ವೋಟಿನ ಹೆಸರಿನಲ್ಲಿ ಇದೆಂತಹ ಪೆಟ್ಟು?

ಸಾಧು ಸಂತರ ಪ್ರವಚನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿರುತ್ತಾರೆ. ಪೂಜಾರಿಗಳು, ಪಾದ್ರಿಗಳು ಮತ್ತು ಮುಲ್ಲಾಗಳು ಧರ್ಮವೇ ಸರಿಯಾದ ಶಿಕ್ಷಣ ಕೊಡುತ್ತದೆ, ಒಳ್ಳೆಯ ವರ್ತನೆ ಕಲಿಸುತ್ತದೆ, ಶಾಂತಿ ತರುತ್ತದೆ ಎಂದೆಲ್ಲಾ ಹೇಳುತ್ತಾರೆ. ಆದರೆ ನಡೆಯುವುದೆಲ್ಲಾ ಅದಕ್ಕೆ ವಿರುದ್ಧವಾಗಿಯೇ! ಧರ್ಮದಿಂದಾಗಿ ಉಂಟಾಗುವಷ್ಟು ಕ್ಲೇಶ ಬೇರೆ ಇನ್ನಾದರಿಂದಲೂ ಆಗುವುದಿಲ್ಲ.

ಹೆಚ್ಚು ಸೀಟುಗಳನ್ನು ಗೆದ್ದ ನಂತರ ಸಂಪತ್ತನ್ನು ಎದುರಿಸಲು ನರೇಂದ್ರ ಮೋದಿ ಗಾಬರಿಯಾಗಿದ್ದಾರೆ. ಏಕೆಂದರೆ ತನ್ನನ್ನು ಸಾಧ್ವಿ ಎಂದು ಕರೆದುಕೊಳ್ಳುವ ಅವರ ಶಿಷ್ಯೆ ನಿರಂಜನ್‌ ಜ್ಯೋತಿ ಕಾವಿ ಉಡುಪು ಧರಿಸಿ ಭಜ್‌ಭಜ್‌ ಮಂಡಳಿ ವತಿಯಿಂದ ಉತ್ತರ ಪ್ರದೇಶದ ಒಂದು ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದು ಮಂತ್ರಿಯೂ ಆದರು. ಅವರು ಒಂದು ಚುನಾವಣಾ ಸಭೆಯಲ್ಲಿ ಅಸಭ್ಯ ಭಾಷೆಯನ್ನು ಉಪಯೋಗಿಸಿದರು. ಈ ಭಾಷೆಯಲ್ಲಿ  ಬೈಗುಳಗಳಿದ್ದವು, ಅಪಶಬ್ದಗಳಿದ್ದವು, ಇನ್ನೊಬ್ಬರನ್ನು ಕೀಳಾಗಿ ಕಾಣುವುದಿತ್ತು, ಧರ್ಮದ ಹೆಸರಿನಲ್ಲಿ  ಜನರನ್ನು ಪ್ರತ್ಯೇಕಿಸುವುದಾಗಿತ್ತು.

ಅವರು ದೆಹಲಿಯಲ್ಲಿ ಒಂದು ಚುನಾವಣಾ ಸಭೆಯಲ್ಲಿ ಮತದಾರರಿಗೆ ದೆಹಲಿಯಲ್ಲಿ ಮುಂದಿನ ವಿಧಾನಸಭೆ ರಾಮನ ಮಕ್ಕಳದು ಅಂದರೆ ರಾಮಭಕ್ತ ಭಾಜಪದರದ್ದೇ ಅಥವಾ ಹರಾಮಜಾದಾ ಅಂದರೆ ಅಕ್ರಮ ಸಂತಾನದರದ್ದೇ ನಿರ್ಧರಿಸಿ ಎಂದು ಹೇಳಿದರು. `ಹರಾಮಜಾದಾ' ಶಬ್ದವನ್ನು ಕಾವಿಧಾರಿ ಹಿಂದೂಗಳ ಒಂದು ವರ್ಗದರು ಉಪಯೋಗಿಸುತ್ತಾರೆ. ಅದನ್ನು ಬರೆಯುವುದೂ ಅಪಮಾನಕಾರಿ ಎಂದು ತಿಳಿಯಲಾಗಿದೆ. ನಾವು ಹಿಂದೂಗಳು ಶತಮಾನಗಳಿಂದ ಯಾರ ಗುಲಾಮರಾಗಿದ್ದೆವೆಯೋ ಅವರಿಗೆ ಇಂದು ಬೈದು ಏನು ಸಾಧಿಸಬಹುದು? ಅದೇನೆಂದು ತಿಳಿಯದಿದ್ದರೂ ಈ ಪದ ಧರ್ಮಗಳ ನಡುವೆ ವೈಮನಸ್ಯ ಉಂಟು ಮಾಡುತ್ತದೆಯಲ್ಲದೆ ನಾಲಿಗೆಯ ಮೇಲೂ ನಲಿದಾಡುತ್ತಿರುತ್ತದೆ. ಜನ ಪರಸ್ಪರ ಇಂತಹ ಪದಗಳನ್ನು ಬಳಸುತ್ತಿರುತ್ತಾರೆ.

ಕಾವಿ ಉಡುಪು, ಕರಿ ನಿಲುವಂಗಿ ಅಥವಾ ಬಿಳಿ ಕುರ್ತಾ ಧರಿಸುವುದರಿಂದ ಜನರ ಕಪ್ಪು ಹೃದಯ ಪವಿತ್ರವಾಗುವುದಿಲ್ಲ. ಆದರೆ ನಮ್ಮ ಧರ್ಮಕ್ಕೆ ವೃತ್ತಿಪರ ಉಡುಪಿದೆ ಎಂದು ತಿಳಿಸುತ್ತದೆ. ಅದನ್ನು ಕಂಡು ಭಕ್ತರು ತಮ್ಮ ಕೈಗಳನ್ನು ತೆರೆದು ಸಾಯಲು, ಕೊಲ್ಲಲೂ ಕೂಡ ಸಿದ್ಧರಾಗುತ್ತಾರೆ. ಗುರುಮೀತ್‌ ರಾಮ್ ರಹೀಮ್ ಸಿಂಗ್‌, ರಾಮ್ ಪಾಲ್ ‌ಮತ್ತು ಆಸಾರಾಮ್ ಕೂಡ ಇವರುಗಳ ಸೋದರ ಸಂಬಂಧಿಗಳಂತೆಯೇ. ಜೊತೆಗೆ ಇರಾಕ್‌ನಲ್ಲಿ ಕೋಲಾಹಲ ಉಂಟುಮಾಡುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ನ ಆತಂಕವಾದಿಗಳೂ ಅಷ್ಟೇ. ಇವರಿಗೆ ಧರ್ಮದ ಹೆಸರಿನಲ್ಲಿ ಲೂಟಿ ಮಾಡಲು ಜನರನ್ನು ಮತಿಭ್ರಷ್ಟರನ್ನಾಗಿ ಮಾಡಬೇಕಾಗಿದೆ.

ವಿರೋಧ ಪಕ್ಷದವರಿಗೆ ಭಾಜಪಾ ಮತ್ತು ನರೇಂದ್ರ ಮೋದಿಯವರನ್ನು ಹಣಿಯಲು ಅವಕಾಶ ಸಿಕ್ಕಿತು. ಹಿಂದೂ ಧರ್ಮದ ಪೊಳ್ಳುತನ ಬಯಲಾದ ನಂತರ ಇರುವ ಅವಕಾಶ ಸಿಕ್ಕಿದಾಗ ಹೆಚ್ಚು ಗದ್ದಲ ಮಾಡಿರುತ್ತಾರೆಯೇ? ಅದೇ ಸಂಸತ್ತಿನಲ್ಲಿಯೂ ನಡೆಯಿತು.

ಪ್ರಶ್ನೆ ಏನೆಂದರೆ ಇಂತಹ ಶಬ್ದ ಧರ್ಮದ ಹೆಸರಿನಲ್ಲಿ ನಾಲಿಗೆಯಲ್ಲಿ ಬರುವುದಾದರೂ ಏಕೆ? ಧರ್ಮದ ಹೆಸರಿನಲ್ಲಿ ಒಂದು ಸುಳ್ಳು ಕಾಲ್ಪನಿಕ ಶಕ್ತಿಯನ್ನು ಮಾರಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಮಾರುವವರು ಎಲ್ಲ ಬಗೆಯ ಲೋಕವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತಾರೆ.

ಶತಮಾನಗಳಿಂದಲೂ ಧರ್ಮದ ಹೆಸರಿನಲ್ಲಿ ರಾಜರುಗಳಿಗೆ ಇತರರ ಹತ್ಯೆಗಳನ್ನು ಮಾಡಲು ಪ್ರೇರೇಪಿಸಲಾಗಿದೆ. ತಮ್ಮ ಕಾಲ್ಪನಿಕ ಈಶ್ವರ ಅಥವಾ ಸ್ವರೂಪ, ಮಗ ಇತ್ಯಾದಿಗಳ ಭವನ, ಮಂಟಪ ಅಥವಾ ಸ್ಮಾರಕಗಳನ್ನು ನಿರ್ಮಿಸಲಾಯಿತು. ಒಂದು ವೇಳೆ ಇತರರು ವಿರೋಧಿಗಳು ಅಥವಾ ಪ್ರತಿಸ್ಪರ್ಧಿಗಳನ್ನು ಬೈಯದಿದ್ದರೆ ಭಕ್ತರಲ್ಲಿ ಜೋಶ್‌ ಉಂಟಾಗುವುದಿಲ್ಲ. ಸ್ವಯಂ ನರೇಂದ್ರ ಮೋದಿಯವರು 5ಕ್ಕೆ 25 ಎಂದು ಹೇಳಿ ಮತಗಳನ್ನು ಒಟ್ಟುಗೂಡಿಸಿದರು. ಇಂದಿರಾಗಾಂಧಿ ವಿದೇಶೀ ಕೈವಾಡ ಇದೆ ಎಂದು ಹೇಳಿ ಮತಗಳನ್ನು ಕೂಡಿಸುತ್ತಿದ್ದರು. ಲಾಲೂ ಪ್ರಸಾದ್‌ ಯಾದವ್ ಬರೀ ಮೋಸ, ವಂಚನೆ ಇರುವ ಕಡೆಯೇ ಓಡಾಡುತ್ತಾರೆ. ಮಾಯಾವತಿ ಸ್ಮಾರಕಗಳ ಹೆಸರಿನಲ್ಲಿ ಮಂದಿರಗಳನ್ನು ನಿರ್ಮಿಸಲು ಪ್ರಯತ್ನಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ