ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಈಗ ತಮ್ಮ ಕೂದಲಿನ ಸೌಂದರ್ಯಕ್ಕಾಗಿ ಮೊದಲಿಗಿಂತ ಹೆಚ್ಚು ಜಾಗರೂಕರಾಗಿದ್ದಾರೆ. ಅದರಿಂದಾಗಿ ಇಂದಿನ ಮಹಿಳೆಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್ ಟ್ರೀಟ್‌ಮೆಂಟ್ ಪಡೆಯುತ್ತಿರುವುದಲ್ಲದೆ, ಬದಲಾಗುತ್ತಿರುವ ಹೇರ್ ಸ್ಟೈಲ್ ತಮ್ಮದಾಗಿಸಿಕೊಂಡು ವಿಶೇಷ ಲುಕ್‌ನಲ್ಲಿ ಕಾಣಿಸಲು ಇಷ್ಟಪಡುತ್ತಿದ್ದಾರೆ.
ಮುಖ ಎಷ್ಟೇ ಸುಂದರವಾಗಿರಲಿ, ಕೂದಲಿನ ಬಗ್ಗೆ ಜಾಗರೂಕರಾಗಿರದಿದ್ದರೆ ಅಥವಾ ಕೂದಲು ಆಕರ್ಷಕವಾಗಿರದಿದ್ದರೆ ವ್ಯಕ್ತಿತ್ವದಲ್ಲಿ ಕಾಂತಿ ಕಾಣಿಸುವುದಿಲ್ಲ.
ಕೂದಲನ್ನು ಸುಂದರಗೊಳಿಸಲು ಅಗತ್ಯ ಪೋಷಣೆಯ ಜೊತೆ ಜೊತೆಗೆ ಹೇರ್ ಸ್ಟೈಲ್‌ನ ಲೇಟೆಸ್ಟ್ ಪದ್ಧತಿ ಹಾಗೂ ಕಲರಿಂಗ್ ಈಗ ಕ್ರೇಝ್ ಆಗಿದೆ.
ಕೂದಲಿನ ಸೌಂದರ್ಯಕ್ಕಾಗಿ 2 ಮುಖ್ಯ ವಿಧಾನಗಳು ಹೇರ್ ಕಟಿಂಗ್ ಹಾಗೂ ಕಲರಿಂಗ್ ರೂಢಿಯಲ್ಲಿವೆ. ಇಂದಿನ ಮುಖ್ಯ ಪದ್ಧತಿಯ ಪ್ರಕಾರ ಮೊದಲು ಕೆಲವು ಆಕರ್ಷಕ ಹೇರ್ ಕಟಿಂಗ್ ಬಗ್ಗೆ ತಿಳಿದುಕೊಳ್ಳೋಣ. ಅಂದಹಾಗೆ ಕಾಲ ಬದಲಾಗುತ್ತಿರುವಂತೆ ಪ್ರತಿ ಬಾರಿ ಒಂದು ಹೊಸ ಫ್ಯಾಷನ್ ಕಂಡುಬರುತ್ತದೆ. ಇಂದು ಅಡ್ವಾನ್ಸ್ ಹೇರ್ ಕಟಿಂಗ್ ಪ್ರಚಲಿತದಲ್ಲಿದೆ. ಇದು ನಮ್ಮ ಲುಕ್‌ನಲ್ಲಿ ವಿಶೇಷ ಬದಲಾವಣೆ ತರುವುದರಿಂದ ಇದನ್ನು ಬಹಳ ಇಷ್ಟಪಡಲಾಗುತ್ತಿದೆ.
ಇದನ್ನು ಕಾಪಾಡಿಕೊಳ್ಳುವುದು ಹೆಚ್ಚು ಕಷ್ಟವೇನಲ್ಲ. ಈ ಕಟಿಂಗ್ ಎಷ್ಟು ಸ್ಟೈಲಿಶ್ ಆಗಿರುತ್ತದೆಂದರೆ ಎಲ್ಲ ಸಂದರ್ಭಗಳಲ್ಲಿ ಪಾರ್ಲರ್‌ಗೆ ಹೋಗಿ ಹೇರ್ ಸ್ಟೈಲ್ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.
ಆದರೆ, ಈ ಅಡ್ವಾನ್ಸ್ ಹೇರ್ ಕಟಿಂಗ್ ಅಂದರೆ ಏನು? ಎಂದು ನೀವು ಯೋಚಿಸುತ್ತಿರಬಹುದು. ಅಡ್ವಾನ್ಸ್ ಹೇರ್ ಕಟಿಂಗ್ ಬೇಸಿಕ್ ಕಟಿಂಗ್‌ನ ಅಡ್ವಾನ್ಸ್ ರೂಪವಾಗಿದೆ. ಬೇಸಿಕ್ ಕಟಿಂಗ್‌ನಲ್ಲಿ ಬ್ಯಾಕ್ ಮತ್ತು ಫ್ರಂಟ್ ಎರಡರಲ್ಲಿಯೇ ಲೇಸರ್ ಕಟ್ ಮಾಡಲಾಗುತ್ತಿತ್ತು. ಆದರೆ ಈಗಿನ ಅಡ್ವಾನ್ಸ್ ಕಟಿಂಗ್ ಮಿಕ್ಸ್ ಅಂಡ್ ಮ್ಯಾಚ್‌ನ ಕಟಿಂಗ್ ಆಗಿದೆ. ಇದರಲ್ಲಿ ನಿಮ್ಮ ಮುಂದಿನ ಹಾಗೂ ಹಿಂದಿನ ಕೂದಲಿನಲ್ಲಿ ಯಾವ ಕಟಿಂಗ್ ಒಪ್ಪುತ್ತದೋ ಅದನ್ನು ಮಾಡಲಾಗುತ್ತದೆ. ಹಿಂದಿನ ಕೂದಲಿಗೆ ಸ್ಟೆಪ್ಸ್ ಕಟಿಂಗ್‌ನೊಂದಿಗೆ ಮುಂದಿನ ಕೂದಲಿನಲ್ಲಿ ಲೇಯರ್ ಅಥವಾ ಫ್ರಿಂಜಿಶ್ ಕಟ್ ಮಾಡಲಾಗುತ್ತದೆ.
ಅಡ್ವಾನ್ಸ್ ಕಟಿಂಗ್‌ನ ಇನ್ನಷ್ಟು ವಿಧಾನಗಳನ್ನು ತಿಳಿದುಕೊಳ್ಳಿ. ಇತ್ತೀಚೆಗೆ ಅವನ್ನು ಬಹಳ ಇಷ್ಟಪಡಲಾಗುತ್ತಿದೆ.
ಫ್ರಿಂಜಿಶ್ ಹಾಗೂ ಸ್ಕ್ವೇರ್ ಕಟಿಂಗ್
ಈ ಕಟಿಂಗ್‌ನಲ್ಲಿ ಎಲ್ಲಕ್ಕೂ ಮೊದಲು ಕೂದಲಿಗೆ ನೀರು ಸಿಂಪಡಿಸಿ ಅವನ್ನು ಒದ್ದೆ ಮಾಡಲಾಗುತ್ತದೆ. ನಂತರ ಕೂದಲನ್ನು ಬಾಚಿ ಹಿಂದಿನ ಮತ್ತು ಮುಂದಿನ ಕೂದಲನ್ನು ಬೇರೆ ಬೇರೆ ಮಾಡಲಾಗುತ್ತದೆ. ಮುಂದಿನ ಕೂದಲಿನ ಮಧ್ಯ ಬೈತಲೆ ತೆಗೆದು ಅವನ್ನೂ 2 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಈಗ ಮಧ್ಯದ ಕೂದಲನ್ನು ರೌಂಡ್ ಶೇಪ್‌ನಲ್ಲಿ ಸೆಟ್ ಪಾರ್ಟ್ ಮಾಡಿ ಬೇರ್ಪಡಿಸಲಾಗುತ್ತದೆ ಮತ್ತು ಪಿನ್ ಅಪ್ ಮಾಡಿ ಸರ್ಕಲ್ ಮಾಡಲಾಗುತ್ತದೆ. ನಂತರ ಕೆಳಗಿನ 2 ಇಂಚ್ ಕೂದಲನ್ನು ರೌಂಡ್ ಶೇಪ್‌ನಲ್ಲಿ ಸೆಟ್ ಹಾಗೂ ಪಿನ್ ಅಪ್ ಮಾಡಿ ಸಣ್ಣ ಸರ್ಕಲ್ ಮಾಡಲಾಗುತ್ತದೆ.
ಕೆಳಗೆ ಉಳಿದ ಕೂದಲನ್ನು ಮಧ್ಯದಿಂದ 2 ಭಾಗಗಳಲ್ಲಿ ವಿಂಗಡಿಸಿ ಟ್ರಿಮ್ಮಿಂಗ್ ಮಾಡಲಾಗುತ್ತದೆ. ನಂತರ ಎರಡೂ ಭಾಗಗಳನ್ನು ಸೇರಿಸಿದಾಗ ಮಧ್ಯಭಾಗದ ಕೆಳಗೆ ಉದ್ದವಿರುವ ಕೂದಲು ಕಂಡುಬರುತ್ತದೆ. ಅವನ್ನು ಸ್ಟ್ರೇಟ್, ಯು ಅಥವಾ ವಿ ಶೇಪ್‌ನಲ್ಲಿ ಕತ್ತರಿಸಿ ಕೆಳಗಿನ ಕೂದಲಿಗೆ ಯಾವುದಾದರೂ ಆಕಾರ ಕೊಡಬಹುದು.
ನಂತರ ಮೊದಲಿನದ್ದಲ್ಲ, ಕೆಳಗಿನ ಇನ್ನೊಂದು ಸರ್ಕಲ್ ಬಿಚ್ಚಿ ಅದನ್ನು 90 ಡಿಗ್ರಿಯಲ್ಲಿ ಕಟ್ ಮಾಡಲಾಗುತ್ತದೆ. ಕಟ್ ಮಾಡುವಾಗ ಕೆಳಗೆ ಹಾಗೂ ಮೇಲಿನ ಕೂದಲಿನ ಉದ್ದದ ನಡುವೆ ಸ್ವಲ್ಪ ಅಂತರವಿಟ್ಟು ಸಮತೋಲನ ಮಾಡಲಾಗುತ್ತದೆ. ನಂತರ ಮೇಲಿನ ಅಂದರೆ ದೊಡ್ಡ ಸರ್ಕಲ್ ನ್ನು ಬಿಚ್ಚಿ ಕೆಳಗಿನ ಸರ್ಕಲ್ ನಿಂದ ಗೈಡ್ ಲೈನ್ ತೆಗೆದುಕೊಳ್ಳುತ್ತ ಮೇಲಿನ ಕೂದಲನ್ನು ಸ್ಕ್ವೇರ್ ಶೇಪ್ ನಲ್ಲಿ ಕಟ್ ಮಾಡಲಾಗುತ್ತದೆ. ಸ್ಕ್ವೇರ್ ಶೇಪ್‌ಗಾಗಿ ಕೂದಲನ್ನು ಸ್ಟ್ರೇಟ್ ಕಟ್ ಮಾಡಲಾಗುತ್ತದೆ.
ಟೀಸ್ ಲೇಯರ್ ಕಟಿಂಗ್
ಇದರಲ್ಲಿ ಮೊದಲು ಕೂದಲಿಗೆ ನೀರು ಸಿಂಪಡಿಸಿ ಒದ್ದೆ ಮಾಡಲಾಗುತ್ತದೆ. ನಂತರ ಮುಂದಿನ ಹಾಗೂ ಹಿಂದಿನ ಕೂದಲನ್ನು ಬೇರೆ ಬೇರೆ 2 ಭಾಗಗಳಲ್ಲಿ ವಿಂಗಡಿಸಿ ಕಟ್ ಮಾಡಲಾಗುತ್ತದೆ. ಹಿಂದಿನ ಕೂದಲಿನಿಂದ ಕಟಿಂಗ್ ಶುರು ಮಾಡಿ ಕೆಳಗಿನ ಕೂದಲಿಗೆ ಲೇಸರ್ ಕಟಿಂಗ್ ಮಾಡಲಾಗಿದೆ. ನಂತರ ಕೆಳಗಿನ ಕೂದಲನ್ನು ಗೈಡ್ ಲೈನ್ ಕಡೆಗೆ ತೆಗೆದುಕೊಂಡು ಮೇಲಿನ ಕೂದಲನ್ನೂ ಕಟ್‌ಮಾಡಲಾಗಿದೆ.
ಹೀಗೆ ಕೆಳಗಿನ ಇನ್ನೊಂದು ಭಾಗವನ್ನೂ ಕಟ್ ಮಾಡಲಾಗುತ್ತದೆ. ಹಿಂದಿನ ಕೂದಲಿನಲ್ಲಿ ಸಂಪೂರ್ಣ ಕಟಿಂಗ್ ಲೇಯರ್‌ಗಳಲ್ಲಿ ಬರುತ್ತದೆ. ಮುಂದಿನ ಕೂದಲಿನಲ್ಲಿ ಫ್ರಿಂಜಿಶ್ ಕಟ್ ಮಾಡಲಾಗಿದೆ. ನಂತರ ಕೂದಲನ್ನು ಡ್ರೈಯರ್‌ನಿಂದ ಸೆಟ್ ಮಾಡಲಾಗುತ್ತದೆ.
ಬಾಕ್ಸ್ ಕಟಿಂಗ್
ಬಾಕ್ಸ್ ಕಟಿಂಗ್‌ಗಾಗಿ ಕೂದಲನ್ನು ಒದ್ದೆ ಮಾಡಿ ಮುಂದಿನ ಹಾಗೂ ಹಿಂದಿನ ಕೂದಲನ್ನು ಬಾಚಣಿಗೆಯ ಸಹಾಯದಿಂದ ಬೇರೆ ಬೇರೆ ಮಾಡಲಾಗುತ್ತದೆ. ಮುಂದಿನ ಕೂದಲಿನ ಮಧ್ಯದಿಂದ ಬೈತಲೆ ತೆಗೆದು ಅವನ್ನೂ 2 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಹಿಂದಿನ ಕೂದಲನ್ನು 2 ಭಾಗಗಳಲ್ಲಿ ವಿಂಗಡಿಸಿ ಮೇಲಿನ ಸೆಂಟರ್ ಪಾರ್ಟ್‌ನಿಂದ ಕಟಿಂಗ್ ಶುರು ಮಾಡಲಾಗುತ್ತದೆ. ಗೈಡ್ ಲೈನ್‌ಗೆ ಕೆಳಗಿನ ಕೂದಲನ್ನು ಮೇಲಿನ ಕೂದಲಿನೊಂದಿಗೆ ಸೇರಿಸುತ್ತಾ ಟ್ರಯಾಂಗಲ್ ಶೇಪ್‌ನಲ್ಲಿ ಎರಡರ ಉದ್ದದಲ್ಲಿ ಹೆಚ್ಚು ವ್ಯತ್ಯಾಸ ಬರದಂತೆ ನೋಡಿಕೊಂಡು ಕಟ್ ಮಾಡಬೇಕು.
ಈ ಕಟಿಂಗ್‌ನ್ನು ಕೂದಲಿನ ಮೇಲ್ಭಾಗದ ಅರ್ಧಭಾಗದಲ್ಲಿ ಮಾಡಲಾಗುತ್ತದೆ. ಉಳಿದ ಕೂದಲನ್ನು 90 ಡಿಗ್ರಿಯಲ್ಲಿ ಕತ್ತರಿಸಲಾಗುತ್ತದೆ. ಅದಕ್ಕೂ ಕೆಳಗಿನಿಂದ ಗೈಡ್ ಲೈನ್ ತೆಗೆದುಕೊಳ್ಳಲಾಗುತ್ತದೆ.
ಈಗ ಮೇಲಿನ ಕೂದಲನ್ನು ಕೆಳಗಿನಿಂದ ಗೈಡ್ ಲೈನ್ ತೆಗೆದುಕೊಳ್ಳುತ್ತಾ ಸಣ್ಣ ಸಣ್ಣ ಬಾಕ್ಸ್ಗಳಲ್ಲಿ ವಿಭಜಿಸಲಾಗುತ್ತದೆ. ಮುಂದಿನ ಕೂದಲಿನಲ್ಲಿ ಫ್ರಿಂಜಿಶ್ ಕಟಿಂಗ್ ಮಾಡಲಾಗುತ್ತದೆ.
ನಂತರ ಕೂದಲಿನ ಮೇಲೆ ಡ್ರೈಯರ್ ಓಡಿಸಿ ಅವನ್ನು ಸೆಟ್ ಮಾಡಿ ಕೆಳಗಿನಿಂದ ಶುರು ಮಾಡಲಾಗುತ್ತದೆ. ಕೂದಲನ್ನು ಕೆಳಭಾಗದೆಡೆ ಮಡಚುತ್ತಾ ಡ್ರೈಯರ್ ಚಲಾಯಿಸಬೇಕು. ಕೆಳಗಿನ ಕೂದಲು ಡ್ರೈ ಆದಾಗ ಮುಂದಿನ ಕೂದಲನ್ನೂ ಬ್ರಶ್ ಇರುವ ಕೂಂಬ್‌ನಿಂದ ಮಡಚುತ್ತಾ ಡ್ರೈ ಮಾಡಬೇಕು.
ಬ್ಲಂಟ್ ಕಟಿಂಗ್
ಇದಕ್ಕಾಗಿ ಇಡೀ ಕೂದಲಿಗೆ ನೀರು ಸಿಂಪಡಿಸಿ ಅವನ್ನು ಒದ್ದೆ ಮಾಡಲಾಗುತ್ತದೆ. ಮುಂದಿನ ಮತ್ತು ಹಿಂದಿನ ಕೂದಲನ್ನು ಬೇರೆ ಬೇರೆ ಮಾಡಲಾಗುತ್ತದೆ. ನಂತರ ಕೆಳಗಿನ ಕೂದಲನ್ನು ಟ್ರಯಾಂಗಲ್ ಶೇಪ್‌ನಲ್ಲಿ ಕಟ್ ಮಾಡಲಾಗುತ್ತದೆ ಮತ್ತು ಮುಂದಿನ ಕಡೆಗೆ ಸ್ಟ್ರೇಟ್ ಕಟಿಂಗ್ ಮಾಡಲಾಗುತ್ತದೆ. ಈ ಕಟಿಂಗ್‌ನ್ನು ಝೀರೋ ಡಿಗ್ರಿ ಕಟಿಂಗ್ ಎಂದೂ ಕರೆಯುತ್ತಾರೆ.
ಹೇರ್ ಕಲರಿಂಗ್
ಈಗ ಹೇರ್ ಕಲರಿಂಗ್ ಸರದಿ. ಬದಲಾದ ಕಾಲದಲ್ಲಿ ಇಂದು ಮಹಿಳೆಯರು ಅಡ್ವಾನ್ಸ್ ಹೇರ್ ಕಲರಿಂಗ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ. ನ್ಯಾಚುರಲ್ ಬ್ಲಾಕ್ ಹೇರ್ ಕಲರಿಂಗ್‌ನಿಂದಾಗಿ ಕೂದಲು ಕಪ್ಪಾಗಿ ಕಾಣಿಸುವುದಿಲ್ಲ. ಕೂದಲನ್ನು ಹೈಲೈಟ್ ಮಾಡಲು ಲೇಟೆಸ್ಟ್ ಕಲರ್‌ನ ಕ್ರೇಝ್ ಕೂಡ ಇದೆ.
ಲೇಟೆಸ್ಟ್ ಟ್ರೆಂಡ್ ಬ್ಲಾಂಡ್, ಬ್ರೌನ್, ಪ್ಲ್ಯಾಟಿನಂ, ರೆಡ್, ವೆಲ್ವೆಟ್, ಚಾಕಲೇಟ್ ಬ್ರೌನ್, ಗ್ಲಾಸಿ ಬ್ಲಾಂಡ್ ಇತ್ಯಾದಿ ಹೇರ್ ಕಲರ್‌ಗಳು ಇದ್ದು ಅವನ್ನು ಹೇರ್ ಸ್ಟೈಲ್‌ನ ಹಾಟ್ ಟ್ರೆಂಡ್ ಎಂದು ಕರೆಯಲಾಗಿದೆ.
ಚಿತ್ರ ತಾರೆಯರು, ಮಾಡೆಲ್‌ಗಳು ಇತ್ಯಾದಿಗಳಿಂದ ಆರಂಭವಾದ ಹೇರ್ ಸ್ಟೈಲ್‌ನ ಕ್ರೇಝ್ ಈಗ ಸಾಮಾನ್ಯ ಮಹಿಳೆಯರಲ್ಲೂ ಹೆಚ್ಚಾಗಿದೆ. ಈ ಕಾರಣದಿಂದಾಗಿ ಈಗ ಕಾಲೇಜ್ ಹುಡುಗಿಯರು ಅಥವಾ ವರ್ಕಿಂಗ್ ವುಮನ್ ಅಥವಾ ಗೃಹಿಣಿಯರು ಹೇರ್ ಕಲರ್‌ನ ಲೇಟೆಸ್ಟ್ ಟ್ರೆಂಡ್‌ನ್ನು ತಮ್ಮದಾಗಿಸಿಕೊಂಡು ವಿಶೇಷವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಆದರೆ ಕೂದಲಿಗೆ ಕಲರಿಂಗ್ ಮಾಡುವ ಮೊದಲು ಕೆಳಗಿನ ಕೆಲವು ಪ್ರಮುಖ ವಿಷಯಗಳನ್ನು ಗಮನಿಸಬೇಕು :
ಹೇರ್ ಕಲರಿಂಗ್‌ಗೆ ಮೊದಲು ನಿಮ್ಮ ಕೂದಲನ್ನು ಕಟಿಂಗ್ ಮತ್ತು ಟ್ರಿಮಿಂಗ್ ಮಾಡಿಸಿ. ನೀವು ಹೇರ್ ಕಲರ್ ಮಾಡಿಸಿದಾಗ ಅದು ವ್ಯರ್ಥವಾಗುವುದಿಲ್ಲ.
ಹೇರ್ ಕಲರ್ ಮಾಡಿಸುವ ಮೊದಲು ಪ್ಯಾಚ್ ಟೆಸ್ಟ್ ಅಗತ್ಯವಾಗಿ ಮಾಡಿಸಿ. ಮೊದಲು ನಿಮ್ಮ ಕೈನ ತೆರೆದ ಭಾಗದಲ್ಲಿ ಉಪಯೋಗಿಸಲಾಗುವ ಹೇರ್ ಕಲರ್‌ನ್ನು ಕೊಂಚ ಹಾಕಿ. ನಂತರ ಅದನ್ನು ಪೆನ್‌ನಿಂದ ಗುಂಡಗೆ ಮಾಡಿ ಕನಿಷ್ಠ ಅರ್ಧ ಗಂಟೆ ಬಿಡಿ. ಒಂದು ವೇಳೆ ಆ ಜಾಗದಲ್ಲಿ ಉರಿ ಅಥವಾ ನವೆ ಉಂಟಾದರೆ ಈ ಉತ್ಪನ್ನ ನಿಮ್ಮ ಚರ್ಮಕ್ಕೆ ಉಪಯುಕ್ತವಲ್ಲ ಎಂದು ತಿಳಿಯಿರಿ.
ಕೂದಲನ್ನು ಕರ್ಲ್ ಮಾಡುವ ಮೊದಲು ಹೇರ್ ಆಯಿಲ್‌ನ್ನು ಬುಡಕ್ಕೆ ಚೆನ್ನಾಗಿ ಹಚ್ಚಿ. ನಂತರ ಯಾವುದಾದರೂ ಒಳ್ಳೆಯ ಶ್ಯಾಂಪೂನಿಂದ ಕೂದಲನ್ನು ತೊಳೆಯಿರಿ. ಕೂದಲನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸದೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ಕೂದಲು ಸಂಪೂರ್ಣವಾಗಿ ಒಣಗಿದಾಗ ಹೇರ್ ಕಲರ್ ಉಪಯೋಗಿಸಿ.
ಹೇರ್ ಕಲರ್ ಹಚ್ಚುವ ಮೊದಲು ಅದರಲ್ಲಿ ಕೊಟ್ಟಿರುವ ಸೂಚನೆಗಳನ್ನು ಅಗತ್ಯಾಗಿ ಓದಿ ನಂತರ ಅನುಸರಿಸಿ.
– ಸುಮತಿ