ಚೆಕ್‌ನ್ನು ತಪ್ಪು ತಪ್ಪಾಗಿ ಬರೆಯುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಈಗ ತೀವ್ರವಾಗಿ ಆಕ್ಷೇಪಿಸುತ್ತದೆ. 2010ರ ಡಿಸೆಂಬರ್‌ 1ರ ನಂತರ ತಪ್ಪಾದ ಚೆಕ್‌ನ್ನು ಇಷ್ಯು ಮಾಡುವುದು, ಚೆಕ್‌ನಲ್ಲಿ ತಿದ್ದುಪಡಿ ತೋರಿಸಿದರೆ ಅದನ್ನು ತಿರಸ್ಕರಿಸ (ಡಿಸ್‌ ಆನರ್‌)ಲಾಗುತ್ತದೆ, ಈ ರೀತಿ ತಿದ್ದಿದ ಕಡೆ ಚೆಕ್‌ ಕೊಟ್ಟ ವ್ಯಕ್ತಿ ಸಹಿ ಮಾಡಿದ್ದರೂ ಸಹ ಅದು ಸಿಂಧುವಾಗುವುದಿಲ್ಲ. ಯಾವುದೇ ಬ್ಯಾಂಕಿನಿಂದ ಚೆಕ್‌ ಬುಕ್‌ ಜಾರಿಗೊಳಿಸಿದ್ದರೆ, ನಿಮ್ಮ ಖಾತೆಯಲ್ಲಿ ಕನಿಷ್ಠ ರೂ.1000 ಬ್ಯಾಲೆನ್ಸ್ ಇರಿಸಿರಲೇಬೇಕು. ಎಲ್ಲಾ ಶಾಖೆಗಳೂ ಕಂಪ್ಯೂಟರೈಸ್ಡ್ ಆಗಿರುವುದರಿಂದ ಸಿಸ್ಟಮ್ ನಿಮಗೆ ಪೆನಾಲ್ಟಿ ಹೇರುತ್ತದೆ. ಇದನ್ನು ಹೊರತುಪಡಿಸಿ ಚೆಕ್‌ ಮಾಧ್ಯಮದಿಂದ ಕೊಡುಕೊಳ್ಳುವಿಕೆಯ ಸಂದರ್ಭದಲ್ಲಿ ಈ ಕೆಳಗಿನ ವಿಷಯಗಳನ್ನು ನೆನಪಿಸಿಕೊಳ್ಳಿ :

ಖಾತೆಯಲ್ಲಿ ಅಗತ್ಯದ ಹಣವಿರಲಿ

ವೈಯಕ್ತಿಕ ಚೆಕ್‌ ಕುರಿತಾಗಿ ಬ್ಯಾಂಕುಗಳಿಗೆ ಅನೇಕ ತೊಂದರೆಗಳು ಎದುರಾಗುತ್ತವೆ. ಇದರಲ್ಲಿ ಎಷ್ಟೋ ಸಲ ಚೆಕ್‌ ಕೊಡುವ ವ್ಯಕ್ತಿಯ ವ್ಯಯಕ್ತಿಕ ಖಾತೆಯಲ್ಲಿ ಸಾಕಷ್ಟು ಹಣವೇ ಇರುವುದಿಲ್ಲ. ಇಂಥ ಚೆಕ್‌ ಪಡೆದವರು ಅದನ್ನು ತಮ್ಮ ಖಾತೆಯ ಬ್ಯಾಂಕಿಗೆ ನೀಡಿದಾಗ, ಅದು ಮಾನ್ಯತೆ ಪಡೆಯದೆ ಬೌನ್ಸ್ ಆಗುತ್ತದೆ. ಹೀಗಾದಾಗ ಚೆಕ್‌ ನೀಡಿದವರು ಮತ್ತು ಪಡೆದವರು ಇಬ್ಬರಿಗೂ ಬ್ಯಾಂಕ್‌ ದಂಡ  ಹೇರುತ್ತದೆ. ಅನಗತ್ಯವಾಗಿ ಇಬ್ಬರೂ ಹಣ ಕಳೆದುಕೊಳ್ಳುವಂತೆ. ಆಗುತ್ತದೆ. ಇದರ ಜೊತೆ ಚೆಕ್‌ ಈ ರೀತಿ ಡಿಸ್ ಆನರ್‌ ಆದರೆ, ಅದು ಅಪರಾಧ ಎನಿಸುತ್ತದೆ. ಆಗ ಚೆಕ್‌ ಪಡೆದರು, ಚೆಕ್‌ ನೀಡಿದರ ವಿರುದ್ಧ ಕೇಸ್‌ ಹೂಡಬಹುದು. ಹೀಗಾಗಿ ವೈಯಕ್ತಿಕ ಚೆಕ್‌ ನೀಡುವಾಗ, ತಮ್ಮ ಖಾತೆಯಲ್ಲಿ ಅಷ್ಟು ಹಣ ಬ್ಯಾಲೆನ್ಸ್ ಇದೆ ತಾನೇ ಎಂದು 2 ಸಲ ವಿವೇಚಿಸಿ ನಂತರ ಅದನ್ನು ಇನ್ನೊಬ್ಬರ ಹೆಸರಿಗೆ ನೀಡಬೇಕು.

ಇತ್ತೀಚೆಗಷ್ಟೆ ಈ ಕುರಿತಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌, ಖಾತೆಯಲ್ಲಿ ಅಗತ್ಯದ ಹಣ ಇಲ್ಲದ ಕಾರಣಕ್ಕೆ ವ್ಯಕ್ತಿಯೊಬ್ಬನ ಚೆಕ್ ಸತತ 4 ಸಲ ಬೌನ್ಸ್ ಆದರೆ, ಬ್ಯಾಂಕ್‌ ಅಂಥ ವ್ಯಕ್ತಿಯ ಖಾತೆಯನ್ನೇ ಶಾಶ್ವತವಾಗಿ ರದ್ದುಪಡಿಸುವಂತೆ ಹೇಳಿದೆ! ಹೀಗೆ ಮಾಡುವುದರಿಂದ ವೈಯಕ್ತಿಕ ಖಾತೆದಾರರು, ಚೆಕ್‌ನ್ನು ಕೊಟ್ಟುತೆಗೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗುತ್ತದೆ. ಯಾವುದೋ ಹಳೆಯ ತಾರೀಖಿನ ಚೆಕ್‌ಗಳನ್ನೂ ಬ್ಯಾಂಕ್‌ ಸ್ವೀಕರಿಸುವುದಿಲ್ಲ. ಏಕೆಂದರೆ ಅಂಥ ಖಾತೆಗಳಲ್ಲಿ ಇಂದಿನ ತಾರೀಖಿಗೆ ಬೇಕಾದ ಹಣದ ಬಾಕಿ ಇರುತ್ತದೆಂಬ ಗ್ಯಾರಂಟಿ ಏನೂ ಇಲ್ಲ.

ಓವರ್ರೈಟಿಂಗ್ಮಾಡಬೇಡಿ

2010ರ ಡಿಸೆಂಬರ್‌ 1ರ ನಂತರ ಚೆಕ್‌ನಲ್ಲಿ ಯಾವುದೇ ತಿದ್ದುಪಡಿ, ಹಣದ ಮೊತ್ತದಲ್ಲಿ ಬದಲಾಣೆ, ಯಾರಿಗೆ ಚೆಕ್‌ ಕೊಡಬೇಕಿದೆಯೋ ಆ ಹೆಸರಿನ ಸ್ಪೆಲ್ಲಿಂಗ್‌ನಲ್ಲಿ ತಿದ್ದುಪಡಿ, ಓವರ್‌ ರೈಟಿಂಗ್‌, ಕ್ರಾಸ್ಡ್ ಚೆಕ್‌ನ್ನು ಕ್ರಾಸ್‌ ತೆಗೆದುಹಾಕಲು ತಿದ್ದುಪಡಿ ಇತ್ಯಾದಿಗಳೇನೇ ಇರಲಿ, ಆ ಜಾಗದಲ್ಲಿ ಚೆಕ್‌ ನೀಡುವವರು ಸಹಿ ಮಾಡಿದ್ದರೂ ಸಹ, ಮಾನ್ಯತೆ ಪಡೆಯವುದು.

ಭಾರತೀಯ ರಿಸರ್ವ್ ‌ಬ್ಯಾಂಕ್‌ ತಿಳಿಸಿರುವುದೆಂದರೆ, ಯಾವ ಚೆಕ್‌ಗಳು ಇಮೇಜ್‌ ಆಧಾರಿತ ಸೀಟಿ ಎಸ್‌ (ಚೆಕ್‌ ಟ್ರಂಕೇಶನ್ ಸಿಸ್ಟಂ) ವಿಧಾನದಲ್ಲಿ ಕ್ಲಿಯರ್‌ ಆಗುತ್ತವೆ, ಅಂಥ ಚೆಕ್‌ಗಳ ಮೇಲೆ ಬಿಲ್‌ಕುಲ್‌ ಓವರ್‌ ರೈಟಿಂಗ್‌ ಮಾಡುವಂತಿಲ್ಲ. ಹೀಗಾಗಿ ಚೆಕ್ ತುಂಬಿಸುವಾಗ ಅಂಕಿ ಸಂಖ್ಯೆ, ಅಕ್ಷರಗಳಲ್ಲಿ ಬಿಡಿಸಿ ಬರೆಯುವಾಗ ಎಚ್ಚರವಾಗಿ ಇರಲೇಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ