ಬಹುಬೇಗ ವೈರಲ್ ಆದ ಕೆಲವು ನಗೆಹನಿಗಳ ಮೇಲೊಮ್ಮೆ ಗಮನಹರಿಸಿ :

ಸೋಮಶೇಖರ್‌ ಹುಡುಗಿ ನೋಡಲೆಂದು ಹೋದ. ಹುಡುಗಿ ಶ್ಯಾಮಲ ವರ್ಣದವಳು. ಹೀಗಾಗಿ ಅವನಿಗೆ ಇಷ್ಟವಾಗಲಿಲ್ಲ.

ಹುಡುಗಿಯ ತಂದೆ : ಸೋಮಶೇಖರ್‌, ನನ್ನ ಮಗಳನ್ನು ಮದುವೆಯಾದರೆ ನಿಮಗೆ ವರದಕ್ಷಿಣೆಯಲ್ಲಿ ಒಂದು ಕಾರು ಕೊಡ್ತೀನಿ.

ಸೋಮಶೇಖರ್‌ : ಕಾರು ಕೊಟ್ಟು ನೀವು ನಿಮ್ಮ ಬೆನ್ನ ಹಿಂದಿನ ಭಾರ ಇಳಿಸಿಕೊಳ್ಳುತ್ತೀರಿ. ಆದರೆ ಆ ನೇರಳೆ ಹಣ್ಣು ನಮ್ಮ ಕುಟುಂಬಕ್ಕೆ ಬಂದುಬಿಟ್ರೆ ನಮ್ಮ ಮುಂದಿನ ಪೀಳಿಗೆ ವಿಮಾನವನ್ನೇ ಕೊಡಬೇಕಾಗುತ್ತದೆ.

ಮ್ಯಾರೇಜ್ಬ್ಯೂರೊದವರು (ಹುಡುಗಿಗೆ) : ಮೇಡಂ ಈ ಹುಡುಗ 5 ಅಡಿ 11 ಅಂಗುಲ ಇದ್ದಾನೆ. ಎಂ.ಬಿ.ಎ ಮಾಡಿದ್ದಾನೆ. ಸಾಕಷ್ಟು ಗಳಿಸುತ್ತಾನೆ. ಅವನ ಕುಟುಂಬದವರು ಒಳ್ಳೆಯವರು. ಆದರೆ ಹುಡುಗನ ಬಣ್ಣ ಸ್ವಲ್ಪ ಕಪ್ಪು.

ಹುಡುಗಿ : ಸರ್‌, ಇದೇ ಕ್ವಾಲಿಟಿಯಲ್ಲಿ ಬೇರೆ ಕಲರ್‌ದ್ದು ತೋರಿಸ್ತೀರಾ? ಐ ಮೀನ್‌ ಫೇರ್‌ ಕಲರ್‌.

ನಗೆಹನಿಗಳು ಸಮಾಜದ ಕನ್ನಡಿಯಂತಿರುತ್ತವೆ. ನಮ್ಮ ಸಮಾಜದಲ್ಲಿ ಶ್ಯಾಮಲ ಅಥವಾ ಕಪ್ಪು ವರ್ಣದವರ ಬಗ್ಗೆ ಇದೇ ಪ್ರಕಾರದ ಧೋರಣೆ ಇದೆ. ಯಾವುದೇ ಒಂದು ಮಗು ಹುಟ್ಟಿದಾಗ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ಆ ಮಗುವನ್ನು ಅದರ ಅಕ್ಕ ಅಥವಾ ಅಣ್ಣನ ಜೊತೆ ಹೋಲಿಸಿ ನೋಡುತ್ತಾರೆ. ವರ್ಣಭೇದದ ಈ ಧೋರಣೆ ಮನೆಯಿಂದ ಶುರುವಾಗಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆರಿಸಿಕೊಳ್ಳುತ್ತಾ ಹೋಗುತ್ತದೆ. ಈ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲು ನಾವು ಹಿಂದೇಟು ಹಾಕಬಹುದು. ಆದರೆ ಇದನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಮದುವೆ ಸಮಾರಂಭವೇ ಆಗಿರಬಹುದು ಅಥವಾ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿರಬಹುದು, ಸ್ಟೇಜ್‌ ಪರ್ಫಾರ್ಮೆನ್ಸ್ ಮಾಡುವುದಾಗಿರಬಹುದು ಅಥವಾ ಯಾವುದಾದರೂ ಈವೆಂಟ್‌ನ್ನು ಲೀಡ್‌ಮಾಡುವುದಾಗಿರಬಹುದು. ಅಲ್ಲೆಲ್ಲ ಫೇರ್‌ ಸ್ಕಿನ್‌ ಅಂದರೆ ಶ್ವೇತ ವರ್ಣದವರಿಗೇ ಯಾವಾಗಲೂ ಪ್ರಾಮುಖ್ಯತೆ ಕೊಡಲಾಗುತ್ತದೆ. ಅವರನ್ನೇ ಮುಂಚೂಣಿಯಲ್ಲಿ ನಿಲ್ಲಿಸಲಾಗುತ್ತದೆ. ಅದೇ ಶ್ಯಾಮಲ ವರ್ಣದ ಹುಡುಗಿಯರು ಕಪ್ಪು ದ್ರಾಕ್ಷಿ, ನೀಲಿ ದ್ರಾಕ್ಷಿ ಎಂದೆಲ್ಲ ಶಬ್ದಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

25 ವರ್ಷದ ಪತ್ರಕರ್ತೆ ದಿವ್ಯಾ ಹೀಗೆ ಹೇಳುತ್ತಾರೆ, ``ನಾನು ಹುಟ್ಟಿದಾಗ ನನ್ನ ಬಣ್ಣ ನೋಡಿ ಮನೆಯವರಿಗೆಲ್ಲ ಸ್ವಲ್ಪ ನಿರಾಶೆಯೇ ಆಗಿತ್ತು. ಆದರೂ ನನ್ನ ಅಮ್ಮ ನನ್ನನ್ನು ಪ್ರೀತಿಯಿಂದ ಸ್ವೀಕರಿಸಿದರು. ಅಪ್ಪನ ಪ್ರೀತಿಯಲ್ಲೂ ಏನೇನೂ ಕೊರತೆಯಿರಲಿಲ್ಲ. 1 ತಿಂಗಳ ಬಳಿಕ ಅಜ್ಜಿ ನನ್ನನ್ನು ನೋಡಲು ಬಂದಿದ್ದರು. ಆಗ ನನ್ನ ಆರೋಗ್ಯ ಸರಿ ಇರಲಿಲ್ಲ. ಅಮ್ಮನ ಪಕ್ಕ ಆಸ್ಪತ್ರೆಯಲ್ಲಿ ಮಲಗಿದ್ದೆ. ಅಜ್ಜಿ ನನ್ನನ್ನು ಕೈಗೆತ್ತಿಕೊಂಡು, ನನ್ನ ಅಕ್ಕನಿಗೆ ತೋರಿಸುತ್ತಾ, ``ನೀನು ನೋಡು ಎಷ್ಟೊಂದು ಬೆಳಗಿದ್ದೀಯ, ಈ ಕಪ್ಪು ಹುಡುಗಿ ಎಲ್ಲಿಂದ ಬಂತು?'' ಎಂದು ಪ್ರಶ್ನಿಸುತ್ತಾರೆ.

``ಅಜ್ಜಿಯ ಕೈಯಿಂದ ನನ್ನನ್ನು ಕಿತ್ತುಕೊಳ್ಳುತ್ತಾ ಅಮ್ಮ ಜೋರಾಗಿಯೇ ಚೀರುತ್ತ ಹೇಳಿದ್ದರು, ``ಇಲ್ಲ ಅಮ್ಮ, ಇವಳು ನನ್ನ ಕರುಳ ಕುಡಿ. ಇವಳು ಹೇಗೇ ಇದ್ದರೂ ನನಗೆ ಪ್ರೀತಿಪಾತ್ರಳು,'' ಎಂದು ಹೇಳುತ್ತ ನನ್ನನ್ನು ಅಪ್ಪಿಕೊಂಡಿದ್ದರು.

``ಅಪ್ಪ ಅಮ್ಮ ನನ್ನನ್ನು ಪ್ರೀತಿಯಿಂದ ಸಲಹಿದರು, ಚೆನ್ನಾಗಿ ಓದಿಸಿದರು. ನನಗಾಗಿ ತಮ್ಮ ಅಮೂಲ್ಯ ಸಮಯ ಕೊಟ್ಟರು. ನನ್ನನ್ನು ಸಮರ್ಥಳನ್ನಾಗಿ ಮಾಡಿದರು. ನಾನೀಗ ಸ್ಮಾರ್ಟ್‌ ಎನಿಸಿಕೊಂಡಿದ್ದೇನೆ. ಅಜ್ಜಿ ಅಂದು ಹಾಗೆ ವರ್ತಿಸಿದ್ದಕ್ಕೆ ಈಗಲೂ ಪಶ್ಚಾತ್ತಾಪಪಡುತ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ