ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರರಿಗೆ ಕಳಿಸಿಕೊಡುವ ಸಿದ್ಧತೆ ಒಂದು ವಾರದ ಮುಂಚೆಯೇ ಆರಂಭವಾಗುತ್ತದೆ. ಮೊದಲೂ ಕೂಡ ಹೀಗೆಯೇ ಆಗುತ್ತಿತ್ತು. ಆದರೆ ಈಗ ಶುಭ ಹಾರೈಸುವ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಅದರಿಂದ ಅವರ ನೆನಪು ವರ್ಷವಿಡೀ ಇರಬೇಕು ಎನ್ನುವುದಾಗಿರುತ್ತದೆ. ಅಂದಿನ ಹಾಗೂ ಇಂದಿನ ಶುಭ ಹಾರೈಕೆ ವಿಧಾನಗಳು ಒಂದೇ ರೀತಿಯದ್ದಾಗಿರಬಹುದು. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಬೇರೆಯಾಗಿದೆ.

ಬಣ್ಣ ಬಣ್ಣದ ಹೂಗಳು

ಶುಭಾಶಯ ವ್ಯಕ್ತಪಡಿಸುವ ಎಲ್ಲಕ್ಕೂ ವಿಶಿಷ್ಟ ವಿಧಾನವೆಂದರೆ ಹೂ ಬೊಕೆ. ಹೂ ಬೊಕೆಗಳು ಬಗೆ ಬಗೆಯದಾಗಿರುತ್ತವೆ. ಇವುಗಳ ಬೆಲೆ 50 ರೂ.ನಿಂದ ಹಿಡಿದು 3,000 ರೂ.ತನಕ ಆಗಬಹುದು.

ಬೆಂಗಳೂರಿನಲ್ಲಿ `ಗೋ ಗ್ರೀನ್‌' ಎಂಬ `ಫ್ಲವರ್‌ ಬೊಕೆ' ಅಂಗಡಿ ನಡೆಸುವ ರಚನಾ ಹೀಗೆ ಹೇಳುತ್ತಾರೆ, ``ಹೊಸ ವರ್ಷದ ಶುಭ ಹಾರೈಕೆ ಕೋರುವ ಹಲವು ಬೊಕೆಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಹ್ಯಾಂಡ್‌ ಬಂಚ್‌, ಪ್ಲೇನ್‌ ಬೊಕೆ, ಬ್ಯಾಸ್ಕೆಟ್‌ ಮತ್ತು ಫ್ಲವರ್‌ಅರೇಂಜ್‌ಮೆಂಟ್‌ ಇರುತ್ತವೆ. ಇವುಗಳ ಬೆಲೆ ಹಾಗೂ ತಯಾರಿಸುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಹ್ಯಾಂಡ್‌ ಬಂಚ್‌ಗೋಲಾಕಾರದಲ್ಲಿ ಸಿದ್ಧಗೊಳ್ಳುತ್ತದೆ. ಇದು ಚಿಕ್ಕ ಗಾತ್ರದಿಂದ ಹಿಡಿದು 3 ಅಡಿಯತನಕ ಇರಬಹುದಾಗಿದೆ. ಇದರ ಬೆಲೆ ಹ್ಯಾಂಡ್‌ಬಂಚ್‌ ತಯಾರಿಸುವಲ್ಲಿ ತಗಲುವ ಹೂಗಳ ಲೆಕ್ಕಾಚಾರದ ಮೇರೆಗೆ ನಿರ್ಧಾರವಾಗುತ್ತದೆ.

ಗುಲಾಬಿ ಹಾಗೂ ಗ್ಲ್ಯಾಡಿಯೋಲಸ್‌ನಿಂದ ತಯಾರಾಗುವ ಹ್ಯಾಂಡ್‌ ಬಂಚ್‌ ಕಡಿಮೆ ಬೆಲೆಯದ್ದಾಗಿರುತ್ತದೆ. ಲೀಲಿಯಮ್ ನಂತಹ ವಿದೇಶಿ ಹೂಗಳಿಂದ ತಯಾರಾಗುವ ಹ್ಯಾಂಡ್‌ ಬಂಚ್‌ಗಳು ದುಬಾರಿಯಾಗಿರುತ್ತವೆ. ಅಂದರೆ 2000 ರೂ.ಗಳ ತನಕ ಇರಬಹುದು. ಇವನ್ನು ಅಲಂಕರಿಸಲು ಡ್ರೈಸ್ಟಿಕ್‌, ನೆಟ್‌, ಸೆಣಬು ಹಾಗೂ ಹ್ಯಾಂಡ್‌ ಮೇಡ್‌ ಪೇಪರನ್ನು ಬಳಸಲಾಗುತ್ತದೆ.

ಪ್ಲೇನ್‌ ಬೊಕೆ ನೀಡುವ ಪದ್ಧತಿ ಈಚೆಗೆ ಕಡಿಮೆಯಾಗುತ್ತ ಹೊರಟಿದೆ. ಅದರ ಸ್ಥಾನವನ್ನು ಫ್ಲವರ್‌ ಬ್ಯಾಸ್ಕೆಟ್‌ಗಳು ಪಡೆದುಕೊಳ್ಳುತ್ತಿವೆ. ಇವು ಹಲವು ತೆರನಾದ ಕಟ್ಟಿಗೆ ಹಾಗೂ ಬಿದಿರಿನಿಂದ ತಯಾರಾಗುತ್ತವೆ. ರಾಟ್‌ ಐರನ್‌ನ ಬ್ಯಾಸ್ಕೆಟ್‌ಗಳನ್ನು ಕೂಡ ತಯಾರಿಸಬಹುದು. ಇದರಲ್ಲಿ ಬೇರೆ ಬೇರೆ ವರ್ಣದ ವಿದೇಶಿ ಹೂಗಳನ್ನು ಇಡಲಾಗುತ್ತದೆ. ಇದರ ಬೆಲೆ 1,500 ರೂ.ಗಳಿಂದ ಹಿಡಿದು 3,000 ತನಕ ಇರುತ್ತದೆ. ವಿಶಿಷ್ಟ ಡಿಸೈನ್‌ ಮತ್ತು ಗಾತ್ರಕ್ಕನುಗುಣವಾಗಿ ಬೆಲೆ ಕೂಡ ಹೆಚ್ಚಬಹುದು. ಇದು ಸೆರಾಮಿಕ್ ಪಾಟ್‌ ಗ್ಲಾಸ್‌ನಲ್ಲಿ ತಯಾರಿಸಲಾಗುತ್ತದೆ ಹಾಗೂ ಇದರಲ್ಲಿ ಫ್ಲವರ್‌ ಅರೇಂಜ್‌ಮೆಂಟ್‌ ಕೂಡ ಹೆಚ್ಚಾಗಿರುತ್ತದೆ.

ನೀವು ಬೊಕೆ ಯಾರಿಗೆ ಕೊಡುತ್ತಿದ್ದೀರಿ, ಅವರ ವಯಸ್ಸು ಎಷ್ಟು, ನಿಮಗೆ ಅವರ ಜೊತೆಗಿನ ಸಂಬಂಧ ಹೇಗಿದೆ ಎನ್ನುವುದರ ಮೇಲೆ ಬೆಲೆ ನಿರ್ಧರಿಸಲಾಗುತ್ತದೆ. ಒಬ್ಬ ಉತ್ತಮ ಪ್ಲೇರಿಸ್ಟ್ ನಿಮ್ಮ ಅಗತ್ಯಕ್ಕನುಗುಣವಾಗಿ ಬೊಕೆ ತಯಾರಿಸಿಕೊಡಲು ನಿಮಗೆ ನೆರವಾಗುತ್ತಾನೆ.

ಗ್ರೀಟಿಂಗ್ಕಾರ್ಡ್ ಬದಲಾದ ರೂಪ

ಜಯನಗರ 4ನೇ ಬ್ಲಾಕ್‌ನಲ್ಲಿ ಗ್ರೀಟಿಂಗ್‌ ಕಾರ್ಡ್‌ ಮಳಿಗೆ ನಡೆಸುವ ಉಮೇಶ್‌ ಹೀಗೆ ಹೇಳುತ್ತಾರೆ, ``ದೀಪಾವಳಿಯಿಂದ ಹೊಸ ವರ್ಷದ ತನಕ ಗ್ರೀಟಿಂಗ್‌ ಕಾರ್ಡ್‌ಗಳ ವ್ಯಾಪಾರ ತುಸು ಜೋರಾಗಿಯೇ ನಡೆಯುತ್ತದೆ. ಈಗ ಕಾರ್ಡ್‌ಗಳ ರೂಪ ಬದಲಾಗಿದೆ. ಚಿಕ್ಕ ಹಾಗೂ ಅಗ್ಗದ ಕಾರ್ಡ್‌ಗಳಿಗಿಂತ ದುಬಾರಿ, ದೊಡ್ಡ ಗಾತ್ರದ ಮ್ಯೂಸಿಕ್‌, ಡಿಸೈನರ್‌ ಹಾಗೂ ಹ್ಯಾಂಡ್‌ ಮೇಡ್‌ ಕಾರ್ಡ್‌ಗಳಿಗೆ ಹೆಚ್ಚು ಬೇಡಿಕೆಯಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ