ಮನೆ ಖರೀದಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಸಾಲ ಪಡೆಯುವುದನ್ನು ಒಳ್ಳೆಯ ಸಂಗತಿಯೆಂದು ಪರಿಗಣಿಸುವುದಿಲ್ಲ. ಒಂದುವೇಳೆ ನಿಮ್ಮ ಪೋರ್ಟ್ ಪೇಲಿಯೋದಲ್ಲಿ ಗೃಹಸಾಲ ಕೂಡ ಸೇರ್ಪಡೆಗೊಂಡಿದ್ದರೆ, ಅದನ್ನು ಒಳ್ಳೆಯ ಸಂಕೇತ ಎಂದು ಭಾವಿಸಲಾಗುತ್ತದೆ.
ಅಂದಹಾಗೆ ಗೃಹಸಾಲ ಉಳಿದ ಸಾಲಕ್ಕಿಂತ ಭಿನ್ನವಾಗಿದೆ. ಏಕೆಂದರೆ ಗೃಹ ಸಾಲ ಮಾಡುವುದರ ಅರ್ಥ ಇಷ್ಟೇ. ನೀವೊಂದು ಆಸ್ತಿಯ ಮಾಲೀಕರಾಗಲಿದ್ದೀರಿ. ಅದರ ಮೌಲ್ಯ ದಿನೇ ದಿನೇ ಹೆಚ್ಚುತ್ತ ಹೋಗುತ್ತದೆ. ಮನೆ ಖರೀದಿಸಲು ನೀವು ಸಾಲ ಮಾಡುತ್ತೀರಿ ಎಂದರೆ ಅದು ಜಾಣತನದ ನಿರ್ಧಾರ ಎನಿಸಿಕೊಳ್ಳುತ್ತದೆ. ನೀವು ಈ ಕುರಿತಾದ ಸೂಕ್ಷ್ಮ ಸಂಗತಿಗಳ ಬಗ್ಗೆ ಗಮನಿಸಬೇಕಾಗುತ್ತದೆ.
ಗೃಹ ಸಾಲದ ಮಿತಿ ನಿರ್ಧಾರ ಹೇಗೆ?
ಬ್ಯಾಂಕುಗಳಿಗೆ ತನ್ನದೇ ಆದ ಕೆಲವು ಮಾನದಂಡಗಳಿರುತ್ತವೆ. ಆ ಷರತ್ತುಗಳಿಗೆ ಬದ್ಧರಾಗಿರುವವರಿಗೆ ಮಾತ್ರ ಒಂದು ನಿರ್ದಿಷ್ಟ ಮಿತಿಯೊಳಗೆ ಸಾಲ ನೀಡಲಾಗುತ್ತದೆ. ಸರ್ಟಿಫೈಡ್ ಫೈನಾನ್ಶಿಯಲ್ ಪ್ಲ್ಯಾನರ್ ಅಮಿತ್ ಅವರ ಪ್ರಕಾರ, ಯಾವ ವ್ಯಕ್ತಿಗೆ ಎಷ್ಟು ಸಾಲ ನೀಡಬೇಕೆನ್ನುವುದು ಆ ವ್ಯಕ್ತಿ ಎಷ್ಟು ಸಂಬಳ ಪಡೆಯುತ್ತಿದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ.
ಉದಾಹರಣೆಗಾಗಿ ವೇತನ ಪಡೆಯುವ ವರ್ಗಕ್ಕೆ ಅವರ ಒಟ್ಟು ವಾರ್ಷಿಕ ಸಂಬಳದ 4 ಪಟ್ಟು ಮೊತ್ತವನ್ನು ಸವಾಲಾಗಿ ಕೊಡಬಹುದಾಗಿದೆ. ಚಾರ್ಟರ್ಡ್ ಅಕೌಂಟೆಂಟ್. ಡಾಕ್ಟರ್ ಮುಂತಾದ ವೃತ್ತಿಯಲ್ಲಿರುವವರಿಗೆ ಅವರ ವಾರ್ಷಿಕ ಆದಾಯದ 7 ಪಟ್ಟು ವೊತ್ತದ ತನಕ ಸಾಲ ಕೊಡಬಹುದಾಗಿದೆ.
ಅಂದಹಾಗೆ ಸಾಲ ಕೊಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಗೆ ಎಷ್ಟು ಮೊತ್ತವನ್ನು ತೆಗೆದುಕೊಂಡು ಹೋಗುತ್ತಾನೆ ಹಾಗೂ ಅವನ ನೆಟ್ ಸಂಬಳ ಎಷ್ಟು ಎಂದು ಗಮನಿಸಲಾಗುತ್ತದೆ. ಇದರ ಹೊರತಾಗಿ ಸಾಲ ತೆಗೆದುಕೊಳ್ಳುವ ವ್ಯಕ್ತಿಯ ಹಳೆಯ ಸಾಲ ತೀರಿಸಿದ ಕ್ರೆಡಿಟ್ ರಿಪೋರ್ಟ್‌ನ್ನು ಕೂಡ ಗಮನಿಸಲಾಗುತ್ತದೆ. ಒಂದುವೇಳೆ ಆ ವ್ಯಕ್ತಿಯ ಹಳೆಯ ಕ್ರೆಡಿಟ್ ದಾಖಲೆ ಕಳಂಕಿತವಾಗಿದ್ದರೆ, ಅವನಿಗೆ ಸಾಲ ಸಿಗದೇ ಹೋಗಬಹುದು ಅಥವಾ ಸಿಕ್ಕರೂ ಹೆಚ್ಚಿನ ಬಡ್ಡಿ ದರ ತೆರಬೇಕಾಗುತ್ತದೆ.
ಗೃಹ ಸಾಲದಿಂದ ಆದಾಯಕರದಲ್ಲಿ ಲಾಭ ಗೃಹಸಾಲ ಪಡೆದು ಮನೆ ಖರೀದಿಸುವುದರಿಂದ ಎರಡು ಲಾಭಗಳಿವೆ. ಮೊದಲನೆಯದೆಂದರೆ ನಿಮ್ಮದೇ ಆದ ಮನೆ ಹೊಂದಿದ ತೃಪ್ತಿ. ಎರಡನೇಯದು ಆದಾಯ ತೆರಿಗೆಯಲ್ಲಿ ಉಳಿತಾಯ. ಅಮಿತ್ ಅರ ಪ್ರಕಾರ, ಆದಾಯ ತೆರಿಗೆ ನಿಯಮ 80ಸಿಯ ಪ್ರಕಾರ, ಹೋಮ್ ಲೋನ್‌ನ ಮೂಲ ಹಣ ಪಾವತಿಯ ಪ್ರಕಾರ, ಬಜೆಟ್‌ನಲ್ಲಿ ಘೋಷಿಸಿದಂತೆ 1.5 ಲಕ್ಷ ರೂ.ಗಳ ತನಕ ರಿಯಾಯಿತಿ ದೊರೆಯುತ್ತದೆ. ಅದರ ಸೌಲಭ್ಯ ಪಡೆದುಕೊಳ್ಳಲು ಸಾಲ ಪಡೆದ ಸಂಸ್ಥೆಯಿಂದ ಸ್ಟೇಟ್‌ಮೆಂಟ್ ಪಡೆದುಕೊಳ್ಳುವುದು ಅತ್ಯವಶ್ಯ.
ಆದಾಯ ತೆರಿಗೆ ಅಧಿನಿಯಮದ ವಿಧಿ 24(ಬಿ)ಯ ಪ್ರಕಾರ, ಗೃಹ ಸಾಲದ ಬಡ್ಡಿಯ ಪಾವತಿಯ 1,50,000 ರೂ. ತನಕ ಕಡಿತಕ್ಕೆ ಮಾನ್ಯತೆಯಿದೆ. ಅಂದಹಾಗೆ ಈ ಕುರಿತಾದ ಷರತ್ತು ಈ ರೀತಿ ಇದೆ. ಮನೆ ನಿರ್ಮಾಣ ಅಥವಾ ಅದರ ಮೇಲೆ ಸಾಲ ಪಡೆಯುವ ವ್ಯಕ್ತಿ ಸಾಲ ಪಡೆದ 3 ವರ್ಷದೊಳಗೆ ಮನೆಯನ್ನು ತನ್ನ ವಶಕ್ಕೆ ಪಡೆದಿರಬೇಕು. ಇಲ್ಲದಿದ್ದರೆ ಬಡ್ಡಿಯ ಮೇಲೆ ನೀಡಲಾಗುವ 1,50,000 ರೂ.ಗಳ ಕಡಿತದ ಪ್ರಮಾಣ 30,000 ರೂ. ಮೊತ್ತಕ್ಕೆ ಕುಗ್ಗುತ್ತದೆ.