ಬನ್ನಿ, ವಿವರವಾಗಿ ಈ ಕುರಿತು ಅರ್ಚನಾರ ಸಲಹೆಗಳನ್ನು ತಿಳಿಯೋಣ. ಅನಾದಿ ಕಾಲದಿಂದಲೂ ಹೆಂಗಸರು ತಮ್ಮ ಸೀರೆಗಳಿಗಾಗಿ ರವಿಕೆ ಹೊಲಿಸಲು, ಬಟ್ಟೆ ಕೊಂಡು ತಂದು, ದರ್ಜಿಗೆ ನೀಡಿ ಹೊಲಿಸಿ ನಿಧಾನ ಅದನ್ನು ಧರಿಸುವುದು ಈಗಲೂ ರೂಢಿಯಲ್ಲಿದೆಯಾದರೂ ಇದು ಬಹಳ ಪುರಾತನ ವಿಧಾನ. ಈಗಾಗಲೇ ಕೆಲವು ವರ್ಷಗಳಿಂದ ಮಾರ್ಕೆಟ್‌ನಲ್ಲಿ ಲಭ್ಯವಿರುವ ರೆಡಿಮೇಡ್ ಬ್ಲೌಸ್‌ಗಳನ್ನು ಅಳತೆಗೆ ತಕ್ಕಂತೆ ಕೊಂಡು, ಧರಿಸಿ ಆನಂದಿಸುವುದು ರೂಢಿಗೆ ಬಂದಿದೆ.
ಹೀಗಾಗಿ ಈ ಬ್ಲೌಸ್‌ಗಳು ಇದೀಗ `ಲೇನ್’ ಮತ್ತು `ನಿಟ್ಟೆಡ್’ ಫ್ಯಾಬ್ರಿಕ್ಸ್ (ನೇಯ್ದ, ಹೆಣೆದ) ಎರಡೂ ಬಗೆಯಲ್ಲಿ ಲಭ್ಯ. ನಿಟ್ಟೆಡ್ ಫ್ಯಾಬ್ರಿಕ್ ಬ್ಲೌಸ್‌ಗಳು ಒಂದು ಸಹಜ ಸ್ಟ್ರೆಚ್ ಇದ್ದು, ಧರಿಸುವ ಹೆಣ್ಣಿಗೆ ಹಿತಕರವಾಗಿರುತ್ತದೆ. ಜೊತೆಗೆ ಈ ಸ್ಟ್ರೆಚಿಂಗ್‌ನಿಂದಾಗಿ ಈ ಬ್ಲೌಸ್ ಹಲವು ಸೈಜ್‌ಗೆ ಸೂಕ್ತವಾಗುತ್ತದೆ.
ರೆಡಿಮೇಡ್ ಬ್ಲೌಸ್‌ಗಳಿಗಾಗಿ ಬಹಳಷ್ಟು ಬ್ರಾಂಡ್‌ಗಳೇನೂ ಮಾರುಕಟ್ಟೆಯಲ್ಲಿಲ್ಲ. ಈ ರೆಡಿಮೇಡ್ ಬ್ಲೌಸ್‌ನ್ನು ಕೊಂಡು ತಂದಾಗ, ಎಷ್ಟೋ ಸಲ ಅದು ನಮ್ಮ ಮೆಚ್ಚಿನ ಸೀರೆಗೆ ಸೂಕ್ತವಾಗಿ ಫಿಟ್ ಆಗುವುದಿಲ್ಲ.
ಆದರೆ ವೈವಿಧ್ಯತೆ ಬಯಸುವ, ಪ್ರಯೋಗ ಮಾಡಲು ಸಿದ್ಧರಿರುವ ಮಹಿಳೆಯರಿಗಾಗಿ ರೆಡಿಮೇಡ್ ಬ್ಲೌಸ್ ಒಂದು ವರದಾನವೇ ಸರಿ.
ರೆಡಿಮೇಡ್ ಬ್ಲೌಸ್ ಕೊಳ್ಳಬೇಕೆಂಬ ಈ ಹೊಸ ಐಡಿಯಾ ಮೆಚ್ಚತಕ್ಕದ್ದೇ, ಇದರಿಂದಾಗಿ ಅವರ ಲುಕ್ಸ್ ನಲ್ಲಿ ಭಾರಿ ಸುಧಾರಣೆ ಆಗುವುದೂ ನಿಜ. ಹಾಗೆಂದು ನೇರವಾಗಿ ಹೋಗಿ ಅದನ್ನು ಅಂಗಡಿಯಲ್ಲಿ ಕೇಳುವುದು ಸರಿಯಲ್ಲ. ಇದರ ಬದಲಿಗೆ ನಿಮಗೆ ಸೂಕ್ತವೆನಿಸುವ ಟೀಶರ್ಟ್, ಕ್ರಾಪ್ ಟಾಪ್ಸ್, ಟ್ಯಾಂಕ್ ಟಾಪ್ ಕೇಳಿ ಪಡೆಯಿರಿ. ಇದು ನಿಮಗೆ ಎಷ್ಟು ಚೆನ್ನಾಗಿ ಫಿಟ್ ಆಗುತ್ತದೆಂದರೆ, ಬ್ಲೌಸ್ ನಿಮಗೆ ಸೆಟ್ ಆಗುವಂತೆಯೇ! ಇದರಲ್ಲಿ ನಿಮಗಂತೂ ನೂರಾರು ಆಯ್ಕೆಗಳಿವೆ.
ಜೊತೆಗೆ ನಿಮ್ಮ ಬಳಿ ಈಗಾಗಲೇ ಇರುವಂಥ ಟೀಶರ್ಟ್‌ನ್ನೇ ಸೀರೆ ಜೊತೆ ಟ್ರೈ ಮಾಡಿ ನೋಡಿ. ಇದು ಕಾಲರ್ ಸಹಿತ ಅಥವಾ ರಹಿತ ಆಗಿರಬಹುದು. ನೀವು ಮಾಡಬೇಕಾದುದೆಂದರೆ ಟೀಶರ್ಟ್‌ನ ಕೆಳಗಿನ ಭಾಗವನ್ನು ಕ್ರಾಪ್ ಮಾಡುವುದು. ಆಗ ಅದು ಮಾಮೂಲಿ ಸೀರೆ ಬ್ಲೌಸ್‌ನ ಅಳತೆಗೆ ಸರಿಹೋಗುತ್ತದೆ.
ಟೀಶರ್ಟ್ಸ್ ಸದಾ ನಿಟ್ಟೆಡ್ ಫ್ಯಾಬ್ರಿಕ್‌ನಲ್ಲಿರುವುದರಿಂದ, ನೀವು ಕತ್ತರಿಸಿದ ಭಾಗವನ್ನು ಹೊಲಿಯುವ ಅಗತ್ಯ ಇಲ್ಲ, ಏಕೆಂದರೆ ಅವು ಫ್ರೇ ಆಗುವುದಿಲ್ಲ. ಅದೇ ರೀತಿ ನೀವು ನಿಮ್ಮ ಹಲವಾರು ಟಾಪ್ಸ್, ಕ್ರಾಪ್ ಟಾಪ್ಸ್ ಅಥವಾ ಟ್ಯಾಂಕ್ ಟಾಪ್ಸ್ ನ್ನು ಅದೇ ರೀತಿ ಧರಿಸಿ ಬೋರ್ ಆಗಿರುವುದರಿಂದ ಈ ರೀತಿ ಆಲ್ಟರ್ ಮಾಡಿ ಎಂಜಾಯ್ ಮಾಡಿ. ಈ ರೀತಿ ನೀವು ಹಳೆಯ ಟಾಪ್‌ಗಳಿಗೆ ಮರುಜೀವ ನೀಡಿ `ಸಸ್ಟೈನೆಬಲ್ ಫ್ಯಾಷನ್’ಗೆ ಸಪೋರ್ಟ್ ಮಾಡಬಹುದು. ಆಗ ಹಳೆಯ ಟಾಪ್ ಪುನರ್ಬಳಕೆಯಿಲ್ಲದೆ ವಾರ್ಡ್‌ರೋಬ್ ನಲ್ಲೇ ಕೊಳೆಯುವುದೂ ತಪ್ಪುತ್ತದೆ.
ಈ ರೀತಿ ಮಾಡುವುದರಿಂದ ನೀವು ಗುಂಪಿನಲ್ಲಿ ನಾಲ್ವರ ನಡುವೆ ಎದ್ದು ಕಾಣುವಿರಿ, ಯೂನಿಕ್‌ಎಕ್ಸ್ ಕ್ಲೂಸಿವ್ ಎನಿಸುವಿರಿ. ಏಕೆಂದರೆ ಈ ಮೂಲಕ ನೀವು ಗಳಿಸುವ ಲುಕ್ಸ್ ನಿಮ್ಮದೇ ಸಿಗ್ನೇಚರ್ ಆಗಿರುತ್ತದೆ ಹಾಗೂ ಯಾರಿಂದಲೂ ಅದನ್ನು ಕಾಪಿ ಮಾಡಲಾಗದು.
ಕೇರಳದ ಕೊಚ್ಚಿನ್ ಮೂಲದ ಅರ್ಚನಾ ಶಂಕರ್ ಗೃಹಶೋಭಾ ಅಭಿಮಾನಿಗಳಿಗಾಗಿ ಈ ವಿಶೇಷ ಸಲಹೆಗಳನ್ನು ನೀಡಿದ್ದಾರೆ. ಆಕೆ ಮೂಲತಃ ಡಿಸೈನರ್, ಸ್ಟೈಲಿಸ್ಟ್, ಇಮೇಜ್ ಕನ್‌ಸ್ಟಲೆಂಟ್ ಹಾಗೂ ಕಾರ್ಪೊರೇಟ್ ಟ್ರೇನರ್ ಆಗಿದ್ದಾರೆ.
ಈಕೆ ಕೊಚ್ಚಿನ್‌ನ ಸಂತ ತೆರೇಸಾ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಆರಂಭಿಸಿದ್ದರು. ನಂತರ ಆಕೆ ಜಾಹೀರಾತಿನ ಉದ್ಯಮದಲ್ಲಿ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಮಿಂಚಿದರು. ಇದೀಗ ಈಕೆ ಯೂಟ್ಯೂಬ್ ಚಾನೆಲ್‌ನಲ್ಲಿ `ಅರ್ಚನಾ ಶಂಕರ್: ಇಮೇಜ್‌ಕಾಟ್ಯೂರ್’ ಮೂಲಕ ಫ್ಯಾಷನ್, ಸ್ಟೈಲ್, ಇಮೇಜ್‌ಗಳ ಕುರಿತಾಗಿ ಸಕ್ರಿಯರಾಗಿದ್ದಾರೆ.
– ಪ್ರತಿನಿಧಿ