ಬಹುಬೇಡಿಕೆಯ ನಟಿ, ಕಾಂತಾರ ಬೆಡಗಿ ರುಕ್ಷ್ಮಿಣಿ ವಸಂತ್ ಗ್ಲಾಮರ್ ಲೋಕಕ್ಕೆ ಕಾಲಿಟ್ಟು, ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಹಿಟ್ ಮೇಲೆ ಹಿಟ್ ಆಗುತ್ತಿದ್ದಾರೆ.
ಸಿನಿ ಪ್ರೇಮಿಗಳ ಪ್ಯಾನ್ ಇಂಡಿಯಾ ಬ್ಯೂಟಿ ರುಕ್ಷ್ಮಿಣಿ ವಸಂತ್ ಇದೀಗ ಸೈಬರ್ ಕಳ್ಳರ ವಿರುದ್ಧ ಸಿಡಿದೆದ್ದು, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ರುಕ್ಮಿಣಿ ವಸಂತ್ ಗೆ ಸೈಬರ್ ಕಳ್ಳರ ಕಾಟ ಶುರುವಾಗಿದೆಯಂತೆ. ಈ ಬಗ್ಗೆ ಸ್ವತಃ ನಟಿಯೇ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿ ಎಚ್ಚರಿಸಿದ್ದಾರೆ. ಅಲ್ಲದೆ, ಸೈಬರ್ ಕಳ್ಳರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
9445893273 ಅನ್ನೋ ಮೊಬೈಲ್ ಸಂಖ್ಯೆಯನ್ನ ಬಳಸುವ ವ್ಯಕ್ತಿಯೊಬ್ಬ ನಾನು ಅಂತ ನಟಿಸಿ ಸುಳ್ಳು ನೆಪದಲ್ಲಿ ಹಲವರನ್ನು ಸಂಪರ್ಕಿಸುತ್ತಾ ಇರೋದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನಗೆ ಸೇರಿಲ್ಲ ಮತ್ತು ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ಫೇಕ್ .. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಮಾತಾನಾಡೋದಕ್ಕೆ ಹೋಗಬೇಡಿ. ಈ ಕೃತ್ಯ ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತೆ.. ಹೀಗಾಗಿ ಇಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು ಎಂದಿದ್ದಾರೆ.
ನಟಿ ರುಕ್ಮಿಣಿ ವಸಂತ್ ಅವರ ಮೊಬೈಲ್ ನಂಬರ್ ಬಳಸಿಕೊಂಡು ಕೆಲ ಕಿಡಿಗೇಡಿಗಳು ಒಂದಷ್ಟು ಜನರಿಗೆ ಮೆಸೇಜ್ ಮಾಡುತ್ತಿದ್ದಾರೆಂತೆ. ಹೀಗಾಗಿ ಈ ನಂಬರ್ನಿಂದ ಮೆಸೇಜ್ ಅಥವಾ ಕರೆ ಬಂದರೆ ಅಲರ್ಟ್ ಆಗಿರಿ. ಯಾವುದೇ ರೆಸ್ಪಾಂಡ್ ಮಾಡಬೇಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕಿಡಿಗೇಡಿಗಳ ವಿರುದ್ಧ ಸೈಬರ್ ಕಂಪ್ಲೇಂಟ್ ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿದ್ದು, ಇಂತಹ ಸೈಬರ್ ಕಳ್ಳರಿಗೆ ತಕ್ಕ ಪಾಠ ಆಗಲೇಬೇಕಿದೆ.





