ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಈಗ ತಮ್ಮ ಕೂದಲಿನ ಸೌಂದರ್ಯಕ್ಕಾಗಿ ಮೊದಲಿಗಿಂತ ಹೆಚ್ಚು ಜಾಗರೂಕರಾಗಿದ್ದಾರೆ. ಅದರಿಂದಾಗಿ ಇಂದಿನ ಮಹಿಳೆಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್‌ ಟ್ರೀಟ್‌ಮೆಂಟ್ ಪಡೆಯುತ್ತಿರುವುದಲ್ಲದೆ, ಬದಲಾಗುತ್ತಿರುವ ಹೇರ್‌ ಸ್ಟೈಲ್ ತಮ್ಮದಾಗಿಸಿಕೊಂಡು ವಿಶೇಷ ಲುಕ್‌ನಲ್ಲಿ ಕಾಣಿಸಲು ಇಷ್ಟಪಡುತ್ತಿದ್ದಾರೆ.

ಮುಖ ಎಷ್ಟೇ ಸುಂದರವಾಗಿರಲಿ, ಕೂದಲಿನ ಬಗ್ಗೆ ಜಾಗರೂಕರಾಗಿರದಿದ್ದರೆ ಅಥವಾ ಕೂದಲು ಆಕರ್ಷಕವಾಗಿರದಿದ್ದರೆ ವ್ಯಕ್ತಿತ್ವದಲ್ಲಿ ಕಾಂತಿ ಕಾಣಿಸುವುದಿಲ್ಲ.

ಕೂದಲನ್ನು ಸುಂದರಗೊಳಿಸಲು ಅಗತ್ಯ ಪೋಷಣೆಯ ಜೊತೆ ಜೊತೆಗೆ ಹೇರ್‌ ಸ್ಟೈಲ್‌ನ ಲೇಟೆಸ್ಟ್ ಪದ್ಧತಿ ಹಾಗೂ ಕಲರಿಂಗ್‌ ಈಗ ಕ್ರೇಝ್ ಆಗಿದೆ.

ಕೂದಲಿನ ಸೌಂದರ್ಯಕ್ಕಾಗಿ 2 ಮುಖ್ಯ ವಿಧಾನಗಳು ಹೇರ್‌ ಕಟಿಂಗ್‌ ಹಾಗೂ ಕಲರಿಂಗ್‌ ರೂಢಿಯಲ್ಲಿವೆ. ಇಂದಿನ ಮುಖ್ಯ ಪದ್ಧತಿಯ ಪ್ರಕಾರ ಮೊದಲು ಕೆಲವು ಆಕರ್ಷಕ ಹೇರ್‌ ಕಟಿಂಗ್‌ ಬಗ್ಗೆ ತಿಳಿದುಕೊಳ್ಳೋಣ. ಅಂದಹಾಗೆ ಕಾಲ ಬದಲಾಗುತ್ತಿರುವಂತೆ ಪ್ರತಿ ಬಾರಿ ಒಂದು ಹೊಸ ಫ್ಯಾಷನ್‌ ಕಂಡುಬರುತ್ತದೆ. ಇಂದು ಅಡ್ವಾನ್ಸ್ ಹೇರ್‌ ಕಟಿಂಗ್‌ ಪ್ರಚಲಿತದಲ್ಲಿದೆ. ಇದು ನಮ್ಮ ಲುಕ್‌ನಲ್ಲಿ ವಿಶೇಷ ಬದಲಾವಣೆ ತರುವುದರಿಂದ ಇದನ್ನು ಬಹಳ ಇಷ್ಟಪಡಲಾಗುತ್ತಿದೆ.

kajal-jaiman

ಇದನ್ನು ಕಾಪಾಡಿಕೊಳ್ಳುವುದು ಹೆಚ್ಚು ಕಷ್ಟವೇನಲ್ಲ. ಈ ಕಟಿಂಗ್‌ ಎಷ್ಟು ಸ್ಟೈಲಿಶ್‌ ಆಗಿರುತ್ತದೆಂದರೆ ಎಲ್ಲ ಸಂದರ್ಭಗಳಲ್ಲಿ ಪಾರ್ಲರ್‌ಗೆ ಹೋಗಿ ಹೇರ್‌ ಸ್ಟೈಲ್ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.

ಆದರೆ, ಈ ಅಡ್ವಾನ್ಸ್ ಹೇರ್‌ ಕಟಿಂಗ್‌ ಅಂದರೆ ಏನು? ಎಂದು ನೀವು ಯೋಚಿಸುತ್ತಿರಬಹುದು. ಅಡ್ವಾನ್ಸ್ ಹೇರ್‌ ಕಟಿಂಗ್‌ ಬೇಸಿಕ್‌ ಕಟಿಂಗ್‌ನ ಅಡ್ವಾನ್ಸ್ ರೂಪವಾಗಿದೆ. ಬೇಸಿಕ್‌ ಕಟಿಂಗ್‌ನಲ್ಲಿ ಬ್ಯಾಕ್‌ ಮತ್ತು ಫ್ರಂಟ್‌ ಎರಡರಲ್ಲಿಯೇ ಲೇಸರ್‌ ಕಟ್ ಮಾಡಲಾಗುತ್ತಿತ್ತು. ಆದರೆ ಈಗಿನ ಅಡ್ವಾನ್ಸ್ ಕಟಿಂಗ್‌ ಮಿಕ್ಸ್ ಅಂಡ್‌ ಮ್ಯಾಚ್‌ನ ಕಟಿಂಗ್‌ ಆಗಿದೆ. ಇದರಲ್ಲಿ ನಿಮ್ಮ ಮುಂದಿನ ಹಾಗೂ ಹಿಂದಿನ ಕೂದಲಿನಲ್ಲಿ ಯಾವ ಕಟಿಂಗ್‌ ಒಪ್ಪುತ್ತದೋ ಅದನ್ನು ಮಾಡಲಾಗುತ್ತದೆ. ಹಿಂದಿನ ಕೂದಲಿಗೆ ಸ್ಟೆಪ್ಸ್ ಕಟಿಂಗ್‌ನೊಂದಿಗೆ ಮುಂದಿನ ಕೂದಲಿನಲ್ಲಿ ಲೇಯರ್‌ ಅಥವಾ ಫ್ರಿಂಜಿಶ್‌ ಕಟ್‌ ಮಾಡಲಾಗುತ್ತದೆ.

ಅಡ್ವಾನ್ಸ್ ಕಟಿಂಗ್‌ನ ಇನ್ನಷ್ಟು ವಿಧಾನಗಳನ್ನು ತಿಳಿದುಕೊಳ್ಳಿ. ಇತ್ತೀಚೆಗೆ ಅವನ್ನು ಬಹಳ ಇಷ್ಟಪಡಲಾಗುತ್ತಿದೆ.

hair-cutting1

ಫ್ರಿಂಜಿಶ್ಹಾಗೂ ಸ್ಕ್ವೇರ್ಕಟಿಂಗ್

ಈ ಕಟಿಂಗ್‌ನಲ್ಲಿ ಎಲ್ಲಕ್ಕೂ ಮೊದಲು ಕೂದಲಿಗೆ ನೀರು ಸಿಂಪಡಿಸಿ ಅವನ್ನು ಒದ್ದೆ ಮಾಡಲಾಗುತ್ತದೆ. ನಂತರ ಕೂದಲನ್ನು ಬಾಚಿ ಹಿಂದಿನ ಮತ್ತು ಮುಂದಿನ ಕೂದಲನ್ನು ಬೇರೆ ಬೇರೆ ಮಾಡಲಾಗುತ್ತದೆ. ಮುಂದಿನ ಕೂದಲಿನ ಮಧ್ಯ ಬೈತಲೆ ತೆಗೆದು ಅವನ್ನೂ 2 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಈಗ ಮಧ್ಯದ ಕೂದಲನ್ನು ರೌಂಡ್‌ ಶೇಪ್‌ನಲ್ಲಿ ಸೆಟ್‌ ಪಾರ್ಟ್‌ ಮಾಡಿ ಬೇರ್ಪಡಿಸಲಾಗುತ್ತದೆ ಮತ್ತು ಪಿನ್‌ ಅಪ್‌ ಮಾಡಿ ಸರ್ಕಲ್ ಮಾಡಲಾಗುತ್ತದೆ. ನಂತರ ಕೆಳಗಿನ 2 ಇಂಚ್‌ ಕೂದಲನ್ನು ರೌಂಡ್‌ ಶೇಪ್‌ನಲ್ಲಿ ಸೆಟ್‌ ಹಾಗೂ ಪಿನ್‌ ಅಪ್‌ ಮಾಡಿ ಸಣ್ಣ ಸರ್ಕಲ್ ಮಾಡಲಾಗುತ್ತದೆ.

ಕೆಳಗೆ ಉಳಿದ ಕೂದಲನ್ನು ಮಧ್ಯದಿಂದ 2 ಭಾಗಗಳಲ್ಲಿ ವಿಂಗಡಿಸಿ ಟ್ರಿಮ್ಮಿಂಗ್‌ ಮಾಡಲಾಗುತ್ತದೆ. ನಂತರ ಎರಡೂ ಭಾಗಗಳನ್ನು ಸೇರಿಸಿದಾಗ ಮಧ್ಯಭಾಗದ ಕೆಳಗೆ ಉದ್ದವಿರುವ ಕೂದಲು ಕಂಡುಬರುತ್ತದೆ. ಅವನ್ನು ಸ್ಟ್ರೇಟ್‌, ಯು ಅಥವಾ ವಿ ಶೇಪ್‌ನಲ್ಲಿ ಕತ್ತರಿಸಿ ಕೆಳಗಿನ ಕೂದಲಿಗೆ ಯಾವುದಾದರೂ ಆಕಾರ ಕೊಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ