ರಂಜಿನಿ ಕೂಡ ಬಹಳಷ್ಟು ಜನರಂತೆ ಇವತ್ತು ಬದುಕುವುದನ್ನು ನಂಬಿದ್ದರು. ಭವಿಷ್ಯದ ಬಗ್ಗೆ ಚಿಂತೆ ಏಕೆ ಮಾಡಬೇಕು, ಏನಾಗುತ್ತೋ ಮುಂದೆ ನೋಡೋಣ ಎನ್ನುತ್ತಿದ್ದರು. ರಂಜನಿ ಒಂದು ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಸಂಬಳ, ಸಣ್ಣ ಕುಟುಂಬ, ಗಂಡ, ಇಬ್ಬರು ಮಕ್ಕಳು, 8 ವರ್ಷದ ಮಗಳು, 6 ವರ್ಷದ ಮಗ. ಹೆಚ್ಚು ಯೋಚಿಸಲು ಏನಿದೆ?
ಆದರೆ ಇದ್ದಕ್ಕಿದ್ದಂತೆ ಒಂದು ಅಪಘಾತದಲ್ಲಿ 30 ವರ್ಷದ ಅವರ ಸೋದರ ಸಂಬಂಧಿ ತೀರಿಕೊಂಡರು. ಆಗ ರಂಜನಿಗೆ ತನ್ನ ಮಕ್ಕಳ ಭವಿಷ್ಯದ ಚಿಂತೆಯಾಗತೊಡಗಿತು. ಅವರು ಕೂಡಲೇ ವಿಮಾ ಸಲಹೆಗಾರರನ್ನು ಭೇಟಿಯಾಗಿ ಇಬ್ಬರೂ ಮಕ್ಕಳಿಗೆ ಪಾಲಿಸಿಗಳನ್ನು ಪಡೆದರು.
ಈಗ ರಂಜನಿಗೆ ಮಕ್ಕಳ ಆರ್ಥಿಕ ಚಿಂತೆಯಿಂದ ಮುಕ್ತಿ ಸಿಕ್ಕಿತು.
ಹೆಚ್ಚಿನ ಪೋಷಕರು ಇತರ ಕ್ಷೇತ್ರಗಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದಾರೆ. ಆದರೆ ತಮ್ಮ ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಕ್ಕಳ ಭವಿಷ್ಯದ ಯೋಜನೆ ಮಾಡುವುದು ಬಹಳ ಅಗತ್ಯ. ಸರ್ವಶ್ರೇಷ್ಠ ಶಿಕ್ಷಣ ಕೊಡುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು.
ವಿಮೆಯಿಂದ ನಿಮ್ಮ ಮಗುವಿನ ಭವಿಷ್ಯಕ್ಕೆ ಉಳಿತಾಯವಾಗುವುದಲ್ಲದೆ, ನಿಮ್ಮ ಮಕ್ಕಳಿಗೆ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಅಸಮರ್ಥರಾಗಿರುವಂತಹ ಸ್ಥಿತಿಯಲ್ಲೂ ಮಕ್ಕಳ ಯೋಗಕ್ಷೇಮ ಗಮನಿಸಬಹುದು. ಹೀಗಾಗಿ ಈಗ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್ ಅಗತ್ಯವೆಂದು ತಿಳಿಯಲಾಗಿದೆ.
ಮಾರುಕಟ್ಟೆಯಲ್ಲಿ ಹಲವು ರೀತಿಯಲ್ಲಿ ಚೈಲ್ಡ್ ಪ್ಲ್ಯಾನ್‌ಗಳು ಲಭ್ಯವಿವೆ. ಬಹಳಷ್ಟು ಸ್ಕೀಮುಗಳು, ತಮ್ಮ ಪ್ಲ್ಯಾನ್‌ಗಳ ಸಮರ್ಥನೆಯಲ್ಲಿ ನೂರೆಂಟು ಆಶ್ವಾಸನೆಗಳನ್ನು ಕಂಡು ಪೋಷಕರು ಗಲಿಬಿಲಿಗೊಳ್ಳುತ್ತಾರೆ. ಯಾವ ಚೈಲ್ಡ್ ಪ್ಲ್ಯಾನ್ ತಮಗೆ ಉತ್ತಮವೆಂಬ ಗೊಂದಲದಲ್ಲಿರುತ್ತಾರೆ. ತಮ್ಮ ಸಾಮರ್ಥ್ಯ ಹಾಗೂ ಗುರಿಗೆ ತಕ್ಕಂತೆ ಪಾರಂಪರಿಕ ಅಥವಾ ಯೂನಿಟ್ ಲಿಂಕ್ಡ್ ಪ್ಲ್ಯಾನ್, ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್ ಆರಿಸಿಕೊಳ್ಳಬಹುದು. ಆರಿಸಿಕೊಳ್ಳುವ ಮೊದಲು ಈ ವಿಷಯಗಳನ್ನು ಗಮನಿಸಿ.
ವಿಮೆ ಮಾಡಿಸಿದ ತಾಯಿ ತಂದೆಯರ ಸಾವಿನ ನಂತರ ಮಕ್ಕಳಿಗೆ ಹಣದ ಸಹಾಯ ಸಿಗಬೇಕು.
ಮಕ್ಕಳ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಬೇಕು.
ಮಕ್ಕಳ ಸುರಕ್ಷಿತ ಭವಿಷ್ಯಕ್ಕೆ ಸಾಕಷ್ಟು ಮೊತ್ತದ ಹಣ ಇರಬೇಕು.
ಪಾರಂಪರಿಕ ಚೈಲ್ಡ್ ಪ್ಲ್ಯಾನ್
ಈ ಪ್ಲ್ಯಾನ್‌ನಲ್ಲಿ ವಿಮಾ ಹಣದ ದೊಡ್ಡ ಭಾಗ ಸಾಲದ ಆಧಾರಿತ ಯೋಜನೆಗಳಲ್ಲಿ ಹೂಡಿ ನಿಶ್ಚಿತ ಸಮಯದಲ್ಲಿ ನಿಶ್ಚಿತ ಮೊತ್ತದ ಪೂರೈಕೆಯ ಬಗ್ಗೆ ಗ್ಯಾರಂಟಿ ನೀಡಲಾಗುತ್ತದೆ. ಇದರಲ್ಲಿ ರಿಸ್ಕ್ ಕಡಿಮೆ ಹಾಗೂ ನಿಶ್ಚಿತ ರಿಟರ್ನ್ಸ್ ಸಿಗುವ ಗ್ಯಾರಂಟಿ ಹೆಚ್ಚಾಗಿರುತ್ತದೆ. ತಮಗೆ ಆ ಸಮಯದಲ್ಲಿ ಎಷ್ಟು ಮೊತ್ತದ ಹಣ ಸಿಗುವುದೆಂದು ತಂದೆ ತಾಯಿಯರಿಗೆ ತಿಳಿಯುತ್ತದೆ.
ಯೂನಿಟ್ ಲಿಂಕ್ಡ್ ಪ್ಲ್ಯಾನ್ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವಿರುವ ಪೋಷಕರು ಮಕ್ಕಳಿಗೆ ಯೂನಿಟ್ ಲಿಂಕ್ಡ್ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್ (ಯೂಲಿಪ್) ಪಡೆಯಬಹುದು. ಈ ಪ್ಲ್ಯಾನ್‌ನಲ್ಲಿ ಈಕ್ವಿಟಿ ಮತ್ತು ಸಾಲದ ಬಜಾರ್‌ನಲ್ಲಿ ಹೂಡುತ್ತಾರೆ. ಇಂತಹ ಯೋಜನೆಗಳಲ್ಲಿ ದೀರ್ಘ ಅವಧಿಗೆ (15-20 ವರ್ಷ) ಈಕ್ವಿಟಿಯಿಂದ ಸಾಕಷ್ಟು ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ಸರಿಯಾದ ಆಯ್ಕೆ ಮಾಡಿಕೊಂಡರೆ ಯೂಲಿಪ್ ಪ್ಲ್ಯಾನ್‌ನಿಂದ 15-20 ವರ್ಷಗಳಲ್ಲಿ ನಿಮ್ಮ ಹಣ ಬಹಳಷ್ಟು ವೃದ್ಧಿಯಾಗುತ್ತದೆ.