ಬಾಲಿವುಡ್‌ನಲ್ಲಿ ಇತ್ತೀಚೆಗೆ ಯಾರದಾದರೂ ಅಭಿನಯದಲ್ಲಿ ಪರಿಪಕ್ವತೆ ಬಂದಿದೆ ಎಂದರೆ, ಅದು ಕಂಗನಾ ರಾಣಾವತ್‌ಳಲ್ಲಿ ಮಾತ್ರ. ಆಕೆ ತನ್ನ ಭಾವಪೂರ್ಣ ನಟನೆಯಿಂದ ಒಂದು ಪ್ರತ್ಯೇಕ ಐಡೆಂಟಿಟಿ ಸ್ಥಾಪಿಸಿದ್ದಾಳೆ. ನಟನೆ  ಮಾತ್ರವಲ್ಲದೆ ಈಗ ಕಂಗನಾ ಸಂಕಲನ ಮತ್ತು ಸ್ಕ್ರಿಪ್ಟ್ ರೈಟಿಂಗ್‌ನಲ್ಲೂ ಸಕ್ರಿಯಳಾಗಿದ್ದಾಳೆ. ನ್ಯೂಯಾರ್ಕ್‌ನಲ್ಲಿ ಎಡಿಟಿಂಗ್‌ ಕೋರ್ಸ್‌ ಕಲಿತಳಂತೆ! ಯಾವುದೇ ಚಿತ್ರವಿರಲಿ, ತನ್ನ ಪಾತ್ರದ ಕುರಿತಾಗಿ ಈಕೆ ಸಂಪೂರ್ಣ ತಯಾರಿ ನಡೆಸುತ್ತಾಳೆ. ಹೀಗಾಗಿಯೇ ಸ್ಕ್ಪಿಪ್ಟ್ ರೈಟಿಂಗ್‌ನಲ್ಲೂ ತರಬೇತಿ ಪಡೆದಿದ್ದಾಳೆ. ಕಂಗನಾ ಹೇಳುವುದೆಂದರೆ, ಕಲಾವಿದರಿಗೆ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಪರಿಚಯ ಇರಬೇಕಾದುದು ಅನಿವಾರ್ಯ.

ಬರಲಿದೆ ಹೌಸ್‌ಫುಲ್!

ಜ್ಯಾಕ್ಲಿನ್‌ಳ `ರಾಯಲ್’ ಚಿತ್ರ ಹೇಳಿಕೊಳ್ಳುವಂಥ  ಯಶಸನ್ನೇನೂ ಕಾಣಲಿಲ್ಲವಾದರೂ, ಅವಳ ಲುಕ್ಸ್ ಕುರಿತಾಗಿ ಎಲ್ಲರೂ ಹೊಗಳಿದರು. ಹೀಗಾಗಿಯೇ ಸಾಜಿದ್‌ ಈಕೆಯನ್ನು ನಾಯಕಿಯಾಗಿಸಿ `ಹೌಸ್‌ಫುಲ್’ ತಯಾರಿಗೆ ತೊಡಗಿದ್ದಾರೆ. ಈ ಚಿತ್ರದಲ್ಲಿ ಇವಳೊಂದಿಗೆ ಆ್ಯಮಿ ಜ್ಯಾಕ್ಸನ್‌, ಆ್ಯಲಿ ಅರಾಮ್ ಸಹ ಇರ್ತಾರೆ. ಜ್ಯಾಕ್ಲಿಗೆ ಅಕ್ಷಯ್‌, ಆ್ಯಮಿಗೆ ಅಭಿಷೇಕ್‌ ಹಾಗೂ ಆ್ಯಲಿಗೆ ರಿತೇಶ್ ನಾಯಕರಾಗಿರುತ್ತಾರೆ. ಹಿಂದಿನ 1, 2 ತರಹ ಇದೂ ಹೌಸ್‌ಫುಲ್ ಆಗುತ್ತದೋ ಇಲ್ಲವೋ ಭವಿಷ್ಯವೇ ನಿರ್ಧರಿಸಬೇಕು.

ಹೊಸ ಆ್ಯಕ್ಷನ್‌ ಚಿತ್ರದಲ್ಲಿ ನಾನಾ

ತಮ್ಮ ಡೈಲಾಗ್‌ ಡೆಲಿವರಿ ಹಾಗೂ ಮ್ಯಾನರಿಸಂನಿಂದ ಪ್ರತ್ಯೇಕ ಐಡೆಂಟಿಟಿ ಗಳಿಸಿರುವ ನಾನಾ ಪಾಟೇಕರ್‌ ಇದೀಗ ಹೊಸ ಆ್ಯಕ್ಷನ್‌ ಚಿತ್ರಕ್ಕೆ ಸಜ್ಜಾಗಿದ್ದಾರೆ. ಇವರ `ಅಬ್‌ ತಕ್‌ ಛಪ್ಪನ್‌’ ಚಿತ್ರದ ಸೀಕ್ವೆಲ್ ‌ಆಗಿ ಬರಲಿದೆ `ಅಬ್‌ ತಕ್‌ ಛಪ್ಪನ್‌’. ಈ ಚಿತ್ರದಲ್ಲಿ ನಾನಾ ನಾನಾ ಆ್ಯಕ್ಷನ್‌ಗಳಲ್ಲಿ ಮಿಂಚಲಿದ್ದಾರೆ. ಇದಕ್ಕಾಗಿ ಈತ ರೆಗ್ಯುಲರ್‌ ಆಗಿ ಜಿಮ್ ಗೆ ಹೋಗಿ ಕಸರತ್ತು ನಡೆಸುತ್ತಿದ್ದಾರೆ. ಯಾವುದೇ ಡೂಪ್‌ಗಳಿಲ್ಲದೆ ಎಲ್ಲಾ ಸಾಹಸಗಳನ್ನೂ ಇವರೇ ಮಾಡಿದ್ದಾರೆ. 65ರ ಹರೆಯದ ನಾನಾ ಈ ಚಿತ್ರದಲ್ಲಿ 50ರ ವಯಸ್ಸಿನವರಂತೆ ಕಾಣುತ್ತಿದ್ದಾರೆ. ಅಂಡರ್‌ ವರ್ಲ್ಡ್ ಸ್ಟೋರಿಯ ಈ ಚಿತ್ರದಲ್ಲಿ ನಾನಾ ಭೀ ಮಿಂಚಿದ್ದಾರೆ.

prem-rog

ಇದೆಂಥ ವ್ಯಂಗ್ಯ?

ತಮ್ಮ ಅಭಿನಯದಿಂದ ಒಂದು ಪ್ರತ್ಯೇಕ ವ್ಯಕ್ತಿತ್ವ ರೂಪಿಸಿಕೊಂಡಿರುವ ಕಲಾವಿದ ನಾಜಿರುದ್ದೀನ್‌ ಸಿದ್ದಿಕಿ, ತಮ್ಮ ಹೊಸ ಚಿತ್ರ `ಬದ್ಲಾಪುರ್‌’ನಲ್ಲಿ ಅದ್ಭುತ ಪ್ರತಿಭೆ ಪ್ರದರ್ಶಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರ ಮೇಲೆ ಮಾಡಲಾಗಿರುವ ಕಿಡಿಗೇಡಿ ಕಾಮೆಂಟ್ಸ್ ಇವರನ್ನು ರೊಚ್ಚಿಗೆಬ್ಬಿಸಿದೆ. ಅಸಲಿಗೆ, ಯಾರೋ ಟ್ವಿಟರ್‌ನಲ್ಲಿ, ಇವರ ಫೋಟೋ ಹಾಕಿ ಕಡುಬಡವ, ಎಂಬಂತೆ ಹ್ಯಾಂಡ್‌ ಹಾಕಿದ್ದಾರೆ. ಇದಕ್ಕೆ ಎಷ್ಟೋ ಜನ ವ್ಯಂಗ್ಯವಾಗಿ ಕಮೆಂಟ್‌ ಮಾಡಿದ್ದಾರೆ. ನಾನು ಬಡವ ಇರಬಹುದು, ಆದರೆ ಅದಕ್ಕಾಗಿ ತಲೆ ತಗ್ಗಿಸಿಲ್ಲ. ಹಿಂದೆಲ್ಲ ವಾಚ್‌ಮ್ಯಾನ್‌ ಕೆಲಸ ಸಹ ಮಾಡಿದ್ದೀನಿ, ಇಂದು ನನ್ನ ಸ್ವಪ್ರತಿಭೆಯಿಂದ ಈ ಮಟ್ಟ ಏರಿದ್ದೀನಿ ಎಂದಿದ್ದಾರೆ.

ತಂದೆಗೆ ತಕ್ಕ ಮಗಳು

ಈ ಬಾರಿಯ ವಸಂತ ಋತು  ಅದೇಕೋ ಬಾಲಿವುಡ್‌ನ ಮಂದಿಗೆ ಹಿತಾನುಭವ ನೀಡುತ್ತಿಲ್ಲ. ಮೊದಲು ಅನುಷ್ಕಾಳಿಗೆ `-10′ ಚಿತ್ರದಲ್ಲಿ ಒಂದು ಆಘಾತವಾಯಿತು. ನಂತರದ ಸುದ್ದಿ ಎಂದರೆ ಹಿರಿಯ ನಟ ಅನಿಲ್ ‌ಕಪೂರ್‌ರ ಮಗಳು ಸೋನಂ ಕಪೂರ್‌`ಪ್ರೇಂ ರತನ್‌ ಧನ್‌ ಪಾಯೋ’ ಚಿತ್ರದ ಶೂಟಿಂಗ್‌ ಮಧ್ಯೆ ಧುತ್ತೆಂದು ಕುಸಿದುಬಿದ್ದಳು. ರಾಜಸ್ಥಾನದಲ್ಲಿ ಈ ಚಿತ್ರದ ಹಾಡಿನ ಶೂಟಿಂಗ್‌ ನಡೆಯುತ್ತಿತ್ತು. ಕೆಳಗೆ ಬಿದ್ದ ಈಕೆಯ ಮಂಡಿಗೆ ತೀವ್ರ ಪೆಟ್ಟಾಯಿತು. ಸೋನಂ ಆಗ ರಾಜಸ್ಥಾನಿ ಕಾಸ್ಟ್ಯೂಮ್ಸ್ ಧರಿಸಿ ಸೂತ್ರದ ಗೊಂಬೆಗಳ ಜೊತೆ ಕುಣಿಯುತ್ತಿರುವಂಥ ಹಾಡಿನ ಚಿತ್ರೀಕರಣವಿತ್ತು. ಹೆವಿ ಜ್ಯೂವೆಲರಿ, ಲೆಹಂಗಾ ಕಾರಣ ಸೋನಂ ಕುಸಿದಿದ್ದಳು. ಆದರೆ ಶೂಟಿಂಗ್‌ ನಿಲ್ಲಿಸದೆ ಸಹಕರಿಸಿದಳಂತೆ!

ಮರಳಿ ಬಂದ ಕೋಯಿನಾ

ಐಶ್ವರ್ಯಾ ರೈ, ಸುಷ್ಮಿತಾ ಸೇನ್‌ರಂಥವರು ಬಾಲಿವುಡ್‌ಗೆ ಮರಳಿರುವುದು ಹಳೆಯ ಸಂಗತಿ. ಈ ನಿಟ್ಟಿನಲ್ಲಿ ಇದೀಗ `ಅಪ್ನಾ ಸಪ್ನಾ ಮನಿಮನಿ’ ಚಿತ್ರದ ಖ್ಯಾತಿಯ ಕೋಯಿನಾ ಮಿತ್ರಾ ಮರಳುತ್ತಿದ್ದಾಳೆ. ತನ್ನ ಮೂಗಿನ ಸಮಸ್ಯೆಯಿಂದ ಈಕೆ ಬಾಲಿವುಡ್‌ನಿಂದ ಹಿಂದೆ ಸರಿದಿದ್ದಳು. ಮೂಗಿನ ಮೂಳೆ ಮೇಲೆದ್ದ ಕಾರಣ, ತನ್ನ ಸೌಂದರ್ಯ ಕುಂದಿತೆಂದು ಈಕೆ ಸರ್ಜರಿ ಮಾಡಿಸಿಕೊಂಡು ಈಗ ಬಿಂದಾಸ್‌ ಆಗಿ ಐಟಂಗಳಲ್ಲೂ ಹೆಜ್ಜೆ ಹಾಕುತ್ತಿದ್ದಾಳೆ. ಅಂದಹಾಗೆ ಮೂಗಿನ ಸರ್ಜರಿ ಬಾಲಿವುಡ್‌ಗೆ ಹೊಸದೇನಲ್ಲ. ಅಂದಿನ ಕಾಲದ ಶ್ರೀದೇವಿಯಿಂದ ಇಂದಿನ ಶಿಲ್ಪಾಶೆಟ್ಟಿ, ಅನುಷ್ಕಾ ಶರ್ಮ ಸಹ ಇದನ್ನು ಎದುರಿಸಿದ್ದಾರೆ.

richa-chadda-fhm-8

ಬಾಲಿವುಡ್‌ ನಟಿಯರ ಹೇರ್‌ ಸ್ಟೈಲ್‌

ಅಕ್ಷರಾ ಹಾಸನ್‌ : ಬಾಲಿವುಡ್‌ನ ಲೇಟೆಸ್ಟ್ ಹಾಟ್‌ ಹೇರ್‌ ಸ್ಟೈಲ್ ಎಂದರೆ ಅದು ಅಕ್ಷರಾಳದೇ, ಇದನ್ನು ಪಿಕ್ಸಿ ಶಾರ್ಟ್‌ ಸ್ಟೈಲ್ ಎನ್ನುತ್ತಾರೆ. ತನ್ನ ಮೊದಲ ಚಿತ್ರದಲ್ಲೇ ಅಕ್ಷರಾ ಸುಮಾರು 12 ಸ್ಟೈಲ್‌ಗಳನ್ನು ಬಿಟ್ಟು ಇದನ್ನು ಅಳವಡಿಸಿಕೊಂಡಳಂತೆ. ಹಾಲಿವುಡ್‌ನ ಜೆನಿಫರ್‌ ಲೋಪೇರ್‌ನಂಥವರು ಇದನ್ನು ಫಾಲೋ ಮಾಡ್ತಾರಂತೆ.

ಸೋನಾಕ್ಷಿ : ತನ್ನ `ತೇರ್‌’ ಚಿತ್ರದ ನಂತರ ಈಕೆ ಸಹ ಉದ್ದ ಕೂದಲಿಗೆ ಬೈ ಬೈ ಹೇಳಿ ಶೋಲ್ಡರ್‌ ಲೆಂತ್‌ ಹೇರ್‌ ಕಟ್‌ಗೆ ಶರಣಾಗಿದ್ದಾಳೆ.

ಪ್ರಿಯಾಂಕಾ : ಇತ್ತೀಚೆಗೆ ಈಕೆ ಟ್ವಿಟರ್‌ನಲ್ಲಿ ತನ್ನ ತುಂಡುಗೂದಲಿನ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾಳೆ. ಇದೂ ಸಹ ಶೋಲ್ಡರ್‌ ಲೆಂತ್‌ ಹೇರ್‌ ಸ್ಟೈಲ್ ಆಗಿದೆ.

ಅನುಷ್ಕಾ ಶರ್ಮ : ಇವರುಗಳು ಮಾತ್ರವಲ್ಲದೆ ನಟಿ ಅನುಷ್ಕಾ ಶರ್ಮ ಸಹ `ಪಿ.ಕೆ.’ ಚಿತ್ರದ ಮೂಲಕ ಶಾರ್ಟ್‌ ಹೇರ್‌ ಸ್ಟೈಲ್‌ಗೆ ಬದಲಾಗಿದ್ದಾಳೆ. ಒಟ್ಟಾರೆ `ಶಾರ್ಟ್‌ ಈಸ್‌ ಹಾಟ್‌!’ ಎಂಬಂತಾಗಿದೆ.

ನನಗೆ ಇದೆಲ್ಲ ಹಿಡಿಸದು

ಇತ್ತೀಚಿನ `ಣ್‌ ನಾಕ್‌ ಔಟ್‌’ ಶೋ ಕಾರಣ ರಣವೀರ್‌ಸಿಂಗ್‌, ಅರ್ಜುನ್‌ ಕಪೂರ್‌, ಕರಣ್‌ ಜೋಹರ್‌ಕಿರಿಕರಿ ಉಂಟು ಮಾಡಿದ್ದಾರೆ. ಈ ಶೋ ಕುರಿತು ಬಾಲಿವುಡ್‌ನ ತಾರೆಯರೆಲ್ಲ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಅಮೀರ್‌, ನಾನಾ ಮುಂತಾದವರು ಅರ್ಜುನ್‌, ರಣವೀರ್‌ಗೆ ಈ ಶೋನಲ್ಲಿ ಭಾಗವಹಿಸಿದ್ದಕ್ಕೆ ಚೆನ್ನಾಗಿ ಬೈದರೆ, ಮಹೇಶ್‌ ಭಟ್‌ ಇದನ್ನು ಸಮರ್ಥಿಸಿದ್ದಾರೆ.

ಆದರೆ ಬೇಬೋ ಕರೀನಾ, ತನ್ನನ್ನು ತಾನು ಇದರಿಂದ ದೂರವಿರಿಸಿ ಬುದ್ಧಿವಂತಿಕೆ ಮೆರೆದಿದ್ದಾಳೆ. ಆಕೆ ಇದರ ಕುರಿತು, ನನಗೆ ಇದರಲ್ಲಿ ಆಸಕ್ತಿ ಇಲ್ಲ. ಇದರ ವಿಡಿಯೋ ನೋಡಿ ನನಗೇನೂ ಆಗಬೇಕಿಲ್ಲ, ಈ ಶೋಗಿಂತ ಮುಖ್ಯವಾದ ಇನ್ನೆಷ್ಟೋ ವಿಚಾರಗಳು ನಮ್ಮ ದೇಶಕ್ಕೆ ಬೇಕಿವೆ, ಎನ್ನುತ್ತಾಳೆ.

ಚ್ಯಾರಿಟಿಗಾಗಿ ನಡೆಸಾದ ಈ ಶೋದ ವಿಡಿಯೋ ಸೋಶಿಯಲ್ ಸೈಟ್‌ಗಳಲ್ಲಿ ಕಾಣಿಸಿಕೊಂಡ ನಂತರ ಚರ್ಚೆಗೆ ಮೂಲವಾಯಿತು. ಈ ಶೋನಲ್ಲಿ ರಣವೀರ್‌, ಅರ್ಜುನ್‌ರ ಜೊತೆ ಕರಣ್‌ ಸೇರಿದಂತೆ ಲೂಸ್‌ ಟಾಕ್ಸ್, ಅಶ್ಲೀಲ ಬೈಗುಳ, ಅವಾಚ್ಯ ನುಡಿಗಳಿಂದ ಚೀಪ್‌ಮನರಂಜನೆ ಒದಗಿಸಲಾಯಿತು. ವೀಕ್ಷಕರಲ್ಲಿ ದೀಪಿಕಾ, ಸೋನಾಕ್ಷಿ, ಆಲಿಯಾರಂಥ ಘಟಾನುಘಟಿಗಳು ಎಂಜಾಯ್‌ಮಾಡುತ್ತಿದ್ದುದು ಕಾಂಟ್ರೋವರ್ಸಿಗೆ ಕಾರಣವಾಯ್ತು.

ಪಲ್ಲವಿಯ ಆತ್ಮವಿಶ್ವಾಸ

ಪಲ್ಲವಿ ಹಾಗೂ ಆಯುಷ್ಮಾನ್‌ ಖುರಾನಾರ `ಹಾಯಿಜಾದಾ’ ಕೇವಲ ಹವೆಯಲ್ಲಿ ಹಾರಿಹೋಯಿತು, ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂಥ ಯಾವ ಕಲೆಕ್ಷನ್ನೂ ಇರಲಿಲ್ಲ. ಇಷ್ಟಾದರೂ ನಾಯಕಿ ಪಲ್ಲವಿಯ ಆತ್ಮವಿಶ್ವಾಸ ಒಂದಿಷ್ಟೂ ಕುಂದಿಲ್ಲ. ಆಕೆ  ಚಿತ್ರದ ನಾಯಕಿ ಮಾತ್ರವಲ್ಲದೆ, ಮುಂದಿನ ತನ್ನ ಬಯೋಪಿಕ್‌ ಚಿತ್ರ `ಮಧುಬಾಲಾ’ದಲ್ಲಿಯೂ ನಾಯಕಿ ಆಗಲಿದ್ದಾಳೆ, ಮಧುಬಾಲಾಳ ಪಾತ್ರ ನಿರ್ವಹಿಸುತ್ತಾಳೆ. `ಮೈ ನೇಮ್ ಈಸ್‌ ಖಾನ್‌’ ಚಿತ್ರದಿಂದ ಬಾಲಿವುಡ್‌ಗೆ ಬಂದ ಪಲ್ಲವಿ, ಫಿಲ್ಮಿ ಬ್ಯಾಕ್‌ಗ್ರೌಂಡ್‌ ಇಲ್ಲದವಳು. ಈಗ ಈ ಮಟ್ಟಕ್ಕೇರಲು ಅವಳ ಪ್ರತಿಭೆಯೇ ಕಾರಣ. ಮಧುಬಾಲಾರ ಜೀವನದ ಕಥೆ ಕೇಳಿದ್ದೇನೆ, ಬಹಳ ಇಷ್ಟವಾಯಿತು. ಆಕೆ ಸದಾ ಹಸನ್ಮುಖಿ ವ್ಯಕ್ತಿತ್ವದವರು, ಆದರೆ ಅನೇಕ ಎಡರುತೊಡರಗಳನ್ನು ಕಂಡವರು, ಇಂಥ ಒಂದು ಗಟ್ಟಿ ಪಾತ್ರಕ್ಕಾಗಿ ಬಹಳ ಕಾಯುತ್ತಿದ್ದೆ, ಎನ್ನುತ್ತಾಳೆ.

ಆಲಿಯಾಳ ಆಸೆ

ಹಲವು ವರ್ಷಗಳಿಂದ ನಿಂತುಹೋಗಿದ್ದ ಕರಣ್‌ ಜೋಹರ್‌ರ `ಶುದ್ಧಿ’ ಚಿತ್ರ ಈಗ ಮತ್ತೆ ಸೆಟ್ಟೇರಿದೆ. ಮೊದಲು ಹೃತಿಕ್‌ ಕರೀನಾ ಜೋಡಿ ಇದರಲ್ಲಿ ಕಾಣಿಸಲಿದೆ ಎಂದು ಕರಣ್‌ ಹೇಳಿದ್ದರು. ಅದಾದ ಮೇಲೆ ರಣವೀರ್‌ ದೀಪಿಕಾ ಹೆಸರು ಕೇಳಿಸಿತ್ತು. ಆದರೆ ಅದೂ ನಡೆಯದೆ, ಈಗ ಸಲ್ಮಾನ್‌ ಆಲಿಯಾ ಎಂದು ಫೈನಲ್ ಆಗಿದೆ, ಬಹುಶಃ ಇದು ಬದಲಾಗಲಾರದೇನೋ…. ಇತ್ತೀಚಿನ ಒಂದು ಸಂದರ್ಶನದಲ್ಲಿ ಆಲಿಯಾ ತಾನು ಮೂವರು ಖಾನ್‌ಗಳೊಂದಿಗೂ ಕೆಲಸ ಮಾಡಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಇದರಲ್ಲಿ ಆಲಿಯಾಳ ಒಂದಾಸೆಯಂತೂ ಪೂರೈಸುತ್ತಿದೆ. ವಿಲನ್‌ ಯಾರೂಂದಿರಾ? ಸಂಜಯ್‌ ದತ್ತ್.

kareena

ಇದರರ್ಥ ಪ್ರಿಯಾಂಕಾ ಬಾಲಿವುಡ್‌ಗೇ ಬೈ ಬೈ ಹೇಳಿದಳು ಅಂತ ಅಂದುಕೊಳ್ಳಬೇಡಿ. ಪ್ರಿಯಾಂಕಾ ಒಂದು ಅಮೆರಿಕನ್‌ಶೋಗಾಗಿ ಅಲ್ಲಿಗೆ 3 ತಿಂಗಳ ಕಾಲದ ಶೂಟಿಂಗ್‌ಗಾಗಿ ಹೊರಟಿದ್ದಾಳೆ. 25 ಕೋಟಿಗಳ ಈ ಡೀಲ್‌ಗಾಗಿ ಆಕೆ 3 ತಿಂಗಳು ಲಾಸ್‌ಏಂಜಲೀಸ್‌ನ ಒಂದು ಪಾಶ್‌ ಬಂಗಲೆಯಲ್ಲಿರುತ್ತಾಳೆ. ಸದ್ಯಕ್ಕೆ ಇಲ್ಲೀಗ ಆಕೆ ಫ್ರೀ. ಇವಳ `ಮೇಡಂ ಜೀ’ ಚಿತ್ರ ಮುಂದಕ್ಕೆ ಹೋಗಿದೆ. ಏಕೆಂದರೆ ಮಲ್ಲಿಕಾ ನಿರ್ದೇಶನದ `ಡರ್ಟಿ ಪಾಲಿಟಿಕ್ಸ್’ ಹಾಗೂ `ಮೇಡಂ ಜೀ’ ಚಿತ್ರಗಳ ಕಥಾಹಂದರ ಒಂದೇ ತರಹ ಇದೆಯಂತೆ.

ಅಮೆರಿಕಾದ ಟಿ.ವಿ.ಗಾಗಿ ಕೆಲಸ ಮಾಡುವ ಜೊತೆಗೆ ಪ್ರಿಯಾಂಕಾ 10 ವರ್ಷಗಳ ನಂತರ ಮತ್ತೆ ಅಜಯ್‌ ದೇವಗನ್‌ ಕೂಡ ನಟಿಸಲಿದ್ದಾಳೆ. ಪ್ರಕಾಶ್‌ರ ಇದೀಗ `ಗಂಗಾಜಲ್` ಮಾಡಲಿದ್ದಾರೆ, ಇದು ಮಹಿಳಾಪ್ರಧಾನ ಚಿತ್ರವಾಗಲಿದೆ. ಇದರಲ್ಲಿ ಪ್ರಿಯಾಂಕಾ ಲೇಡಿ ಇನ್‌ಸ್ಪೆಕ್ಟರ್‌ ಆಗಲಿದ್ದಾಳೆ. ಉತ್ತರ ಪ್ರದೇಶದ ಮರಳು ಮಾಫಿಯಾ ವಿರುದ್ಧ ಹೋರಾಡಿದ ಧೀರ ಮಹಿಳೆ  ದುರ್ಗಾಶಕ್ತಿ ನಾಗ್‌ಪಾಲ್‌ರ ನೈಜಕಥೆಯೇ ಈ ಚಿತ್ರಕ್ಕೆ ಸ್ಛೂರ್ತಿಯಂತೆ!

ಕ್ಯಾಬರೆಗೂ ಸೈ ಎಂದ ರಿಚಾ

`ಗ್ಯಾಂಗ್ಸ್ ಆಫ್‌ ವಾಸೆಪುರ್‌’ ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿ ಪಡೆದ ರಿಚಾ ಚಡ್ಡಾಳಿಗೆ, ಪೂಜಾ ಭಟ್‌ಳ `ಕ್ಯಾಬರೆ’ ಚಿತ್ರದಲ್ಲಿ ಟೈಟಲ್ ರೋಲ್‌ನಲ್ಲಿ ಮಿಂಚುವ ಅವಕಾಶ. ಕಳೆದ 2 ವರ್ಷಗಳಿಂದ ಪೂಜಾ ಈ ಪ್ರಧಾನ ಕ್ಯಾಬರೆ ನರ್ತಕಿಯ ಪಾತ್ರಕ್ಕಾಗಿ ಬಹಳ ಹುಡುಕಾಡಿದಳಂತೆ. ಕೊನೆಗೆ ಆ ಭಾಗ್ಯ ಹೊಸಬಳಾದ ರಿಚಾಳಿಗೇ ದೊರಕಿತು. ತನ್ನ ಚಿತ್ರದ ನಾಯಕಿಗೆ ಬೇಕಾದ ರೈಟ್‌ ಸೆಕ್ಸ್ ಅಪೀಲ್ ‌ಹಾಗೂ ದೇಶೀಯ ಸೊಗಡು ಎರಡೂ ರಿಚಾಳಲ್ಲಿದ್ದುದರಿಂದ ಅವಳೇ ಸರಿ ಎಂದು ಪೂಜಾ ನಿರ್ಧರಿಸಿದಳಂತೆ. ಈ ಚಿತ್ರಕ್ಕಾಗಿ ರಿಚಾ ಸಹ ಫುಲ್‌ಜೋಶ್‌ನಲ್ಲಿ ತಯಾರಿ ನಡೆಸಿದ್ದಾಳಂತೆ. ಒಂದು ದೊಡ್ಡ ಬ್ರೇಕ್‌ ನಂತರ ಈ ಪಾತ್ರ ಸಿಕ್ಕಿದೆ, ನನ್ನ ಡ್ಯಾನ್ಸ್ ಇಲ್ಲಿ ಎಲ್ಲರನ್ನೂ ಮರುಳು ಮಾಡಲಿದೆ ಎಂದು ಛಾಲೆಂಜ್‌ ಒಡ್ಡುತ್ತಾಳೆ.

ವಿಭಾಳ ಬಿಕಿನಿ ಲುಕ್ಸ್

ಕಲರ್ಸ್‌ ಚ್ಯಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ `ಬಾಲಿಕಾ ವಧು’ ಧಾರಾವಾಹಿಯ ಸುಗುಣಾ ನೆನಪಿದ್ದಾಳಷ್ಟೆ? ಈ ಪಾತ್ರಧಾರಿಯೇ ವಿಭಾ ಆನಂದ್‌. ಇದರಲ್ಲಿ ಸದಾ ಮುಗ್ಧ, ಹಳ್ಳಿಹುಡುಗಿಯಂತೆ ಕಾಣಿಸುತ್ತಿದ್ದ ವಿಭಾ ಇದೀಗ ಸಿನಿಮಾಗಳಲ್ಲಿ ಶೈನಿಂಗ್‌ ಬಿಕಿನಿಗಳಲ್ಲಿ ಮಿಂಚುತ್ತಿದ್ದಾಳೆ! ಇದರಿಂದ ಹುಬ್ಬೇರಿಸಿದ ಧಾರಾವಾಹಿ ನಿರ್ಮಾಪಕ ನಿರ್ದೇಶಕರಿಗೆ ಸಡ್ಡು ಹೊಡೆಯುವ ವಿಭಾ, ಒಂದು ಟ್ರಿಪ್‌ಗಾಗಿ ಇಂಥ ಡ್ರೆಸ್‌ ಧರಿಸಿ ನಂತರ ಅದನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಅದರಿಂದಾಗಿ ಸಿನಿಮಾಗಳಲ್ಲಿ ಆಧುನಿಕ ಶೈಲಿಯಲ್ಲಿ ಮಿಂಚುತ್ತಿದ್ದೇನೆ, ಎಷ್ಟು ದಿನ ಅಂತ ಗಂಗಮ್ಮ ಗೌರಮ್ಮನಾಗಿಯೇ ಇರಲು ಸಾಧ್ಯ? ಎಂದು ಪ್ರಶ್ನಿಸುತ್ತಾಳೆ.

raja-mar

ಪಂಜಾಬಿ ಚಿತ್ರಗಳಲ್ಲಿ ಗೌಹರ್

ಬಿಗ್‌ಬಾಸ್‌ ಶೋನಲ್ಲಿ ಕೆನ್ನೆಗೆ ಛಟೀರ್‌ ಎಂದು ಹೊಡೆಸಿಕೊಂಡು ದೊಡ್ಡ ಹುಯಿಲೆಬ್ಬಿಸಿದ ಗೌಹರ್‌ ಖಾನ್‌ಳಿಗೆ ಬಾಲಿವುಡ್‌ ಮಣೆ ಹಾಕಲೇ ಇಲ್ಲ, ಬದಲಿಗೆ ಪಂಜಾಬಿ ಚಿತ್ರಗಳಲ್ಲಿ ಭ್ಲಿ ಭ್ಲಿ ಕುಣಿಯುವ ಪಾತ್ರ ಸಿಕ್ಕಿದೆ. ಆಕೆ ಇತ್ತೀಚೆಗಷ್ಟೇ ಗಾಯಕ, ನಟ ಜಸ್ಸಿ ಗಿಲ್ ಜೊತೆ ಪಂಜಾಬಿ ಚಿತ್ರಕ್ಕೆ ಸಹಿ ಹಾಕಿದ್ದಾಳೆ. ಅವಳಿಗೆ ಪಂಜಾಬಿ ಕಲಿಸುವ ಜವಾಬ್ದಾರಿಯೂ ಅವನದೇ! ಇದೊಂದು ಅಪ್ಪಟ ರೊಮ್ಯಾಂಟಿಕ್‌ ಚಿತ್ರವಾಗಿದ್ದು, ಪಾಲಿಗೆ ಬಂದದ್ದೇ ಪಂಜಾಮೃತ ಎಂಬಂತಾಗಿದೆ ಇವಳಿಗೆ. ಬಿಗ್‌ಬಾಸ್‌ನ ರಗಳೆಯಿಂದ ತಾನು ರಾತ್ರೋರಾತ್ರಿ ಬಾಲಿವುಡ್‌ನ ಸ್ಟಾರ್‌ ಆಗುತ್ತೇನೆ ಎಂದು ಕನಸು ಕಂಡಿದ್ದವಳಿಗೆ ಈಗ ವಾಸ್ತವದ ಅರಿವಾಗಿದೆ.

ಕಿರುತೆರೆಯಲ್ಲಿ `ಪ್ರೇಮ್ ರೋಗ್‌’

ಬಾಲಿವುಡ್‌ನ ಹಲವಾರು ಹಳೆಯ ಚಿತ್ರಗಳನ್ನು ಕಿರುತೆರೆಗೆ ತೆಗೆದುಕೊಳ್ಳುವುದು ಹೊಸದೇನಲ್ಲ. `ಸೀತಾ ಔರ್‌ ಗೀತಾ’ ಟಿವಿಯಲ್ಲಿ ಫ್ಲಾಪ್‌ ಎನಿಸಿದ್ದರೂ, 70ರ ದಶಕದ ಪದ್ಮಿನಿ ರಿಶಿಯ ಸೂಪರ್‌ ಹಿಟ್‌ ಚಿತ್ರ `ಪ್ರೇಮ್ ರೋಗ್‌’ ಇದೀಗ ಹೊಸ ಧಾರಾವಾಹಿಯಾಗಿ ಮೂಡಿಬರಲಿದೆ. `ಉತರನ್‌’ ಖ್ಯಾತಿಯ ನಿರ್ದೇಶಕ ಪಿಂಟೋ ಗುಹಾ ಇದರ ಹೊಣೆ ಹೊತ್ತಿದ್ದಾರೆ.

ರಣಬೀರ್‌ನ ಫ್ಯಾನ್‌ ಮೃಣಾಲ್ ‌

ಸ್ಟಾರ್‌ ಟಿವಿಯ ಖ್ಯಾತ ಧಾರಾವಾಹಿ `ಪ್ರೈವೇಟ್‌ ಇನ್‌ಸ್ಪೆಕ್ಟರ್‌’ನ ನಾಯಕ ಮೃಣಾಲ್‌, ಇತ್ತೀಚೆಗೆ ರಣಬೀರ್‌ನ ದೊಡ್ಡ ಫ್ಯಾನ್‌ ಆಗಿ ಸದಾ ಅವನನ್ನು ಹೊಗಳುತ್ತಿರುತ್ತಾನೆ. ಅವನ ಪ್ರಕಾರ, ನಾನು ಹಲವಾರು ಮಹಾನ್‌ ತಾರೆಯರ ಜೊತೆ ನಟಿಸಿದ್ದೇನೆ, ಆದರೆ ರಣಬೀರ್‌ನೊಂದಿಗಿನ ಅನುಭವ ನಿಜಕ್ಕೂ ಅನುಪಮವಾದುದು. ಅದಕ್ಕೆ ಕಾರಣ ಶೂಟಿಂಗ್‌ಗೆ ಬಂದಾಗೆಲ್ಲ ರಣಬೀರ್‌ಎಲ್ಲರೊಂದಿಗೆ ಹೊಂದಿರುವ ಸ್ನೇಹಮಯಿ ಸ್ವಭಾವ.

ಅವಳಲ್ಲದಿದ್ದರೆ ಇವಳು!

`ಬಿಗ್‌ ಬಾಸ್‌’ನಲ್ಲಿ ಭಾಗವಹಿಸಿ ಸದಾ ಒಂದಿಲ್ಲೊಂದು ಕಿರೀಕ್‌ ಮಾಡಿಕೊಳ್ಳುತ್ತಿದ್ದ ನಟ ರಾಜ ಚೌಧರಿ ಇದೀಗ 2ನೇ ಮದುವೆ ಆಗಿದ್ದಾನೆ. 1998ರಲ್ಲಿ ಈತ ಅದೇ ಶೋನ ಪ್ರತಿಸ್ಪರ್ಧಿ ಶ್ವೇತಾ ತಿವಾರಿಯ ಕೈ ಹಿಡಿದಿದ್ದ, ಆದರೆ ಅವರ ದಾಂಪತ್ಯ ಮುರಿದುಬಿತ್ತು. ಹೀಗಾಗಿ ಶ್ವೇತಾ 2007ರಲ್ಲಿ ಆತನಿಂದ ವಿಚ್ಛೇದನ ಪಡೆದಳು. ನಂತರ 2013ರಲ್ಲಿ ಅಭಿನವ್ ಕೊಹ್ಲಿಯ ಕೈಹಿಡಿದಳು. ಹೀಗಾಗಿ 2015ರಲ್ಲಿ ರಾಜ ಮರುಮದುವೆಯಾದ. ವಿಡಂಬನೆ ಎಂದರೆ ಆತನ 2ನೇ ಹೆಂಡತಿಯ ಹೆಸರೂ ಶ್ವೇತಾನೇ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ