ಮನೆಯಲ್ಲಿ ಅಡಗಿದ ತೋಳಗಳಿಂದ ಪಾರಾಗುವುದು ಹೇಗೆ?

``ಅತ್ಯಾಚಾರದಂತಹ ಅಪರಾಧ ಮೂಲಭೂತವಾಗಿ ಪೀಡಿತೆಯ ಮಾನವ ಹಕ್ಕುಗಳ ಮೇಲೆ ಹಾಗೂ ಅವಳ ವ್ಯಕ್ತಿತ್ವದ ಮೇಲಿನ ಆಘಾತವಾಗಿದೆ. ಅದು ಅವಳ ವೈಯಕ್ತಿಕ ಮತ್ತು ಸ್ವತಂತ್ರ ಅಸ್ತಿತ್ವದ ಮೇಲೆ ಸದೃಢವಾದ ಅಂಕುಶ ಹಾಕುತ್ತದೆ. ಸಭ್ಯ ಸಮಾಜದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬ ವ್ಯಕ್ತಿಯ ಸ್ವಾಭಿಮಾನವನ್ನು ಗೌರವಿಸಬೇಕು. ಇನ್ನೊಬ್ಬರ ದೈಹಿಕ ಕ್ಷೇತ್ರವನ್ನು ಅತಿಕ್ರಮಿಸಲು ಯಾರಿಗೂ ಹಕ್ಕಿಲ್ಲ. ಹಾಗೆ ಮಾಡುವುದು ಅಪರಾಧವಷ್ಟೇ ಅಲ್ಲ, ಅದು ಸಂತ್ರಸ್ತೆಯ ಮನದಲ್ಲಿ ಆಳವಾದ ಗಾಯ ಉಂಟು ಮಾಡುತ್ತದೆ. ಅತ್ಯಾಚಾರಿಗಳು ಇಂಡಿಯನ್‌ ಪೀನಲ್ ಕೋಡ್‌ನ ಅಂತರ್ಗತದಲ್ಲಿ ಶಿಕ್ಷಾರ್ಹರಾಗಿದ್ದಾರೆ. ಅವರು ಸಂತ್ರಸ್ತೆಯ ಸಮಾನ ಹಕ್ಕು ಹಾಗೂ ವೈಯಕ್ತಿಕ ಗುರುತಿನ ಹಕ್ಕಿನ ಮೇಲೂ ನೋಂಟು ಮಾಡುತ್ತಾರೆ. ಅದು ಸಂತ್ರಸ್ತೆಯ ಕಾನೂನು ಹಾಗೂ ಸಂವಿಧಾನಕ ಹಕ್ಕೂ ಆಗಿದೆ.''

ಈ ಮಾತುಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ದೀಪಕ್‌ ಮಿಶ್ರಾರವರದು. ಅವರು ಪಂಜಾಬ್‌ನ ಕೇಸೊಂದರಲ್ಲಿ ಸೋದರ ಸೊಸೆಯ ಮೇಲೆ ಸೋದರ ಮಾವ ಹಾಗೂ ಆತನ ಸಹೋದ್ಯೋಗಿ ನಡೆಸಿದ ಅತ್ಯಾಚಾರದಲ್ಲಿ ಅವರನ್ನು ಅಪರಾಧಿಗಳೆಂದು ತೀರ್ಮಾನಿಸಿ, ಶಿಕ್ಷೆಯನ್ನು ಕಡಿಮೆಗೊಳಿಸುವ ಮನವಿಯನ್ನು ತಿರಸ್ಕರಿಸುತ್ತಾ ಹೇಳಿದರು. ಅತ್ಯಾಚಾರ ವೈರತ್ವದಿಂದ ಉಂಟಾಯಿತೆಂದು ಆರೋಪಿಗಳು ಹೇಳಲಿಲ್ಲ.  2000ದ ಆಸುಪಾಸಿನಲ್ಲಿ ವರದಿಯಾದ ಈ ಅಪರಾಧದಲ್ಲಿ ಸಂತ್ರಸ್ತೆಯ ವಯಸ್ಸು 16ಕ್ಕಿಂತ ಹೆಚ್ಚಿತ್ತು. ಆದರೆ ಸಂತ್ರಸ್ತೆಯ ತಂದೆ ಅವಳು 14ಕ್ಕಿಂತ ಕಡಿಮೆ ವಯಸ್ಸಿನಳು ಎಂದಿದ್ದರು.

ಆ ಹುಡುಗಿ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಸೋದರಮಾವನ ಮೇಲೆ ವಿಶ್ವಾಸವಿಟ್ಟಿದ್ದಳು. ಅವಳ ಪ್ರೀತಿ ಮತ್ತು ವಿಶ್ವಾಸವನ್ನು ಸೋದರಮಾವ ದುರುಪಯೋಗಪಡಿಸಿಕೊಂಡ ಎಂಬ ವಿಷಯವನ್ನು ಸರ್ವೋಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಇದೊಂದೇ ವಿಷಯವಲ್ಲ. ನಿರ್ಭಯಾ ಅಥವಾ ಉಬರ್‌ನಂತಹ ಘಟನೆಗಳಿಗಿಂತ ಮನೆಗಳಲ್ಲಿನ ಅತ್ಯಾಚಾರಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ. ಅಸಲಿಗೆ ಮನೆಯಲ್ಲಿ ಅತ್ಯಾಚಾರ ಮಾಡಿದ ನಂತರ ತಪ್ಪಿಸಿಕೊಳ್ಳುವ ಅಭ್ಯಾಸಗಳೇ ಗಂಡಸರನ್ನು ಸಿಂಹಗಳನ್ನಾಗಿ ಮಾಡಿಬಿಡುತ್ತವೆ. ಅವರು ಎಲ್ಲರ ಮೇಲೆ ಜೋರು ಮಾಡುತ್ತಿರುತ್ತಾರೆ.

ಅತ್ಯಾಚಾರಕ್ಕೆ ನಿಜವಾದ ಕಾರಣ ದೇಶದಲ್ಲಿ ಅಶ್ಲೀಲ ಸಾಹಿತ್ಯ ಮಾರಾಟವಾಗದಿದ್ದರೂ ಅಶ್ಲೀಲ ಬೈಗುಳಗಳಿಗೆ ಯಾವುದೇ ನಿರ್ಬಂಧವಿಲ್ಲ. ಅವನ್ನು ತಟಕ್ಕನೆ ಉಪಯೋಗಿಸಲಾಗುತ್ತದೆ. ಮಹಿಳೆಯರ ಮೇಲೆ ಸೇಡು ತೀರಿಸಿಕೊಳ್ಳುವ ಹಳೆಯ ಕಾಲದ ಭಾವನೆಗಳನ್ನು ಇಂದಿಗೂ ಜೀವಂತಾಗಿಡಲಾಗಿದೆ. ಸಮಾಜದಲ್ಲಿ ಅತ್ಯಾಚಾರಗಳಂತೂ ಬಹಳ ನಡೆಯುತ್ತವೆ. ಆದರೆ ಅಮ್ಮನಿಗೆ, ಅಕ್ಕನಿಗೆ ಬೈಗುಳಗಳು ಖಂಡಿತ ಇರುತ್ತವೆ. ಬೈಯುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸಲಾಗುತ್ತದೆ.

ನ್ಯಾಯಾಧೀಶ ದೀಪಕ್‌ ಮಿಶ್ರಾರವರು ಅತ್ಯಾಚಾರವನ್ನು ನೀಚ ಅಪರಾಧವೆಂದು ಕರೆದು ಶಿಕ್ಷೆಯನ್ನು ಕಡಿಮೆಗೊಳಿಸುವ ಮನವಿಯನ್ನು ತಿರಸ್ಕರಿಸಿ ಸರಿಯಾಗಿಯೇ ಮಾಡಿದ್ದಾರೆ. ಮನೆಯ ನಾಲ್ಕು ಗೋಡೆಗಳು ಎಲ್ಲ ಹುಡುಗಿಯರಿಗೆ ಸುರಕ್ಷತೆಯ ಕವಚವಾಗಿರಬೇಕು. ಕಠಿಣ ಕಾನೂನುಗಳು ಮಾನಸಿಕತೆಯನ್ನು ಬದಲಿಸುವುದಿಲ್ಲ. ಆದರೆ ಅವು ಖಂಡಿತ ಹೆದರಿಕೆ ಉಂಟುಮಾಡುತ್ತವೆ. ವಿಷಾದವೆಂದರೆ ಸುಮಾರು 2000ನೇ ಇಸವಿಯಲ್ಲಿ ನಡೆದ ಪ್ರಕರಣ 2015ರವರೆಗೆ ಕೋರ್ಟುಗಳಲ್ಲಿ ನಡೆಯಿತು. ಅಪರಾಧಿಗೆ ಯಾವಾಗಲೂ ಇಂದು ಬಿಡುಗಡೆಯಾಗುತ್ತೇನೆ, ನಾಳೆ ಬಿಡುಗಡೆಯಾಗುತ್ತೇನೆ ಎನ್ನಿಸುತ್ತಿರುತ್ತದೆ. ಅವನು ತನ್ನ ಅಪರಾಧದ ಬಗ್ಗೆ ಪಶ್ಚಾತ್ತಾಪ ಪಡುವ ಬದಲು ಬಿಡುಗಡೆಯಾಗುವ ಆಸೆಯಿಟ್ಟುಕೊಳ್ಳುವುದು ತಪ್ಪು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ