ಸಮಯದ ಕೊರತೆ ಸಂಬಂಧಗಳನ್ನು ನಿಭಾಯಿಸುವ ತರ್ಕವನ್ನೇ ಬದಲಿಸಿಬಿಟ್ಟಿದೆ. ವ್ಯಸ್ತತೆಯಿಂದಿರುವ ಇಂದಿನ ಜನ ಮೊಬೈಲ್, ಇಂಟರ್‌ನೆಟ್‌ ಇತ್ಯಾದಿಗಳ ಉಪಯೋಗದಿಂದ ಪರಸ್ಪರ ಸಂಪರ್ಕದಲ್ಲಿರುತ್ತಾರೆ. ಆದರೆ ಕೊಂಚ ಯೋಚಿಸಿ. ಗೆಳೆಯರನ್ನು ಭೇಟಿಯಾಗಿ ಮಾತಾಡುವುದು, ಅವರ ಮನೆಗೆ ಹೋಗಿ ಎಂಜಾಯ್‌ ಮಾಡುವುದನ್ನು ಇಂಟರ್‌ನೆಟ್‌ ಅಥವ್ ಫೋನ್ ಪೂರೈಸುತ್ತದೆಯೇ? ಇಲ್ಲ ತಾನೇ? ಹಾಗಾದರೆ ಬಹಳ ದಿನಗಳಿಂದ ಮಾಡಲಾಗದ್ದನ್ನು ಈಗೇಕೆ ಮಾಡಬಾರದು? ನಿಮ್ಮ ಗೆಳೆಯರು ಹಾಗೂ ಬಂಧುಗಳ ಮನೆಗೆ ಸರ್‌ಪ್ರೈಸ್‌ ವಿಸಿಟ್‌ ಕೊಡಿ.....

ಹೆಚ್ಚಿನ ಜನಕ್ಕೆ ಬಹಳ ದಿನಗಳಿಂದ ನಾವು ನೆಂಟರೊಬ್ಬರ ಮನೆಗೆ ಹೋಗಬೇಕು ಎಂದುಕೊಂಡಿದ್ದರೂ ಸಮಯವೇ ಸಿಗದೇ ಹೋಗಲಾಗುವುದಿಲ್ಲ. ಆದರೆ ಈಗ ಒಮ್ಮೆ ಸರ್‌ಪ್ರೈಸ್‌ ವಿಸಿಟ್‌ ನೀಡಬೇಕು ಎಂದುಕೊಂಡಿದ್ದರೆ ವಿಸಿಟ್‌ ಕೊಟ್ಟುಬಿಡಿ. ಆದರೆ ಹಾಗೆ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕು. ಏಕೆಂದರೆ ನೀವು ಅಲ್ಲಿಗೆ ಎಂಜಾಯ್‌ ಮಾಡಲು ಹೋಗುತ್ತಿದ್ದೀರಿ. ಅವರಿಗೆ ತೊಂದರೆ ಕೊಡಲು ಅಲ್ಲ. ಬನ್ನಿ, ಸರ್‌ಪ್ರೈಸ್‌ ವಿಸಿಟ್‌ ಸ್ಮರಣೀಯವಾಗಿ ಮಾಡುವುದು ಹೇಗೆಂದು ತಿಳಿಯೋಣ :

ಅವರ ಸೌಲಭ್ಯದ ಬಗ್ಗೆಯೂ ಗಮನಿಸೋಣ : ಗೆಳೆಯರು ಹಾಗೂ ಬಂಧುಗಳ ಮನೆಗೆ ಹೋಗುವುದೆಂದರೆ ಬಹಳ ಖುಷಿಯಾಗಿರುತ್ತದೆ. ಆದರೆ ಹಾಗೆ ಒಬ್ಬರ ಮನೆಗೆ ಹೋಗುವಾಗ ವೀಕೆಂಡ್‌ನಲ್ಲಿಯೇ ಹೋಗಿ. ಏಕೆಂದರೆ ಅವರಿಗೆ ತೊಂದಲೆಯಾಗಬಾರದು ಮತ್ತು ಅವರು ನಿಮಗೆ ಸಂಪೂರ್ಣ ಸಮಯ ಕೊಡುವಂತಿರಬೇಕು.

ಉಪಾಯದಿಂದ ಇನ್ಫರ್ಮೇಶನ್ಪಡೆಯಿರಿ : ನೀವು ಹೋಗಬೇಕೆಂದಿರುವವರ ಮನೆಯವರು ಮನೆಯಲ್ಲಿ ಇರುತ್ತಾರೆಯೋ ಇಲ್ಲವೋ ಎಂದು ತಿಳಿದುಕೊಳ್ಳಿ. ಅಂದು ಅವರಿಗೆ ಬೇರೇನಾದರೂ ಪ್ರೋಗ್ರಾಂ ಇದೆಯೇ? ಅವರ ಮನೆಗೆ ಬೇರೆ ಅತಿಥಿಗಳು ಬರುತ್ತಿದ್ದಾರೆಯೇ? ಆದ್ದರಿಂದ ಮೊದಲೇ ಅವರಿಗೆ ಫೋನ್‌ ಮಾಡಿ ಅದೂ ಇದೂ ಮಾತಾಡುತ್ತಾ ಇರಿ. ಅವರೇನು ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರೋಗ್ರಾಂ ಮಾಡಿಕೊಳ್ಳಿ.

ಅತಿಥಿ ಸತ್ಕಾರ ನಿರೀಕ್ಷಿಸಬೇಡಿ : ನೀವು ಅವರ ಮನೆಗೆ ಇದ್ದಕ್ಕಿದ್ದಂತೆ ಹೋಗುತ್ತಿದ್ದೀರಿ. ಅವರಿಗೆ ಹೆಚ್ಚು ಕೆಲಸ ಕೊಡಬೇಡಿ. ಸ್ವಲ್ಪ ಹೊತ್ತು ಇಲ್ಲಿ ಇರುತ್ತೀರಿ. ನಕ್ಕು ನಗಿಸುತ್ತಾ ಹೊತ್ತು ಕಳೆಯಿರಿ. ಊಟ ತಿಂಡಿಯಲ್ಲೇ ಕಾಲ ಕಳೆಯಬೇಡಿ. ಸ್ವೀಟ್ಸ್ ಜೊತೆ  ಏನಾದರೂ ತಿನ್ನಲು ತೆಗೆದುಕೊಂಡು ಹೋಗಿ.

ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳಿ : ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದೀರಿ. ಒಳ್ಳೆಯ ಹಿತವಾದ ಹಳೆಯ ನೆನಪುಗಳನ್ನು ತಾಜಾ ಅನುಭವಿಸಬಹುದು. ನಿಮ್ಮ ಗೆಳೆಯರೊಂದಿಗೆ ನಿಮ್ಮ ಮನಸ್ಸಿನ ಹಾಗೂ ಶಾಲಾ ಕಾಲೇಜು ದಿನಗಳ ಎಲ್ಲ ವಿಷಯಗಳನ್ನೂ ಮೆಲುಕು ಹಾಕಿ. ನಿಮಗೆ ಅವರ ವಿಷಯದಲ್ಲಿ ಇಷ್ಟವಾದದ್ದು ಹಾಗೂ ಅವರಿಗೆ ನಿಮ್ಮ ವಿಷಯದಲ್ಲಿ ಇಷ್ಟವಾದದ್ದು,  ಪರಸ್ಪರ ಮಾಡಿದ ಸಹಾಯ ಎಲ್ಲವನ್ನೂ ನೆನಪಿಸಿಕೊಳ್ಳಿ.

ಹೆಚ್ಚು ಸಮಯ ತೆಗೆದುಕೊಳ್ಳಬೇಡಿ : ಸರ್‌ಪ್ರೈಸ್‌ ವಿಸಿಟ್‌ ಯಾವಾಗಲೂ ಚಿಕ್ಕದಾಗಿರಲಿ. 25-30 ನಿಮಿಷಗಳಿಗಿಂತ ಹೆಚ್ಚು ಬೇಡ. ಅಷ್ಟು ಸಮಯದಲ್ಲೇ ನಗುನಗುತ್ತಾ ಹೊತ್ತು ಕಳೆಯಿರಿ.

ದೂರುಗಳನ್ನು ತಳ್ಳಿಹಾಕಿ : ನೀವು ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದರೆ ನಿಮ್ಮಿಬ್ಬರ ಮಧ್ಯೆ, ಏನಾದರೂ ಮನಸ್ತಾಪವಿದ್ದು ನಿಮ್ಮಿಬ್ಬರ ಸಂಬಂಧಗಳಿಗೆ ತೊಂದರೆಯಾಗುತ್ತಿದ್ದರೆ ಅದನ್ನು ಕ್ಲಿಯರ್‌ ಮಾಡಿಕೊಳ್ಳಿ. ಖಂಡಿತ ನಿಮ್ಮ ಸಂಬಂಧ ಸುಧಾರಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ