ಜಾಗೀರ್ದಾರ್*

ನವರಸ ನಾಯಕ ಜಗ್ಗೇಶ್ ಅಂತ ಹೆಸರು ಪಡೆಯಲು ಜಗ್ಗೇಶ್ ಪಟ್ಟ ಶ್ರಮ ಅಷ್ಟಿಷ್ಟಲ್ಲ..ಎಂದಿಗೂ ಧೃತಿಗೆಡಲಿಲ್ಲ.ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಬೆಳೆದರು , ನಮ್ಮ ಕೈಯಲ್ಲಿ ಆಗೋಲ್ಲ ಅಂತ ಎಂದಿಗೂ ಹೇಳಲಿಲ್ಲ.. ಇಂದಿನ ಯುವ ಪೀಳಿಗೆಗೆ ಸೋಷಿಯಲ್ ಮೀಡಿಯಾದಲ್ಲಿ ಅವರೊಂದು ಪೋಸ್ಟ್ ಹಾಕಿದ್ದಾರೆ..ಅದು ಹೀಗಿದೆ ಓದಿ..

ನನಗೆ ಸಿಗುವ ಇಂದಿನ ಯುವಪೀಳಿಗೆ ಮಕ್ಕಳು ಕೇಳುವ ಪ್ರಶ್ನೆಗಳು “ನಾವು ಬಡವರು,ನಮ್ಮಂಥವರಿಗೆ ಬೆಲೆ ಇಲ್ಲಾ, ನಾವು ಹೇಗೆ ಗೆಲ್ಲೋದು,ನಮಗೆ ಯಾರು ಕೈ ಹಿಡಿಯರು,ಎಲ್ಲಿಹೋದರು ಅಪಮಾನ,ಹೇಗೆ ಬದುಕೋದು)

ಸ್ನೇಹಿತರೆ ಈ ಚಿತ್ರ ಗಮನವಿಟ್ಟು ನೋಡಿ ಯುವಕನಾಗಿದ್ದಾಗ ನನಗು ನಿಮ್ಮ ಪ್ರಶ್ನೆಗಳೆ ಹೃದಯದಲ್ಲಿ ಮೂಡಿ ಒಬ್ಬನೆ ತಲೆ ಚಚ್ಚಿ ಹುಚ್ಚನಂತೆ ಅಳುತ್ತಿದ್ದೆ!!

jaggesh 1

ಆಗ ಅಮ್ಮ ತೋರಿದ ಹಾಗು ಹೇಳಿದ್ದು ಒಂದೆ “ರಾಯರಿದ್ದಾರೆ” ಅವರನ್ನ ಗಟ್ಟಿಯಾಗಿ ಹಿಡಿ ಸಿಕ್ಕ ಕೆಲಸ ಶ್ರದ್ಧೆಯಿಂದ ಮಾಡು,ಶುದ್ಧವಾಗಿ ಬಾಳು,ಈಗ ನೀನು ಸಸಿ ಅವರ ಕೃಪೆ ಸಿಕ್ಕರೆ ಮರವಾಗಿ ನೆರಳುಕೊಡುವೆ ಎಂದು!!

ಅಮ್ಮ ಹೇಳಿದ ಮಾತು ಚಾಚು ತಪ್ಪದೆ ಇಳಿವಯಸ್ಸಲ್ಲು ಪಾಲಿಸುತ್ತಿರುವೆ..

ಅಂದಿನ ಮಂತ್ರಾಲಯದ ತುಂಗೆಯಲ್ಲಿ ತಿರುಕನ ಕನಸು ಪೋಟೋ ನೋಡಿ..!!ನೀವು ಧೈರ್ಯ ತಂದು ಎದ್ದು ನಿಲ್ಲಿ ರಾಯರ ಮೇಲೆ ಆಣೆ ನೀವು ಗೆದ್ದು ನಿಲ್ಲುತ್ತೀರಿ ಒಂದುದಿನ….

ಒಂದಲ್ಲಾ ಒಂದು ದಿವಸ ಆಗುತೀನಿ

ನಾನು ನಾಡೆಲ್ಲಾ ಮೆಚ್ಚುವಂತ ಹಮ್ಮೀರ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ