ವಿರೋಧದ ಹೀಗೊಂದು ಪರಿ : ಪೋಪ್‌ಗೆ ಧರ್ಮ ಮಾರಾಟವೇ ದೊಡ್ಡ ದಂಧೆ. ರಾಜಕಾರಣದಲ್ಲಿ ಮೂಗು ತೂರಿಸುವುದೇ ಮಹಾನ್ ಕೆಲಸ. ಎಲ್ಲಾ ಧರ್ಮಗುರುಗಳೂ ರಾಜಕಾರಣವನ್ನು ತಮ್ಮ ಗುಲಾಮಗಿರಿ ಮಾಡಿಕೊಳ್ಳಲು ಬಯಸುತ್ತಾರೆ. ಇದನ್ನು ತೀವ್ರವಾಗಿ ಖಂಡಿಸಲು ಫೀಮ್ಯಾನ್ ಗ್ರೂಪ್ ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ಹೊಸ ಕ್ರಮ ಕೈಗೊಂಡಿದೆ, ಏಕೆಂದರೆ ಪೋಪ್ ಯೂರೋಪಿಯನ್ ಯೂನಿಯನ್‌ನ ಸಂಸತ್ ಕುರಿತಾಗಿ ಮಾತನಾಡುವವರಿದ್ದರು. ಫೀಮ್ಯಾನ್ ಗ್ರೂಪ್‌ನ ವೈಶಿಷ್ಟ್ಯವೆಂದರೆ ಇದರ ವಾಲಂಟಿಯರ್ ಹುಡುಗಿಯರು ಅರೆನಗ್ನರಾಗಿ ಪ್ರದರ್ಶನ ನೀಡುತ್ತಾರೆ.
ಕೊಳ್ಳಲಾಗದಿದ್ದರೇನು…. ನೋಡಲಡ್ಡಿಯಿಲ್ಲ! : ಆಹಾ…. ಪ್ಲಾಟಿನಂ ಕ್ರಿಸ್‌ಮಸ್ ಟ್ರೀ! ಯಾರಿಗುಂಟು ಯಾರಿಗಿಲ್ಲ? 31 ಕಿಲೋ ತೂಕದ ಈ ಅಲಂಕೃತ ಟ್ರೀ ಬೆಲೆ ಎಷ್ಟಿರಬಹುದು? ಕೇವಲ ರೂ.12 ಕೋಟಿ! ಇದನ್ನು ಜಪಾನೀ ಜ್ಯೂವೆಲರ್ ಒಬ್ಬ ತನ್ನ ಗ್ರಾಹಕರನ್ನು ಆಕರ್ಷಿಸಲೆಂದೇ ಕ್ರಿಸ್‌ಮಸ್‌ಗಾಗಿ ಹೀಗೆ ರೂಪಿಸಿದ್ದ.
ಮೂಗ ವರ್ಣಿಸುವುದೆಂತು? : ರೋಮನ್ ಸೈನಿಕರ ನೆನಪು ನೀಡುವ ಈ ಉಡುಗೆ ರಷ್ಯಾದ ಮಿಸ್ಕ್ ನಗರದಲ್ಲಿ ಕಂಡುಬಂತು. ಅವರವರ ಮೂಗಿನ ನೇರಕ್ಕೆ ಕಂಡದ್ದೆಲ್ಲ ಸರಿಯೇ ಅಲ್ಲವೇ?
ಮಜಾ ನೀಡಿದ ಓಟ : `ಬೇಗ ನನ್ನ ಡ್ರಿಂಕ್ ತಾ ವೇಟ್ರೆಸ್’ ಎಂದು ಬಾರ್ ಬಾಲೆಯ ಗದರಿದರೆ, `ಈಗ ತಾನೇ ವೇಟ್ರೆಸೆಸ್ ರೇಸ್‌ನಿಂದ ಗೆದ್ದು ಬಂದಿದ್ದೀನಿ ಗೊತ್ತಾ?’ ಎಂದಾಕೆ ನಿಮ್ಮನ್ನೇ ಗದರಿಯಾಳು, ಹುಷಾರು! ಸದಾ ಟ್ರೇನಲ್ಲಿ ಪೇಯ ತುಂಬಿದ ಕಪ್, ಬಾಟಲಿ ಹಿಡಿದು ದೌಡಾಯಿಸುವ ಈ ಬಾರ್ ಬಾಲೆಯರಿಗಾಗಿಯೇ ಇತ್ತೀಚೆಗೆ ಗ್ವಾಟೆಮಾಲಾದಲ್ಲಿ ಚಿತ್ರದಲ್ಲಿರುವಂಥ ರೇಸ್‌ನಡೆಯಿತು. ಇದರ ಹಾಗೇ ರಸಂ ಬಟ್ಟಲು ಹಿಡಿದ ಹೋಟೆಲ್ ಮಾಣಿಯರಿಗೆ ನಮ್ಮಲ್ಲೂ ರೇಸ್ ನಡೆಸಿದರೆ ಹೇಗೆ?
ನಾವು ಯಾರಿಗೇನು ಕಡಿಮೆ? : ಖೋಜಾ ಈಗ ಅಪಮಾನದ ಪದವೇನೂ ಅಲ್ಲ. ಅವರಿಗೂ ಅವರದೇ ಆದ ಸ್ಥಾನಮಾನ ಸಿಕ್ಕಿದೆ. ಕಳೆದ ನವೆಂಬರ್ 25 ರಂದು ಬೆಂಗಳೂರಿನಲ್ಲಿ ನಡೆದ ಪ್ರೈಡ್ ಮಾರ್ಚ್ ಪಾಸ್ಟ್ ನಲ್ಲಿ ತಾವೇನು ಎಂದು ಅವರು ಸಮಾಜಕ್ಕೆ ಸಾರಿದರು.
ಮುಟ್ಟೀರಿ ಜೋಕೆ ! : ಕೇವಲ ರೂ.800/ಕ್ಕೆ ಲಭ್ಯವಿರುವ ಈ ಟಾರ್ಚ್ ಹೆಣ್ಣುಮಕ್ಕಳ ಮಾನ ಕಾಯುವ ಆಯುಧವಾಗಬಲ್ಲದೇ? ಇದನ್ನು ಹುಡುಗಿ ಅತ್ಯಾಚಾರಕ್ಕೆ ಅಥವಾ ಚುಡಾಯಿಸಲು ಯತ್ನಿಸುವ ಪಾಪಿಯತ್ತ ಬೀರಿದರೆ ಅವನ ಪ್ರಜ್ಞೆ ಹೋಗುತ್ತದಂತೆ. ಈ ಟಾರ್ಚ್ ಇದೀಗ ಭಾರತದಲ್ಲಿ ಎಲ್ಲೆಡೆ ಸಿಗುತ್ತಿದೆ. ಆದರೆ ಆ ಪಾಪಿ ತಕ್ಷಣ ಇದನ್ನು ಹುಡುಗಿ ಕೈಯಿಂದ ಕಿತ್ತುಕೊಂಡು ಅವಳತ್ತ ಬೀರಿದರೆ ಅವಳ ಗತಿ ಏನಾದೀತು? ಬೆಳಕಿನ ಅಡಿ ಕತ್ತಲು ತಪ್ಪದು ಎಂಬುದು ಇದಕ್ಕೇ ಏನೋ?
ಮಿಸ್ ಬಂಬಂ ಸ್ಪರ್ಧೆ : ಬಳ್ಳಿ ನಡುವಿನ ಕೋಮಲಾಂಗಿಯರು ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು `ಮಿಸ್’ ಕಿರೀಟ ಗಿಟ್ಟಿಸುವುದೇನೂ ಆಶ್ಚರ್ಯಲ್ಲ. ಬದಲಿಗೆ ಮೈಕೈ ತುಂಬಿಕೊಂಡು ತೋರಲಾದ ಹೆಲ್ದಿ ಅಮ್ಮಣ್ಣಿಯರ ಬ್ಯೂಟಿ ಕಾಂಟೆಸ್ಟ್ ಇತ್ತೀಚೆಗೆ ಬ್ರೆಝಿಲ್ ನ ಒಂದು ನಗರದಲ್ಲಿ ನಡೆದು ಮಿಸ್ ಬಂಬಂ ಎಂಬ ಕಿರೀಟ ತೊಡಿಸಲಾಯ್ತು. ಹೆಲ್ದಿ ಹುಡುಗಿಗೆ ಕೋಟ್ಯಂತರ ಡಾಲರ್‌ಗಳೊಂದಿಗೆ ಪ್ರಶಸ್ತಿ ಲಭಿಸಿತು.
ಇದೇನು ಕಾರೋ ಬೇರೇನೋ….? : ಇದು ರಸ್ತೆ ಮೇಲೆ ಚಲಿಸುವ ಹೊಸ ಕಾರಿನ ಮಾಡೆಲ್ ಎಂದುಕೊಳ್ಳಬೇಡಿ. ಟೊಯೋಟಾ ಕಂಪನಿ ಒಂದು ಕಾರ್ಟೂನ್ ಕ್ಯಾರೆಕ್ಟರ್‌ಗಾಗಿಯೇ ಇಂಥ ಒಂದು ಕಾರನ್ನು ಇತ್ತೀಚೆಗೆ ವಿನ್ಯಾಸಗೊಳಿಸಿದೆ, ಆ ಪಾತ್ರ ಕಾರ್ಟೂನ್ ಪ್ರಿಯ ಮಕ್ಕಳಿಗೆ ಅಚ್ಚುಮೆಚ್ಚು.