ನೀವು ನಿಮ್ಮ ವಯಸ್ಸು ಏರುವುದನ್ನಂತೂ ತಡೆಯಲು ಸಾಧ್ಯವಿಲ್ಲ. ಆದರೆ ಹೆಚ್ಚುತ್ತಿರುವ ವಯಸ್ಸಿನ ಪರಿಣಾಮಗಳನ್ನು ಮಾತ್ರ ಕಡಿಮೆಗೊಳಿಸಬಹುದು. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಸೀನಿಯರ್‌ ಡಯೇಟಿಶಿಯನ್‌ ಡಾ. ನಿಧಿ ಹೇಳುವ ಪ್ರಕಾರ, ನಾವು ಏನನ್ನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ಹಾಗೂ ಸಕ್ರಿಯತೆ ಇರುತ್ತದೆ.

ಏನನ್ನು ಸೇವಿಸಬೇಕು?

ಆ್ಯಂಟಿ ಆಕ್ಸಿಡೆಂಟ್‌ ಭರ್ತಿಯಾಗಿರುವ ಒಣಹಣ್ಣುಗಳು, ಕಾಳುಗಳು, ತರಕಾರಿಗಳು, ಹಣ್ಣುಗಳನ್ನು ಸೇವಿಸಿ. ಆ್ಯಂಟಿ ಆಕ್ಸಿಡೆಂಟ್ಸ್ ಫ್ರೀ ರಾಡಿಕಲ್ಸ್ ಜೊತೆಗೆ ಹೋರಾಡುತ್ತವೆ. ಅಷ್ಟೇ ಅಲ್ಲ, ವೃದ್ಧಾಪ್ಯದ ಲಕ್ಷಣಗಳನ್ನು ಮಂದಗೊಳಿಸುತ್ತವೆ. ಅವು ರೋಗ ನಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸಿ ಸೋಂಕು ಉಂಟಾಗುವುದರಿಂದ ನಮ್ಮನ್ನು ರಕ್ಷಿಸುತ್ತವೆ.

ದಿನಕ್ಕೆ ಒಂದು ಕಪ್‌ ಗ್ರೀನ್‌ ಟೀ ಕುಡಿಯುವುದು ನೆನಪಿನ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡಿದಂತೆ.

ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಮತ್ತು ಮಾನೊಸ್ಯಾಚ್ಯುರೇಟೆಡ್‌ನಿಂದ ತುಂಬಿ ತುಳುಕುವ ಆಹಾರ ಪದಾರ್ಥಗಳಾದ ಒಣ ಹಣ್ಣುಗಳು, ಆಲಿವ್ ‌ಆಯಿಲ್‌, ಮೀನು ಇವನ್ನು ಬಳಸಿ. ಇವು ನಿಮ್ಮನ್ನು ಯಂಗ್‌ ಮತ್ತು ಸುಂದರವಾಗಿರಲು ನೆರವಾಗುತ್ತವೆ.

ವಿಟಮಿನ್‌ `ಸಿ’ ದೇಹದಲ್ಲಿ ನೈಸರ್ಗಿಕ ಬೊಟಾಕ್ಸ್ ನ ಹಾಗೆ ಕೆಲಸ ಮಾಡುತ್ತದೆ. ಇದರಿಂದ ತ್ವಚೆಯ ಸ್ನಾಯುಗಳು ಆರೋಗ್ಯದಿಂದಿರುತ್ತದೆ ಮತ್ತು ಸುಕ್ಕುಗಳು ಉಂಟಾಗುವುದಿಲ್ಲ.

ನಿಮಗೆ ಸಿಹಿ ತಿನ್ನುವ ಮನಸ್ಸಾದರೆ  ಕಂದು ವರ್ಣದ ಚಾಕ್ಲೇಟ್‌ ತಿನ್ನಿ. ಅದರಲ್ಲಿ ಫ್ಲೆವೆನಾಲ್ ‌ಎಂಬ ಅಂಶವಿದ್ದು, ಅದು ರಕ್ತ ಪರಿಚಲನೆ ಸಮರ್ಪಕವಾಗಿರಲು ನೆರವಾಗುತ್ತದೆ.

ಮಧ್ಯಾಹ್ನ ಊಟದ ಜೊತೆಗೆ ಒಂದು ಕಪ್‌ ಮೊಸರು ಸೇವಿಸಿ. ಅದರಲ್ಲಿ ಕ್ಯಾಲ್ಶಿಯಂ ಅಂಶವಿದ್ದು, ಅದು ಆಸ್ಟೂವೆಪೊರೊಸಿಸ್‌ಸಮಸ್ಯೆಯಿಂದ ರಕ್ಷಿಸುತ್ತದೆ.

ನೀವು ಯಂಗ್‌ ಆಗಿರಲು ಹಾಗೂ ಸಕ್ರಿಯರಾಗಿರಲು ಇಷ್ಟಪಟ್ಟರೆ ಓವರ್‌ ಈಟಿಂಗ್‌ನಿಂದ ದೂರ ಇರಿ. ನಿಮಗೆ ಎಷ್ಟು ಹಸಿವಿರುತ್ತೊ, ಅದರ ಶೇ.80ರಷ್ಟು ಮಾತ್ರ ಸೇವಿಸಿ.

ಏನನ್ನು ಸೇವಿಸಬಾರದು?

ಯಾವ ಆಹಾರ ಪದಾರ್ಥಗಳಿಂದ ದೇಹದಲ್ಲಿ ಸಕ್ಕರೆ ಅಂಶ ಏರುತ್ತೊ, ಅಂತಹ ಪದಾರ್ಥಗಳನ್ನು ಕಡಿಮೆ ಸೇವಿಸಿ. ಸಿಹಿ ಹಣ್ಣುಗಳು, ಜ್ಯೂಸ್‌, ಸಕ್ಕರೆ ಮುಂತಾದವು.

ಸೋಯಾಬೀನ್‌, ಕಾರ್ನ್‌ಕಿನೋಲಾ ಆಯಿಲ್ ‌ಮುಂತಾದವುಗಳಿಂದ ದೂರ ಇರಿ. ಏಕೆಂದರೆ ಅದರಲ್ಲಿ ಪಾಲಿ ಸ್ಯಾಚುರೇಟೆಡ್‌ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಲಿವ್ ಆಯಿಲ್‌ನ್ನು ಉಪಯೋಗಿಸಿ.

ಪನೀರ್‌, ಫುಲ್ ಫ್ಯಾಟ್‌ ಹಾಲು, ಕ್ರೀಮ್, ರೆಡ್‌ ಮೀಟ್‌ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್‌ ಫ್ಯಾಟ್‌ ಇರುತ್ತದೆ. ಅದರಿಂದ ಹೃದಯದ ಧಮನಿಗಳು ಬ್ಲಾಕ್‌ ಆಗಬಹುದು.

ಪಿಜ್ಜಾ, ಪಾಸ್ತಾ, ವೈಟ್‌ ಬ್ರೆಡ್‌ ಮುಂತಾದವುಗಳನ್ನು ಕಡಿಮೆ ಸೇವಿಸಿ.

ಡಾ. ನಿಧಿಯವರು ಹೇಗೆ ಹೇಳುತ್ತಾರೆ, “ಬೊಜ್ಜು ಹಾಗೂ ಕ್ಯಾಲೋರಿ ಇವುಗಳಲ್ಲಿ ನೇರ ಸಂಬಂಧವಿದೆ. ಬೊಜ್ಜು ಹೆಚ್ಚುವುದರಿಂದ ಕೇವಲ ಆರೋಗ್ಯ ಸಮಸ್ಯೆ ಅಷ್ಟೇ ಅಲ್ಲ, ದೇಹದ ಕ್ರಿಯಾಶೀಲತೆ ಕೂಡ ಕಡಿಮೆಯಾಗುತ್ತದೆ.”

ಜೀವನಶೈಲಿಯಲ್ಲಿ ಬದಲಾವಣೆ

“ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಚಿಕ್ಕಪುಟ್ಟ ಬದಲಾವಣೆಗಳನ್ನು ತಂದುಕೊಂಡು ನಾವು ದೀರ್ಘಕಾಲದ ತನಕ ಯಂಗ್‌ಆಗಿರಬಹುದು ಮತ್ತು ಸಕ್ರಿಯರಾಗಿರಬಹುದು,” ಇದು ಡಾ. ಕರುಣಾ ಚತುರ್ವೇದಿ ಅವರ ಅಭಿಪ್ರಾಯ.

ನಿಮ್ಮ ಮೆದುಳನ್ನು ಸದಾ ವ್ಯಸ್ತವಾಗಿಡಿ. ಏನನ್ನಾದರೂ ಹೊಸದನ್ನು ಕಲಿಯಿರಿ ಹಾಗೂ ಮೆದುಳನ್ನು ಸಕ್ರಿಯವಾಗಿಡಿ.

ನಿಮ್ಮ ಹಾರ್ಮೋನುಗಳ ಮಟ್ಟವನ್ನು ನಿಯಂತ್ರಣದಲ್ಲಿರಿಸಿ. ಏಕೆಂದರೆ ಏಜಿಂಗ್‌ಗೆ ಸಂಬಂಧಪಟ್ಟ ಲಕ್ಷಣಗಳಿಂದ ದೂರ ಇರಲು ಸಹಾಯಕವಾಗುತ್ತದೆ.

ದಿನಕ್ಕೆ ಕನಿಷ್ಠ 6-7 ಗಂಟೆ ನಿದ್ರೆ ಮಾಡಿ. ನೀವು ಮಲಗಿಕೊಂಡಾಗ ಚರ್ಮದ ಜೀವಕೋಶಗಳು ತಂತಾನೇ ದುರಸ್ತಿಯಾಗುತ್ತವೆ. ಅದರಿಂದ ಸುಕ್ಕುಗಳು ನಿವಾರಣೆಯಾಗುತ್ತವೆ.

ನೀವು ಯಾವುದೇ ವಿಷಯವನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ ಎನ್ನುವುದು ಕೂಡ ಮಹತ್ವದ್ದು. ಪ್ರತಿಯೊಂದು ಸಂಗತಿಯನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ. ನಿಮ್ಮನ್ನು ಖುಷಿಯಿಂದಿಡಲು ಹಾಗೂ ಪ್ರೇರಿತರಾಗಿಡಲು ಪ್ರಯತ್ನಿಸಿ.

ತ್ವಚೆಯನ್ನು ಸುರಕ್ಷಿತವಾಗಿಡಿ

ಬಿಸಿಲಿನಲ್ಲಿ ತ್ವಚೆಯ ಬಣ್ಣ ಕಪ್ಪಗಾಗುತ್ತದೆ. ಕಪ್ಪಗಾದ ತ್ವಚೆಯನ್ನು ಬಹುಬೇಗ ಸುಕ್ಕುಗಳು ಆವರಿಸುತ್ತವೆ. ಹಾಗಾಗಿ ಹೊರಗೆ ಹೋಗು ಮುನ್ನವ ಸನ್‌ಸ್ಕ್ರೀನ್‌ನ್ನು ಬಳಸಿ.

ಚರ್ಮವನ್ನು ಆರೋಗ್ಯದಿಂದಿಡಲು ಮತ್ತು ಅದರ ತೇವಾಂಶ ಕಾಪಾಡಲು ತ್ವಚೆಗನುಗುಣವಾಗಿ ನಾನ್‌ ಟಾಕ್ಸಿಕ್‌ ಮಾಯಿಶ್ಟರೈಸರ್‌ ಆಯ್ದುಕೊಳ್ಳಿ. ಮಲಗುವ ಮುನ್ನ ಅದನ್ನು ಅವಶ್ಯವಾಗಿ ಲೇಪಿಸಿಕೊಳ್ಳಿ.

ಫೇಶಿಯಲ್ ಎಕ್ಸರ್‌ಸೈಜ್‌ ಮುಖದ ಸ್ನಾಯುಗಳ ವ್ಯಾಯಾಮ ಮುಖವನ್ನು ಸುಕ್ಕುಗಳಿಂದ ರಕ್ಷಿಸುತ್ತದೆ. ಹಣೆಯನ್ನು ಸುಕ್ಕಿನಿಂದ ರಕ್ಷಿಸಲು ನಿಮ್ಮ ಎರಡೂ ಕೈಗಳ ಬೆರಳುಗಳನ್ನು ಹಣೆಯ ಮಧ್ಯದಲ್ಲಿಟ್ಟು ಎರಡನ್ನೂ ತದ್ವಿರುದ್ಧ ದಿಸೆಯಲ್ಲಿ ನಿಧಾನವಾಗಿ ಒತ್ತಡ ಕೊಡುತ್ತಾ ಕೆಳಗೆ ತೆಗೆದುಕೊಂಡು ಬನ್ನಿ.

ಕೆಲವು ಫೇಶಿಯಲ್ ಎಕ್ಸರ್‌ಸೈಜ್‌ ಚೀಕೂ ಲಿಫ್ಟ್ : ನಿಮ್ಮ ತುಟಿಗಳನ್ನು ನಿಧಾನವಾಗಿ ಮುಚ್ಚಿಕೊಳ್ಳಿ. ಕೆನ್ನೆಗಳನ್ನು ಕಣ್ಣಿನ ಕಡೆಯಿಂದ ಎಳೆದುಕೊಳ್ಳಲು ಪ್ರಯತ್ನಿಸಿ. ಆ ಬಳಿಕ ಮುಗುಳ್ನಗೆಯೊಂದಿಗೆ ತುಟಿಯ ಎರಡೂ ಹೊರಬದಿಗಳನ್ನು ಮೇಲೆತ್ತಿ. ಮುಗುಳ್ನಗುವುದು ಕೆನ್ನೆಗಳಿಗೆ ಉತ್ತಮ ವ್ಯಾಯಾಮವಾಗಿದೆ.

ಫಿಶ್‌ ಫೇಸ್‌ : ಇದು ಕೆನ್ನೆಗೆ ಹಾಗೂ ದವಡೆಗೆ ಉತ್ತಮವಾದ ವ್ಯಾಯಾಮ. ಇದರಿಂದ ನಿಮ್ಮ ತುಟಿಗಳಿಗೆ ಒಳ್ಳೆಯ ಶೇಪ್ ಬರುತ್ತದೆ. ನಿಧಾನವಾಗಿ ತುಟಿಗಳನ್ನು ಮುಚ್ಚಿಕೊಳ್ಳಿ. ಕೆನ್ನೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಒಳಗೆ ಎಳೆದುಕೊಳ್ಳಿ. ಇದೇ ಮುದ್ರೆಯಲ್ಲಿ 15 ಸೆಕೆಂಡುಗಳ ಕಾಲ ಮುಗುಳ್ನಗಲು ಪ್ರಯತ್ನಿಸಿ. ಇದನ್ನು 5 ಸಲ ಪುನರಾವರ್ತಿಸಿ.

ಪೆಟ್‌ ಫೇಸ್‌ : ಈ ವ್ಯಾಯಾಮ ಮುಖಕ್ಕೆ ಪೂರ್ತಿ ಕೆಲಸ ಮಾಡುತ್ತದೆ. ಇದು ಕೆನ್ನೆಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ನಿಮ್ಮ ತುದಿಬೆರಳನ್ನು ಕೆನ್ನೆಯ ಮೇಲಿಟ್ಟು ನಗಲು ಪ್ರಯತ್ನಿಸಿ. ಕೆನ್ನೆಯನ್ನು ಮೇಲ್ಭಾಗದತ್ತ ಎಳೆದುಕೊಳ್ಳಿ. ಅದೇ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಹಾಗೆಯೇ ಮುಗುಳ್ನಗುತ್ತಾ ಇರಿ.

– ಡಾ. ಗಿರಿಜಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ