ಪುಡಾರಿ ಪತ್ನಿ : ರೀ, ಇವತ್ತಿನ ಸುದ್ದಿ ಗಮನಿಸಿದ್ರಾ?
ಪುಡಾರಿ : ಬೇಕಾದಷ್ಟಿವೆ, ಯಾವುದು ಹೇಳ್ತಿದ್ದೀ?
ಪತ್ನಿ : ಯುವರಾಜನ ವರ್ಚಸ್ಸು ಹೆಚ್ಚಿಸಲು ಪಕ್ಷದ ವತಿಯಿಂದ ಬಹಳಷ್ಟು ಖರ್ಚಾಗುತ್ತಿದೆ ಅಂತ...
ಪತಿ : ಸರಿ, ಅದಕ್ಕೇನೀಗ?
ಪತ್ನಿ : ನಿಮ್ಮ ಮುಖಂಡರ ವರ್ಚಸ್ಸು ಹೆಚ್ಚಿಸಲು ಕೋಟ್ಯಂತರ ಖರ್ಚು ಮಾಡ್ತೀರಂತೆ, ಹೆಂಡತಿಯ ವರ್ಚಸ್ಸು ಹೆಚ್ಚಿಸಲು ಅವಳ ಮೇಕಪ್‌ಗಾಗಿ ಒಂದಿಷ್ಟು ಸಾವಿರ ಖರ್ಚು ಮಾಡಲು ಆಗದೆ....?
ಮದುವೆಯಾದ 5 ವರ್ಷಗಳ ನಂತರ ವ್ಯಾಲೆಂಟೈನ್ ಡೇ ಬಂದಾಗ ಮೋಹನ್ ತನ್ನ ಹೆಂಡತಿ ರಾಧಾಳಿಗೆ ಒಂದು ದೊಡ್ಡ ಬಿಳಿಯ ಗುಲಾಬಿ ತಂದುಕೊಟ್ಟ.
ರಾಧಾ : ಇದೇನ್ರಿ ಬಿಳಿ ಗುಲಾಬಿ ತಂದಿದ್ದೀರಿ? ವ್ಯಾಲೆಂಟೈನ್ ಡೇ ಅಂದ್ರೆ ಕೆಂಪು ಗುಲಾಬಿ ಕೊಡ್ತಾರಲ್ವಾ?
ಮೋಹನ್ : ಅದಕ್ಕೆ ಕಾರಣ ಇದೆ. ಈಗ ನಮಗೆ ಪ್ರೇಮಕ್ಕಿಂತಲೂ ಶಾಂತಿ ಸೌಹಾರ್ದತೆಯ ಅಗತ್ಯ ಜಾಸ್ತಿ ಇದೆ.
ಅಫಿಶಿಯಲ್ ಟೂರ್ ಎಂದು ಗುಂಡ 15 ದಿನಗಳ ನಂತರ ದೆಹಲಿಯಿಂದ ಮನೆಗೆ ಮರಳಿದ್ದ.
ಗುಂಡ : ನೀನು ಏನೇ ಹೇಳು, ದೆಹಲಿಯಲ್ಲಿ ವಿಪರೀತ ಚಳಿ. ನಮ್ಮ ಬೆಂಗಳೂರು ಹಾಗಲ್ಲ ಬಿಡು.
ರತ್ನಿ : ಅದಿರಲಿ, ನೀವು ಅಲ್ಲಿ ನೆಟ್ಟಗಿದ್ದಿರೋ, ಊರು ಸುತ್ತಲು ಹೋಗಿದ್ದಿರೋ?
ಗುಂಡ : ಏನೇ ಹಾಗಂದ್ರೆ.... ನಾನೆಂಥ ಒಳ್ಳೆ ಗಂಡ ಅಂತ ನಿನಗೆ ಗೊತ್ತಿಲ್ವೆ? ನಾನು ಹೇಳಿದ್ದು ಏನಾದರೂ ಸುಳ್ಳಾಗಿದ್ದರೆ ಈಗಲೇ ನನ್ನ ಪ್ರಾಣ ಹೋಗಲಿ! ಅದಿರಲಿ, ನಾನಿಲ್ಲದಾಗ ನೀನು ನಿನ್ನ ಕಸಿನ್ ಪರಮೇಶಿ ಮನೆಗೆ ಹೋಗಿಲ್ಲ ತಾನೇ?
ರತ್ನಿ : ಅಯ್ಯೋ ನಿಮ್ಮ! ನಾನೆಂಥ ಒಳ್ಳೆಯಳು ನಿಮಗೆ ಗೊತ್ತಿಲ್ವಾ? ನಾನು ಸುಳ್ಳಾಡಿದ್ದಿರೆ ಈಗಲೇ ನನಗೆ ವೈಧವ್ಯ ಪ್ರಾಪ್ತವಾಗಲಿ!
ರಮಾ ತನ್ನ ಕಸಿನ್ ಮದುವೆಗೆಂದು ಬಂದಿದ್ದಳು. ಅವಳ ಗಂಡ ರಮಣ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿಗೆ ಬಂದ. ಮದುವೆಯ ಕಾರ್ಯಕಲಾಪಗಳು ಭರದಿಂದ ನಡೆಯುತ್ತಿದ್ದವು.
10 ನಿಮಿಷ ಬಿಟ್ಟು ರಮಾ ನೋಡುತ್ತಾಳೆ, ರಮಣ ಯಾರೋ ಹೆಂಗಸಿನೊಂದಿಗೆ ನಸುನಗುತ್ತಾ ಮಾತನಾಡುತ್ತಿದ್ದ. ಆಗ ಅವಳು ಗಂಡನ ಬಳಿ ಬಂದು, ವ್ಯಾನಿಟಿ ಬ್ಯಾಗ್‌ನಿಂದ ಒಂದು ಅಮೃತಾಂಜನದ ಬಾಟಲ್ ತೆಗೆದು ತೋರಿಸುತ್ತಾ, ``ಮನೆಗೆ ಹೋದ ತಕ್ಷಣ ನಾನು ಇದನ್ನು ನಿಮ್ಮ ತಲೆಗೆ ತಿಕ್ಕುತ್ತೇನೆ,'' ಎಂದಳು.
ರಮಣ : ಆದರೆ.... ನನಗೆ ತಲೆನೋವೆಂದು ನಾನು ನಿನಗೆ ಯಾವಾಗ ಹೇಳಿದೆ?
ರಮಾ : ನಾವಿನ್ನೂ ಮನೆಗೆ ಹೋಗಿಲ್ಲವಲ್ಲ... ಅಲ್ಲಿಗೆ ಹೋದ ಮೇಲೆ ತಾನೇ ನೀವು ಯಾವಳ ಜೊತೆ ಏನೇನು ಹರಟುತ್ತಿದ್ರಿ ಅಂತ ನಾನು ವಿಚಾರಿಸೋದು?
ಭಿಕಾರಿ : ನೋಡಿ ತಾಯಿ, ನಿಮ್ಮ ಅಕ್ಕಪಕ್ಕದ ಮನೆಯವರು ಏನೇನೋ ತಿಂಡಿತಿನಿಸು ಕೊಟ್ಟಿದ್ದಾರೆ. ನೀವೇನು ಕೊಡ್ತೀರೋ ನೋಡಿ.....
ಗೃಹಿಣಿ : ಇರಲಿ, ಈ ಹಾಜ್ಮೋಲಾ ಮಾತ್ರೆ ತಗೋ, ಅವರು ಕೊಟ್ಟಿದ್ದು ಜೀರ್ಣವಾಗಲು ಇದು ಸಹಾಯ ಮಾಡುತ್ತೆ.
ಗುಂಡ : ಹಲೋ ಪಮ್ಮಿ ಡಿಯರ್... ಹೇಗಿದ್ದಿ?
ಹುಡುಗಿ : ಹೂ ಆರ್ ಯೂ ಐ ಸೇ....