ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೊದಲು, ಹೂಡಿಕೆದಾರರು ಈ ವಿಷಯದಲ್ಲಿ ಹೆಚ್ಚು ಲಾಭ ಇರುವ ಹಾಗೇ ಒಂದೇ ಸಲ ಹೆಚ್ಚು ನಷ್ಟ ಆಗುವ ಸಂಭವ ಹೆಚ್ಚು. ಹೀಗಿರುವಾಗ ಹೂಡಿಕೆದಾರರು ಈ ಫಂಡ್ಸ್ ಖರೀದಿಸುವ ಮೊದಲು ಅದರಲ್ಲಿನ ಲಾಭ ಮತ್ತು ಹಾನಿ ಎರಡರ ಮಾಹಿತಿ ಪಡೆದುಕೊಂಡರೆ, ಮುಂದೆ ನಷ್ಟ ಆಗುವ ಸಂಭವ ಕಡಿಮೆ. ಮ್ಯೂಚುವಲ್ ‌ಫಂಡ್‌ನಲ್ಲಿ ಕಡಿಮೆ ಅವಧಿಗಾಗಿ ಮಾಡಲಾದ ಹೂಡಿಕೆಯಲ್ಲಿ ಲಾಭಾಂಶ ಕಡಿಮೆ. ಅದರ ಬದಲು ದೀರ್ಘಾವಧಿಗಾಗಿ ಮಾಡಲಾದ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಬರುವ ಸಾಧ್ಯತೆಗಳಿವೆ.

ಮ್ಯೂಚುವಲ್ ಫಂಡ್ಎಂದರೇನು?

ಮ್ಯೂಚುವಲ್‌ ಫಂಡ್‌ ಎಂದರೆ ಬಹುಜನರ ಹಣವನ್ನು ಒಂದೆಡೆ ಹೂಡಿ, ಅದರಿಂದ ಲಾಭಕರ ಉದ್ಯಮ ನಡೆಸುವುದು ಎಂದರ್ಥ. ಇದರಲ್ಲಿ ವಿಭಿನ್ನ ಹೂಡಿಕೆದಾರರಿಂದ ಒಟ್ಟಾಗಿ ದೊಡ್ಡ ಮೊತ್ತದ ಹಣ ಸಂಗ್ರಹಿಸಲಾಗುತ್ತದೆ. ಆ ಹಣವನ್ನು ಶೇರ್‌ ಮಾರ್ಕೆಟ್‌ ಮತ್ತು ಬಾಂಡ್‌ಗಳಲ್ಲಿ ತೊಡಗಿಸಲಾಗುತ್ತದೆ. ಇದಕ್ಕಾಗಿ ಹೂಡಿಕೆದಾರರಿಗೆ ಅವರ ಹಣಕ್ಕಾಗಿ ಕೆಲವು ಯೂನಿಟ್ಸ್ನ್ನು ಹಂಚಲಾಗುತ್ತದೆ. ಅದೇ ಯೂನಿಟ್‌ಗಳ ಅನುಪಾತದಲ್ಲಿ ಶೇರ್‌ ಅಥವಾ ಬಾಂಡ್‌ನ್ನು ಕೊಂಡು ಮಾರುವುದರಿಂದ ಸಿಗುವ ಲಾಭವನ್ನು ಮ್ಯೂಚುವಲ್ ಫಂಡ್‌ ಹೌಸಸ್‌ ಹೂಡಿಕೆದಾರರಿಗೆ ವಿಂಗಡಿಸುತ್ತದೆ.

ಸಾಮಾನ್ಯವಾಗಿ ಮ್ಯೂಚುವಲ್ ಫಂಡ್‌ನ್ನು ಮಾರುಕಟ್ಟೆಯಲ್ಲಿ ಒಂದು ಸ್ಕೀಂ ತರಹ ಸಮಯಕ್ಕೆ ಸರಿಯಾಗಿ ಲಾಂಚ್‌ ಮಾಡಲಾಗುತ್ತದೆ. ಹಾಗೆ ನೋಡಿದರೆ ನೀವು ನೇರವಾಗಿ ಮ್ಯೂಚುವಲ್ ‌ಫಂಡ್‌ನಲ್ಲಿ ಹೂಡಿಕೆ ಮಾಡಬಹುದು, ಆದರೆ ನೀವು ಮೊದಲ ಸಲ ಇದರಲ್ಲಿ ಹೂಡುತ್ತಿರುವಿರಾದರೆ ಅಗತ್ಯವಾಗಿ ಬ್ರೋಕರ್‌ನ ಸಹಾಯ ಪಡೆಯಿರಿ.

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಎಲ್ಲಕ್ಕೂ ಮೊದಲು ನಿಮ್ಮ ಖಾತೆಯಲ್ಲಿ ಡೀಮ್ಯಾಟ್‌ ಅಕೌಂಟ್‌ ಓಪನ್‌ ಮಾಡಿ. ಅದೇ ಅಕೌಂಟ್‌ ನೆರವಿನಿಂದ ನೀವು ನಿಮ್ಮ ಫಂಡ್ಸ್ ನ್ನು ಮಾರಬಹುದು, ಹೆಚ್ಚಿನದನ್ನು ಕೊಳ್ಳಲೂಬಹುದು.ಮ್ಯೂಚುವಲ್ ಫಂಡ್‌ನಲ್ಲಿ ನಿಮ್ಮೆದುರು ಸ್ಕೀಂ ಕುರಿತಾಗಿ 2 ಬಗೆಯ ಅವಕಾಶಗಳಿವೆ. ಮೊದಲನೆಯದು, ಓಪನ್‌ ಎಂಡೆಡ್‌ ಫಂಡ್‌, ಎರಡನೆಯದು ಕ್ಲೋಸ್‌ ಎಂಡೆಂಡ್‌ ಫಂಡ್‌. ಬನ್ನಿ, ಇವೆರಡರ ಕುರಿತು ತಿಳಿಯೋಣ.

ಓಪನ್ಎಂಡೆಡ್ಫಂಡ್

ಇದರರ್ಥ ನಿಮಗೆ ಯಾವಾಗ ಬೇಕೋ ಆಗ ನಿಮ್ಮ ಯೂನಿಟ್ಸ್ನ್ನು ಮಾರಬಹುದು, ಬೇಕೆಂದರೆ ಹೆಚ್ಚಿನದನ್ನು ಕೊಳ್ಳಬಹುದು. ಈ ಫಂಡ್‌ಹೂಡಿಕೆದಾರರಿಗೆ ನಾನ್‌ ಫ್ಲೆಕ್ಸಿಬಲ್ ರಿಟರ್ನ್ಸ್ ನೀಡುತ್ತದೆ. ಯಾರು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲವೋ ಅಂಥವರಿಗೆ ಈ ಸ್ಕೀಂ ಸರಿ. ಏಕೆಂದರೆ ಈ ಫಂಡ್‌ ಕೊಳ್ಳುವ ಸಮಯದಲ್ಲೇ ಅವರಿಗೇ ಇಂತಿಷ್ಟೇ ಲಾಭ ಎಂದು ಮೊದಲೇ ಹೇಳಿರಲಾಗುತ್ತದೆ.

ಕ್ಲೋಸ್ಎಂಡೆಡ್ಫಂಡ್

ಇದರ ಯೂನಿಟ್ಸ್ ನ್ನು ಒಂದು ನಿಶ್ಚಿತ ಅವಧಿಗಾಗಿ ಜಾರಿಗೊಳಿಸಲಾಗುತ್ತದೆ. ನೀವು ಇದರಲ್ಲಿ ಒಂದು ನಿಶ್ಚಿತ ಸಮಯಕ್ಕಾಗಿ ಹಣ ಹೂಡಬಹುದು. ಒಂದು ಪಕ್ಷ ನೀವು ಮಧ್ಯದಲ್ಲೇ ಹಣ ವಾಪಸ್‌ ಬಯಸಿದರೆ, ರಿಟರ್ನ್ಸ್ ನಲ್ಲಿ ನಿಮಗೆ ಯಾವ ಲಾಭ ಸಿಗದು. ಜೊತೆಗೆ ತುಸು ಪೆನಾಲ್ಟಿ ಸಹ ಆಗುತ್ತದೆ. ಬ್ರೋಕರ್‌ನ ನೆರವಿನಿಂದ ನೀವು ಇಂಥ ಯೂನಿಟ್ಸ್ ನ್ನು ಕೊಂಡು, ಮಾರಬಹುದಾಗಿದೆ. ಹಾಗೆ ನೋಡಿದರೆ ಓಪನ್‌ಗಿಂತ ಕ್ಲೋಸ್‌ನಲ್ಲಿ ಹೆಚ್ಚಿನ ಲಾಭವಿದೆ, ಏಕೆಂದರೆ ಇದರಲ್ಲಿ ಫ್ಲೆಕ್ಸಿಬಲ್ ರಿಟರ್ನ್ಸ್ ಹೆಚ್ಚು ಸಿಗುತ್ತವೆ, ಅದರಿಂದ ನಿಮಗೆ ಹೆಚ್ಚಿನ ಲಾಭವಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ