ಒಟ್ಟಿಗಿದ್ದರೆ ಸಾಕು.... ಮದುವೆಯಾದಂತೆಯೇ!

ಸರ್ವೋಚ್ಚ ನ್ಯಾಯಾಲಯ ತನ್ನ ಒಂದು ನಿರ್ಣಯದಲ್ಲಿ ಯಾರಾದರೂ ಅವಿವಾಹಿತ ಜೋಡಿ ಒಟ್ಟಿಗಿದ್ದರೆ ಅವರನ್ನು ವಿವಾಹಿತರೆಂದೇ ತಿಳಿಯಲಾಗುವುದು ಮತ್ತು ಅವರ ವಿವಾಹದ ಬಗ್ಗೆ ಅಪಸ್ವರ ವ್ಯಕ್ತಪಡಿಸುವವರು ಆ ವಿವಾಹ ನಡೆದಿಲ್ಲವೆಂದು ಸಾಬೀತುಪಡಿಸಬೇಕು ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯ ತೀರ್ಮಾನ ಹೇಳುತ್ತಿದ್ದ ಈ ಮೊಕದ್ದಮೆಯಲ್ಲಿ ಮೊಮ್ಮಕ್ಕಳು ತಾತನ ಜೊತೆ ಇದ್ದರೂ ಸಹ ಅಜ್ಜಿ ಅವಿವಾಹಿತಳಾಗಿದ್ದಳೆಂದು ಆಪಾದಿಸಿ ತಾತನ ಆಸ್ತಿಯಲ್ಲಿ ಅವರಿಗೆ ಹಕ್ಕು ದೊರೆಯದಂತೆ ಪ್ರಯತ್ನಿಸಲಾಗಿತ್ತು.

ಆ ಹೆಣ್ಣು ತನ್ನ ಮದುವೆ ಯಾವಾಗ ಮತ್ತು ಹೇಗೆ ಆಯಿತೆಂದು ಸಾಕ್ಷ್ಯ ಒದಗಿಸಲಾಗಿರಲಿಲ್ಲ. ಮೊಮ್ಮಕ್ಕಳೂ ಸಹ ತಾತ ಅವಳನ್ನು ಹೆಂಡತಿಯಂತೆ ಪರಿಗಣಿಸುತ್ತಿದ್ದರೋ ಅಥವಾ ಇಟ್ಟುಕೊಂಡಳಂತೆ ಪರಿಗಣಿಸುತ್ತಿದ್ದರೋ  ಎಂದು ಸಾಕ್ಷ್ಯ ಒದಗಿಸಲಾಗಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಮಾನಗಳಲ್ಲಿ ಸ್ಪಷ್ಟವಾಗಿ ಹೇಳಿರುವುದೇನೆಂದರೆ, ವಿವಾಹಕ್ಕೆ ಒಟ್ಟಿಗಿರುವುದೇ ಸಾಕು ಎಂದು. ಶಾಸ್ತ್ರೋಕ್ತವಾಗಿ ಮದುವೆ ಆಗುವುದು ಅಗತ್ಯವಿಲ್ಲ. ಹೀಗಿರುವಾಗ ಅವರಲ್ಲಿ ಒಬ್ಬರು ಮೃತರಾದರೆ ಇನ್ನೊಬ್ಬರಿಗೆ ಆಸ್ತಿಯಲ್ಲಿ ಪಾಲು ಸಿಕ್ಕೇ ಸಿಗುತ್ತದೆ.

ಈ ತೀರ್ಮಾನ ತರ್ಕಬದ್ಧವಾಗಿದ್ದರೂ ಅಷ್ಟೇ ಬೇಸರವನ್ನೂ ತರುತ್ತದೆ. ಒಂದುವೇಳೆ ಪತಿಪತ್ನಿಯರಂತೆ ವಾಸಿಸುವ ಜೋಡಿಯನ್ನು ಪತಿ ಪತ್ನಿಯರಂತೆ ತಿಳಿದರೆ ಮಹಿಳೆಯ ಕಾನೂನುಬದ್ಧ ಪತಿ ಬೇರಾರೋ ಆಗಿದ್ದರೆ ಆಗ ಏನಾಗುತ್ತದೆ? ಒಂದುವೇಳೆ ಮಹಿಳೆಗೆ ಇನ್ನಾರಿಂದಲೋ ಮಕ್ಕಳಾಗಿದ್ದರೆ ಅವರಿಗೆ ಏನಾಗಬಹುದು? ಜೊತೆಗಿರುವ ಪುರುಷ ಆ ಮಕ್ಕಳ ಮಲತಂದೆ ಎನ್ನಿಸಿಕೊಳ್ಳುತ್ತಾನೆಯೇ?

ಅಸಲಿಗೆ ಮದುವೆ ಎನ್ನುವುದು ಸಮಾಜದಿಂದ ಕೊಡಲ್ಪಟ್ಟ ಕಾನೂನಿನ ಪೋಷಾಕು ಆಗಿದ್ದು, ಪುರುಷ ಮತ್ತು ಮಹಿಳೆಗೆ ಪರಸ್ಪರರ ಮೇಲೆ ಹಾಗೂ ಅವರು ಜನ್ಮ ಕೊಟ್ಟ ಮಕ್ಕಳಿಗೆ ಅವರ ಮೇಲೆ ಕೊಂಚ ಹಕ್ಕನ್ನು ಕೊಡುತ್ತದೆ. ಇದು ಹೆಚ್ಚಾಗಿ ಆಸ್ತಿಯ ಹಕ್ಕಾಗಿರುತ್ತದೆ. ಆದರೆ ಈಗ ಇದರಲ್ಲಿ ಜೀವನಾಂಶ ಸೇರಿರುತ್ತದೆ. ಈ ಹಕ್ಕು ಕ್ರಿಮಿನಲ್ ಪ್ರೊಸಿಜರ್‌ ಕೋಡ್‌ನ ಸೆಕ್ಷನ್‌ 125ರಲ್ಲಿ ಬರುತ್ತದೆ. ಈ ಕಾನೂನಿಗೆ ಅನುಸಾರವಾಗಿ ಜೊತೆಯಲ್ಲೇ ಇರುವ ಕಾನೂನಿಗೆ ವಿರುದ್ಧವಾದ ಪತ್ನಿಗೆ ಹಾಗೂ ಮಕ್ಕಳಿಗೂ ಜೀವನಾಂಶ ಸಿಗುತ್ತದೆ.

ಈ ಸಾಮಾಜಿಕ ಕಾನೂನಿನಲ್ಲಿ ಎಷ್ಟೇ ಕೊರತೆಗಳಿದ್ದರೂ ಸಮಾಜಕ್ಕೆ ಅಗತ್ಯವಾಗಿದೆ. ಇದರಿಂದ ಅನೇಕ ಮಹಿಳೆಯರು ಗುಲಾಮಗಿರಿಯನ್ನು ಸಹಿಸಬೇಕಾಗುತ್ತದೆ. ಆದರೆ ಅವರಿಗೆ ಸುರಕ್ಷತೆಯೂ ಸಿಗುತ್ತದೆ. ವಿಶ್ವದಲ್ಲಿ ಯಾವುದೇ ರೂಪದಲ್ಲಿ ಮದುವೆಯಾಗದಿರುವ ಯಾವುದೇ ಸಭ್ಯ ಸಮಾಜ ಉಳಿದಿಲ್ಲ. ಈ ದೃಷ್ಟಿಯಿಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಆಲೋಚನೆ, ವರ್ತಮಾನದ ಕಾನೂನುಗಳಿಂದ ಕೊಂಚ ದೂರ ಸರಿದರೂ ಸರಿಯಾಗಿದೆ. ಕಾನೂನು ಏನು ಹೇಳುತ್ತದೆಯೆಂದರೆ, ಪತಿಪತ್ನಿ ಎನಿಸಿಕೊಳ್ಳಲು ಪುರುಷ ಮತ್ತು ಮಹಿಳೆ ಯಾವುದಾದರೂ ರೀತಿಯ ಪ್ರಕ್ರಿಯೊಂದಿಗೆ ಸಾಗಬೇಕು. ಆದರೆ ಯಾವುದೇ ಪ್ರಕ್ರಿಯೆಯೊಂದಿಗೆ ಸಾಗದೆ, ಅದಕ್ಕೆ ಸಾಕ್ಷಿಯನ್ನೂ ಕೊಡದೆ ಕೇವಲ ಜೊತೆಯಲ್ಲಿದ್ದ ಸಾಕ್ಷಿ ಕೊಟ್ಟು ಮಹಿಳೆ ಮತ್ತು ಪುರುಷ ತಮ್ಮನ್ನು ಪತಿಪತ್ನಿಯರೆಂದು ಹೇಳಿಕೊಳ್ಳಬಹುದು.

ಅಂದಹಾಗೆ ಒಬ್ಬ ಮಹಿಳೆ ಮತ್ತು ಪುರುಷ ಜೊತೆಯಾಗಿರಲು ಮನಸ್ಸು ಮಾಡಿದರೆ ಹಾಗೂ ಇಬ್ಬರೂ ಬಹಳ ಕಾಲ ಒಂದೇ ಸೂರಿನ ಕೆಳಗೆ ವಾಸವಾಗಿದ್ದರೆ ಅವರನ್ನು ವಿವಾಹಿತರೆಂದೇ ತಿಳಿಯಬೇಕು. ಇದರಲ್ಲಿ ಯಾವುದೇ ಧರ್ಮಗುರುವಿನ ಅಥವಾ ಕಾನೂನಿನ ಅಧಿಕಾರಿಯ ಅಪ್ಪಣೆಯ ಮುದ್ರೆಯ ಅಗತ್ಯವಾದರೂ ಏನಿದೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ