ಒಟ್ಟಿಗಿದ್ದರೆ ಸಾಕು…. ಮದುವೆಯಾದಂತೆಯೇ!

ಸರ್ವೋಚ್ಚ ನ್ಯಾಯಾಲಯ ತನ್ನ ಒಂದು ನಿರ್ಣಯದಲ್ಲಿ ಯಾರಾದರೂ ಅವಿವಾಹಿತ ಜೋಡಿ ಒಟ್ಟಿಗಿದ್ದರೆ ಅವರನ್ನು ವಿವಾಹಿತರೆಂದೇ ತಿಳಿಯಲಾಗುವುದು ಮತ್ತು ಅವರ ವಿವಾಹದ ಬಗ್ಗೆ ಅಪಸ್ವರ ವ್ಯಕ್ತಪಡಿಸುವವರು ಆ ವಿವಾಹ ನಡೆದಿಲ್ಲವೆಂದು ಸಾಬೀತುಪಡಿಸಬೇಕು ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯ ತೀರ್ಮಾನ ಹೇಳುತ್ತಿದ್ದ ಈ ಮೊಕದ್ದಮೆಯಲ್ಲಿ ಮೊಮ್ಮಕ್ಕಳು ತಾತನ ಜೊತೆ ಇದ್ದರೂ ಸಹ ಅಜ್ಜಿ ಅವಿವಾಹಿತಳಾಗಿದ್ದಳೆಂದು ಆಪಾದಿಸಿ ತಾತನ ಆಸ್ತಿಯಲ್ಲಿ ಅವರಿಗೆ ಹಕ್ಕು ದೊರೆಯದಂತೆ ಪ್ರಯತ್ನಿಸಲಾಗಿತ್ತು.

ಆ ಹೆಣ್ಣು ತನ್ನ ಮದುವೆ ಯಾವಾಗ ಮತ್ತು ಹೇಗೆ ಆಯಿತೆಂದು ಸಾಕ್ಷ್ಯ ಒದಗಿಸಲಾಗಿರಲಿಲ್ಲ. ಮೊಮ್ಮಕ್ಕಳೂ ಸಹ ತಾತ ಅವಳನ್ನು ಹೆಂಡತಿಯಂತೆ ಪರಿಗಣಿಸುತ್ತಿದ್ದರೋ ಅಥವಾ ಇಟ್ಟುಕೊಂಡಳಂತೆ ಪರಿಗಣಿಸುತ್ತಿದ್ದರೋ  ಎಂದು ಸಾಕ್ಷ್ಯ ಒದಗಿಸಲಾಗಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಮಾನಗಳಲ್ಲಿ ಸ್ಪಷ್ಟವಾಗಿ ಹೇಳಿರುವುದೇನೆಂದರೆ, ವಿವಾಹಕ್ಕೆ ಒಟ್ಟಿಗಿರುವುದೇ ಸಾಕು ಎಂದು. ಶಾಸ್ತ್ರೋಕ್ತವಾಗಿ ಮದುವೆ ಆಗುವುದು ಅಗತ್ಯವಿಲ್ಲ. ಹೀಗಿರುವಾಗ ಅವರಲ್ಲಿ ಒಬ್ಬರು ಮೃತರಾದರೆ ಇನ್ನೊಬ್ಬರಿಗೆ ಆಸ್ತಿಯಲ್ಲಿ ಪಾಲು ಸಿಕ್ಕೇ ಸಿಗುತ್ತದೆ.

ಈ ತೀರ್ಮಾನ ತರ್ಕಬದ್ಧವಾಗಿದ್ದರೂ ಅಷ್ಟೇ ಬೇಸರವನ್ನೂ ತರುತ್ತದೆ. ಒಂದುವೇಳೆ ಪತಿಪತ್ನಿಯರಂತೆ ವಾಸಿಸುವ ಜೋಡಿಯನ್ನು ಪತಿ ಪತ್ನಿಯರಂತೆ ತಿಳಿದರೆ ಮಹಿಳೆಯ ಕಾನೂನುಬದ್ಧ ಪತಿ ಬೇರಾರೋ ಆಗಿದ್ದರೆ ಆಗ ಏನಾಗುತ್ತದೆ? ಒಂದುವೇಳೆ ಮಹಿಳೆಗೆ ಇನ್ನಾರಿಂದಲೋ ಮಕ್ಕಳಾಗಿದ್ದರೆ ಅವರಿಗೆ ಏನಾಗಬಹುದು? ಜೊತೆಗಿರುವ ಪುರುಷ ಆ ಮಕ್ಕಳ ಮಲತಂದೆ ಎನ್ನಿಸಿಕೊಳ್ಳುತ್ತಾನೆಯೇ?

ಅಸಲಿಗೆ ಮದುವೆ ಎನ್ನುವುದು ಸಮಾಜದಿಂದ ಕೊಡಲ್ಪಟ್ಟ ಕಾನೂನಿನ ಪೋಷಾಕು ಆಗಿದ್ದು, ಪುರುಷ ಮತ್ತು ಮಹಿಳೆಗೆ ಪರಸ್ಪರರ ಮೇಲೆ ಹಾಗೂ ಅವರು ಜನ್ಮ ಕೊಟ್ಟ ಮಕ್ಕಳಿಗೆ ಅವರ ಮೇಲೆ ಕೊಂಚ ಹಕ್ಕನ್ನು ಕೊಡುತ್ತದೆ. ಇದು ಹೆಚ್ಚಾಗಿ ಆಸ್ತಿಯ ಹಕ್ಕಾಗಿರುತ್ತದೆ. ಆದರೆ ಈಗ ಇದರಲ್ಲಿ ಜೀವನಾಂಶ ಸೇರಿರುತ್ತದೆ. ಈ ಹಕ್ಕು ಕ್ರಿಮಿನಲ್ ಪ್ರೊಸಿಜರ್‌ ಕೋಡ್‌ನ ಸೆಕ್ಷನ್‌ 125ರಲ್ಲಿ ಬರುತ್ತದೆ. ಈ ಕಾನೂನಿಗೆ ಅನುಸಾರವಾಗಿ ಜೊತೆಯಲ್ಲೇ ಇರುವ ಕಾನೂನಿಗೆ ವಿರುದ್ಧವಾದ ಪತ್ನಿಗೆ ಹಾಗೂ ಮಕ್ಕಳಿಗೂ ಜೀವನಾಂಶ ಸಿಗುತ್ತದೆ.

ಈ ಸಾಮಾಜಿಕ ಕಾನೂನಿನಲ್ಲಿ ಎಷ್ಟೇ ಕೊರತೆಗಳಿದ್ದರೂ ಸಮಾಜಕ್ಕೆ ಅಗತ್ಯವಾಗಿದೆ. ಇದರಿಂದ ಅನೇಕ ಮಹಿಳೆಯರು ಗುಲಾಮಗಿರಿಯನ್ನು ಸಹಿಸಬೇಕಾಗುತ್ತದೆ. ಆದರೆ ಅವರಿಗೆ ಸುರಕ್ಷತೆಯೂ ಸಿಗುತ್ತದೆ. ವಿಶ್ವದಲ್ಲಿ ಯಾವುದೇ ರೂಪದಲ್ಲಿ ಮದುವೆಯಾಗದಿರುವ ಯಾವುದೇ ಸಭ್ಯ ಸಮಾಜ ಉಳಿದಿಲ್ಲ. ಈ ದೃಷ್ಟಿಯಿಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಆಲೋಚನೆ, ವರ್ತಮಾನದ ಕಾನೂನುಗಳಿಂದ ಕೊಂಚ ದೂರ ಸರಿದರೂ ಸರಿಯಾಗಿದೆ. ಕಾನೂನು ಏನು ಹೇಳುತ್ತದೆಯೆಂದರೆ, ಪತಿಪತ್ನಿ ಎನಿಸಿಕೊಳ್ಳಲು ಪುರುಷ ಮತ್ತು ಮಹಿಳೆ ಯಾವುದಾದರೂ ರೀತಿಯ ಪ್ರಕ್ರಿಯೊಂದಿಗೆ ಸಾಗಬೇಕು. ಆದರೆ ಯಾವುದೇ ಪ್ರಕ್ರಿಯೆಯೊಂದಿಗೆ ಸಾಗದೆ, ಅದಕ್ಕೆ ಸಾಕ್ಷಿಯನ್ನೂ ಕೊಡದೆ ಕೇವಲ ಜೊತೆಯಲ್ಲಿದ್ದ ಸಾಕ್ಷಿ ಕೊಟ್ಟು ಮಹಿಳೆ ಮತ್ತು ಪುರುಷ ತಮ್ಮನ್ನು ಪತಿಪತ್ನಿಯರೆಂದು ಹೇಳಿಕೊಳ್ಳಬಹುದು.

ಅಂದಹಾಗೆ ಒಬ್ಬ ಮಹಿಳೆ ಮತ್ತು ಪುರುಷ ಜೊತೆಯಾಗಿರಲು ಮನಸ್ಸು ಮಾಡಿದರೆ ಹಾಗೂ ಇಬ್ಬರೂ ಬಹಳ ಕಾಲ ಒಂದೇ ಸೂರಿನ ಕೆಳಗೆ ವಾಸವಾಗಿದ್ದರೆ ಅವರನ್ನು ವಿವಾಹಿತರೆಂದೇ ತಿಳಿಯಬೇಕು. ಇದರಲ್ಲಿ ಯಾವುದೇ ಧರ್ಮಗುರುವಿನ ಅಥವಾ ಕಾನೂನಿನ ಅಧಿಕಾರಿಯ ಅಪ್ಪಣೆಯ ಮುದ್ರೆಯ ಅಗತ್ಯವಾದರೂ ಏನಿದೆ?

ಸವತಿ ಮಹಿಳೆಯಲ್ಲದೆ ಪುರುಷನಾಗಿದ್ದರೆ….

ವಿವಾಹ ಸಂಸ್ಕಾರವಾಗಿರದಿದ್ದರೂ, ಗಂಡಹೆಂಡತಿ ತಾವು ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂಬ ಹೊಂದಾಣಿಕೆಯನ್ನಂತೂ ಮಾಡಿಕೊಳ್ಳಲೇಬೇಕಾಗುತ್ತದೆ. ದೆಹಲಿಯ ಡಾಕ್ಟರ್‌ ಪತ್ನಿಯೊಬ್ಬಳ ಆತ್ಮಹತ್ಯೆ ಒಂದು ರಹಸ್ಯವನ್ನು ಬಯಲಿಗೆಳೆಯಿತು. ಅದೇನೆಂದರೆ, ಗಂಡನಿಗೆ ರಹಸ್ಯ ಸಂಬಂಧ ವಿರುದ್ಧ ಲಿಂಗಿಯ ಜೊತೆಯೇ ಇರಬೇಕೆಂದೇನಿಲ್ಲ. ಅವನಿಗೆ ಸಲಿಂಗ ಸಂಬಂಧ ಕೂಡ ಇರಬಹುದು. ಡಾಕ್ಟರ್‌ ಪತಿ ಕೂಡ ಅಂಥವನೇ! ಆಲ್ ಇಂಡಿಯಾ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ (ಏಮ್ಸ್) ಕೆಲಸ ಮಾಡುವ ವೈದ್ಯೆ ತನ್ನ ಪತಿ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದು, ತನ್ನ ಬಗ್ಗೆ ಗಮನವನ್ನೇ ಕೊಡುತ್ತಿಲ್ಲವೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಳು.

ಸಮಾಜದಲ್ಲಿ ಸಲಿಂಗ ಸಂಬಂಧದ ಬಗ್ಗೆ ಬಹಿರಂಗ ಚರ್ಚೆ ಶುರುವಾಗಿದೆ. ಆದರೆ ಇದು ಮಹಿಳೆಯರ ಬಾಬತ್ತಿನಲ್ಲಿ ಅತ್ಯಂತ ಕ್ಲಿಷ್ಟಕರ ಸಮಸ್ಯೆಯಾಗುತ್ತ ಹೊರಟಿದೆ.

ಯಾವುದೇ ಪತ್ನಿ ತನ್ನ ಪತಿಯು ಪುರುಷ ಸ್ನೇಹಿತರ ಜೊತೆ ಮುಕ್ತವಾಗಿ ನಗುನಗುತ್ತ ಮಾತನಾಡಿದರೆ, ಅತ್ತಿತ್ತ ಸುತ್ತಾಡಲು ಹೋಗುತ್ತಿದ್ದರೆ, ಆ ಬಗ್ಗೆ ಅಪಸ್ವರ ಎತ್ತುವುದಿಲ್ಲ. ಹೆಂಡತಿಯ ಮಹಿಳಾ ಸ್ನೇಹಿತೆಯರ ಕುರಿತಂತೆ ಮಾತ್ರ ಸುಲಭವಾಗಿ ವಿವಾದ ಹುಟ್ಟು ಹಾಕಲಾಗುತ್ತದೆ. ಸಲಿಂಗ ಸಂಬಂಧಕ್ಕೆ ಯಾವುದೇ ಸ್ಥಳದ ಅಡ್ಡಿ ಆತಂಕ ಇಲ್ಲ. ಒಂದುವೇಳೆ ಗಂಡನಿಗೆ ಮಹಿಳಾ ಸ್ನೇಹಿತರಿದ್ದರೆ, ಅವರೊಂದಿಗೆ ಏಕಾಂತದಲ್ಲಿ ಕಾಲ ಕಳೆಯಲು 2-3 ಗಂಟೆ ನೆಮ್ಮದಿಯ ತಾಣ ಹುಡುಕುವುದು ಕಷ್ಟ. ಸಲಿಂಗ ಸಂಬಂಧದಲ್ಲಿ ಅಂತಹ ಯಾವುದೇ ತೊಂದರೆ ಇರುವುದಿಲ್ಲ ಅವರಿಬ್ಬರು ಯಾವುದೇ ಹೋಟೆಲ್‌ನಲ್ಲಿ ಪರಸ್ಪರರ ಮನೆಯಲ್ಲಿ ಸ್ನೇಹಿತರ ಕೋಣೆಯಲ್ಲಿ ನೆಮ್ಮದಿಯಿಂದ ಕಾಲ ಕಳೆಯಬಹುದು.ಸಲಿಂಗ ಸಂಬಂಧದಲ್ಲಿ ಪುರುಷನ ಮೇಲೆ ಬ್ಲ್ಯಾಕ್‌ ಮೇಲಿಂಗ್‌ನ ಅಥವಾ ಬಲಾತ್ಕಾರದ ಆರೋಪ ಬರದು. ಪತ್ನಿಯರಿಗೆ ಇದು ಒಂದು ಸವಾಲಿನ ಸಂಗತಿಯೇ ಹೌದು, ಗಂಡನ ಸ್ನೇಹಿತರ ಚಾರಿತ್ರ್ಯಹರಣ ಕೂಡ ಮಾಡುವ ಹಾಗಿಲ್ಲ. ಇಂತಹದರಲ್ಲಿ ಹೆಂಡತಿಯರಿಗೆ ಕೊರಗುವುದರ ಹೊರತು ಬೇರೇನೂ ಅವಕಾಶ ಇರುವುದಿಲ್ಲ.

couple

ಪುರುಷ ಸವತಿ (ಗಂಡನ ಬಾಯ್‌ ಫ್ರೆಂಡ್‌) ಮಹಿಳಾ ಸವತಿಗಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಅವನು ಗಂಡನ ಸಮಸ್ತ ಸಮಯ ಹಾಗೂ ಹಣವನ್ನು ತನ್ನ ವಶಕ್ಕೆ ಪಡೆಯಬಹುದು. ಇದರಿಂದಾಗಿ ಹೆಂಡತಿ ಖಿನ್ನತೆಗೀಡಾಗಬಹುದು. ಆತ್ಮವಿಶ್ವಾಸ ಮತ್ತಷ್ಟು ಕುಸಿಯುತ್ತದೆ. ಬೇರೆ ಪುರುಷನ ಜೊತೆ ತನ್ನ ಲೈಂಗಿಕ ತೃಷೆ ತಣಿಸಿಕೊಳ್ಳಲು ಹೋಗುತ್ತಿದ್ದಾನೆಂದು ತಿಳಿದು ಆಕೆಯ ಆತ್ಮವಿಶ್ವಾಸವೇ ಬುಡಮೇಲಾಗಬಹುದು. ಆಕೆಗೆ ತಾನು ಮಹಿಳೆಯಾಗಿರುವುದರ ಬಗೆಗೆ ಸಂದೇಹ ಉಂಟಾಗತೊಡಗುತ್ತದೆ. ಇದು ಕೇವಲ ಶೇರಿಂಗ್‌ ಮತ್ತು ಅಸೂಯೆಯ ಮಾತಾಗಿ ಅಷ್ಟೇ ಉಳಿಯುವುದಿಲ್ಲ. ತನ್ನ ಇಡೀ ಅಸ್ತಿತ್ವದ ಬಗ್ಗೆಯೇ ಅವಳಿಗೆ ಪ್ರಶ್ನೆ ಮೂಡತೊಡಗುತ್ತದೆ.

ಆ ಡಾಕ್ಟರ್‌ ಮನಸ್ಸಿನಲ್ಲಿ ಅಂಥದೇ ಪ್ರಶ್ನೆಗಳು ಎದ್ದಿರಬಹುದು. ಕಳೆದ 5 ವರ್ಷಗಳಿಂದ ತನ್ನ ಹಾಗೂ ಪತಿಯ ನಡುವೆ ಯಾವುದೇ ದೈಹಿಕ ಸಂಬಂಧ ಉಂಟಾಗಿರಲಿಲ್ಲ ಎಂದು ಆಕೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾನು 5 ವರ್ಷ ಹೇಗೆ ಕಳೆದಿರಬಹುದು ಎಂದು ಆಕೆ ಬೇರೆಯವರಿಗೆ ಹೇಳುವ ಸ್ಥಿತಿಯಲ್ಲಿರಲಿಲ್ಲ, ಹಾಗೆಂದೇ ಆ ನಿರ್ಧಾರಕ್ಕೆ ಬಂದಿರಬಹುದು.

ಸಲಿಂಗ ಸಂಬಂಧ ಹೊಸ ಸಂಗತಿಯೇನೂ ಅಲ್ಲ, ಅದು ವರ್ಷಾನುವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಅದು ರಸ್ತೆಗೆ ಬಂದು ನಿಂತಿದೆ. ಬಹಳಷ್ಟು ದೇಶಗಳಲ್ಲಂತೂ ಕಾನೂನುಬದ್ಧ ಸಲಿಂಗಿಗಳ ವಿವಾಹ ನಡೆಯುತ್ತಿದೆ. ಅವರಿಗೆ ಗಂಡ ಹೆಂಡತಿಯರಂತೆ ಹಕ್ಕು ಕೂಡ ದೊರೆಯುತ್ತಿವೆ. ಇದೆಲ್ಲದರಿಂದ ಮಹಿಳೆಯರಿಗೇ ಹೆಚ್ಚು ಹಾನಿ. ಏಕೆಂದರೆ ಪರಪುರುಷನ ಜೊತೆಗಿನ ಸಂಬಂಧದ ಅರ್ಥ ಮಹಿಳೆಯ ಸ್ಥಾನಕ್ಕೆ ಚಾಲೆಂಜ್‌ ಕೊಟ್ಟಂತೆ.

ಮಹಿಳೆಯರಲ್ಲಿ ಸಿಗರೇಟಿನ ಚಟ

ಕಳೆದ 15-20 ವರ್ಷಗಳಲ್ಲಿ ಮಹಿಳೆಯರಲ್ಲಿ ಸಿಗರೇಟು ಸೇದುವ ಚಟ ದ್ವಿಗುಣಗೊಂಡಿದೆ. ಪುರುಷರಲ್ಲಿ ಕಳೆದ 20 ವರ್ಷಗಳಲ್ಲಿ ಇದು ಶೇ.46-47ರಷ್ಟು ಹೆಚ್ಚಿದೆ. ಆದರೆ ಮಹಿಳೆಯರಲ್ಲಿ ಇದು ಶೇ.10ರಿಂದ ಶೇ.20ಕ್ಕೆ ಹೆಚ್ಚಿದೆ. ತನ್ನನ್ನು ಗಂಡುಬೀರಿ ಎಂಬಂತೆ ಸಾಬೀತುಪಡಿಸಲು, ಲಿಬರೇಟೆಡ್‌ ಎಂದು ತೋರಿಸಿಕೊಳ್ಳಲು ಅನೇಕ ಹುಡುಗಿಯರಿಗೆ ಈ ಚಟ ಅಂಟಿಕೊಳ್ಳುತ್ತದೆ. ಅಷ್ಟೇ ಅಲ್ಲ, ಕೆಲಸದ ಒತ್ತಡ, ಬೇಸರ ಹಾಗೂ ಏಕಾಂಗಿತನ ಕಳೆಯಲು ಅವರಲ್ಲಿ ಈ ಚಟ ಮತ್ತಷ್ಟು ವೇಗ ಪಡೆದುಕೊಳ್ಳತ್ತದೆ.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಹುಡುಗಿಯರು ಏಕಾಂಗಿಯಾಗಿ ವಾಸಿಸುವ ಪ್ರವೃತ್ತಿ ಹೆಚ್ಚಿದೆ. ಮೊದಲು 18-19 ಇರ್ಷಕ್ಕೆ ಹುಡುಗಿಯರ ಮದವೆಯಾಗಿರುತ್ತಿತ್ತು. ಮದುವೆಯ ಬಳಿಕ ಗಂಡಹೆಂಡತಿ ಹಿರಿಯರ ನಿರೀಕ್ಷಣೆಯಲ್ಲಿಯೇ ಇರುತ್ತಿದ್ದರು.

ಈಚೆಗೆ ಹುಡುಗಿಯರ ವಿಳಂಬ ಮದುವೆಯಿಂದಾಗಿ ಅವರು ಸ್ವಚ್ಛಂದವಾಗಿ ವಾಸಿಸುವ ಪ್ರವೃತ್ತಿ ಹೆಚ್ಚಿದೆ. ಈ ಅವಧಿಯಲ್ಲಿ ಅವರಿಗೆ ಸಿಗರೇಟ್‌ ಸೇದುವ ಹುಡುಗರ ಸ್ನೇಹವಾಗಿಬಿಟ್ಟರೆ, ಸಿಗರೇಟ್‌ ಸೇದದಿದ್ದರೆ ಅವರಿಗೆ ಚಡಪಡಿಸುವಂತಾಗುತ್ತದೆ.

ಸಿಗರೇಟು ಕಂಪನಿಗಳ ಕಡಿಮೆ ಹೊಗೆ ಬಿಡುವ ಸಿಗರೇಟುಗಳಿಂದಲೂ ಹುಡುಗಿಯರ ಸಿಗರೇಟು ಚಟದ ಪ್ರಮಾಣ ಹೆಚ್ಚಿದೆ.

ಮದ್ಯ ಕಂಪನಿಗಳು ಸಹ ತಮ್ಮ ಜಾಹೀರಾತಿನಲ್ಲಿ ಯುವತಿಯರನ್ನೊಳಗೊಂಡಂತೆ ಇವರು ಜಾಹೀರಾತು ತೋರಿಸುತ್ತವೆ. ಯಾವ ಹುಡುಗಿಯರಿಎಗೆ ಮದ್ಯದ ಚಟ ಅಂಟಿರುತ್ತವೋ ಅವರು ಸಿಗರೇಟಿಗೆ ದಾಸರಾಗುವುದು ಹೆಚ್ಚು.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇವನೆ ನಿಷಿದ್ಧವಾಗಿದೆ. ಈಗ ಕೆಲವರು ಸಿಗರೇಟ್‌ ಸೇದಿಯೇ ಹೊರಹೋಗುತ್ತಾರೆ. ಆ ಸಮಯದಲ್ಲಿ ಜೊತೆಗೆ ಹುಡುಗಿಯಿದ್ದರೆ ಅವರ ಮಜ ದ್ವಿಗುಣವಾಗುತ್ತದೆ. ಪುರುಷರು ಈಗ ತಮ್ಮ ಚಟವನ್ನು ಮಹಿಳೆಯರ ಮೇಲೂ ಹೇರಲಾರಂಭಿಸಿದ್ದಾರೆ. ಏಕೆಂದರೆ ತಮ್ಮ ಚಟದ ಬಗ್ಗೆ ಅವರು ಆಕ್ಷೇಪಿಸಬಾರದು ಎನ್ನುವುದಾಗಿರುತ್ತದೆ. ತನ್ನ ಪ್ರೇಮಿಯ ಬಾಯಿಂದ ಸಿಗರೇಟಿನ ವಾಸನೆ ಬರುತ್ತಿದ್ದರೂ ಕೆಲವು ಹುಡುಗಿಯರಿಗೆ ಅದು ಅಸಹ್ಯ ಎನಿಸುವುದಿಲ್ಲ.

ಮಹಿಳೆಯರಲ್ಲಿ ಈ ಕಾರಣದಿಂದಾಗಿ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಅವರ ಸಂತಾನೋತ್ಪತ್ತಿಯ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ. ಗರ್ಭಿಣಿ ಸಿಗರೇಟು ಸೇದಿದರೆ ಭ್ರೂಣಕ್ಕೆ ಅಪಾಯ ಉಂಟಾಗುತ್ತದೆ. ಈ ಎಲ್ಲ ಅಪಾಯಗಳ ಹೊರತಾಗಿಯೂ ಸಿಗರೇಟು ಕಂಪನಿಗಳು ತಮ್ಮ ಪ್ರಚಾರವನ್ನು ಎಗ್ಗಿಲ್ಲದೆ ಮುಂದುವರಿಸಿಕೊಂಡು ಹೊರಟಿವೆ.

ಅವರ ಹೆಜ್ಜೆ ಇದೀಗ ಸಂಸತ್‌ತನಕ ತಲುಪಿದೆ…. ಹಾಗೆಂದೇ ಸಂಸದೀಯ ಸಮಿತಿ ಸಿಗರೇಟು ಪ್ಯಾಕೆಟ್‌ ಮೇಲೆ ಹೆದರಿಕೆಯ ಚಿತ್ರ ಪ್ರಕಟಿಸುವ ಆದೇಶವನ್ನು ಮುಂದೂಡುವಂತೆ ಮಾಡಿದೆ.

ಸಿಗರೇಟಿನ ಮೇಲೆ ಭಾರಿ ಕರ ಹೇರುವುದರಿಂದ ಸರ್ಕಾರಕ್ಕೆ ಲಾಭವಿದೆ. ಅದು ಕೂಡ ಇದರ ಚಟದಿಂದ ಮುಕ್ತರಾಗಲು ನೆರವಾಗುತ್ತದೆ. ಮನಸ್ಸಿಲ್ಲದ ಮನಸ್ಸಿನಿಂದ ಅವರು ಅದರ ಚಟದಿಂದ ದೂರವಿರುತ್ತಾರೆ. ಸಿಗರೇಟಿನಿಂದ ಸರ್ಕಾರದ ಬೊಕ್ಕಸಕ್ಕೆ ಲಾಭ ಇರುವಾಗ ಅದನ್ನು ನಿಷೇಧಿಸಲು ಯಾವ ಸರ್ಕಾರ ತಾನೇ ಬಯಸುತ್ತದೆ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ