ಪತಿಯಿಂದ ಪರಿತ್ಯಕ್ತೆಯಾದ ಇಂದಿರಾ ತನಗಿನ್ನೂ ಭವಿಷ್ಯವೇ ಇಲ್ಲ ಎಂದು ಚಿಂತಿಸುತ್ತಿದ್ದಾಗ, ಚಂದ್ರಪ್ಪಗೌಡರು ಅವಳ ಬಾಳಿಗೆ ಹೆಮ್ಮರದಂತೆ ಆಸರೆಯಾಗಿ ಬಂದರು. ಮುಂದೆ ಅವರು ತೀರಿಕೊಂಡಾಗ, ಅವರ ಕುಟುಂಬದಲ್ಲಿ ಇವಳ ಸ್ಥಾನ ಏನಾಯಿತು......?

``ಅಂಕಲ್, ನನ್ನವರಿಗೆ ಇನ್ನೊಮ್ಮೆ ತುಸು ತಿಳಿಸಿ ಹೇಳಿರಲ್ಲ.....? ಬಾಳ ಉಪಕಾರ ಆಗುತ್ತೆ.''

``ನಿನ್ನ ಗಂಡನಿಗೆ ಹೇಳೋದು ಏನು ಉಳಿದೈತಂತ ಹೇಳ್ಬೇಕು? ಎಷ್ಟು ಸಾರೆ ತಿಳಿ ಹೇಳಿಲ್ಲ.....? ಅನೊಂಥರ ನಾಯಿ ಬಾಲ ಡೊಂಕು ಇದ್ದಂತೆ. ನಿನ್ನ ಅಪ್ಪಾನೂ ಬಾಳ ಹೇಳ್ಯಾನ. ಇಬ್ರು ಸೇರ್ಕೊಂಡೂ ಹೇಳೀವಿ. ಇನ್ನೆಂಗ ಹೇಳ್ಬೇಕು ಅಂತ ತಿಳಿದಿಲ್ವಾಗೇದ.''

``ಇಲ್ಲ, ಅಂಕಲ್. ನನ್ಗಿ ಬಾಳ ಚಿಂತಿ ಆಗ್ಲಕ್ಕತೇದ.''

``ಇನ್ನೊಂದು ಮೂರ್ನಾಲ್ಕು ದಿನ ಬಿಟ್ಟು ನಾ ನಿಮ್ಮೂರಿಗೆ ಹೋಗಾ ಅದೀನಿ. ಅಲ್ಲಿಗೆ ಹೋದ್ರೆ ಸರಿ, ಇಲ್ಲಾಂದ್ರೆ ಇಲ್ಲಿಗೇ ಅವನ್ ಕರ್ಸಿ ಹೇಳ್ತೀನಿ. ನಾ ಹೇಳಿ ಕಳ್ಸಿದ್ರೆ ಅವ ಓಡೋಡ್ಕಂತ ಇಲ್ಲಿಗೆ ಬರ್ತಾನೆ. ಆತಲ್ಲ....? ಸುಮ್ನೇ ಚಿಂತಿ ಮಾಡ್ಕೋತ ಕೂಡ್ಬ್ಯಾಡ. `ಚಿಂತ್ಯಾಕೆ ಮಾಡುತಿ, ಚಿನ್ಮಯನಿದ್ದಾನೆ' ಅಂತ ದಾರ್ಶನಿಕರೇ ಹೇಳ್ಯಾರಲ್ಲ? ಎಲ್ಲ ಸರಿ ಹೋಗುತ್ತೆ.''

``ನೀವು ಎಷ್ಟಾದ್ರೂ ನಮ್ಮಪ್ಪಾಜಿ ಖಾಸಾ ದೋಸ್ತು. ಅದ್ಕೇ ಹೇಳ್ದೆ.  ನೀವೇಳ್ದಂಗೆ ಮನಸ್ಸಿಗೆ ಹಚ್ಕೊಳ್ದೇ ಇರ್ತೀನಿ, ಆತಾ....?''

``ಇದು ಒಳ್ಳೇ ಹುಡುಗಿ ಲಕ್ಷಣ! ಹುಟ್ಟಿದಾಗಿಂದ ನಿನ್ನ ನೋಡೀನಿ. ನಿನ್ಗೆ ಒಳ್ಳೇದು ಆಗ್ಬೇಕು ಅಂತ ನಾ ಬಯಸೋನು. ನಿಮ್ಮಪ್ಪ ನನ್ಗಿಂತ ಏಳೆಂಟು ವರ್ಷ ದೊಡ್ಡಾವಿದ್ರೂ ನಮ್ ದೋಸ್ತಾನಿಗೆ ವಯಸ್ಸು ಅಡ್ಡ ಬಂದಿಲ್ಲ. ಗೌಡ, ಕುಲ್ಕರ್ಣಿ ಇಬ್ರೂ ಚೊಲೋನೇ ಅದೀವಿ. ಇರ್ಲಿ, ನಿಮ್ಮಪ್ಪ ಮನ್ಯಾಗ ಅದಾನೋ ಇಲ್ವೋ? ತಟಗರ ಸುಳಿ ಕಾಣಿಲ್ತು?''

``ಅವ್ರಿಗೆ ಹಗಲೂ ರಾತ್ರಿ ನಂದೇ ಚಿಂತಿ ಆಗ್ಯಾದ. ವಿಶೇಷ ಪೂಜೆ ಮಾಡ್ಸಿಕೊಂಡು ಬರ್ಲಿಕ್ಕೆ ಅಪ್ಪ, ಅಮ್ಮ ಇಬ್ರೂ ಮಂತ್ರಾಲಯಕ್ಕೆ ಹೋಗ್ಯಾರ.''

``ಹೌದಾ? ಪೂಜೆ, ಪುನಸ್ಕಾರ ಎಲ್ಲಾ ಅಗ್ಲಿಬಿಡು. ಒಟ್ನಲ್ಲಿ ನಿನ್‌ ಬಾಳು ಸುದ್ದಾದ್ರೆ ಸಾಕು. ಹೌದು, ಹೀಂಗೇ ಬರೀ ಮಾತಾಡಿ ಕಳ್ಸುತೀಯಾ ಅಥವಾ ಒಂದ್ಕಪ್‌ ಚಾನಾದ್ರೂ ಕುಡುಸ್ತೀಯಾ?''

``ಅಂಕಲ್, ಹಂಗ್‌ ಅನಬ್ಯಾಡ್ರಿ.... ಮಾತಿನಾಗೆ ಮರ್ತಿದ್ದೆ. ಎರ್ಡು ಮಿನಿಟಿನಾಗ ಚಾ ತರ್ತೇನಿ,'' ಎಂದೆನ್ನುತ್ತಾ ಕುಲಕರ್ಣಿ ರಾಘವೇಂದ್ರರಾವ್ ‌ರ ಮಗಳು ಇಂದಿರಾ ಅಡುಗೆಮನೆಗೆ ಹೆಜ್ಜೆ ಹಾಕಿದಳು. ಅವಳನ್ನೇ ದಿಟ್ಟಿಸುತ್ತಾ ಚಂದ್ರಪ್ಪಗೌಡರು ಕುಳಿತುಕೊಂಡರು.

ಐವತ್ತು ವರ್ಷದ ಚಂದ್ರಪ್ಪಗೌಡರಿಗೆ ಮತ್ತು ರಾಘವೇಂದ್ರ ರಾವ್ ಕುಲಕರ್ಣಿಯವರಿಗೆ ಚಿಕ್ಕವರಿದ್ದಾಗಿನಿಂದಲೂ ಚಲೋ ದೋಸ್ತಿ. ಇವ್ರು ಅವರ ಮನೆಗೆ ಹೋಗೋದು, ಅವ್ರು ಇವರ ಮನೆಗೆ ಬರೋದು ಇದ್ದೇ ಇರುತ್ತಿ.

`ಈ ಹುಡುಗಿ ಮದುವೆಯಾಗಿ ಆರು ತಿಂಗಳೂ ಆಗಿಲ್ಲ. ಸಂಸಾರದ ಗಾಲಿಗಳೆರಡಕ್ಕೂ ತಾಳಮೇಳವಿಲ್ಲ. ತವರುಮನಿ ಸೇರಿ ಹದಿನೈದು ದಿನಗಳಾಗಿರಬೇಕು. ಈಕಿಗಿನ್ನೂ ಇಪ್ಪತ್ತೈದಿರಬೇಕು. ಇಂದಿರಾ ತುಸು ಕಪ್ಪೇ. ಪೀಚುಪೀಚಾಗಿದ್ದಳು. ಈಗೀಗ ತುಸು ಮೈತುಂಬಿಕೊಂಡು ಕಳೆಕಳೆಯಾಗಿ ಕಾಣುತ್ತಿದ್ದಾಳೆ. ಇವಳ ಗಂಡ ಪವನನಿಗೆ ಒಂದು ಜೆರಾಕ್ಸ್ ಅಂಗಡಿ ಇದೆ. ಕುಡಿತದ ಚಟ ಇವನನ್ನು ಬಿಡವೊಲ್ಲದು. ಯಾಗಲೂ ಅದೇನೋ ಒಂಥರ ಗುಂಗಿನಲ್ಲಿರುತ್ತಾನೆ. ನಾನೂ ಇವನ ಬಗ್ಗೆ ತುಸು ಕೇಳಿದ್ದೆ. ``ರಾಘಪ್ಪನಿಗೆ ಹೇಳಿದೆ, `ಗೌಡಾ, ಇಂದೂಗೆ ಆಗಲೇ ಇಪ್ಪತ್ನಾಲ್ಕು ದಾಟಿದೆ. ವಯಸ್ಸು ಏರಿದಂತೆ ಮದುವೆ ಕಷ್ಟ ಆಗುತ್ತೆ. ನಿನಗೆ ಕನ್ಯಾ ಸೆರೆ ಕಳೆದುಕೊಳ್ಳಬೇಕಿದೆ. ರಾಯರ ಕೃಪೆಯಿಂದ ಎಲ್ಲವೂ ಸರಿ ಹೋಗುತ್ತೆ,' ಅಂತ. ರಾಘಪ್ಪ ರಾಗ ತೆಗೆಯುತ್ತಿದ್ದಾಗ, `ನಿನ್ನ ಈ ಕರಿಮೂತಿ ಮಗಳಿಗೆ ಗಂಡು ಸಿಗೋದು ಕಷ್ಟ. ನಾನೇ ಇವಳನ್ನು ಕಟ್ಟಿಕೊಳ್ಳಬೇಕಾಗುತ್ತೆ,' ಅಂತ ಇವಳು ಚಿಕ್ಕವಳಿದ್ದಾಗಿನಿಂದ ನಾನು ತಮಾಷೆ ಮಾಡುತ್ತಿದ್ದುದನ್ನು ನೆನಪಿಸುತ್ತಿದ್ದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ