ವಿಜ್ಞಾನಕ್ಕೆ ಸಮನುಂಟೇ! : ಫುಡ್‌ ಸೈಂಟಿಸ್ಟ್ ಮಿಶೆಲ್ ‌ಆ್ಯಗರ್‌ ಹಾಗೂ ಸೆಲ್ ‌ಬಯಾಲಜಿಸ್ಟ್ ಲಿಂಬಾಸ್ಟ್ರಿಕ್‌ ಲೆಂಡ್‌ ಇದೀಗ ಕೃತಕ ಹಾಲು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ! ಬಯೋ ಮಿಲ್ಕ್ ಕಂಪನಿಯೊಂದರ ಸಂಸ್ಥಾಪಕರಾದ ಇವರಿಬ್ಬರೂ ಮೂಲ ತಾಯಿಯ ಸೆಲ್ ‌ಒಂದನ್ನು ಸಂಸ್ಕರಿಸಿ ಅಸಲಿಯಂಥ ಹಾಲು ತಯಾರಿಸಿದ್ದಾರೆ. ಇದು ವಾಣಿಜ್ಯ ರೂಪದಲ್ಲಿ ಯಶಸ್ವಿಯಾದರೆ, ಮಕ್ಕಳಿಗೆ ಪೌಡರ್‌ ಹಾಲಿನ ಹಂಗಿರುವುದಿಲ್ಲ! ಲ್ಯಾಕ್ಟೋಸ್‌ ಮತ್ತು ಕೆಸಿನ್‌ ಮಾಲಿಕ್ಯುಲರ್‌  ಬಯಾಲಜಿ ನೆರವಿನಿಂದ ತಯಾರಿಸಲಾದ ಬ್ರೆಸ್ಟ್ ಮಿಲ್ಕ್ ಗೆ ಅತಿ ಹತ್ತಿರದ ಈ ಹಾಲು, ಎಂದು ಮಾರುಕಟ್ಟೆಗೆ ಬರಲಿದೆಯೋ ಈಗಲೇ ಹೇಳಲಾಗದು.

ಸಿಂಹವನ್ನು ನೋಡುವುದೋ ಸುಂದರಿಯನ್ನೋ? : ಈ ಫ್ಯಾಷನ್‌ ಶೋ ಮಾತ್ರ ಅತಿ ಅಪರೂಪದ್ದು. ಯಾಕಂತೀರಾ? ಸುಂದರಿಯರ ಡ್ರೆಸ್‌ ನೋಡಿ ಚಪ್ಪಾಳೆ ತಟ್ಟುತ್ತಿದ್ದವರೆಲ್ಲ ಹೆದರಿಕೊಂಡೇ ಹಾಗೆ ಮಾಡುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಅತಿ ಜನಪ್ರಿಯವಾಗಿರುವ ಈ ಒರಾನ್‌ ಫ್ಯಾಷನ್‌ ವೀಕ್‌ ಶೋದ ಸ್ಟೇಟಸ್‌ ಸಿಂಬಲ್ ಆಗಿದೆ, ಈ ದೈತ್ಯ ಸಿಂಹದ ಪುತ್ಥಳಿ! ಇದರ ಮುಂದೆ ಆ ಸುಂದರಿಯರ ಡ್ರೆಸ್‌ ನೋಡಿ ಸೀಟಿ ಹೊಡೆಯುವ ಎದೆಗಾರಿಕೆ ಯಾವ ಎಂಟೆದೆ ಭಂಟನಿಗಿದ್ದೀತು?

ಏನಾದರೂ ಹೊಸತನ್ನು ಮಾಡುತ್ತಿರಿ : ಯೂರೋಪಿನ ಒಂದು ಪ್ರಖ್ಯಾತ ಡ್ಯಾನ್ಸ್ ಕಂಪನಿ ಇಂಪರ್‌ ಮಾನೆನ್ಸ್. ಅದು ಬರ್ಟೊಟ್‌ಬ್ರೆಕ್ಟ್ ನ 1918ರ ಕ್ಲಾಸಿಕ್‌ ನಾಟಕ `ಬಾಲ್`ನ್ನು ನೃತ್ಯ ರೂಪಕ್ಕೆ ಅಳಡಿಸುವಲ್ಲಿ ಯಶಸ್ವಿಯಾಗಿದೆ. ಇದರ ನೂರಾರು ಪ್ರಯೋಗಗಳು ನಡೆದಿವೆ. ಈ ನೃತ್ಯ ನಾಟಕದಲ್ಲಿ ಸೆಕ್ಶುಯಾಲಿಟಿ, ಡಾರ್ಕ್‌ ಟ್ಯೂಮರ್‌, ಪೊಯೆಟ್ರಿ ತುಂಬಿದ್ದು ನೃತ್ಯವಾಗಿ ಇದನ್ನು ತೋರಿಸುವುದು ಸುಲಭವಲ್ಲ. ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ಈ ತಂಡ ಅದನ್ನು ಸಾಧ್ಯವಾಗಿಸಿ ಶುಭಾಷ್‌ ಗಿರಿ ಪಡೆದಿದೆ!

ಪ್ರತಿ ಸಲ ನವೀನ! : ನ್ಯೂಯಾರ್ಕ್‌ನ ಫ್ಯಾಷನ್‌ ಶೋ ಒಂದರಲ್ಲಿ ಪ್ರತಿ ಸಲ ಏನಾದರೂ ನವೀನತೆ ಅಡಗಿರುತ್ತದೆ. ಆ ಹೊಸತು ಕೆಲವೇ ದಿನಗಳಲ್ಲಿ ಹಳತು ಎನಿಸಿಬಿಡುತ್ತದೆ. ಎಂಡ್ಲೋರ್‌ ಎಕ್ಸ್ ಪೀರಿಯೆನ್ಸ್ ಶೋನಲ್ಲಿ ಡಿಸೈನರ್ಸ್‌, ಮಾಡೆಲ್ಸ್ ಖರೀದಿಸುವವರು ಎಲ್ಲರೂ ಸೇರುತ್ತಾರೆ. ಇಲ್ಲಿಂದಲೇ ವಿಶ್ವವಿಡೀ ಫ್ಯಾಷನ್‌ ಟ್ರೆಂಡ್‌ ಸೆಟ್‌ ಆಗಲಿದೆ. ನಮ್ಮ ದೇಶದಲ್ಲಿ ಲಹಂಗಾ, ಸೀರೆಗಳ ಫ್ಯಾಷನ್‌ ಶೋ ಇನ್ನೂ ಚಾಲ್ತಿಯಲ್ಲಿದೆ ಎನ್ನುವುದು ಬೇರೆ ಮಾತು.

ಕೊಲಂಬೋದಿಂದ ಛತ್ತೀಸ್ಘಡಕ್ಕೆ ಬಂದ ಡ್ಯಾನ್ಸ್ ಗ್ರೂಪ್‌ : ಇತ್ತೀಚೆಗೆ ಛತ್ತೀಸ್‌ಘಡ ರಾಜ್ಯದಲ್ಲಿ ನಡೆದ ಡ್ಯಾನ್ಸ್ ಫೆಸ್ಟಿವಲ್ ‌ನಲ್ಲಿ ಶ್ರೀಲಂಕಾದ ಕ್ಯಾಂಡಿ ಗ್ರೂಪ್‌ನ ನೃತ್ಯಪಟುಗಳ ಡ್ಯಾನ್ಸ್ ಕಂಡು ಪ್ರೇಕ್ಷಕರು ದಂಗಾದರು. ಇದರಲ್ಲಿ ಭಾರತೀಯ ಸಂಸ್ಕೃತಿ ಢಾಳಾಗಿತ್ತು, ಎಷ್ಟೇ ಆದರೂ ಶ್ರೀಲಂಕಾ ಭಾರತದ ನೆರೆ ರಾಷ್ಟ್ರಷ್ಟೇ!

ಅದ್ಭುತ ಕಲೆ : ಫಿಗರೆಟಿವ್ ಪೇಂಟಿಂಗ್‌ಗೆ ಇದೀಗ ಹೆಚ್ಚಿನ ಬೇಡಿಕೆ. ಇದರಲ್ಲಿ ದೂರದಿಂದ ಒಂದು ಕ್ಯಾರೆಕ್ಟರ್‌ ಕಂಡು ಬಂದರೂ, ಹತ್ತಿರ ಹೋದರೆ ಏನೂ ಇರೋಲ್ಲ. ಆರ್ಟಿಸ್ಟ್ ಜಸ್ಟಿನ್‌ ಬ್ಲೇಲೇ ರೂಪಿಸಿದ ಪ್ರಿಂಟ್‌ ಹೀಗೇ ಇದೆ. ಇದರಲ್ಲಿ ಬಗೆಬಗೆಯ ಫಿಲ್ಟರ್‌ಗಳ ಬಳಕೆ ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಕೆನಡಾದ ಈ ಕಲಾವಿದ ಸಾವಿರಾರು ಶೋ ನೀಡಿದ್ದಾನೆ. ಈತನ ಪೇಂಟಿಂಗ್ಸ್ ಅಪ್ಪಟ ಹ್ಯಾಂಡ್‌ ಮೇಡ್‌ ಹೊರತು, ಕಂಪ್ಯೂಟರೈಸ್ಡ್ ಅಲ್ಲ. ಬೇಕೆನಿಸಿದರೆ ಪ್ರಿಂಟ್‌ ಸಿಗುತ್ತದೆ.

ನಮ್ಮ ದನಿ ಆಲಿಸಿ : ನಮ್ಮಲ್ಲಿ ಹೆಂಗಸರು ಶಾಹೀನ್‌ ಬಾಗ್‌, ರೋಶನ್‌ ಬಾಗ್‌, ಜಾಫ್ರಾಬಾದ್‌ಗಳಲ್ಲಷ್ಟೇ ಸಂಘರ್ಷ ನಡೆಸುತ್ತಿಲ್ಲ, ಬಲಾಢ್ಯ ಇಸ್ಲಾಮಿಕ್‌ ದೇಶಗಳಲ್ಲೂ ಹೋರಾಡುತ್ತಿದ್ದಾರೆ. ಲೆಬನಾನಿನ ಹೆಂಗಸರು ಸಮಾನತೆಯ ಹಕ್ಕುಗಳು ಹಾಗೂ ಹಿಂಸಾಮುಕ್ತ ಸಮಾಜಕ್ಕಾಗಿ ಮೋರ್ಚಾ ತೆರೆಯುತ್ತಿದ್ದಾರೆ. ಎಲ್ಲಕ್ಕೂ ದೊಡ್ಡ ಹಿಂಸೆ ಧರ್ಮದ ದಂಧೆ ನಡೆಸುವವರದು, ಇದರ ಗ್ರಾಹಕರಿಗೆ ಕೊನೆಯೇ ಇಲ್ಲ. ಈ ಹೆಂಗಸರೇ ಸದಾ ಮೂಢನಂಬಿಕೆಗಳ ಮಾಯಾಜಾಲಕ್ಕೆ ಬಲಿಯಾಗಿ ಧರ್ಮದ ಸರಪಣಿಗಳನ್ನು ತೊಡಿಸಿಕೊಂಡು ಓಡಾಡಲಾರದೆ ಕಷ್ಟಪಡುವರು.

ಸಂಘರ್ಷಕ್ಕೆ ಗೆಲುವು : ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ ವಿವಾದ ಬಲು ಹಳೆಯದು. ಸಾವಿರಾರು ವರ್ಷಗಳ ಹಿಂದೆ ಈ ಪಾಶ್ಚಿಮಾತ್ಯ ಏಷ್ಯಾ ದೇಶಗಳಲ್ಲಿದ್ದ ಯೆಹೂದಿಗಳು ಮುಂದೆ ಕ್ರಮೇಣ ಯೂರೋಪ್‌ ಮತ್ತು ಅಮೆರಿಕಾಗಳಲ್ಲಿ ನೆಲೆಸಿದರು. ಯೂರೋಪ್‌ನಲ್ಲಿ ಹಿಟ್ಲರ್‌ನ ಸರ್ವಾಧಿಕಾರದಡಿ ಕೊಚ್ಚಿಹೋದ ಇವರು ಮರಳಿ ಇಸ್ರೇಲ್‌ಗೆ ಬರುವ ಮನಸ್ಸು ಮಾಡಿದರು. 1900ರಲ್ಲಿ ಕೇವಲ ಇವರು 5 ಲಕ್ಷ ಮಂದಿ ಇದ್ದರು. ಅಲ್ಲಿನವರು ಈಗಾಗಲೇ ಇಸ್ಲಾಂ ಮತ ಒಪ್ಪಿಕೊಂಡು ಬಾಳುತ್ತಿದ್ದರು. ಆದರೆ ಇಂದು ಇಸ್ರೇಲ್ ‌ಭರಪೂರ 88 ಲಕ್ಷ ಮಂದಿಯ ನಾಡು. ಆದರೆ ಇವರು ಪ್ಯಾಲೆಸ್ಟೈನಿನ ಕಡು ಬಡವರಾಗಿ ಜೀವಿಸುತ್ತಿದ್ದಾರೆ. ಅವರಲ್ಲಿ ಮನೋಬಲ ಉಳಿಸಲು ಹಾಗೂ ಸುರಕ್ಷತೆ ಒದಗಿಸಲು ಇತರ ದೇಶಗಳು ಎಷ್ಟೋ ಪ್ರಯತ್ನಪಡುತ್ತಿವೆ. ಅವುಗಳಲ್ಲಿ ಒಂದು, ಗಾಜಾ ಪ್ರಾಂತ್ಯದ ವೈಟ್‌ ಹೌಸ್‌ನ್ನು ಪಿಂಕ್‌ಗೊಳಿಸುವುದು. ಇದು ಅಲ್ಲಿನ ಹೆಂಗಸರ ಸ್ವಾತಂತ್ರ್ಯದ ಪ್ರತೀಕವಾಗಿದೆ. 2018ರಿಂದ ಈ ವೈಟ್‌ಹೌಸ್‌ ಮೇಲೆ ಮಹಿಳಾ ದಿನ ಆಚರಿಸಲಾಗುತ್ತಿದೆ. ಇದರಿಂದ ಆ ಹೆಂಗಸರಿಗೆ ಎಂಥ ಖುಷಿ ಸಿಕ್ಕಿತು ಎಂದು ಈ ಫೋಟೋ ನೋಡಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ