ರೇಷ್ಮೆ ಸೀರೆ ಎಂದರೆ ಹೆಣ್ಣುಮಕ್ಕಳ ಮುಖ ಅರಳುತ್ತದೆ! ರೇಷ್ಮೆ ಸೀರೆ ಇಲ್ಲದೆ ಯಾವುದೇ ಶುಭ ಸಮಾರಂಭಗಳೂ ಸಂಪನ್ನ ಎನಿಸುವುದಿಲ್ಲ. ಆದರೆ ಚಿನ್ನ ಖರೀದಿಸುವಾಗ ಹೇಗೆ `ಹಾಲ್ ಮಾರ್ಕ್‌' ಬಗ್ಗೆ ಗಮನಿಸುತ್ತಿರೀ ಅದೇ ರೀತಿ ರೇಷ್ಮೆ ಸೀರೆ ಖರೀದಿಸುವಾಗಲೂ `ಸಿಲ್ಕ್ ಮಾರ್ಕ್‌' ಇದೆಯೇ ಎಂದು ನೋಡಿ ಖರೀದಿಸುವುದು ಬಹಳ ಮುಖ್ಯ ಎಂದು `ಸಿಲ್ಕ್ ಮಾರ್ಕ್‌ಆರ್ಗನೈಸೇಶನ್‌ ಆಫ್‌ ಇಂಡಿಯಾ' ಗ್ರಾಹಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.

ಮದುವೆ ಸಮಾರಂಭದಲ್ಲಿ ರೇಷ್ಮೆ ಇಲ್ಲದಿದ್ದರೆ ನಡೆಯುವುದೇ ಇಲ್ಲ. ಮೈಸೂರು ಸಿಲ್ಕ್‌, ಬನಾರಸ್‌, ಕಾಂಜೀರಂ, ಇಳಕಲ್..... ಜನಪ್ರಿಯ ಸೀರೆಗಳನ್ನು ಉಟ್ಟುಕೊಳ್ಳುವುದೆಂದರೆ ಮಹಿಳೆಯರಿಗೆ ಖುಷಿ.

ಸಾವಿರಾರು ರೂಪಾಯಿ ಕೊಟ್ಟು ಖರೀದಿಸುವ ರೇಷ್ಮೆ ಸೀರೆ ನಿಜವಾಗಲೂ ಅಸಲಿಯೋ ನಕಲಿಯೋ? ಎಂದು ಗೊತ್ತಿಲ್ಲದೆ ಅದನ್ನು ಕೊಂಡುಕೊಳ್ಳುವುದು ಕಷ್ಟದ ಕೆಲಸ. ಜನರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಸಲುವಾಗಿಯೇ ಸಿಲ್ಕ್ ಮಾರ್ಕ್‌ ಸಂಸ್ಥೆ ಸಾಕಷ್ಟು ಕೆಲಸ ಮಾಡುತ್ತಿದೆ.

ಏನಿದು ಸಿಲ್ಕ್ ಮಾರ್ಕ್‌? : ಸಿಲ್ಕ್ ಮಾರ್ಕ್‌ ಆರ್ಗನೈಸೇಶನ್‌ ಆಫ್‌ ಇಂಡಿಯಾ ರೇಷ್ಮೆ ಮಂಡಳಿಯ ಅಂಗಸಂಸ್ಥೆ. ಯಾವುದೇ ಲಾಭ ನಷ್ಟದ ಉದ್ದೇಶವಿಲ್ಲದೆ ಗ್ರಾಹಕರಿಗೆ ಗುಣಮಟ್ಟದ ರೇಷ್ಮೆ ಸಿಗಬೇಕು ಎಂಬ ಸದುದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು. ಬೆಂಗಳೂರು, ಚೆನ್ನೈ, ಕೊಯಮತ್ತೂರು, ಪಾಲಕ್ಕಾಡ್‌, ಹೈದರಾಬಾದ್‌, ಮುಂಬೈ, ಕೋಲ್ಕತಾ, ಗುವಾಹಟಿ, ವಾರಾಣಸಿ, ಲಕ್ನೋ, ಹೊಸದಿಲ್ಲಿ, ಹರಿಯಾಣದ ಪಂಚಕುಲ ಮತ್ತು ಶ್ರೀನಗರದಲ್ಲಿ ಸಿಲ್ಕ್ ಮಾರ್ಕ್‌ ನ ಶಾಖೆಗಳಿವೆ.

ಹಾಲ್ ಮಾರ್ಕ್‌, ಫುಡ್‌ ಮಾರ್ಕ್‌ ಗಮನಿಸುವಂತೆಯೇ ರೇಷ್ಮೆ ಉತ್ಪನ್ನಗಳನ್ನು ಖರೀದಿಸುವ ಮುನ್ನ `ಸಿಲ್ಕ್ ಮಾರ್ಕ್‌' ಇದೆಯೇ ಇಲ್ಲವೇ ಎಂದು ನೋಡಬೇಕು. ರೇಷ್ಮೆ ಸೀರೆಗಳಿಗೆ ಸಿಲ್ಕ್ ಮಾರ್ಕ್‌ ನ ಟ್ಯಾಗ್‌ ಅಂಟಿಸಲಾಗಿರುತ್ತದೆ. ಅಲ್ಲದೆ ಪ್ರತಿ ಟ್ಯಾಗ್‌ ಗೂ ಕೋಡ್‌ ವರ್ಡ್‌ ಇರುತ್ತದೆ. ಈ ರೀತಿ ಸಿಲ್ಕ್ ಮಾರ್ಕ್‌ ಇರುವಂತಹ ಸೀರೆಗಳು ಶೇ.100 ರಷ್ಟು ಗುಣಮಟ್ಟ ಹೊಂದಿರುತ್ತವೆ.

ಒಂದು ವೇಳೆ ಸಿಲ್ಕ್ ಮಾರ್ಕ್‌ ಟ್ಯಾಗ್‌ ಇದ್ದೂ ನಕಲಿ ಸೀರೆಗಳನ್ನು ಕೊಟ್ಟಿದ್ದರೆ ಅಂತಹ ಅಂಗಡಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ರೇಷ್ಮೆ ಸೀರೆ ಮಾರಾಟ ಮಾಡುವುದನ್ನೇ ಬಂದ್‌ ಮಾಡಿಸಲಾಗುತ್ತದೆ. ಗ್ರಾಹಕರಿಗೂ ಸೂಕ್ತ ನ್ಯಾಯ ಒದಗಿಸಲಾಗುತ್ತದೆ.

ಭಾರತದಲ್ಲೇ ಹೆಚ್ಚಿನ ಬೇಡಿಕೆ : ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಸಾಕಷ್ಟು ಮುಂದಿರಬಹುದು. ಆದರೆ, ಆ ದೇಶದಲ್ಲಿ ರೇಷ್ಮೆಗೆ ಆಂತರಿಕ ಮಾರುಕಟ್ಟೆ ಇಲ್ಲ, ರೇಷ್ಮೆಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಬೇಡಿಕೆ ಇರುವುದು ಭಾರತದಲ್ಲಿ. ದೇಶದಲ್ಲಿ ರೇಷ್ಮೆಗೆ ಬೇಡಿಕೆ ಎಷ್ಟಿದೆ ಎಂದರೆ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೂ ಕೂಡಾ, ತನ್ನ ಆಂತರಿಕ ಮಾರುಕಟ್ಟೆಯ ಪೂರೈಕೆಗಾಗಿಯೇ ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳಬೇಕಿದೆ.

ರೇಷ್ಮೆ ಇಲಾಖೆ ಅಂಗಸಂಸ್ಥೆ

ಸಿಲ್ಕ್ ಮಾರ್ಕ್‌ ಆರ್ಗನೈಸೇಶನ್‌ ಆಫ್‌ ಇಂಡಿಯಾ ಗ್ರಾಹಕರಿಗೆ ಶೇ.100ರಷ್ಟು ಗುಣಮಟ್ಟದ ಸಿಲ್ಕ್ ದೊರೆಯಬೇಕು ಎಂದು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಈ ಕುರಿತು ಸಿಲ್ಕ್ ಮಾರ್ಕ್‌ ಆರ್ಗನೈಸೇಶನ್‌ ಆಫ್‌ ಇಂಡಿಯಾದ ಚೀಫ್ ಡಾ. ನರೇಶ್‌ಬಾಬು `ಗೃಹಶೋಭಾ' ಜೊತೆ ಹಂಚಿಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ