ಒಮ್ಮೆ ಪತಿ ಅತಿ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಪತ್ನಿಯ ಕಡೆ ಜರುಗುತ್ತಾ, ಪ್ರೀತಿಯಿಂದ ಅವಳನ್ನು ಕೇಳಿದ, ``ಡಾರ್ಲಿಂಗ್‌, ನನ್ನ ಗೆಳೆಯರಲ್ಲಿ ಇಲ್ಲದ ಆದರೆ ನನ್ನಲ್ಲಿ ಮಾತ್ರ ಇರುವ ಒಂದು ವಿಶೇಷ ಗುಣ ಯಾವುದೆಂದು ಹೇಳಬಲ್ಲೆಯಾ?''

ಅದಕ್ಕೆ ಪತ್ನಿ ರೊಮ್ಯಾಂಟಿಕ್‌ ಆಗಿ ಪಲುಕಿದಳು, ``ಡಾರ್ಲಿಂಗ್‌ ಒಂದು ಮಾತಂತೂ ನನಗೆ ನಿನ್ನಲ್ಲಿ ಬಹಳ ಇಷ್ಟ, ಆ ಗುಣ ಅವರಿಗೆ ಇಲ್ಲ ಬಿಡು. ನಿನ್ನ ತರಹ ಡಿಫರೆಂಟ್‌ ಆಗಿ, ಸೆಕ್ಸಿಯಾಗಿ ಕಿಸ್‌ ಮಾಡಲು ಅವರಾರಿಗೂ ಬರೋದೆ ಇಲ್ಲ ಬಿಡು!''

 

ಗುಂಡ ಗುಂಡಿ ಘನಘೋರವಾಗಿ ಜಗಳವಾಡಿದರು. ಆಗ ಗುಂಡಿ ಗುಂಡನ ಬಾಯಿ ಮುಚ್ಚಿಸಲು ದಬಾಯಿಸಿದಳು, ``ನೋಡ್ರಿ, ಜಾಸ್ತಿ ರಾಂಗ್‌ ಮಾಡಬೇಡಿ. ನಿಮ್ಮ ಹತ್ತಿರ ಎಷ್ಟು ಬುದ್ಧಿ ಇದೆಯೋ ತಲೆ ಕೆಟ್ಟಾಗ ನನ್ನ ಹತ್ತಿರ ಅಷ್ಟೇ ಇರುತ್ತದೆ....''

ಆ ಮಾತು ಕೇಳಿ ಆಘಾತಕ್ಕೆ ಒಳಗಾದ ಗುಂಡ ಅದರರ್ಥ ಏನು ಎಂದು ತಿಳಿಯಲು ಇನ್ನೂ ತನ್ನ ತಲೆ ಚೆಚ್ಚಿಕೊಳ್ಳುತ್ತಿದ್ದಾನೆ.

 

ಇಬ್ಬರು ಮಹಿಳೆಯರು ಅಪ್‌ ಟು ಡೇಟ್‌ ಆಗಿ ಮೇಕಪ್‌ ಮಾಡಿಕೊಂಡು, ಜೋರಾಗಿ ಹರಟೆ ಹೊಡೆಯುತ್ತಾ ಕಾರು ಓಡಿಸಿಕೊಂಡು ಹೋಗಿ ಮುಂದಿದ್ದ ಕಾರಿಗೆ ಗುದ್ದಿದರು.

ಅವರಲ್ಲಿ ಒಬ್ಬಳಾದ ಅನುರಾಧಾ ಕಿರುಚಿದಳು, ``ಏನಯ್ಯ..... ಕುರುಡನೇನು ನೀನು? ಸುಂದರವಾದ ಮಹಿಳೆ ಕಾಣಿಸಿದ ತಕ್ಷಣ ನಿನ್ನ ಗಮನ ಕತ್ತೆ ಕಾಯಲಿಕ್ಕೆ ಹೋಯಿತೇ? ಕಾರು ಚಾಯಿಸುವಾಗ ಮುಂದೆ ನೋಡೋದರ ಬದಲು ಅಲ್ಲಿ ಇಲ್ಲಿ ಯಾಕೆ ನೋಡಬೇಕು ಅಂತ? ಮನೆಯಲ್ಲಿ ಹೆಂಡತಿ ಮುಂದೆ ಮಾತ್ರ ದೊಡ್ಡ ಲೀಡರ್‌ ತರಹ ಪೋಸ್‌ ಕೊಡೋದು... ಬೀದೀಗೆ ಬಂದಾಗ ಲೋಫರ್‌ ಆಗೋದು.... ಯೂ ಸ್ಟುಪಿಡ್‌!''

ಅವಳ ಪಕ್ಕದಲ್ಲಿದ್ದ ಅನುಪಮಾ ಸುಮ್ಮನಿರ್ತಾಳಾ? ``ಅಲ್ಲಯ್ಯ.... ನಿಮ್ಮಂಥ ಗಂಡಸರಿಗೆಲ್ಲ ಏನಯ್ಯ ಪ್ರಾಬ್ಲಂ..... ತೆಪ್ಪಗೆ ಹೋಗಬಾರದಾ.....?''

ಎದುರಿಗಿದ್ದ ಕಾರು ಗುದ್ದಿಸಿಕೊಂಡವನು ತಲೆ ಮೇಲೆ ಕೈಹೊತ್ತು ಯೋಚಿಸುತ್ತಲೇ ಇದ್ದ.... ಅಲ್ಲ, ನನ್ನ ಕಾರು ಪಾರ್ಕಿಂಗ್ ಏರಿಯಾದಲ್ಲಿ ಸರಿಯಾಗಿಯೇ ನಿಂತಿದೆ, ಜೊತೆಗೆ ಬಾಗಿಲು ಕ್ಲೋಸ್‌ ಆಗಿದೆ. ಅದರ ಎಂಜಿನ್‌ ಅಂತೂ ಸ್ಟಾರ್ಟೇ ಆಗಿಲ್ಲ..... ಹಾಗಿರುವಾಗ ತಾನು ಇವರ ಕಾರಿಗೆ ಗುದ್ದಿದ್ದು ಯಾವಾಗ?

 

ಆ ಏರಿಯಾದ ಘಟವಾಣಿ ಗಂಗಮ್ಮ ಈ ಸಲ ನಗರಪಾಲಿಕೆಯ ಚುನಾವಣೆಗೆ ನಿಂತುಬಿಟ್ಟಿದ್ದಳು. ಆಗ ಅವಳ ಬಳಿ ಸಣ್ಣಪುಟ್ಟ ಕೈ ಸಾಲಕ್ಕಾಗಿ ಹಲ್ಲು ಕಿಸಿಯುತ್ತಿದ್ದ ದೇವಿ ಕೇಳಿದಳು, ``ಗಂಗಮ್ಮ, ನೀನಾ ಈ ಎಲೆಕ್ಷನ್‌ಗೆ ನಿಂತಿರೋದು.... ಬಿಡು, ಬಿಡು..... ಈ ಸಲ ನೀನು ಗೆದ್ದೇ ಗೇಲ್ತೀಯಾ!''

ಆಗ ಗಂಗಮ್ಮ ಉತ್ತರಿಸಿದಳು, ``ಹೌದು, ಹೌದು.... ಈ ಸಲ ಚುನಾವಣೆಯಲ್ಲಿ ನಾನೇ ಗೆಲ್ಲೋದು! ನನ್ನ ಗೆಲುವಿಗಾಗಿ ನೀವೆಲ್ಲ ಈಗಲೇ ಶುಭ ಹಾರೈಸಿ.....''

ಗಂಗಮ್ಮನ ಈ ಆತ್ಮವಿಶ್ವಾಸದ ಮಾತು ಕೇಳಿ ಅಲ್ಲಿದ್ದ ವರದಿಗಾರ ಓಡಿ ಬಂದು ಈಕೆಯ ಫೋಟೋ ಕ್ಲಿಕ್ಕಿಸುತ್ತಾ, ``ಅದಿರಲಿ ಮೇಡಂ, ಚುನಾವಣೆಗೆ ನಿಲ್ಲಬೇಕು, ಅದರಲ್ಲಿ ಗೆದ್ದೇ ತೀರಬೇಕು ಎಂದು ನಿಮಗೆ ಪ್ರೇರಣೆ ಸಿಕ್ಕಿದ್ದು ಯಾರಿಂದ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ