ಹಾಸ್ಟೆಲ್‌ನಿಂದ ಮನೆಗೆ ಹೋಗುವ ಸಮಯದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ಬಳಿ ನಿಂತಿದ್ದ ಒಬ್ಬ ಹುಡುಗಿ ಬಳಿ ರಾಶಿ ರಾಶಿ ತಲೆದಿಂಬಿನ ಗಾತ್ರದ ಪುಸ್ತಕಗಳಿದ್ದವು. ಅದನ್ನು ಕಂಡು ಒಬ್ಬ ಪೋರ್ಟರ್‌ ಕೇಳಿದ, ``ಮೇಡಂ, ಕೂಲಿ ಬೇಕೇ?'' ಆ ಹುಡುಗಿ ತಕ್ಷಣ ಸ್ಟೈಲಾಗಿ ಹೇಳಿದಳು, ``ಬೇಡ ರೀ, ನನ್ನ ಬಾಯ್‌ ಫ್ರೆಂಡ್‌ಗಾಗಿ ಕಾಯುತ್ತಿದ್ದೇನೆ.''

 

ರಾಜು : ಡಿಯರ್‌, ಸ್ನ್ಯಾಕ್ಸ್ ಗಾಗಿ ಇತ್ತು ಏನು ತಂದಿದ್ದಿ?

ರೀಟಾ : ಇವತ್ತು ಟಿಫನ್‌ ಬಾಕ್ಸ್ ನಲ್ಲಿ ಬರೀ 2 ಲಾಡು ತಂದಿದ್ದೇನೆ ಅಷ್ಟೆ.

ಅವಳು ಕೊಟ್ಟಿದ್ದನ್ನು ಅವನು ಗಬಕ್ಕನೆ ತಿಂದು ಮುಗಿಸಿದ.

ರಾಜು : ಯಾವುದಾದರೂ ಬಾರ್‌ ಚಾಕಲೇಟ್‌ ಇದ್ದರೆ ತಕ್ಷಣ ಕೊಡು.

ರೀಟಾ : ಅದ್ಯಾಕೆ...? ಈಗ ತಾನೇ ತಿಂದ್ಯಲ್ಲ......

ರಾಜು : ಹಾಗಲ್ಲ, ಇದು ಸ್ನ್ಯಾಕ್ಸ್. ಏನಾದರೂ ತಿಂದ ಮೇಲೆ ಬಾಯಿ ಸಿಹಿ ಮಾಡಿಕೊಳ್ಳಲು ಚಾಕಲೇಟ್‌ ಇತ್ಯಾದಿ ಬೇಕಲ್ಲವೇ?

 

ಗುಂಡ ರೈಲಿನಲ್ಲಿ ಊರಿಗೆ ಹೊರಟಿದ್ದ. ಸೀಟು ಖಾಲಿ ಇದೆ ಅಂತ ಹಾಯಾಗಿ ಉದ್ದಕ್ಕೆ ಮಲಗಿಬಿಟ್ಟ. ರೈಲಿಗೇರಿದ ಒಬ್ಬ ಸಹಪ್ರಯಾಣಿಕ ಕೇಳಿದ, ``ಸ್ವಲ್ಪ ಜರುಗುತ್ತೀರಾ? ನಾನೂ ಕೂರಬೇಕು.''

ಗುಂಡ ತುಸು ಠೇಂಕಾರದಿಂದ ಕೇಳಿದ, ``ನಿನಗೆ ಗೊತ್ತೇ.... ನಾನು ಯಾರೂ ಅಂತ?''

ಆತ ತೆಪ್ಪಗೆ ಇನ್ನೆಲ್ಲೋ ಒಂದು ಕಡೆ ಜಾಗ ನೋಡಿ ಕುಳಿತುಕೊಂಡ. ಸ್ವಲ್ಪ ಹೊತ್ತಾದ ಮೇಲೆ ಪೈಲ್ವಾನ್‌ ಪಾಪಣ್ಣ ಅದೇ ಬೋಗಿ ಹತ್ತಿದ. ಹಾಯಾಗಿ ಒರಗಿದ್ದ ಗುಂಡನನ್ನು ಕಂಡು, ``ಏನಯ್ಯ, ಆ ಕಡೆ ಜರುಗು. ನಾನೂ ಕೂರಬೇಕು,'' ಎಂದ.

ಗುಂಡ ಅದೇ ಠೇಂಕಾರದಲ್ಲಿ, ``ಏ... ನಿನಗೆ ಗೊತ್ತೇ.... ನಾನು ಯಾರು ಅಂತ?'' ಎಂದ.

ಪೈಲ್ವಾನ್‌ ಪಾಪಣ್ಣ ತಕ್ಷಣ ಗುಂಡನ ಕುತ್ತಿಗೆಪಟ್ಟಿ ಹಿಡಿದು, ``ಯಾವೋನಯ್ಯ ನೀನು?'' ಎಂದು ಅಬ್ಬರಿಸಿದ. ಗುಂಡ ಗಡಗಡ ನಡುಗುತ್ತ, ``ಅದು.... ನಾನು ಒಬ್ಬ ರೋಗಿ. 2 ದಿನಗಳಿಂದ ವಿಷಮಶೀತ ಜ್ವರ ಇದೆ,'' ಎನ್ನುವುದೇ?

 

ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕಂಡು ಗುಂಡ ಶಿಳ್ಳೆ ಹೊಡೆದು ಚುಡಾಯಿಸಿದ. ಅದಕ್ಕೆ ಸಿಡುಕಿದ ಅವಳು, ``ಏಯ್‌, ನಾನು ಅಂತಿಂಥ ಹುಡುಗಿಯಲ್ಲ.... ಗೊತ್ತಾಯ್ತಾ?'' ಎಂದಳು. ಅದಕ್ಕೆ ಗುಂಡ ಸ್ವಲ್ಪ ಸಂಕೋಚಪಡದೆ,  ``ಅದು ಸರಿ, ನಾವು ಚೆಕ್‌ ಮಾಡಿದರೆ ತಾನೇ ನೀವು ಎಂಥವರು ಅಂತ ಗೊತ್ತಾಗುವುದು?'' ಎನ್ನುವುದೇ?

ಕಲ್ಲೇಶಿ ಸರಸರ ನೇರವಾಗಿ ನಡೆದವನೇ ಎದುರಿಗೆ ಸಿಕ್ಕ ಪೊಲೀಸ್‌ ಠಾಣೆಗೆ ನುಗ್ಗಿ ರಿಪೋರ್ಟ್‌ ಬರೆಸುವಾಗ ಹೇಳಿದ, ``ಯಾರೋ ನನಗೆ ಫೋನ್‌ ಮಾಡಿ ಒಂದೇ ಸಮ ಬೆದರಿಸುತ್ತಿದ್ದಾರೆ....''

``ಯಾರದು? ಎಷ್ಟು ಸಲ ಕಾಲ್ ‌ಬಂದಿತ್ತು?''

``ಆಗಾಗ ಬರ್ತಾನೇ ಇರುತ್ತೆ... ಇದೋ ನೀವು ಕೇಳಿಸಿಕೊಳ್ಳಿ....'' ಎಂದು ಆಗ ತಾನೇ ಬಂದ ಕರೆಯನ್ನು ಪೊಲೀಸ್‌ ಪೇದೆಗೆ ನೀಡಿದ.

ಅದನ್ನು ಕೇಳಿಸಿಕೊಂಡ ಪೊಲೀಸ್‌ ಪೇದೆ, ``ಏ ಕಲ್ಲೇಶಿ.... ಇದು ಕಸ್ಟಮರ್‌ ಕೇರ್‌ನವರದು. ಬಾಯಿ ಮುಚ್ಚಿಕೊಂಡು ತೆಪ್ಪಗೆ ಮೊಬೈಲ್ ಬಿಲ್ ‌ಹಣ ಕಟ್ಟು. ಇಲ್ಲದಿದ್ದರೆ ಲೈನ್‌ ಕಟ್‌ ಮಾಡ್ತೀವಿ, ಅಂತ ಆಗಾಗ ಬೆದರಿಸುತ್ತಿದ್ದಾರೆ ಅಷ್ಟೇ, ಹೋಗಯ್ಯ!''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ