ಈ ಸಂದರ್ಭದಲ್ಲಿ ಅವಳು ತನ್ನ ಮದುವೆ ಸೀರೆ, ಮೇಕಪ್ ಕಡೆ ಮಾತ್ರ ಹೆಚ್ಚಿನ ಗಮನಹರಿಸುತ್ತಾಳೆ. ಹೀಗಾಗಿ ಹೇರ್ ಸ್ಟೈಲ್ ನಿರ್ಲಕ್ಷಿಸದೆ ಅದನ್ನೂ ಮುಖ್ಯವೆಂದು ಪರಿಗಣಿಸಬೇಕು. ಈ ಕುರಿತಾಗಿ ಹೇರ್ ಸ್ಟೈಲಿಸ್ಟ್ ಎಕ್ಸ್ ಪರ್ಟ್ಸ್ ಸಲಹೆ ಎಂದರೆ, ಮದುವೆಯ ಬೇರೆ ಬೇರೆ ಕಾರ್ಯಕ್ರಮಗಳಂದು ವಧು ಪ್ರತಿ ಸಲ ಸಾಂಪ್ರದಾಯಿಕ ಉಡುಗೆಯತ್ತಲೇ ಆಸಕ್ತಿ ತೋರುವುದರಿಂದ, ಅವಳ ಕೇಶಾಲಂಕಾರ ಅವಳ ಉಡುಗೆಗೆ ಪೂರಕವಾಗಿರಬೇಕು.
ಅಂದಹಾಗೆ ಓಪನ್ ಹೇರ್ ಎಲ್ಲಾ ಬಗೆಯ ಉಡುಗೆಗಳಿಗೂ ಒಪ್ಪುತ್ತದೆ. ಆದರೆ ಈ ಸಾಂಪ್ರದಾಯಿಕ ಸಂಭ್ರಮದ ಫಂಕ್ಷನ್ ಮಧ್ಯೆ ಓಪನ್ ಹೇರ್ ಸರಿಹೋಗದು. ಹೀಗಾಗಿ ಈ ಸಂದರ್ಭಕ್ಕೆಂದೇ ಈ ಕೆಳಗಿನ ವಿಶೇಷ ಕೇಶಾಲಂಕಾರಗಳತ್ತ ಗಮನಹರಿಸಿ :
ಸ್ಟೈಲಿಶ್ ಲುಕ್ಸ್ ನೀಡುವ ಮೊದಲು
ಕೂದಲಿಗೆ ಅಂದದ ಕೇಶಾಲಂಕಾರ ಮಾಡುವ ಮೊದಲು ಅದನ್ನು ಸಿದ್ಧಪಡಿಸಬೇಕಾದುದು ಅತ್ಯಗತ್ಯ, ಆಗ ಮಾತ್ರ ಅದನ್ನು ನೀಟಾಗಿ ಅಲಂಕರಿಸಬಹುದು.
ವಾರದಲ್ಲಿ 1 ಸಲ ಕೂದಲಿಗೆ ಸ್ಪಾ ಯಾ ಕಂಡೀಶನಿಂಗ್ ಮಾಡಿಸಿ. ಇದರಿಂದ ಡಲ್ ಹೇರ್‌ನ ಸಮಸ್ಯೆ ದೂರಾಗುತ್ತದೆ.
ಕೂದಲನ್ನು ತೊಳೆದ ನಂತರ, ಹಸಿ ಮತ್ತು ಒಣಗಿದ ಕೂದಲಿಗೆ ಸೀರಂ ಬಳಸಿರಿ. ಇದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.
ಉಗುರು ಬೆಚ್ಚಗಿನ ಎಣ್ಣೆ ಬಳಸಿ ಅಗತ್ಯ ಹೇರ್ ಮಸಾಜ್ ಮಾಡಿ. ಆಗ ಸ್ಕಾಲ್ಪ್ ನಲ್ಲಿ ರಕ್ತ ಸಂಚಾರ, ಡೀಪ್ ಕಂಡೀಶನಿಂಗ್ ಇತ್ಯಾದಿ ಸಲೀಸಾಗುತ್ತದೆ.
ಫ್ರೆಶ್ ಹೇರ್ ಕಟ್ ಮಾಡಿಸಿ. ಆಗ ಕೂದಲು ಒಳ್ಳೆಯ ಶೇಪ್‌ನಲ್ಲಿರುತ್ತದೆ.
ಸಲ್ಫೇಟ್ ಫ್ರೀ ಶ್ಯಾಂಪೂ ಕಂಡೀಶನ್‌ರನ್ನು ವಾರದಲ್ಲಿ 2 ಸಲ ಬಳಸಿರಿ.
ನಿಮ್ಮಿಷ್ಟದ ಹೇರ್ ಲುಕ್ಸ್ ಪಡೆಯಲು, ಕೂದಲು ಸ್ವಸ್ಥ ಹಾಗೂ ಕಾಂತಿಯುತ ಆಗಿರುವುದು ಅತಿ ಅಗತ್ಯ. ಇದಕ್ಕಾಗಿ 1 ತಿಂಗಳ ಮೊದಲೇ ಕೂದಲಿನ ಆರೈಕೆ ಶುರು ಹಚ್ಚಿಕೊಳ್ಳಿ. ಯಾರಾದರೂ ಉತ್ತಮ ಹೇರ್ ಎಕ್ಸ್ ಪರ್ಟ್‌ರ ಸಲಹೆ ಪಡೆಯಿರಿ.
ಚಳಿಗಾಲದಲ್ಲಿ ಸ್ಕಾಲ್ಪ್ ಶುಷ್ಕವಾಗುತ್ತದೆ, ಇದರಿಂದ ಹೆವಿ ಹೇರ್ ಸ್ಟ್ಸೈಲ್‌ನಲ್ಲಿ ಕಂಫರ್ಟೆಬಲ್ ಎನಿಸುವುದಿಲ್ಲ. ಅದರಲ್ಲಿ ಮತ್ತೆ ಮತ್ತೆ ನವೆ ಆಗುವುದರಿಂದ ಕಿರಿಕಿರಿ ಎನಿಸುತ್ತದೆ. ಆದ್ದರಿಂದ ಅಗತ್ಯವಾಗಿ ಸ್ಕಾಲ್ಪ್ ಟ್ರೀಟ್ ಮೆಂಟ್ ಮಾಡಿಸಿ.
– ಜಿ. ಸುಮಾ
ಕಾಂಬರ್ ಕರೆಂಟ್ : ಎಲ್ಲಕ್ಕೂ ಮೊದಲು ಕೂದಲನ್ನು ಇಡೀ ತಲೆ ತುಂಬಾ ಹರಡುವಂತೆ ದೊಡ್ಡ ದೊಡ್ಡ ಗೊಂಚಲಾಗಿಸಿ. ನಂತರ ಇವನ್ನು ತೆರೆದು 2 ಭಾಗವಾಗಿಸಿ, ಝಿಗ್ ಝ್ಯಾಗ್ ಪೊಸಿಶನ್‌ನಲ್ಲಿ ಇರಿಸಿ ಹಾಗೂ ಎರಡೂ ತುದಿಗಳಿಂದ ಕೂದಲು ತೆಗೆದುಕೊಂಡು, ಜಡೆ ಹೆಣೆಯಿರಿ. ಕೂದಲಿನ ಕೆಲವು ಎಳೆಗಳನ್ನು ಮುಂಗುರುಳಾಗಿ ಮುಖದ ಮೇಲೆ ಬಿಡಿ. ಕೊನೆಯಲ್ಲಿ ಎರಡೂ ಜಡೆಗಳನ್ನು ಒಂದೇ ಆಗಿಸಿ ಟಕ್ ಮಾಡಿ, ಹೇರ್ ಸ್ಪ್ರೇ ಯಿಂದ ಸೆಟ್ ಮಾಡಿ. ಇದಾದ ನಂತರ ಜಡೆಗಳ ಮೇಲೆ ಆ್ಯಕ್ಸೆಸರೀಸ್ ಹಾಗೂ ಹೂವಿನಿಂದ ಅಲಂಕರಿಸಿ.
ಪರ್ಶಿಯನ್ ವೆಲ್ವೆಟ್: ಕೂದಲಿನ ಬುಡಕ್ಕೆ ಮೂಸ್ ಹಚ್ಚಿರಿ. ಎಲ್ಲಾ ಕೂದಲನ್ನೂ ಜೋಡಿಸಿಕೊಂಡು ಗೊಂಚಲಾಗಿಸಿ. ಇದನ್ನು ತಲೆ ತುಂಬಾ ಹರಡಿರಿ. ಸ್ವಲ್ಪ ಹೊತ್ತಿನ ನಂತರ ಕೂದಲನ್ನು ಹಾಗೇ ಬಿಡಿ. ಆಗ ಅದು ಕರ್ಲಿ ಆಗುತ್ತದೆ. ಇದಾದ ನಂತರ ಬ್ಯಾಕ್ ಕೋಂಬಿಂಗ್ ಮಾಡುತ್ತಾ ತಲೆಯ ಮೇಲ್ಭಾಗದಲ್ಲಿ ಕ್ರೌನ್ ತರಹ ಮಾಡಿಕೊಳ್ಳಿ. ನಂತರ ಪ್ರತಿ ಭಾಗನ್ನೂ ಟ್ವಿಸ್ಟ್ ಮಾಡುತ್ತಾ ನಾಟ್ ಹಾಕಿ, ಪಿನಪ್ ಮಾಡಿ. ಇದನ್ನು ಫಿಕ್ಸ್ ಮಾಡಲು ಮೇಲ್ಭಾಗದಿಂದ ಹೇರ್ ಸ್ಪ್ರೇ ಬಳಸಿರಿ.
ಕಾರ್‌ಮೈನ್ ಕ್ರಾಸ್ ಬನ್ : ಆ ಕಿವಿಯಿಂದ ಈ ಕಿವಿವರೆಗೆ ಸೆಕ್ಷನ್ ವಿಭಾಗಿಸಿ, ಹಿಂಭಾಗದಲ್ಲಿ ಒಂದು ಪೋನಿ ಟೇಲ್ ಮಾಡಿ. ಇದನ್ನು ಟ್ವಿಸ್ಟ್ ಮಾಡಿ ಲೋಬನ್ ಮಾಡಿ. ಅಕ್ಕಪಕ್ಕದ ಕೂದಲನ್ನು ತೆಗೆದುಕೊಂಡು ಬನ್ ಬಳಿ ಪಿನಪ್ ಮಾಡಿ. ಇದರ ಜೊತೆಗೆ ಪ್ರತಿ ಹೇರ್ ಸೆಕ್ಷನ್ನಿನ ನಾಟ್ ಹಾಕಿ, ಬನ್ ಬಳಿ ಪಿನ್ ಮಾಡಿ. ಈ ಸ್ಟೈಲ್‌ನ್ನು ಫಿಕ್ಸ್ ಮಾಡಲು ಇದರ ಮೇಲೆ ಹೇರ್ ಸ್ಪ್ರೇ ಸಿಂಪಡಿಸಿ.