“ಊ ಲಾ ಲಾ ….. ಊ ಲಾ ಲಾ …. ತೂ ಹೈ ಮೇರಿ ಫ್ಯಾಂಟಸಿ…..” ಎಂಬ `ಡರ್ಟಿ ಪಿಕ್ಚರ್‌’ನ ಹಾಡನ್ನು ನೀವು ಕೇಳಿರಬಹುದು. ಈ ಚಿತ್ರದಲ್ಲಿ ವಿದ್ಯಾ ಬಾಲನ್‌ ಲಕ್ಷಾಂತರ ಯುವಕರ `ಫ್ಯಾಂಟಸಿ’ ಆಗಿದ್ದಳು. ಆಕೆ ಸದಾ ತಮ್ಮೊಂದಿಗೆ ಇರುವಂತೆ ಇರುವ ಅನುಭೂತಿ ಮಾಡಿಕೊಳ್ಳುತ್ತಿದ್ದರು. ಪೋರ್ನ್‌ ಸ್ಟಾರ್‌ನಿಂದ ಹಿಡಿದು ಬಾಲಿವುಡ್‌ ತನಕ ಅಭಿನಯ ಪಯಣ ಮಾಡಿರುವ ಸನ್ನಿ ಲಿಯೋನ್‌ ಕೂಡ ಲಕ್ಷಾಂತರ ಯುವಕರ ಫ್ಯಾಂಟಸಿ. ಆಕೆಯ ಒಂದು ಕಣ್ಣೋಟದಿಂದಲೇ ಜನರು ಆಕೆಯ ಅಭಿಮಾನಿಗಳಾಗಿಬಿಡುತ್ತಾರೆ. ತನ್ನ ಸೆಕ್ಸಿ ಗತ್ತಿನಿಂದಾಗಿ ಲಕ್ಷಾಂತರ ಯುವಕರ ನಿದ್ದೆಗೆಡಿಸಿದ ಈ ಚೆಲುವೆ ಕೂಡ ಕೆಲವು ಸಂಗತಿಗಳ ಬಗ್ಗೆ ಫ್ಯಾಂಟಸಿ ಆಗಿದ್ದಾಳೆ. ಈ ಕುರಿತಂತೆ ಆಕೆ ಹೇಳುವುದು ಹೀಗೆ, “ಪೋರ್ನ್‌ ಫಿಲ್ಮ್ ಗಳನ್ನು ನೋಡಿ ಫ್ಯಾಂಟಸಿ ಮಾಡಿಕೊಂಡು ನಾನು ಎಕ್ಸೈಟೆಡ್‌ ಆಗುತ್ತೇನೆ.”  ಹೌದು. ಫ್ಯಾಂಟಸಿಯ ವಿಶ್ವವೇ ಹಾಗಿದೆ. ಅದರಲ್ಲಿ ಕಳೆದುಹೋಗಿ ಅವರು ತಮ್ಮ ಹಗಲು ರಾತ್ರಿಯ ನೆಮ್ಮದಿಯನ್ನು ಮರೆತುಬಿಡುತ್ತಾರೆ.

ಕೇವಲ ಸ್ಟಾರ್‌ಗಳಷ್ಟೇ ಅಲ್ಲ, ಸಾಮಾನ್ಯ ಜನರೂ ಫ್ಯಾಂಟಸಿಯಿಂದ ತಮ್ಮ ಜೀವನವನ್ನು ಖುಷಿಮಯಗೊಳಿಸುತ್ತಾರೆ. ಈ ಕುರಿತಂತೆ ಗೃಹಿಣಿ ಅರ್ಚನಾ ಹೀಗೆ ಹೇಳುತ್ತಾರೆ, “ಸಮಾಗಮದ ಸಂದರ್ಭದಲ್ಲಿ ನನ್ನ ಪತಿ ಬಹಳ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಆದರೂ ಸಮಾಗಮ ನಡೆಸಲೇಬೇಕಾಗುತ್ತದೆ. ಆ ಸಂದರ್ಭದಲ್ಲಿ ನನಗೆ ನನ್ನ ಹಳೆಯ ಬಾಯ್‌ ಫ್ರೆಂಡ್ ನೆನಪಾಗುತ್ತಾನೆ. ಅವನು ನನ್ನೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ. ಅವನ ಕಲ್ಪನೆಯಲ್ಲಿ ಕಳೆದುಹೋಗಿ ನಾನು ಉತ್ತುಂಗ ಸುಖ ತಲುಪುತ್ತೇನೆ. ನನಗದು ಗೊತ್ತೇ ಆಗುವುದಿಲ್ಲ.”

ಶಿಕ್ಷಕಿ ಆಶಾ ಹೀಗೆ ಹೇಳುತ್ತಾರೆ, “ಜಾನ್‌ ಅಬ್ರಹಾಂನನ್ನು ನನ್ನ ಲವರ್‌ ರೂಪದಲ್ಲಿ ಯೋಚಿಸಿದಾಗ ನಾನು ಉತ್ತೇಜಿತಳಾಗುತ್ತೇನೆ.”

ಇಂತಹ ಅದೆಷ್ಟೋ ಯುವಕ ಯುವತಿಯರು ಫ್ಯಾಂಟಸಿಯಲ್ಲಿದ್ದುಕೊಂಡು ಖುಷಿಯಿಂದಿರುತ್ತಾರೆ. ಈ ಫ್ಯಾಂಟಸಿಯ ವಿಶ್ವ ಹೇಗಿರುತ್ತೆ ಎಂಬುದನ್ನು ತಿಳಿಯೋಣ ಬನ್ನಿ.

ಏನಿದು ಸೆಕ್ಸ್ ಫ್ಯಾಂಟಸಿ?

`ಸೆಕ್ಸ್ ಫ್ಯಾಂಟಸಿ’ ಎನ್ನುವುದು ಯಾವುದೇ ಒಬ್ಬ ಪುರುಷ ಅಥವಾ ಮಹಿಳೆಯ ಸುಂದರ ಕಲ್ಪನೆಯಾಗಿದ್ದು, ತಾನು ಆ ವ್ಯಕ್ತಿಯ ಜೊತೆ ಯಾವ ರೀತಿ ದೈಹಿಕ ಸಂಬಂಧ ಹೊಂದುತ್ತೇನೆ ಎಂದು ಕಲ್ಪನೆ ಮಾಡಿಕೊಳ್ಳುವುದಾಗಿದೆ. ಈ ರೀತಿಯ ವಿಚಾರ ಬರುವುದು `ಸೆಕ್ಸ್ ಫ್ಯಾಂಟಸಿ’ಯ ಒಂದು ಭಾಗವಾಗಿದೆ. ಅದು ನಿಮ್ಮ ಲೈಂಗಿಕ ಚಟುವಟಿಕೆಗೆ ಉತ್ತೇಜನ ತುಂಬುತ್ತದೆ. ಅದರಿಂದ ನೀವು ಸಂಗಾತಿಯೊಂದಿಗೆ ಸಮಾಗಮ ನಡೆಸುವಾಗ ಪರಿಪೂರ್ಣ ಆನಂದ ಪಡೆದುಕೊಳ್ಳಬಹುದಾಗಿದೆ.

ಫ್ಯಾಂಟಸಿಯ ಲಾಭಗಳು

ಸಂಬಂಧದಲ್ಲಿ ಸುಧಾರಣೆ : ನೀವು ಹಾಗೂ ನಿಮ್ಮ ಸಂಗಾತಿ ಒಂದೇ ರೀತಿಯ ರೊಟೀನ್‌ ಲೈಫ್‌ನಿಂದ ಬೇಸತ್ತು ಹೋಗಿದ್ದರೆ, ಪರಸ್ಪರ ಎಂಜಾಯ್‌ ಮಾಡಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ನಿಮಗೆ ಬದಲಾವಣೆಯ ಅವಶ್ಯಕತೆ ಉಂಟಾಗುತ್ತದೆ. ಫ್ಯಾಂಟಸಿ ನಿಮ್ಮ ರೊಟೀನ್‌ ಸೆಕ್ಸ್ ಲೈಫ್‌ನಲ್ಲಿ ಮಸಾಲೆ ತುಂಬು ಕೆಲಸ ಮಾಡುತ್ತದೆ. ಅದು ನಿಮ್ಮನ್ನು ಮೊದಲಿಗಿಂತ ಹೆಚ್ಚು ಕ್ರಿಯಾಶೀಲವಾಗಿಸುತ್ತದೆ. ಪರಸ್ಪರರ ಬಗ್ಗೆ ಬೋರ್‌ ಹೊಡಿಸುವುದಿಲ್ಲ. ಪ್ರತಿದಿನ ಹೊಸ ಹೊಸ ಫ್ಯಾಂಟಸಿ ಬಗ್ಗೆ ಯೋಚಿಸಿ ಅದನ್ನು ಅನುಷ್ಠಾನಕ್ಕೆ ತರಲು ಸಮಯ ವ್ಯಯಿಸಬೇಕು.

ಎಕ್ಸ್ ಪೆರಿಮೆಂಟ್ಮಾಡಬಹುದು : ನಿಮ್ಮ ಸಂಗಾತಿ ಸೆಕ್ಸುಯಲ್ ಎಕ್ಸ್ ಪೆರಿಮೆಂಟ್‌ ಆಗಿರದಿದ್ದಲ್ಲಿ ಅಥವಾ ಎಕ್ಸ್ ಪೆರಿಮೆಂಟ್‌ನಿಂದ ನುಣುಚಿಕೊಳ್ಳುತ್ತಿದ್ದಲ್ಲಿ ನಿಮಗಿ ಫ್ಯಾಂಟಸಿ ವಿಶ್ವಕ್ಕೆ ಸ್ವಾಗತ. ನೀವು ಸೆಕ್ಸ್ ಬಗ್ಗೆ ಚೆನ್ನಾಗಿ ಫ್ಯಾಂಟಸಿ ಮಾಡುವವರಾಗಿದ್ದರೆ, ನೀವು ಬೆಡ್‌ರೂಮಿನಿಂದ ಹೊರಗೆ ಹೋಗದೆಯೇ ಸಂಗಾತಿಯ ಜೊತೆಗೆ ಎಲ್ಲೆಲ್ಲೋ ಸುತ್ತಾಡಿಕೊಂಡು ಬರಬಹುದು. ನೀವು ನಿಮ್ಮ ಸಂಗಾತಿಯಿಂದ ಏನನ್ನು ಬಯಸುತ್ತೀರೋ, ಅದನ್ನು ಫ್ಯಾಂಟಸಿಯ ಮೂಲಕ ಅನುಭೂತಿ ಮಾಡಿಕೊಳ್ಳಿ. ಇದರಿಂದ ಸಂಗಾತಿಯ ಬಗೆಗಿನ ನಿಮ್ಮ ದೂರುಗಳೆಲ್ಲ ನಿವಾರಣೆಯಾಗುವವು. ಏಕೆಂದರೆ ಸಂಗಾತಿ ನಿಮ್ಮ ಮನಸ್ಸಿನಲ್ಲಿ ಸೆರೆ ಸಿಕ್ಕಿಬಿಟ್ಟಿದ್ದಾನಲ್ಲ.

ಯಾವುದೇ ಮೇರೆ ಇಲ್ಲ :  ನೀವು `ಫ್ಯಾಂಟಸಿ’ ಲೋಕದಲ್ಲಿದ್ದರೆ, ಯಾರ ಜೊತೆಗಾದರೂ, ಹೇಗೆ ಬೇಕಾದರೂ ಕಲ್ಪನೆ ಮಾಡಿಕೊಳ್ಳಬಹುದು. ಏನು ಬೇಕಾದರೂ ಮಾಡಬಹುದು. ಇದಕ್ಕಾಗಿ ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಆ ಬಳಿಕ ನೀವು ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಅದೇ ಫ್ಯಾಂಟಸಿಯನ್ನು ವಾಸ್ತವವಾಗಿ ಪರಿವರ್ತಿಸಿದರೆ ನಿಮ್ಮ ಸಂಗಾತಿ ಚಕಿತಗೊಳ್ಳದೆ ಇರಲಾರ.

ಈಚೆಗಷ್ಟೇ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಯಾರು ಸೆಕ್ಸ್ ಬಗೆಗೆ ಯೋಚಿಸುತ್ತಾರೊ ಅವರು ಸಾಕಷ್ಟು ಸಕ್ರಿಯವಾಗಿರುತ್ತಾರಂತೆ. ಅವರು ದಿನ ಹೊಸ ಹೊಸ ಉಪಾಯಗಳನ್ನು ಹುಡುಕಿ ತಮ್ಮ ಲೈಂಗಿಕ ಜೀವನವನ್ನು ಹಸಿರಾಗಿಟ್ಟುಕೊಳ್ಳುತ್ತಾರೆ. ಫ್ಯಾಂಟಸಿಯ ಮುಖಾಂತರ ಅವರು ಸಂಗಾತಿಗೆ ಮತ್ತಷ್ಟು ನಿಕಟರಾಗುತ್ತಾರೆ. ಅವರಿಗೆ ಹತ್ತಿರ ಬರಲು ಯಾವುದೇ ಶಬ್ದಗಳ ಆಸರವೇ ಪಡೆಯಬೇಕಾದ ಅಗತ್ಯ ಬೀಳುವುದಿಲ್ಲ. ಇಬ್ಬರೂ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಿಂದ ಇಬ್ಬರ ಸಂಬಂಧದಲ್ಲಿನ ರೋಮಾಂಚನ ಹಾಗೆಯೇ ಕಾಯ್ದುಕೊಂಡು ಹೋಗುತ್ತದೆ. ಹೀಗಾಗಿ ನಿಮ್ಮ ಮೆದುಳನ್ನೇ ಬಹುದೊಡ್ಡ ಸೆಕ್ಸ್ ಆರ್ಗನ್‌ ಎಂದು ಭಾವಿಸಿ, ಸೆಕ್ಸ್ ಬಗ್ಗೆ ಯೋಚಿಸುತ್ತ ನಿಮ್ಮ ಕ್ರಿಯಾಶೀಲತೆಯ ಕುರಿತಂತೆ ದಂಗಾಗುವ ಅವಶ್ಯಕತೆ ಇಲ್ಲ. ಬಹಳಷ್ಟು ಜನರು ಇಂತಹ ಕಲ್ಪನೆಯನ್ನು ತಪ್ಪು ಎಂದು ಭಾವಿಸುತ್ತಾರೆ.

ನಿಮಗೆ ಸೆಕ್ಸ್ ಕುರಿತಂತೆ ಚಿತ್ರ ವಿಚಿತ್ರ ಕಲ್ಪನೆಗಳು ಬರುತ್ತಿದ್ದರೆ, ನಿಮ್ಮನ್ನು ನೀವು ತಪ್ಪಿತಸ್ಥರು ಎಂದು ಭಾವಿಸಬೇಡಿ. ವಾಸ್ತವದಲ್ಲಿ ಹಸ್ತಮೈಥುನದ ಸಮಯದಲ್ಲಿ ಅಥವಾ ಸಂಗಾತಿಯ ಜೊತೆಗೆ ಸಮಾಗಮದಲ್ಲಿದ್ದಾಗ `ಫ್ಯಾಂಟಸಿ’ ಮಾಡಿಕೊಳ್ಳುವುದು ತಪ್ಪಲ್ಲ. ಅದು ಸಾಕಷ್ಟು ಉಪಯುಕ್ತ. ನಿಮಗೆ ನಿಮ್ಮ ಲೈಂಗಿಕ ಜೀವನದಲ್ಲಿ ರೋಮಾಂಚನ, ಉತ್ಸಾಹ, ಪ್ರೀತಿ ಮತ್ತು ಹೊಸತನ ಬೇಕಿದ್ದರೆ ನೀವು `ಸೆಕ್ಸ್ ಫ್ಯಾಂಟಸಿ’ ಆರಂಭಿಸಿ.

ಸೆಕ್ಸ್ ಫ್ಯಾಂಟಸಿಯ ಬಗ್ಗೆ ಹೇಳಿಕೊಳ್ಳಿ…..

ಮೊದಲು ಸೆಕ್ಸ್ ಫ್ಯಾಂಟಸಿಯ ಬಗ್ಗೆ ಪರಸ್ಪರ  ಹೇಳಿಕೊಳ್ಳಲು ಗಂಡ ಹೆಂಡತಿ ಹಿಂದೇಟು ಹಾಕುತ್ತಿದ್ದರು. ಆದರೆ ಈ ಅಳುಕು ಈಗ ನಿವಾರಣೆಯಾಗಿದೆ. ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.67ರಷ್ಟು ಜನರು ರತಿಕ್ರಿಯೆಯ ಕುರಿತಂತೆ `ಫ್ಯಾಂಟಸಿ` ಮಾಡಿಕೊಳ್ಳುತ್ತಾರೆ. ಶೇ.30ರಷ್ಟು ಮಹಿಳೆಯರು ಹಾಗೂ ಪುರುಷರು ತಮ್ಮ ಫ್ಯಾಂಟಸಿಯ ಕುರಿತಂತೆ ಸಂಗಾತಿಗೆ ಹೇಳಿಕೊಳ್ಳುತ್ತಾರೆ. ಸಂಗಾತಿಗಳು ಈಗ `ಫ್ಯಾಂಟಸಿ’ ಯನ್ನು ತಮ್ಮ ಕಲ್ಪನೆಯಲ್ಲಷ್ಟೇ ಇಟ್ಟುಕೊಳ್ಳದೇ ಸಂಗಾತಿಯಿಂದ ಅದನ್ನು ಈಡೇರಿಸಿಕೊಳ್ಳುವ ಅಭಿಲಾಷೆ ಕೂಡ ಹೊಂದಿರುತ್ತಾರೆ. ಒಂದು ವೇಳೆ ಪರಸ್ಪರರಿಗೆ ತಮ್ಮ ಮನದ ಮಾತು ಹೇಳಿಕೊಳ್ಳದಿದ್ದರೆ, ಸಮಾಗಮದ ಸಮಯದಲ್ಲಿ ನಿಮಗೆ ಏನು ಇಷ್ಟವಾಗುತ್ತದೆ ಮತ್ತು ಸೆಕ್ಸ್ ಸಮಯದಲ್ಲಿ ಯಾವ ಸಂಗತಿಗಳ ಕುರಿತಂತೆ ನೀವು ಹೆಚ್ಚು `ಫ್ಯಾಂಟಸಿ’ಯ ಅನುಭೂತಿ ಮಾಡಿಕೊಳ್ಳುತ್ತೀರಿ ಎಂಬುದನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ? ಹೀಗಾಗಿ ಸಂಗಾತಿಯನ್ನು ಆಕರ್ಷಿಸುವ ಎಲ್ಲಕ್ಕೂ ಮುಖ್ಯ ಉಪಾಯವೆಂದರೆ, ನೀವು ಸಂಗಾತಿಯ ಫ್ಯಾಂಟಸಿಯನ್ನು ಈಡೇರಿಸಲು ಮನಸಾರೆ ಜೊತೆ ಕೊಡಿ. ನಿಮ್ಮ ಕಲ್ಪನೆಯ ಹಾರಾಟವನ್ನು ಸಂಗಾತಿಯ ಕಲ್ಪನೆಯ ಹಾರಾಟದೊಂದಿಗೆ ಸಮ್ಮಿಶ್ರಗೊಳಿಸಿ, ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಹೊಸ ಉತ್ಸಾಹ ಮತ್ತು ರೋಮಾಂಚನವನ್ನು ತುಂಬಿ.

ಸುರೇಖಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ