ಒಂದು ಕಾಲದಲ್ಲಿ ಪ್ರಸಿದ್ಧ ಅಥ್ಲೀಟ್‌ ಎನಿಸಿ, ಕಳೆದ 8 ವರ್ಷಗಳಿಂದ ಬಂಜೆತನದ ನೋ ಅನುಭವಿಸುತ್ತಿರುವ ಜೈಪುರದ ಸುನೀತಾ ಆರ್ಯ ಬಗ್ಗೆ ಮಗುವಿನ ಕಳ್ಳತನದ ಆರೋಪ ಬಂದಾಗ ಎಲ್ಲರೂ ದಂಗಾಗಿ ಹೋದರು. ಅಸಲಿಗೆ, ಸಾಮಾಜಿಕ ರೀತಿಗಳು ಹಾಗೂ ಮೂಢನಂಬಿಕೆಯ ಪರಾಕಾಷ್ಠತೆ ಸುನೀತಾರನ್ನು ಹೇಗೆ ಆಕ್ರಮಿಸಿದ್ದ ಎಂದರೆ, ಆಕೆ ಎಲ್ಲಾ ಪರಿಧಿಯನ್ನೂ ದಾಟಿ ಹೋಗಿಬಿಟ್ಟಿದ್ದರು.

ಸುನೀತಾ ಆರ್ಯ ಜೈಪುರದ ಒಬ್ಬ ಯಶಸ್ವಿ ಅಥ್ಲೀಟ್‌ ಎನಿಸಿದ್ದರು. 2002ರಲ್ಲಿ ಆಕೆ ಅಂತಾರಾಜ್ಯಗಳ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ಬಂದಿದ್ದರು. ಅಲ್ಲಿ ಅವರು ಮತ್ತೊಬ್ಬ ಅಥ್ಲೀಟ್‌ ನೀರಜ್‌ ಕುಮಾರ್‌ರನ್ನು ಭೇಟಿಯಾದರು. ಈ ಭೇಟಿ ಮೊದಲು ಗೆಳೆತನ, ನಂತರ ಪ್ರೇಮ, ಆಮೇಲೆ ಮದುವೆಯಲ್ಲಿ ಮುಕ್ತಾಯವಾಯಿತು. ಇಬ್ಬರ ಮನೆಯವರೂ ಈ ಪ್ರೇಮ ವಿವಾಹ ಒಪ್ಪಿರಲಿಲ್ಲ, ಆದರೆ ಈ ಸಂಗಾತಿಗಳಲ್ಲಿ ಪ್ರೇಮ ಗಾಢವಾಗಿತ್ತು.

ಆದರೆ ಸುನೀತಾರ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾಗಿ 2 ವರ್ಷ ಕಳೆದರೂ ಸುನೀತಾರಿಗೆ ಮಗು ಆಗದಿದ್ದಾಗ, ಅತ್ತೆ ಮನೆಯವರು ಸಹಜವಾಗಿಯೇ ಸಿಡುಕುತೊಡಗಿದರು. ಆಕೆ ಸತತ 2 ಸಲ ಬಸುರಾದರೂ, ಗರ್ಭಪಾತ ಆಗಿಹೋಯ್ತು.

ಇದಾದ ಮೇಲೆ ಪತಿ ನೀರಜ್‌ ಸಹ ಮುಖ ಸಿಂಡರಿಸತೊಡಗಿದರು. ಪತಿಯ ನಿರ್ಲಕ್ಷ್ಯವನ್ನು ಸುನೀತಾ ಸಹಿಸದಾದರು. ಯಾರಾದರೂ ಅವಿವಾಹಿತ ತಾಯಿಯ ಅಥವಾ ಆಸ್ಪತ್ರೆಯ ಅನಾಥ ಮಗುವನ್ನು ಪಡೆಯೋಣವೆಂದು ಅಂದುಕೊಂಡರು. ಈ ವಿಷಯವನ್ನು ಗಂಡನಿಗೆ ಹೇಳಿದರು ಏನೂ ಲಾಭ ಆಗಲಿಲ್ಲ.

ಏನು ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ಸುನೀತಾರಿಗೆ ಅರ್ಥವಾಗಲಿಲ್ಲ. ಹೀಗಿರುವಾಗ ಯಾವುದಾದರೂ ಸಣ್ಣ ಮಗುವನ್ನು ಕದಿಯಬಾರದೇಕೆ ಎಂದುಕೊಂಡರು. ಹೀಗಾಗಿ ಆಕೆ ಜೈಪುರದ ಸಂಗಾನೇರಿ ಗೇಟ್‌ ಬಳಿಯ ಹೆರಿಗೆ ಆಸ್ಪತ್ರೆ ಬಳಿ ಸುಳಿದಾಡತೊಡಗಿದರು. ಒಂದು ದಿನ ಅಲ್ಲಿನ ಹೆರಿಗೆ ವಾರ್ಡ್‌ನಿಂದ ಮಗು ಕದಿಯುವುದರಲ್ಲಿ ಯಶಸ್ವಿಯಾದರು. ಆದರೆ ಹೊರಗೆ ಓಡಿ ಬರುವಷ್ಟರಲ್ಲಿ ಸೆಕ್ಯೂರಿಟಿ ಬಳಿ ಸಿಕ್ಕಿಬಿದ್ದರು.

ಸಾಮಾಜಿಕ ಮಾನ್ಯತೆಗಳ ದೋಷ

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಮಗುವಾಗದ ಮಹಿಳೆಗೆ `ಬಂಜೆ' ಎಂಬ ಪಟ್ಟ ಕಟ್ಟಿ ಬಹಳ ಕೀಳಾಗಿ ಕಾಣಲಾಗುತ್ತದೆ. ಆಕೆ ಶುಭ ಸಮಾರಂಭಗಳಲ್ಲಿ ಭಾಗವಹಿಸದಂತೆ ಅಶುಭ ಎನ್ನುತ್ತಾರೆ. ಇಂಥ ಸಂತಾನರಹಿತ ಹೆಂಗಸರು ಬದುಕಿರುವುದೇ ಬೇಡ ಎಂದು ಮಾಡಿಬಿಡುತ್ತಾರೆ, ಸಮಾಜದಲ್ಲಿ ನಾನಾ ಕಟಕಿಗಳು ಕೇಳಿಬರುತ್ತವೆ. ಮಗು ಇಲ್ಲದ ಕಾರಣ ಆಕೆ ಮದುವೆಯಾದದ್ದೇ ಮಹಾ ತಪ್ಪು ಎಂಬಂತೆ ದೂಷಿಸುತ್ತಾರೆ. ಹೀಗಾಗಿ ಇಂಥ ಮಹಿಳೆಯರು ಈ ಕಳಂಕ ತೊಡೆದುಹಾಕಲು ಏನಾದರೂ ಸರಿಯೇ ಮಾಡಿ ತೀರುತ್ತೇವೆ ಎಂಬ ಹಂತ ತಲುಪುತ್ತಾರೆ. ಹೀಗಾಗಿ ಯಾರಾದರೂ ಸಾಧು ಬಾಬಾಗಳ ನೆರವಾದರೂ ಪಡೋಣ ಎಂದು ಧಾವಿಸುತ್ತಾರೆ. ಹಾಗೆ ಅವರ ವಂಚನೆಯ ಜಾಲಕ್ಕೆ ಸಿಲುಕುತ್ತಾರೆ.

ಆಧುನಿಕ, ವೈಜ್ಞಾನಿಕ, ಇಂಟರ್‌ನೆಟ್‌ನ ಈ ಕಾಲದಲ್ಲೂ ಇಂಥ ಮೂಢನಂಬಿಕೆಯೇ? ಎಂಥ ವಿಧದ ಕಾಯಿಲೆಯಾದರೂ ವಾಸಿಯಾಗಬಲ್ಲ ಈ ಕಾಲದಲ್ಲಿ, ರೋಗಗಳೂ ಅದೇ ವೇಗದಲ್ಲಿ ಹೆಚ್ಚುತ್ತಲಿವೆ ಎಂಬುದು ನಿಜ. ಇಂದಿನ ಕಾಲದ ಒಂದು ದೊಡ್ಡ ಸಮಸ್ಯೆ ಎಂದರೆ ಸಂತಾನಹೀನತೆ. ಮಕ್ಕಳಿಲ್ಲದ ದಂಪತಿಗಳ ನೋವು, ಸಂಕಟ ದಿನೇದಿನೇ ಹೆಚ್ಚುತ್ತಿರುತ್ತದೆ. ಈ ದಂಪತಿ ಹತಾಶೆ, ನಿರಾಶೆಗಳಿಂದ ಕೈಚೆಲ್ಲಿ ಏನಾದರೂ ಪವಾಡ ನಡೆದು ಎಲ್ಲ ಸರಿಹೋಗಬಾರದೇ ಎಂದು ಬಯಸುತ್ತಾರೆ. ಸಮಾಜದ ಚುಚ್ಚುನುಡಿಗಳು ಅವರನ್ನು ಎಡವಟ್ಟಿನ ದಾರಿ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ