ಸೌಂದರ್ಯ ಸಹಜವಾಗಿದ್ದಷ್ಟೂ ಆಕರ್ಷಕವಾಗಿ ಕಾಣುತ್ತದೆ. ಬೇಸಿಗೆಯಲ್ಲೂ ನ್ಯಾಚುರಲ್ ಲುಕ್ ಬಯಸುವಿರಾದರೆ ಮಿನರಲ್ ಮೇಕಪ್ ಮಾಡಿಕೊಳ್ಳಿ. ಅದು ನಿಮಗೆ ಫ್ರೆಶ್ ಮತ್ತು ನ್ಯಾಚುರಲ್ ಲುಕ್ ಕೊಡುತ್ತದೆ. ಮಿನರಲ್ ಮೇಕಪ್‌ನೊಂದಿಗೆ ಹೇರ್ ಸ್ಟೈಲ್‌ಕೂಡ ಡಿಫರೆಂಟ್ ಆಗಿದ್ದರೆ ನಿಮ್ಮ ಸೌಂದರ್ಯಕ್ಕೆ 4 ಗರಿ ಮೂಡಿಸಿದಂತಾಗುತ್ತದೆ.
ಮಿನರಲ್ ಮೇಕಪ್ ಹೇಗೆ ಮಾಡಿಕೊಳ್ಳುವುದೆಂದು ಪರ್ಲ್ ಅಕಾಡೆಮಿಯ ಮೇಕಪ್ ಎಕ್ಸ್ ಪರ್ಟ್ ಪರಮ್ ಜೀತ್ ಸೋನಿ ಹೇಳುತ್ತಾರೆ. ಎಲ್ಲಕ್ಕೂ ಮೊದಲು ಫೇಸ್‌ನ್ನು ಕ್ಲೀನ್ ಮಾಡಿಕೊಳ್ಳಲು ಸಿ.ಟಿ.ಎಂ. ಅಂದರೆ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಮಾಡಿಕೊಳ್ಳಿ. ನಂತರ ವೆಟ್ ಟಿಶ್ಶೂನಿಂದ ಮುಖ ಸ್ವಚ್ಛಗೊಳಿಸಿ ಪ್ರೈಮರ್ ಹಚ್ಚಿ. ಈ ಪ್ರೈಮರ್ ಮುಖದ ಮೇಲೆ ಬಹಳ ಹೊತ್ತಿನವರೆಗೆ ಇರುತ್ತದೆ. ಪ್ರೈಮರ್ ಕ್ರೀಮಿ ಮತ್ತು ಶೈನಿಂಗ್ ಆಗಿ ಇರಲಿ. ಅದನ್ನು ಬೆರಳುಗಳಿಂದ ಮುಖಕ್ಕೆ ಹಚ್ಚಿ. ಅದು ಬೆರಳುಗಳಿಂದ ಚೆನ್ನಾಗಿ ಸ್ಪ್ರೆಡ್ ಆಗುತ್ತದೆ.
ಈಗ ಡಾರ್ಕ್ ಸರ್ಕಲ್ ಏರಿಯಾವನ್ನು ಡೀಪ್ ಆರೆಂಜ್ ಕ್ರೈಲಾನ್ ಡಿ 34 ಕನ್ಸೀಲರ್‌ನಿಂದ ಕನ್ಸೀಲ್ ಮಾಡಿ. ಇದು ಶೇ.90ರಷ್ಟು ಅಂಡರ್ ಐಸ್ ಮತ್ತು ಪೇರ್ ಹೆಡ್‌ನ್ನು ಕನ್ಸೀಲ್ ಮಾಡುತ್ತದೆ. ಈಗ 626 ಸಿ ಮತ್ತು ಬಿ ಬೇಸ್‌ನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಬೇಸ್ ನಂತರ ಕ್ರೀಂ ಬ್ಲಶ್ ಚೀಕ್ ಬೋನ್‌ಗಳ ಮೇಲೆ ಬೆರಳುಗಳಿಂದ ತಪತಪನೆ ಹಚ್ಚಿ. ಅದರಿಂದ ಅದು ಬಹಳ ಹೊತ್ತು ನಿಲ್ಲುತ್ತದೆ. ಫೇರ್ ಲುಕ್ ಕೊಡಲು ಡಿಯೋ ವೇರ್‌ನ ಫೌಂಡೇಶನ್ ಹಚ್ಚಿ. ಬ್ರಶ್‌ನಿಂದ ಮರ್ಜ್ ಮಾಡಿ. ನಂತರ ಕ್ರೈಲಾನ್‌ನ ಪಿ 5 ಡರ್ಮಾ ಲೂಸ್ ಪೌಡರ್ ಹಚ್ಚಿ. ಅದನ್ನು ಚಿನ್‌ನಿಂದ ಶುರುಮಾಡಿ ಪಫ್‌ನಿಂದ ತಪತಪನೆ ತಟ್ಟುತ್ತಾ ಮೇಲ್ಗಡೆ ಒಯ್ಯಿರಿ. ಈಗ ಬ್ರಶ್‌ನಿಂದ ಹೆಚ್ಚುರಿ ಪೌಡರ್ ತೆಗೆದುಬಿಡಿ. ನಂತರ ಡರ್ಮಾ ಫಿಕ್ಸ್ ಚರ್ ಸ್ಪ್ರೇ ಮಾಡಿ ಬೇಸ್‌ನ್ನು ಲಾಕ್ ಮಾಡಿ.
ಐಸ್ ಮೇಕಪ್
ಐಸ್ ಮೇಕಪ್ ಮಾಡುವ ಮೊದಲು ಕಣ್ಣುಗಳ ಮೇಲೆ ಲೂಸ್ ಪೌಡರ್ ಹಚ್ಚಿ. ನಂತರ ಕ್ರೈಲಾನ್‌ನ ರೈನ್ ಬೋ ಶ್ಯಾಡೋನಲ್ಲಿ ಗೋಲ್ಡನ್ ಶ್ಯಾಡೋ ಬೆರಳುಗಳಿಂದ ಹಚ್ಚಿ. ಈಗ ಹೈಲೈಟರ್ ಗೋಲ್ಡ್ ನಲ್ಲಿ ಪಿಂಕ್ ಶ್ಯಾಡೋ ಮಿಕ್ಸ್ ಮಾಡಿ ಹಚ್ಚಿ. ನಂತರ ಬ್ರೋಸ್‌ನ್ನು ಬ್ರಶ್‌ನಿಂದ ಕ್ಲೀನ್ ಮಾಡಿ ಲೈನರ್ ಪೆನ್ಸಿಲ್ ಹಚ್ಚಿ. ವಾಟರ್ ಲೈನ್ ಏರಿಯಾದಲ್ಲಿ ಕಾಜಲ್ ಹಚ್ಚಿ. ನಂತರ ಮಸ್ಕರಾ ಹಚ್ಚಿ. ಐ ಲ್ಯಾಶಸ್‌ನ್ನು ಕರ್ಲ್ ಮಾಡಿ. ಸೀಲರ್ ಹಚ್ಚು ಮೊದಲು ಅದರಲ್ಲಿ ಗ್ರೀನ್ ಶ್ಯಾಡೋ ಸೇರಿಸಿ ನಂತರ ಬ್ರಶ್‌ನಿಂದ ಹಚ್ಚಿ.ಕಾಂಟೂರಿಂಗ್ ಫೇಸ್‌ಗೆ ಶಾರ್ಪ್ ಲುಕ್ ಕೊಡಲು ನೋಸ್, ಪೇರ್ ಹೆಡ್ ಮತ್ತು ಚಿನ್‌ನ ಡಾರ್ಕ್ ಬೇಸ್‌ನೊಂದಿಗೆ ಕಾಂಟೂರಿಂಗ್ ಮಾಡಿ. ಚೀಕ್ಸ್ ಮೇಲೆ ಪಿಂಕ್ ಕಲರ್‌ನ ಶ್ಯಾಡೋ ಹಚ್ಚಿ ಮತ್ತು ಬಾಬಿ ಬ್ರೌನ್‌ನ ಶಿಮರ್ ಬ್ರಿಕ್ ಶೈನರ್ ಹಚ್ಚಿ.
ಲಿಪ್ ಮೇಕಪ್
ಮೊದಲು ಲಿಪ್ ಪೆನ್ಸಿಲ್‌ನಿಂದ ತುಟಿಯ ಮೇಲೆ ಔಟ್‌ಲೈನ್ ಮಾಡಿಕೊಳ್ಳಿ. ತುಟಿಗಳು ತೆಳುವಾಗಿದ್ದರೆ ಔಟ್ ಲೈನ್ ಕೊಂಚ ಹೊರಗೆ ಬರುವಂತಿರಲಿ. ತುಟಿಗಳು ದಪ್ಪಾಗಿದ್ದರೆ ಒಳಭಾಗಕ್ಕೆ ಬರುವಂತೆ ಮಾಡಿ. ನಂತರ ಮ್ಯಾಕ್‌ನ ಹಾಟ್ ಪಿಂಕ್ ಕಲರ್ ಲಿಪ್‌ಸ್ಟಿಕ್ ಹಚ್ಚಿ ಮತ್ತು ಇದರ ಮೇಲೆ ಲಿಪ್ ಕೋಡ್ ಲಿಪ್‌ಸ್ಟಿಕ್ ಸೀಲರ್ ಹಚ್ಚಿ.ಮೇಕಪ್‌ನ್ನು ಫಿಕ್ಸ್ ಮಾಡಲು ಡರ್ಮಾ ಫಿಕ್ಸ್ ಚರ್ ಸ್ಪ್ರೇ ಮಾಡಿ.
ಡಿಫರೆಂಟ್ ಹೇರ್‌ಸ್ಟೈಲ್
ಮೇಕಪ್‌ನೊಂದಿಗೆ ಹೇರ್‌ಸ್ಟೈಲ್ ಕೂಡ ಸ್ಟೈಲಿಶ್ ಆಗಿದ್ದಾಗಲೇ ಯಾವುದೇ ಮುಖದ ಸೌಂದರ್ಯ ಚೆನ್ನಾಗಿರುತ್ತದೆ. ಇಲ್ಲಿ ಎರಡು ವಿಶೇಷ ಹೇರ್‌ಸ್ಟೈಲ್‌ಗಳ ಬಗ್ಗೆ ಪರ್ಲ್ ಅಕಾಡೆಮಿಯ ಮೇಕಪ್ ಎಕ್ಸ್ ಪರ್ಟ್ ಪರಮಜೀತ್ ಸೋನಿ ಹೀಗೆ ಹೇಳುತ್ತಾರೆ.
ನಾಟ್ ಹೇರ್‌ಸ್ಟೈಲ್
ಕೂದಲನ್ನು ಬಾಚಿ 8 ಇಂಚು ದೂರದಿಂದ ಸ್ಪ್ರೇ ಮಾಡಿ. ನಂತರ ಚೆನ್ನಾಗಿ ಬಾಚಿ. ಈಗ ಫ್ರಂಟ್‌ನಿಂದ ಇಯರ್ ಟು ಇಯರ್ ಪಾರ್ಟಿಂಗ್ ಮಾಡಿ. ಕೆಳಗಿನ ಕೂದಲನ್ನು ಬಿಟ್ಟು ಮಧ್ಯದ ಕೂದಲನ್ನು ಪೋನಿ ಮಾಡಿ. ಬ್ಲ್ಯಾಕ್ ಕಲರ್‌ನ ದೊಡ್ಡ ಬ್ಯಾಂಡ್ ಪೋನಿಯಲ್ಲಿ ಸಿಕ್ಕಿಸಿ ಜಡೆಯ ಪಿನ್‌ನಿಂದ ಸೆಟ್ ಮಾಡಿ ಎತ್ತರ ಮಾಡಿ.
ಈಗ ಪೋನಿಯ ಕೂದಲನ್ನು ಬೇರೆ ಬೇರೆ ಸೆಕ್ಷನ್ ಮಾಡಿ ಸ್ಪ್ರೇ ಮಾಡಿ ಮತ್ತು ಒಂದು ಭಾಗವನ್ನು ನಾಟ್ ಪೋನಿಯ ಬಳಿಯೇ ಪಿನ್‌ನಿಂದ ಸೆಟ್ ಮಾಡಿ. ನಂತರ ಹೀಗೆಯೇ ಪೋನಿಯ ಒಂದೊಂದು ಜುಟ್ಟನ್ನೂ ಸೆಟ್ ಮಾಡಿ. ಈಗ ಕೆಳಗಿನ ಕೂದಲನ್ನು 2 ಸೆಕ್ಷನ್ ಮಾಡಿ ಬ್ಯಾಕ್ ಕೂಂಬಿಂಗ್ ಮಾಡಿ ಫಿನಿಶಿಂಗ್ ಕೊಟ್ಟು ವಿರುದ್ಧ ಭಾಗದಲ್ಲಿ ಪಿನ್‌ನಿಂದ ಸೆಟ್ ಮಾಡಿ. ಪೋನಿಯ ಕೆಳಗೆ, ಸೈಡ್‌ನ ಕೂದಲಿಗೂ ಸ್ಪ್ರೇ ಮಾಡಿ ಮತ್ತು ಅವಕ್ಕೂ ಗಂಟು ಹಾಕಿ ಪೋನಿಯ ಬಳಿ ಸೆಟ್ ಮಾಡಿ.
ಈಗ ಫ್ರಂಟ್ ಲುಕ್ ಮಾಡಿ. ಪೇರ್ ಹೆಡ್ ಅಗಲವಾಗಿದ್ದರೆ ಪೇರ್ ಹೆಡ್‌ನ್ನು ಕವರ್ ಮಾಡಿ ಸೈಡ್‌ನಲ್ಲಿ ಬೈತಲೆ ತೆಗೆದು ಸ್ಟೈಲ್ ಮಾಡಿ. ಮಧ್ಯದ ಕೂದಲನ್ನು ಬಿಟ್ಟು 4 ಭಾಗಗಳನ್ನು ತೆಗೆದುಕೊಂಡು ಹಗುರವಾಗಿ ಜಡೆ ಹಾಕಿ. ನಂತರ ಜುಟ್ಟಿನ ಒಂದು ತುದಿ ಹಿಡಿದು ಲೂಸ್ ಮಾಡಿಕೊಳ್ಳಿ ಮತ್ತು ಜಡೆಯಲ್ಲಿ ಪಿನ್‌ನಿಂದ ಸೆಟ್ ಮಾಡಿ. ಉಳಿದ ಜುಟ್ಟನ್ನು ಬನ್‌ನಲ್ಲಿ ಸಿಕ್ಕಿಸಿ. ಇನ್ನೊಂದು ಕಡೆಯೂ ಹೀಗೆಯೇ ಗಂಟು ಹಾಕಿ ಗಂಟನ್ನು ಲೂಸ್ ಮಾಡಿ ಪಿನ್‌ನಿಂದ ಸೆಟ್ ಮಾಡಿ. ಮುಂದಿನ ಕೂದಲನ್ನು ಬ್ಯಾಕ್ ಕೂಂಬಿಂಗ್ ಮಾಡಿ. ಮುಖದ ಮೇಲೆ ಟಿಶ್ಶೂ ಪೇಪರ್ ಇಟ್ಟು ಫ್ರೆಂಟ್‌ನಲ್ಲಿ ಸಾಫ್ಟ್ ಆಗಿ ಸ್ಪ್ರೇ ಮಾಡಿ ಮತ್ತು ಮುಂದೆ ಉಳಿದ ಕೂದಲನ್ನು ಫ್ಲ್ಯಾಟ್ ಮಾಡಿ ಪಿನ್‌ನಿಂದ ಸೆಟ್ ಮಾಡಿ. ನಂತರ ಹೇರ್ ಆ್ಯಕ್ಸೆಸರೀಸ್ ಸಿಕ್ಕಿಸಿ. ಬಾಬ್ ಪಿನ್ ಕ್ರಾಸ್ ಸಿಕ್ಕಿಸಿ ಲಾಕ್ ಮಾಡಿ.
ಲೋ ವಿತ್ ಬನ್
ಮುಂದಿನ ಕೂದಲನ್ನು ಬಿಟ್ಟು ಹಿಂದಿನ ಕೂದಲನ್ನು ಕೂಂಬಿಂಗ್ ಮಾಡಿ. ಟಾಪ್‌ನ ಕೂದಲಿಗೆ ಸ್ಪ್ರೇ ಮಾಡಿ ಬ್ಯಾಕ್ ಕೂಂಬಿಂಗ್ ಮಾಡಿ ಮತ್ತು ಕೂದಲಿನ ಮೇಲಿನ ಲೇಯರ್ ಮೇಲೆ ಸಾಫ್ಟ್ ಆಗಿ ಸ್ಪ್ರೇ ಮಾಡಿ. ಮುಂದಿನ ಸೆಕ್ಷನ್ ತೆಗೆದುಕೊಂಡು ಕ್ಲಾಕ್ ವೈಸ್ ಮತ್ತು ಆ್ಯಂಟಿ ಕ್ಲಾಕ್ ವೈಸ್ ಆಗಿ ಟ್ವಿಸ್ಟ್ ಮಾಡಿ. ಹೀಗೆ ಮಾಡುತ್ತಾ ಹಿಂದಿನವರೆಗೆ ತೆಗೆದುಕೊಂಡು ಹೋಗಿ. ಕೊನೆಯಲ್ಲಿ ರಬ್ಬರ್ ಬ್ಯಾಂಡ್ ಸಿಕ್ಕಿಸಿ.
ಇನ್ನೊಂದು ಕಡೆಯೂ ಹೀಗೆಯೇ ಮಾಡಿ. ನಂತರ ಎರಡೂ ಗಂಟುಗಳನ್ನು ಹಿಂದೆ ತಂದು ಪಿನ್‌ನಿಂದ ಸೆಟ್ ಮಾಡಿ. ಕೆಳಗಿನ ಕೂದಲನ್ನು ಸಾಫ್ಟ್ ಆಗಿ ಬ್ಯಾಕ್ ಕೂಂಬಿಂಗ್ ಮಾಡಿ. ಈಗ ಎಕ್ಸ್ ಟ್ರಾ ಲಾರ್ಜ್ ನೆಟ್ ತೆಗೆದುಕೊಂಡು ಪಿನ್‌ನಿಂದ ಸೆಟ್ ಮಾಡಿ ಮತ್ತು ಬ್ಯಾಕ್ ಕೂಂಬಿಂಗ್‌ನ ಕೂದಲನ್ನು ನೆಟ್‌ನಲ್ಲಿ ಹಾಕಿ ಲಾಕ್ ಮಾಡಿ. ನಂತರ ಕೈಗಳಿಂದ ಈ ನೆಟ್‌ನಲ್ಲಿ ಕೂದಲನ್ನು ಹಾಕಿ ಹರಡಿ.
ಈಗ ಆರ್ಟಿಫಿಶಿಯಲ್ ಕೂದಲಿನ ಜುಟ್ಟು ತೆಗೆದುಕೊಂಡು ಅದನ್ನು ಕ್ರೋಸಿಯಾ ಸ್ಟೈಲ್ ಮಾಡಿ ಜಡೆಯ ಮೇಲೆ ಪಿನ್‌ನಿಂದ ಸಿಕ್ಕಿಸಿ. ಕಿವಿಯ ಮೇಲೆ ಬಿಟ್ಟಿರುವ ಕೂದಲಿಗೆ ಸ್ಪ್ರೇ ಮಾಡಿ ಬ್ಯಾಕ್ ಕೂಂಬಿಂಗ್ ಮಾಡಿ. ಆಮೇಲೆ ಅವನ್ನು ಟ್ವಿಸ್ಟ್ ಮಾಡಿ. ನಂತರ ಅವನ್ನು ಸಡಿಲಗೊಳಿಸಿ ಫ್ರಂಟ್ ಜಡೆಯ ಒಳಗೆ ಸೇರಿಸಿ. ಆಮೇಲೆ ಜಡೆಯ ಮೇಲೆ ಹೇರ್ ಆ್ಯಕ್ಸೆಸರೀಸ್‌ಗಳನ್ನು ಸಿಕ್ಕಿಸಿ.
– ಸರಳಾ ಭಟ್