ಪ್ರತಿ ಮಹಿಳೆಯೂ ತಾಯ್ತನದ ಸುಖ ಹೊಂದಲು ಬಯಸುತ್ತಾಳೆ, ಮಗು ಹುಟ್ಟಿದಾಗ ಮಾತ್ರ ಕುಟುಂಬ ಪರಿಪೂರ್ಣ ಎನಿಸುತ್ತದೆ. ಅದೇ ತರಹ ತನ್ನದೇ ಮಗು ತನ್ನನ್ನು `ಅಪ್ಪ’ ಎಂದು ಕರೆಯಬಾರದೇ ಎಂದು ಪ್ರತಿ ಗಂಡಸೂ ಬಯಸುತ್ತಾನೆ. ಆದರೆ ಸಂತಾನವಿಲ್ಲದ ದಂಪತಿಗಳಿಗೆ ಈ ಬಯಕೆ ಗಗನ ಕುಸುಮವೇನೋ ಅನಿಸುತ್ತದೆ. ದಿನೇದಿನೇ ಹೆಚ್ಚುತ್ತಿರುವ ಇಂಥವರ ಸಂಖ್ಯೆ ನಗರ ಜೀವನದ ಒಂದು ಗಂಭೀರ ಸಮಸ್ಯೆಯಾಗಿದೆ. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, ಮುಖ್ಯವಾಗಿ ಮೆಟ್ರೋಪಾಲಿಟಿನ್ ಮಹಾನಗರಗಳಲ್ಲಿ 8 ಮಂದಿ ದಂಪತಿಗಳಲ್ಲಿ ಒಂದು ಜೋಡಿ ಸಂತಾನಹೀನತೆಯ ಸಮಸ್ಯೆಯಿಂದ ತೊಳಲುತ್ತಾರೆ. ಕಾರಣ ಜೀವನಶೈಲಿಯಲ್ಲಿನ ಬದಲಾವಣೆ, ವಿವಾಹಕ್ಕೆ ಏರುತ್ತಿರುವ ವಯಸ್ಸು, ಧೂಮಪಾನ, ಮಧುಪಾನ, ಕೆಲಸದಲ್ಲಿ ಅತಿಯಾದ ಮಾನಸಿಕ ಒತ್ತಡ ಇತ್ಯಾದಿ. ವೈದ್ಯಕೀಯ ಭಾಷೆಯಲ್ಲಿ, ಬಂಜೆತನ ಎಂದರೆ ದಂಪತಿಗಳು ಮದುವೆಯಾದ 12 ತಿಂಗಳಾದರೂ ಸಂತಾನಭಾಗ್ಯ ಹೊಂದದಿದ್ದರೆ, ಗರ್ಭ ಕಟ್ಟಲು ಆಗದಿದ್ದರೆ, ಆಗ ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಬೇಕು. ಬಂಜೆತನವನ್ನು ಸ್ಥೂಲವಾಗಿ 3 ವಿಧವಾಗಿ ವಿಂಗಡಿಸಲಾಗಿದೆ.

ವೈದ್ಯಕೀಯ ಚಿಕಿತ್ಸೆ : ಫಲವತ್ತತೆಯನ್ನು ಸುಧಾರಿಸಲು ಔಷಧಿಗಳ ಬಳಕೆ. ಅಂದರೆ ಇದರಿಂದ ಗರ್ಭಾಶಯದಲ್ಲಿನ ಅಂಡಗಳ ಗುಣ, ಸಂಖ್ಯೆ ವೃದ್ಧಿಸುತ್ತದೆ. ಗರ್ಭಕೋಶ ಸುಧಾರಿಸುತ್ತದೆ. ಹಾಗೆಯೇ ಗಂಡಸರಲ್ಲಿ ವೀರ್ಯಾಭಿವೃದ್ಧಿ ಆಗುತ್ತದೆ.

ಸರ್ಜಿಕಲ್ ಚಿಕಿತ್ಸೆ : ಲ್ಯಾಪ್ರೋಸ್ಕೋಪಿ (ಕೀ ಹೋಲ್ ‌ಸರ್ಜರಿ)ಯಿಂದ ಮತ್ತು ಹಿಸ್ಟೆರೋಸ್ಕೋಪಿಯಿಂದ ಈ ಚಿಕಿತ್ಸೆ ಮಾಡಲಾಗುತ್ತದೆ. ಮುಖ್ಯವಾಗಿ ಇಂಥ ಸರ್ಜರಿಯನ್ನು ಓವೇರಿಯನ್‌ ಸಿಸ್ಟ್, ಫೈಬ್ರಾಯಿಡ್‌, ಅಡ್ಹೆಷನ್ಸ್ (ಬೆಸೆದ ಅಂಗಗಳ ಸಮಸ್ಯೆ), ಯೂಟಿರೈನ್‌ ಸಿಸ್ಟಮ್ ಮುಂತಾದಕ್ಕೆ ಒದಗಿಸಲಾಗುತ್ತದೆ.

ಅಸಿಸ್ಟೆಡ್ಕನ್ಸೆಪ್ಶನ್‌ : ಇದರಲ್ಲಿ 3 ಬಗೆಯ ಟೆಕ್ನಿಕ್‌, ಅಡಗಿವೆ.

() ಇಂಟ್ರಾ ಯೂಟಿರೈನ್ಇನ್ಸೆಮಿನೇಷನ್‌ : ಈ ಚಿಕಿತ್ಸಾ ವಿಧಾನದಲ್ಲಿ, ಪತಿಯ ವೀರ್ಯವನ್ನು ಶುಚಿಗೊಳಿಸಿ, ಕಾನ್‌ಸಂಟ್ರೇಟ್‌(ಲ್ಯಾಬ್‌ನಲ್ಲಿ) ಮಾಡಿ, ಪತ್ನಿಯ ಗರ್ಭಾಶಯದಲ್ಲಿ ನೋವುರಹಿತ ವಿಧಾನದ ಮೂಲಕ ಇರಿಸಲಾಗುತ್ತದೆ.

() ಇನ್ವಿಟ್ರೋ ಫರ್ಟಿಲೈಸೇಷನ್‌ : ಈ ವಿಧಾನದಲ್ಲಿ, ಮಹಿಳೆಯ ಓವರಿಗಳನ್ನು ಔಷಧಿಯಿಂದ ಸಿಂಚನಗೊಳಿಸಿ, ಅಂಡೋತ್ಪತ್ತಿಗೆ ಅನುಕೂಲ ಮಾಡಲಾಗುತ್ತದೆ. ನಂತರ ಅವನ್ನು ಅಲ್ಟ್ರಾಸೌಂಡ್‌ ಗೈಡೆನ್ಸ್ ನ ವಿಧಾನದ ಮೂಲಕ ಸಂಗ್ರಹಿಸಿ, ಪತಿಯ ವೀರ್ಯದೊಂದಿಗೆ ಕೃತಕವಾಗಿ ಬೆರೆಸಿ ಫಲವತ್ತುಗೊಳಿಸಲಾಗುತ್ತದೆ. ಇದರಿಂದ ಭ್ರೂಣ ರೂಪುಗೊಳ್ಳುತ್ತದೆ. ಈ ರೀತಿ ಸಂಸ್ಕರಿಸಲಾದ ಉತ್ತಮ ಗುಣಮಟ್ಟದ ಭ್ರೂಣಗಳನ್ನು ಮಾತ್ರ ಪತ್ನಿಯ ಗರ್ಭಕೋಶದಲ್ಲಿ ಇರಿಸಲಾಗುತ್ತದೆ. ಈ ಚಿಕಿತ್ಸೆಯನ್ನು ಮುಖ್ಯವಾಗಿ ಫ್ಯಾಲೋಪಿಯನ್‌ ಟ್ಯೂಬ್ಸ್ ಬ್ಲಾಕ್‌ ಆಗಿರುವ, ಟ್ಯೂಬ್‌ ಲೈಗೇಷನ್‌ ಸಮಸ್ಯೆಯುಳ್ಳ, ತೀವ್ರ ಎಂಡೋಮೆಟ್ರೂಯೋಸಿಸ್‌ಗೆ ತುತ್ತಾದ ಮಹಿಳೆಯರಿಗೆ ಶಿಫಾರಸು ಮಾಡಲಾಗುತ್ತದೆ.

() ISSI : ಇಂಟ್ರಾ ಸೈಟೋಪ್ಲಾಸ್ಮಿಕ್‌ ಸ್ಪರ್ಮ್ ಇಂಜೆಕ್ಷನ್‌ ಎನ್ನುವ ಈ ವಿಧಾನದ ಮೂಲಕ ಪುರುಷ ಬಂಜೆತನಕ್ಕೆ ಪರಿಹಾರ ಕಂಡುಹಿಡಿದು ವೀರ್ಯಾಣು ವೇಗ ಹೆಚ್ಚಿಸಿಕೊಳ್ಳಲು, ಕಡಿಮೆ ಸಂಖ್ಯೆಯ ವೀರ್ಯಾಣು ಅಧಿಕಗೊಳಿಸಲು ಉಪಾಯಗಳಿವೆ.

ಮಾನವ ಸಂತಾನ ಫಲವತ್ತತೆಗೆ ಸಂಬಂಧಿಸಿದ ವಿಷಯಗಳಲ್ಲಿ ತಜ್ಞೆಯಾದ ಡಾ. ಶ್ವೇತಾ ಅಗರ್ವಾಲ್ ‌(ಕ್ಲಿನಿಕ್‌ ಡೈರೆಕ್ಟರ್‌ಚೀಫ್ ಇನ್‌ಫರ್ಟಿಲಿಟಿ ಸ್ಪೆಷಲಿಸ್ಟ್, ಸದರ್ನ್‌ ಜೆಮ್ ಹಾಸ್ಪಿಟಲ್, ಬಶೀರ್‌ ಬಾಗ್‌, ಹೈದರಾಬಾದ್‌) ಈ ಕ್ಷೇತ್ರದಲ್ಲಿ 7 ವರ್ಷಗಳಿಗೂ ಅಧಿಕ ಅನುಭವ ಪಡೆದಿದ್ದಾರೆ, ಮುಖ್ಯವಾಗಿ ರೀಪ್ರೊಡಕ್ಟಿವ್ ‌ಎಂಡೋಕ್ರೈನಾಲಜಿ  ಇನ್‌ಫರ್ಟಿಲಿಟಿಯಲ್ಲಿ.  ಜೊತೆಗೆ ಈಕೆ ಪಿಲೆಟ್‌ ಮೆಡಿಕಲ್ ಸೆಂಟರ್‌, ಪೆರ್ತ್‌, ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಡೈರೆಕ್ಟರ್‌ಇನ್‌ಫರ್ಟಿಲಿಟಿ ಸ್ಪೆಷಲಿಸ್ಟ್ ಕೂಡ. ಅಲ್ಲಿ ಹೆಚ್ಚಿನ ನೈಪುಣ್ಯತೆ ಗಳಿಸಿದ ಇವರು ಹೈದರಾಬಾದ್‌ನ ಈ ಆಸ್ಪತ್ರೆಯಲ್ಲಿ ಅದನ್ನು ಶಿಸ್ತಾಗಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಆಕೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಸರಿದೂಗುವ ಇನ್‌ಫರ್ಟಿಲಿಟಿ ಲ್ಯಾಪ್ರೋಸ್ಕೊಪಿಕ್‌ ಸೆಂಟರ್‌ನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಆಕೆಯ ಮಾರ್ಗದರ್ಶನದಲ್ಲಿ ಅನುಭವೀ ವೈದ್ಯರ, ದಾದಿಯರ, ತಂತ್ರಜ್ಞರ, ಸಲಹೆಗಾರರ ತಂಡವೇ ಇದೆ. ಒದಗಿಸಲಾಗುವ ಸೇವೆಗಳು

ಫರ್ಟಿಲಿಟಿ ಸೇವೆಗಳು : ಪುರುಷರು ಮತ್ತು ಮಹಿಳೆಯರಿಗಾಗಿ ಇನ್‌ಫರ್ಟಿಲಿಟಿ ವರ್ಕ್‌ ಅಪ್‌ (ಅಂದರೆ ವೀರ್ಯ ಪರೀಕ್ಷೆ, ಸಂಸ್ಕರಣೆ, ಹಾರ್ಮೋನ್‌ ಪ್ರೊಫೈಲ್‌, ಓವ್ಯೂಲೇಷನ್‌ ಸ್ಟಡೀಸ್‌, ಟ್ಯೂಬ್‌ ಪೇಟೆನ್ಸಿ ಚೆಕ್‌ ಇತ್ಯಾದಿ), ಸ್ಪರ್ಮ್ ರಿಟ್ರೀವ್, ಅಸಿಸ್ಟೆಡ್‌ ಹ್ಯಾಚಿಂಗ್‌, ದಾನಿಗಳಿಂದ ಅಂಡಾಣು, ವೀರ್ಯಾಣು, ಭ್ರೂಣ ಒದಗಿಸುವಿಕೆ, ಬಾಡಿಗೆ ತಾಯ್ತನ (ಸರೋಗೆಸಿ) ಇತ್ಯಾದಿ.

ಗೈನಕಾಲಜಿಕ್ಸೇವೆ : ಓವೇರಿಯನ್‌ ಸಿಸ್ಟೆಕ್ಟಮಿಗಾಗಿ ಲ್ಯಾಪ್ರೋಸ್ಕೋಪಿ ಹಿಸ್ಟೆರೋಸ್ಕೋಪಿ, ಊಫರೆಕ್ಟಮಿ, ಟ್ಯೂಬ್ ರೀಕ್ಯಾನೈಸೇಷನ್‌, ಎಂಡೋಮೆಟ್ರೂಮೇಸಿಸ್‌ ಚಿಕಿತ್ಸೆ, ಎಕ್ಟೋಪಿಕ್‌ ಪ್ರೆಗ್ನೆನ್ಸಿಗಾಗಿ ಚಿಕಿತ್ಸೆ, ಅತ್ಯಧಿಕ ಮುಟ್ಟಿನ ಸ್ರಾವವುಳ್ಳ ಮಹಿಳೆಯರಿಗಾಗಿ ಹಿಸ್ಟೆರೆಕ್ಟಮಿ ಹಾಗೂ ಥರ್ಮಾಚಾಯ್ಸ್ ಥರ್ಮ್‌ ಅಬ್ಲೇಷನ್‌, ಸರ್ವೈಕಲ್ ಕ್ಯಾನ್ಸರ್‌ ಸ್ಕ್ರೀನಿಂಗ್‌, ಜೊತೆಗೆ ಪಿಪಿ ಸ್ಮಿಯರ್‌ ಮತ್ತು ಟೆಸ್ಟಿಂಗ್‌ ಕ್ರಯೋಕಾನಿಸೇಷನ್‌ ಸಹ ಉಂಟು.

ಡಾ. ಶ್ವೇತಾ ಅಗರ್ವಾಲ್‌, “ತಮ್ಮದೇ ಜೈವಿಕ ಸಂತಾನ ಹೊಂದಬೇಕೆಂಬ ಪೋಷಕರ ಆಸೆ ಅತ್ಯಂತ ಸಹಜವಾದುದು. ಮಗು ಮನೆಗೆ ನಂದಾದೀಪ ಇದ್ದಂತೆ, ಮಗು ಹುಟ್ಟಿದಾಗ ಮಾತ್ರ ಕುಟುಂಬ ಪರಿಪೂರ್ಣ ಎನಿಸುತ್ತದೆ. ಹೀಗಾಗಿ ಬಂಜೆತನದ ನಿವಾರಣೆಗೆ ಇಲ್ಲಿ ಅತ್ಯಂತ ಮಹತ್ವ ನೀಡಲಾಗುತ್ತದೆ, ವಯಸ್ಸಿದೆ ಎಂದು ತಡಮಾಡದೆ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ,” ಎನ್ನುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :

ಸದರ್ನ್‌ ಜೆಮ್ ಹಾಸ್ಪಿಟಲ್ (ಲ್ಯಾಪ್ರೋಸ್ಕೋಪಿಕ್‌ ಸೆಂಟರ್‌,) ನಂ.5930/1/7, ಪ್ಯಾಲೇಸ್‌ ಕಾೋನಿ, ಬಶೀರ್‌ ಬಾಗ್‌, ಹೈದರಾಬಾದ್‌-063. ಫೋನ್‌:  040 – 66585555, 8096414440.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ