ಸುಡು ಬಿಸಿಲಿನಿಂದ ಪಾರಾಗಲು ನಾವೆಲ್ಲರೂ ಮಳೆಗಾಲಕ್ಕಾಗಿ ಕಾತರದಿಂದ ಕಾಯುತ್ತೇವೆ. ಈ ರೊಮ್ಯಾಂಟಿಕ್‌ ವಾತಾವರಣದ ಮಜಾ ನಿಜಕ್ಕೂ ಅನನ್ಯ. ಆದರೆ ಈ ಹವಾಮಾನದಲ್ಲಿ ಮಳೆಯ ಕಾರಣದಿಂದಾಗಿ ಆರೋಗ್ಯ, ಫಿಟ್ನೆಸ್‌, ತ್ವಚೆ ಮತ್ತು ಕೂದಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು ತಜ್ಞರು ಕೊಟ್ಟಿರುವ ಟಿಪ್ಸ್ ಹೀಗಿವೆ :

ಮಳೆ ಹಾಗೂ ಫಿಟ್ನೆಸ್

ಮಳೆಗಾಲ ಸುಂದರವಾಗಿ ಆನಂದಮಯವಾಗಿರುತ್ತದೆ. ಆದರೆ ಮಳೆಯಿಂದಾಗಿ ಫಿಟ್ನೆಸ್‌ ಬಯಸುವವರ ಜಾಗಿಂಗ್‌, ಲಾಂಗ್‌ ವಾಕ್‌, ಎಕ್ಸರ್‌ಸೈಜ್‌ ಇತ್ಯಾದಿಗಳಿಗೆ ಅಡ್ಡಿಯುಂಟಾಗುತ್ತದೆ. ಆದರೆ ಈ ಹವಾಮಾನದಲ್ಲಿ ವ್ಯಾಯಾಮಕ್ಕೆ ರಜೆ ಕೊಡದೆ ಇನ್ನಷ್ಟು ಹೆಚ್ಚು ವ್ಯಾಯಾಮ ಮಾಡುವ ಅಗತ್ಯವಿದೆ.

ಮಳೆಯಿಂದಾಗಿ ನಾವು ಹೊರಗೆ ಎಕ್ಸರ್‌ಸೈಜ್‌ ಮಾಡಲು ಅಥವಾ ಜಿಮ್ ಗೆ ಹೋಗಲು ಹಿಂದೆ ಮುಂದೆ ನೋಡುತ್ತೇವೆ. ಒಮ್ಮೊಮ್ಮೆ ಜನ ಮನೆಯಲ್ಲೇ ಟಿವಿಯಲ್ಲಿ ಬರುವ ಫಿಟ್ನೆಸ್‌ ಪ್ರೋಗ್ರಾಮ್ ನೋಡಿಕೊಂಡು ಎಕ್ಸರ್‌ಸೈಜ್‌ ಮಾಡುತ್ತಾರೆ. ಆದರೆ ತಪ್ಪು ಎಕ್ಸರ್‌ಸೈಜ್‌ ಮಾಡಿದರೆ ಮಸಲ್ಸ್ ಪೇನ್‌ ಬರುತ್ತದೆ. ಆದ್ದರಿಂದ ಜಿಮ್ ಗೆ ಹೋಗುವುದೇ ಅತ್ಯುತ್ತಮ ಆಯ್ಕೆ. ಏಕೆಂದರೆ ಜಿಮ್ ನಲ್ಲಿ ನಾವು ಸರಿಯಾದ ರೀತಿಯಲ್ಲಿ ಎಕ್ಸರ್‌ಸೈಜ್‌ ಮಾಡಬಹುದು. ಒಂದುವೇಳೆ ದಿನ ಜಿಮ್ ಗೆ ಹೋಗಲಾಗದಿದ್ದರೆ ವಾರದಲ್ಲಿ ಕನಿಷ್ಠ 5 ದಿನ ನಿಯಮಿತವಾಗಿ ಹೋಗಬೇಕು. ಎಕ್ಸರ್‌ಸೈಜ್‌ ನಂತರ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್‌ಗಳನ್ನು ತೆಗೆದುಕೊಳ್ಳುವುದು ಅಗತ್ಯ. ಇಂದಿನ ಧಾವಂತದ ಬದುಕಿನಲ್ಲಿ  ಫಿಟ್‌ ಆಗಿರಬೇಕೆಂದರೆ ಫಿಟ್ನೆಸ್‌ ಮತ್ತು ಡಯೆಟ್‌ನ ಸರಿಯಾದ ಹೊಂದಾಣಿಕೆ ಬಹಳ ಅಗತ್ಯ.

ಒಂದುವೇಳೆ ತೂಕ ಹೆಚ್ಚಾಗುತ್ತಿದ್ದರೆ ಜಿಮ್ ನಲ್ಲಿ ಎಕ್ಸರ್‌ಸೈಜ್‌ನೊಂದಿಗೆ ಯೋಗ, ಪ್ರಯೋಗ ಅಥವಾ ಸಾಲ್ಸಾ ಡ್ಯಾನ್ಸ್ ಮಾಡಿ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಿ ಕೊಳ್ಳಬಹುದು. ಇಂದು ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲ ಸಾಮಾನ್ಯರಿಗೂ ಜಿಮ್ ಗೆ ಹೋಗುವುದು ಅಗತ್ಯವಾಗಿಬಿಟ್ಟಿದೆ. ಎಕ್ಸರ್‌ಸೈಜ್‌ನಿಂದ ಬಾಡಿ ಟೋನಿಂಗ್‌ ಆಗಿ ವೇಟ್‌ ಕಂಟ್ರೋಲ್ ‌ನಲ್ಲಿ ಇರುತ್ತದೆ.

ಜಿಮ್ ನಲ್ಲಿ ಎಕ್ಸರ್‌ಸೈಜ್‌ ಮಾಡಿ ನಮ್ಮ ಬಾಡಿಯನ್ನು ಶೇಪ್‌ನಲ್ಲಿಟ್ಟುಕೊಳ್ಳಬಹುದು ಎಂದು ಇಂದಿನ ಯುವಕ ಯುವತಿಯರಿಗೆ ಅನ್ನಿಸುತ್ತದೆ. ಆದರೆ ಬಾಡಿ ಶೇಪ್‌ಗಾಗಿ ಸಮತೋಲಿತ ಡಯೆಟ್‌, ಎಕ್ಸರ್‌ಸೈಜ್‌ ಮತ್ತು ವಿಶ್ರಾಂತಿಯ ಅಗತ್ಯವಿದೆ. ಮಳೆಗಾಲದಲ್ಲಿ ಇವೆಲ್ಲ ವಿಷಯಗಳನ್ನು ಗಮನಿಸಿದರೆ ಮಳೆಗಾಲ ಇನ್ನಷ್ಟು ಸುಂದರವಾಗಿರುತ್ತದೆ.

ಲೀನಾ, ಫಿಟ್ನೆಸ್ಇನ್ಸ್ಟಿಟ್ಯೂಟ್ ಸಂಚಾಲಕಿ

ಕಾಟನ್ಅತ್ಯುತ್ತಮ ಆಯ್ಕೆ

ಮಳೆಗಾಲದಲ್ಲಿ ತಾಜಾ ಆಗಿರಲು ಉಡುಪುಗಳ ಆಯ್ಕೆ ಸೂಕ್ತವಾಗಿರಬೇಕು. ಆ ಸಮಯದಲ್ಲಿ ತಾಪಮಾನದಲ್ಲಿ ಅಧಿಕ ಆರ್ದ್ರತೆ ಇರುತ್ತದೆ. ಈ ಆರ್ದ್ರತೆಯನ್ನು ಕಾಟನ್‌ ಬಟ್ಟೆಗಳು ಮಾತ್ರ ಹೀರಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ಕಾಟನ್‌ ಬಟ್ಟೆಗಳ ಆಯ್ಕೆಯೇ ಅತ್ಯುತ್ತಮ. ಇಂದು ಮಾರುಕಟ್ಟೆಯಲ್ಲಿ ಮಳೆಗಾಲಕ್ಕೆ ಲೈಟ್‌ ಕಾಟನ್‌ನ ವಿವಿಧ ಆಯ್ಕೆಗಳಿವೆ. ನೀವು ಬೇಸಿಗೆಯಲ್ಲಿ ಲೈಟ್‌ ಕಲರ್‌ ಬಟ್ಟೆಗಳನ್ನು ಆರಿಸುತ್ತೀರಿ. ಆದರೆ ಮಳೆಗಾಲದಲ್ಲಿ ಡಾರ್ಕ್‌ ಕಲರ್‌ ಬಟ್ಟೆಗಳನ್ನು ಕೊಳ್ಳಬಹುದು. ಮಳೆಗಾಲದಲ್ಲಿ ಎಲ್ಲ ಕಡೆ ನೀರು, ಕೆಸರು, ಕೊಳೆ ಇರುತ್ತದೆ. ನಾವು ಬಸ್‌ ಅಥವಾ ಟ್ರೇನ್‌ನಲ್ಲಿ ಸಂಚರಿಸಬೇಕಾಗುತ್ತದೆ. ಡಾರ್ಕ್‌ ಕಲರ್‌ನ ಬಟ್ಟೆಗಳ ಮೇಲೆ ಕೆಸರು ಹಾಗೂ ಮಣ್ಣಿನ ಕಲೆಗಳು ಕಾಣಿಸುವುದಿಲ್ಲ. ಕಾಟನ್‌ನೊಂದಿಗೆ ಸಿಂಥೆಟಿಕ್‌ ಉಡುಪುಗಳನ್ನು ಆರಿಸಿಕೊಳ್ಳಬಹುದು. ಏಕೆಂದರೆ ಸಿಂಥೆಟಿಕ್‌ ಉಡುಪುಗಳು ಒದ್ದೆಯಾದರೆ ಬೇಗನೆ ಒಣಗುತ್ತವೆ. ಮಳೆಗಾಲದಲ್ಲಿ ಡೆನಿಮ್ ಹಾಗೂ ವುಲ್ಲನ್‌ ಉಡುಪುಗಳನ್ನು ಖಂಡಿತಾ ಉಪಯೋಗಿಸಬೇಡಿ. ಅವನ್ನು ಒಣಗಿಸಲು ಬಹಳ ಸಮಯ ಬೇಕು. ಜೊತೆಗೆ ತೇವಾಂಶದಿಂದ ಅವುಗಳಲ್ಲಿ ದುರ್ವಾಸನೆ ಬರುತ್ತಿರುತ್ತದೆ.

ಮಳೆಗಾಲದಲ್ಲಿ ಯಾವುದಾದರೂ ಪ್ರೋಗ್ರಾಂ ಅಥವಾ ಮದುವೆಯ ಸಂದರ್ಭದಲ್ಲಿ ಸೀರೆ ಉಡಬೇಕಾಗಿದ್ದರೆ ಫ್ಲೋರ್‌ ಪ್ರಿಂಟ್ಸ್ ಮತ್ತು ಡಿಸೈನರ್‌ ವರ್ಕ್‌ನ ಸಿಂಥೆಟಿಕ್‌ ಸೀರೆ ಧರಿಸಬಹುದು. ಧರಿಸುವ ಜ್ಯೂವೆಲರಿಯೂ ವೈಟ್‌ ವೇಟ್‌ ಹಾಗೂ ಬಣ್ಣ ಬಿಡದಿರುವುದೇ ಆಗಿರಬೇಕು. ಮಳೆಗಾಲದಲ್ಲಿ ಉಡುಪುಗಳ ಜೊತೆಗೆ ಮೇಕಪ್‌ಗೂ ವಿಶೇಷ ಗಮನ ನೀಡಿ.  ಪೌಡರ್‌, ಕುಂಕುಮದ ಬದಲು ವಾಟರ್‌ಪ್ರೂಫ್‌ ಮೇಕಪ್‌ ಪ್ರಾಡಕ್ಟ್ ಗಳನ್ನು ಉಪಯೋಗಿಸಿ. ಕೂದಲು ಚಿಕ್ಕದಾಗಿದ್ದರೆ ಹಾಗೇ ಬಿಡಬಹುದು. ಉದ್ದ ಕೂದಲಿದ್ದರೆ ಒಂದು ಗಂಟು ಹಾಕಿ ಮೇಲೆ ಫ್ಲೋಡ್ ‌ಮಾಡಬಹುದು.

ಅನಿತಾ ಕೃಷ್ಣನ್‌, ಫ್ಯಾಷನ್ಡಿಸೈನರ್

ತ್ವಚೆ ಮತ್ತು ಕೂದಲಿನ ರಕ್ಷಣೆ ಅಗತ್ಯ

ಮೊದಲ ಮಳೆಯಲ್ಲಿ ಎಲ್ಲರೂ ನೆಂದು ತುಂತುರು ಮಳೆಯ ಆನಂದ ಅನುಭವಿಸುತ್ತಾರೆ. ಆದರೆ ಅದರಿಂದ ದೂರವಿರಬೇಕು. ಏಕೆಂದರೆ ಆರಂಭದ ಮಳೆಯಲ್ಲಿ ಆ್ಯಸಿಡ್‌ ರೇನ್‌ ಹೆಚ್ಚಾಗಿರುವುದರಿಂದ ತ್ವಚೆಯ ಸಮಸ್ಯೆಗಳು ಉಂಟಾಗುತ್ತವೆ. ಮಳೆಗಾಲದಲ್ಲಿ ಬಿಸಿಲು ಇಲ್ಲದಿರುವಾಗ ಸನ್‌ಸ್ಕ್ರೀನ್‌ ಹಚ್ಚುವ ಅವಶ್ಯಕತೆಯೇನಿದೆ ಎಂದುಕೊಳ್ಳಬಹುದು. ಆದರೆ ಅದು ಸರಿಯಲ್ಲ. ಈ ಸಮಯದಲ್ಲೂ ಸನ್‌ಸ್ಕ್ರೀನ್‌ ಹಚ್ಚುವುದು ಬಹಳ ಅಗತ್ಯ. ಆದ್ದರಿಂದ ಬೆಳಗ್ಗೆ ಸನ್‌ಸ್ಕ್ರೀನ್‌ ಹಚ್ಚಿ 3-4 ಗಂಟೆ ಬಿಟ್ಟು ಮತ್ತೆ ಸನ್‌ಸ್ಕ್ರೀನ್‌ ಹಚ್ಚಿ.

ಈ ಸಮಯದಲ್ಲಿ ತ್ವಚೆ ಮತ್ತು ಕೂದಲನ್ನು ಗಮನಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೆಲವರು ತಿಳಿದಿದ್ದಾರೆ. ಆದರೆ ಮಳೆಗಾಲದಲ್ಲಿ ಬಿಸಿಲು ಇರುವುದಿಲ್ಲ ಹಾಗೂ ಡ್ರೈನೆಸ್‌ ತೋರುವ ತಂಪೂ ಇರುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ತ್ವಚೆ ಹಾಗೂ ಕೂದಲಿನಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿರುತ್ತದೆ. ತ್ವಚೆ ಒಮ್ಮೆ ಆಯ್ಲಿ ಆದರೆ ಇನ್ನೊಮ್ಮೆ ಡ್ರೈ ಆಗುತ್ತದೆ. ಇದಲ್ಲದೆ, ತ್ವಚೆ ನಿಸ್ತೇಜ ಆಗುತ್ತದೆ. ಬೆವರು ಹಾಗೂ ಆಯಿಲ್ ‌ನ ಕಾರಣದಿಂದ ಮುಖದ ಮೇಲೆ ಧೂಳಿನಿಂದಾಗಿ ಪಿಂಪಲ್ಸ್ ಹಾಗೂ ಬ್ಲ್ಯಾಕ್‌ಹೆಡ್ಸ್ ಗಳ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತ್ವಚೆ ಅಂಟಂಟಾಗಿರುವುದರಿಂದ ಕೆಲವರು ಮಾಯಿಶ್ಟರೈಸರ್‌ ಹಚ್ಚುವುದು ಅಗತ್ಯವಿಲ್ಲವೆಂದುಕೊಳ್ಳುತ್ತಾರೆ. ಆದರೆ ನ್ಯಾಚುರ್‌ ಕಾಂಪ್ಲೆಕ್ಷನ್‌ ಖಾಯಮ್ಮಾಗಿ ಇಟ್ಟುಕೊಳ್ಳಲು ಸ್ಕಿನ್‌ ಕೇರ್‌ ಬಹಳ ಅಗತ್ಯ.

ಮಳೆಗಾಲದಲ್ಲಿ ಕ್ಲೆನ್ಸಿಂಗ್‌ ಕೂಡ ಬಹಳ ಅಗತ್ಯ. ಕ್ಲೆನ್ಸಿಂಗ್‌ ನಂತರ ಆಲ್ಕೋಹಾಲ್ ‌ಫ್ರೀ ಟೋನರ್‌ ಉಪಯೋಗಿಸಿ. ಈ ಸಮಯದಲ್ಲಿ ತೇಲಾಂಶದಿಂದಾಗಿ ಸ್ಕಿನ್‌ ಪೋರ್ಸ್‌ ತಾವಾಗಿ ತೆರೆದುಕೊಳ್ಳುತ್ತವೆ. ಅದರಿಂದ ಧೂಳು ಸೇರುವುದರಿಂದ ಪಿಂಪಲ್ಸ್ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಕ್ಲೆನ್ಸಿಂಗ್‌ ನಂತರ ಟೋನಿಂಗ್‌ ಅತ್ಯಗತ್ಯ. ಅದರಿಂದ ತೆರೆದ ಫೋರ್ಸ್‌ ಮುಚ್ಚುತ್ತವೆ.

ಈ ಕಾಲದಲ್ಲಿ ಸೂರ್ಯ ಮೋಡಗಳ ಮಧ್ಯೆ ಅಡಗಿದ್ದರೂ ಅಲ್ಟ್ರಾವಯ್ಲೆಟ್‌ ಕಿರಣಗಳಂತೂ ಸಕ್ರಿಯವಾಗಿರುತ್ತವೆ. ಅದಕ್ಕಾಗಿ ಲೈಟ್ನಿಂಗ್‌ ಏಜೆಂಟ್‌ ಮತ್ತು ಲ್ಯಾಕ್ಟಿಕ್‌ ಆ್ಯಸಿಡ್‌ಯುಕ್ತ ಮಾಯಿಶ್ಚರೈಸರ್‌ನ್ನು ಉಪಯೋಗಿಸಿ. ಸಲಾಡ್‌, ವೆಜಿಟೆಬಲ್ ಸೂಪ್‌ನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳಿ. ಸ್ಕಿನ್‌ ನರಿಶ್‌ಮೆಂಟ್‌ಗಾಗಿ ನೀರಿನ ಅಗತ್ಯವಿದೆ. ದಿನ 8 ರಿಂದ 10 ಗ್ಲಾಸ್‌ ನೀರು ಕುಡಿಯಿರಿ. ಮಳೆಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗುವುದಿಲ್ಲ. ಆದರೂ ಶರೀರದಲ್ಲಿ ನೀರಿನ ಕೊರತೆಯಾಗದಂತೆ ಹೆಚ್ಚು ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿರಬೇಕು.

ಅನುರಾಧಾ, ತ್ವಚೆ ತಜ್ಞರು

ಮಳೆಗಾಲದ ಈ ರೊಮ್ಯಾಂಟಿಕ್‌ ಸಮಯದಲ್ಲಿ ಮೋಜಂತೂ ಇದೆ. ಅದನ್ನು ಇನ್ನಷ್ಟು ಸಂತೋಷದಾಯಕವನ್ನಾಗಿ ಮಾಡಲು ಮೇಲೆ ಹೇಳಿದ ಸೂಚನೆಗಳನ್ನು ಜಾರಿಗೊಳಿಸುವುದು ಬಹಳ ಅಗತ್ಯ. ಏಕೆಂದರೆ ಯಾವುದೇ ಸಮಸ್ಯೆಯನ್ನು ಎದುರಿಸುವಂತಾಗಬಾರದು.

ಅಪರ್ಣಾ ಜೋಶಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ