ಸೌಂದರ್ಯಕ್ಕಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ನೀವು ನಿಮ್ಮ ಕಾಲುಗಳ ರಕ್ಷಣೆ ಮಾಡಿಕೊಳ್ಳಬೇಕು. ವೈದ್ಯರ ಪ್ರಕಾರ, ಕಾಲುಗಳ ರಕ್ಷಣೆಯಿಂದ ಅನೇಕ ತೊಂದರೆಗಳಿಂದ ದೂರವಾಗಬಹುದು. ಅದಕ್ಕಾಗಿ ಹೀಗೆ ಮಾಡಿ :ಕಾಲುಗಳಿಗೆ ಗಾಳಿಯಾಡಲಿ

ಸ್ನಾನವಾದ ನಂತರ ಒದ್ದೆ ಕಾಲುಗಳನ್ನು ಚೆನ್ನಾಗಿ ಒರೆಸಿಯೇ ಸ್ಯಾಂಡಲ್ಸ್ ಹಾಕಿಕೊಳ್ಳಿ. ಒದ್ದೆ ಇರುವಾಗ ಬ್ಯಾಕ್ಟೀರಿಯಾ ಸುಲಭವಾಗಿ ವೃದ್ಧಿಸುತ್ತವೆ.

ಕಾಲ್ಬೆರಳುಗಳ ಸಂದಿಯಲ್ಲಿ ಒಡೆಯುವಿಕೆ ಅಥವಾ ನವೆ ಉಂಟಾಗುತ್ತದೆ.

ಆಫೀಸ್‌ ಯಾ ಪಾರ್ಟಿಯಿಂದ ಮನೆಗೆ ಹಿಂದಿರುಗಿದ ತಕ್ಷಣ, ಸಾಕ್ಸ್ ಕಳಚಿ ಪಾದ, ಕಾಲುಬೆರಳು ಚೆನ್ನಾಗಿ ಗಾಳಿಯಾಡುವಂತೆ ಮಾಡಿ. ಹೊರಗೆ ಹೋಗುವಾಗ ನೈಲಾನ್‌ ಬದಲು ಕಾಟನ್‌, ಖಾದಿ ಸಾಕ್ಸ್ ಧರಿಸಿ. ಹೆಚ್ಚು ಬೆವರುವವರು ಪ್ರತಿದಿನ ಈ ಸಾಕ್ಸ್ ನ್ನು ಅಗತ್ಯ ಬದಲಿಸುತ್ತಿರಬೇಕು.

ರಕ್ತ ಸಂಚಾರ ಸುಗಮವಾಗಿರಲಿ

ಬಹಳ ಹೊತ್ತು ಕಾಲುಗಳನ್ನು ಕೆಳಗೆ ತೂಗುಬಿಟ್ಟು ಕೂರಬೇಡಿ. ಸ್ವಲ್ಪ ಹೊತ್ತು ಕಾಲುಗಳನ್ನು ನೆಲದ ಮೇಲೆ ನೀಟಾಗಿ ಇರಿಸಿಕೊಳ್ಳಿ. ಆಗ ಅದರಲ್ಲಿ ಸರಾಗವಾಗಿ ರಕ್ತ ಸಂಚಾರ ಆಗುತ್ತದೆ.

ನಿಮ್ಮ ಕಾಲು ಬೆರಳುಗಳನ್ನು ಪ್ರತಿದಿನ 2-3 ಸಲ 5 ನಿಮಿಷಗಳ ಕಾಲ ಆಡಿಸುತ್ತಿರಬೇಕು. ಹಾಗೆಯೇ ಮಂಡಿಯನ್ನೂ (ನಿಂತುಕೊಂಡು) ಮಡಚಿ,  ಹಿಂದೆ ಮುಂದೆ ಆಡಿಸುತ್ತಿರಬೇಕು.

ಬಹಳ ಹೊತ್ತು ನೆಲದ ಮೇಲೆ ಚಕ್ಕಳಬಕ್ಕಳ ಹಾಕಿ ಅಥವಾ ಪದ್ಮಾಸನದಲ್ಲಿ ಕೂರಬೇಡಿ.

ಒಳ್ಳೆಯ ಅಭ್ಯಾಸಗಳು

ಸ್ನಾನ ಮಾಡುವಾಗ ಪ್ಯೂಮಿಕ್‌ ಸ್ಟೋನ್‌, ಫುಟ್‌ ಸ್ಕ್ರಬ್‌ಗಳಿಂದ ಕಾಲುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕಾಲಿನ ಕೊಳೆಯ ಜೊತೆಗೆ ಮೃತ ಚರ್ಮ ನಿವಾರಣೆಯಾಗುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮೊದಲು ಕಾಲುಗಳಿಗೆ ಮಾಯಿಶ್ಚರೈಸ್‌ ಮಾಡಿ. ಕಾಲುಗಳಿಗೆ ಶಿಯಾ ಬಟರ್‌, ಕೋಕೋ ಬಟರ್‌ನ್ನು ಚೆನ್ನಾಗಿ ಹಚ್ಚಿ, ಹತ್ತಿಯ ಕಾಲುಚೀಲ ಹಾಕಿಕೊಳ್ಳಿ.

ನಿಮಗೆ ಮಾಂಸಖಂಡದ ಗಂಟಿನ ಸಮಸ್ಯೆ ಇದ್ದರೆ ಸ್ಯಾಲಿಸಿಲಿಕ್‌ ಆ್ಯಸಿಡ್‌ ಅಥವಾ ಯೂರಿಯಾಯುಕ್ತ ಕ್ರೀಮ್ ಬಳಸಿ. ಇದರಿಂದ ಗಂಟು ಕರಗಲು ಸಹಾಯವಾಗುತ್ತದೆ.

ಕಾಲು ಒಡೆಯುವುದನ್ನು ತಪ್ಪಿಸಲು ಪೆಟ್ರೋಲಿಯಂ ಅಥವಾ ಲ್ಯಾಕ್ಟಿಕ್‌ ಆ್ಯಸಿಡ್‌ಯುಕ್ತ ಕ್ರೀಮ್ ಬಳಸಿ.

ನಿಮಗೆ ಕಾಲು ಬೆವರು ಸಮಸ್ಯೆ ಇದ್ದರೆ ಕ್ಲೋಟ್ರಿಮಾ ಜೋಲ್ ನಂತಹ ಯಾವುದಾದರೂ ಪೌಡರನ್ನು ಸಿಂಪಡಿಸಿ. ಆ್ಯಂಟಿ ಫಂಗಲ್ ಪೌಡರ್‌ ಉದುರಿಸುವ ಮುನ್ನ ಕಾಲುಗಳನ್ನು ಚೆನ್ನಾಗಿ ಒರೆಸಿ.

ಉಗುರುಗಳಿಗೆ ಕ್ಯುಟಿಕಲ್ ಕ್ರೀಮ್, ವಿಟಮಿನ್‌ `ಇ' ಅಥವಾ ಪೆಟ್ರೋಲಿಯಂ ಜೆಲ್ಲಿಯಿಂದ ಮಸಾಜ್‌ ಮಾಡಿ.

ನೆನಪಿರಲಿ ನಿಮ್ಮ ಕಾಲಿನ ಉಗುರುಗಳನ್ನು ಆಗಾಗ್ಗೆ ಕತ್ತರಿಸುತ್ತಿರಿ. ಸೊಟ್ಟ ಮತ್ತು ಮುರಿದ ಉಗುರು ಚೆನ್ನಾಗಿ ಕಾಣುವುದಿಲ್ಲ.

ಸದಾಕಾಲ ನೇಲ್ ‌ಪಾಲಿಶ್‌ ಹಚ್ಚಿಕೊಂಡಿರಬೇಡಿ. ನೇಲ್ ಪಾಲಿಶ್‌ರಹಿತವಾದ ಉಗುರಿಗೆ ತಾಜಾತನ ಇರುತ್ತದೆ.

ಹಳೆಯ ನೇಲ್ ‌ಪಾಲಿಶ್‌ ಮೇಲೆ ಹೊಸ ಕೋಟ್‌ ಹಚ್ಚಬೇಡಿ. ಮೊದಲು ಹಳೆಯದನ್ನು ಸ್ವಚ್ಛಗೊಳಿಸಿ.

ಉಗುರು ಮುರಿಯುತ್ತಾ, ಬಣ್ಣಗೆಡುತ್ತಾ ಇದ್ದರೆ, ಅದನ್ನು ನೇಲ್ ಪಾಲಿಶ್‌ನಿಂದ ಮರೆ ಮಾಡಲು ಯತ್ನಿಸಬೇಡಿ. ಪರಿಸ್ಥಿತಿ ವಿಪರೀತವಾಗುವ ಮೊದಲು ವೈದ್ಯರಿಗೆ ತೋರಿಸಿ.

ಸ್ಯಾಂಡಲ್ಸ್ ಹಾಕುವ ಮೊದಲು ಕನಿಷ್ಠ 30 ಎಸ್‌ಪಿಎಫ್‌ನ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿ. ಇದರಿಂದ ಬಿಸಿಲಿಗೆ ಕಾಲು ಕಪ್ಪಾಗುವುದು ತಪ್ಪುತ್ತದೆ.

ಫುಟ್‌ವೇರ್‌

ದಿನ ಹೈಹೀಲ್ ‌ಸ್ಯಾಂಡಲ್ಸ್ ಹಾಕುವುದರಿಂದ ಕಾಲು ಮೂಳೆಗೆ ಹಾನಿಯಾಗುತ್ತದೆ. ಆದ್ದರಿಂದ ಅದನ್ನು ಒಮ್ಮೊಮ್ಮೆ ಮಾತ್ರ ಹಾಕಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ