲೂ ಬೇರೆ ಬೇರೆ ವಿಭಿನ್ನ ಡಿಸೈನ್ಸ್ ಮಾಡಿಸಬಹುದು.

ಇತ್ತೀಚೆಗೆ ನೇಲ್ ‌ಆರ್ಟ್‌ಗಾಗಿ ವಿಶೇಷ ಬಗೆಯ ಸೂಕ್ಷ್ಮ ಉಪಕರಣಗಳನ್ನೂ ಬಳಸುತ್ತಾರೆ. ಅವುಗಳ ನೆರವಿನಿಂದ ಯಾವುದೇ ಡಿಸೈನ್‌ ಸುಲಭವಾಗಿ ಆಗುತ್ತದೆ.

ಗಮನಿಸತಕ್ಕ ಅಂಶಗಳು

ನೇಲ್ ಆರ್ಟ್‌ ಪ್ರಯೋಗದ ನಂತರ ಯಾವುದೇ ಉತ್ತಮ ಮಸಾಜ್‌ ಆಯಿಲ್‌ಬಳಸಿ, ಉಗುರನ್ನು ಮಸಾಜ್‌ ಮಾಡಬೇಕು. ಇದರಿಂದ ಅವುಗಳ ಸ್ವಚ್ಛತೆ ಮತ್ತು ಆರೋಗ್ಯ ಎರಡೂ ಸುಧಾರಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ