ಪರಿಸರ ಮಾಲಿನ್ಯ, ಧೂಳು ಮಣ್ಣು, ಕೊಳಕು, ಬೆವರು ಮುಖದ ತ್ವಚೆಯ ಮೇಲೆ ಅಂಟಿಕೊಂಡು ಅದರ ನೈಸರ್ಗಿಕ ಕಾಂತಿಯನ್ನು ಕುಂದಿಸುತ್ತದೆ, ಇದರಿಂದ ಮುಖ ಕಳಾಹೀನವಾಗುತ್ತದೆ.

ಹೀಗಾಗಿ ನಿಮ್ಮ ಕಾಂತಿಹೀನ ಚರ್ಮವನ್ನು ಮೊದಲಿಗಿಂತ ಹೆಚ್ಚು ಅಂದಗೊಳಿಸಲು ಆಯುರ್ವೇದದ ಉತ್ಪನ್ನಗಳು ಹೆಚ್ಚು ಸಹಾಯಕ. ರಾಶಿ ಕೆಮಿಕಲ್ಸ್ ಭರಿತ ಕಾಸ್ಮೆಟಿಕ್‌ ಉತ್ಪನ್ನಗಳಿಗಿಂತ ಇದು ಲೇಸು. ಏಕೆಂದರೆ ಈ ಹರ್ಬಲ್ ಪ್ರಾಡಕ್ಟ್ಸ್ ನಿಮ್ಮ ಚರ್ಮದ ಸಂಪೂರ್ಣ ಪೋಷಣೆ, ರಕ್ಷಣೆ ಮಾಡುತ್ತವೆ. ಇದರಿಂದ ನಿಮ್ಮ ಚರ್ಮ ಹೆಚ್ಚು ಫ್ರೆಶ್‌ಗ್ಲೋಯಿಂಗ್‌ ಆಗುತ್ತದೆ, ಇದರಿಂದ ನೀವು ದೀಪಾವಳಿ ಪಾರ್ಟಿಯ ಆಕರ್ಷಕ ಕೇಂದ್ರಬಿಂದು ಆಗುವುದರಲ್ಲಿ ಸಂದೇಹವಿಲ್ಲ.

ಕ್ಲೆನ್ಸಿಂಗ್‌ ಅತ್ಯಗತ್ಯ

ಪರಿಸರ ಮಾಲಿನ್ಯದ ನೇರ ಪ್ರಭಾವ ಮುಖದ ಮೇಲಾಗುತ್ತದೆ. ಹೀಗಾಗಿ ಮುಖ ಕಳೆದುಕೊಂಡ ಕಾಂತಿಯನ್ನು ಗಳಿಸಲು, ಕೇವಲ ಮೇಕಪ್‌ನಿಂದ ಕೆಲಸವಾಗದು. ಹೀಗಾಗಿ ಮುಖದ ಚರ್ಮವನ್ನು ಒಳಗಿನಿಂದ ಶುಚಿಗೊಳಿಸಬೇಕು. ಆಗ ಮಾತ್ರ ಹಬ್ಬದಲ್ಲಿ ದಿನವಿಡೀ ನಿಮ್ಮ ಮುಖ ಫ್ರೆಶ್‌ ಅನಿಸಲು ಸಾಧ್ಯ. ಇದಕ್ಕೆ ಆಯುರ್ವೇದ ಮೂಲದ ರೆಜುವಿನೇಟ್‌ ಫೇಸ್‌ ಕ್ಲೆನ್ಸರ್‌ ಬಳಸಿರಿ. ಇದನ್ನು ಮುಖಕ್ಕೆ ಬಳಸಿದಂತೆ ಇದರಿಂದ ಹೊರಹೊಮ್ಮುವ ನೊರೆ ಒಮ್ಮಲೇ ಸುಪರ್ಬ್‌ ಕ್ರೀಮೀಪೇವ್‌ ಆಗಿ ಬದಲಾಗುತ್ತದೆ ಹಾಗೂ ಚರ್ಮದ ಕಂಡೀಶನಿಂಗ್‌ ಮಾಡುತ್ತದೆ. ಇದರಿಂದ ಮುಖದಲ್ಲಿನ ಎಣ್ಣೆ, ಧೂಳು, ಇನ್ನಿತರ ಕೊಳಕು ದೂರಾಗುತ್ತದೆ. ಹೀಗಾಗಿ ನಿಮ್ಮ ಚರ್ಮ ಕಳೆದುಕೊಂಡ ನೈಸರ್ಗಿಕ ಕಾಂತಿ, ಸೌಂದರ್ಯ ಮರಳುತ್ತದೆ.

ತೇವಾಂಶ ಕಡಿಮೆ ಆಗದಿರಲಿ

ಮುಖದಲ್ಲಿನ ತೇವಾಂಶದ ಕೊರತೆ ನಿಮ್ಮ ಚರ್ಮವನ್ನು ಬಾಡಿಹೋದಂತೆ ಮಾಡುತ್ತದೆ ಹಾಗೂ ಸೂರ್ಯನ UV ಕಿರಣಗಳು ನಿಮ್ಮ ಚರ್ಮವನ್ನು ತೀವ್ರ ಬಾಧಿಸುತ್ತದೆ. ನೀವು ಇದರಿಂದ ಪಾರಾಗಲು ಬಯಸಿದರೆ ಆಯುರ್ವೇದ ಮೂಲದ ರೆಜುವಿನೇಟ್‌ ಡೇ ಕ್ರೀಂ ಹಚ್ಚಿರಿ. ಏಕೆಂದರೆ ಇದು ಸೂರ್ಯನ ಸಂಪರ್ಕಕ್ಕೆ ಬಂದ ಡ್ರೈ ಸ್ಟ್ರೆಸ್ಡ್ ಚರ್ಮವನ್ನು ಪುನರುಜ್ಜೀವಗೊಳಿಸುವ ಕೆಲಸ ಮಾಡುತ್ತದೆ ಹಾಗೂ ಚರ್ಮವನ್ನು ಏಕಸಮಾನ ಮಾಡಬಲ್ಲದು. ಇದರಿಂದ ನಿಮ್ಮ ಚರ್ಮ ಗಮನಿಸಿದವರು ನಿಮ್ಮ ಅಸಲಿ ವಯಸ್ಸಿಗಿಂತ ನಿಮ್ಮನ್ನು ಚಿಕ್ಕವರೆಂದೇ ಭಾವಿಸುವರು. ಹೀಗಾಗಿ ಕಾಂತಿ ಗಳಿಸುವುದರ ಜೊತೆ ನಿಮ್ಮ ಯೌವನ ಮರಳುತ್ತದೆ. ಈ ಡೇ ಕ್ರೀಂನಲ್ಲಿ SPF 30ಪಿ++ ಸಹ ಇರುತ್ತದೆ. ಈ ಕ್ರೀಂ ಚರ್ಮದ ಆಳದವರೆಗೂ ಹೋಗುತ್ತದೆ ಹಾಗೂ ಚರ್ಮಕ್ಕೆ ಹೆಚ್ಚಿನ ಕಾಂತಿ ತಂದುಕೊಡುತ್ತದೆ. ಜೊತೆಗೆ ಚರ್ಮದಲ್ಲಿ ತೇವಾಂಶ (ಆರ್ದ್ರತೆ) ಉಳಿಸಿಕೊಳ್ಳುವ ಕೆಲಸವನ್ನೂ ಮಾಡುತ್ತದೆ ಹಾಗೂ ಅದನ್ನು ಅತಿ ಕೋಮಲ ಮತ್ತು ಟೋನ್ಡ್ ಆಗಿರಿಸುತ್ತದೆ.

ಪೌಷ್ಟಿಕ ಆಹಾರ ನಿದ್ದೆ ನಿಮ್ಮ ಆಹಾರ ಪೌಷ್ಟಿಕವಾಗಿದ್ದು, ನಿದ್ದೆಗೆ ಸೂಕ್ತ ಕಾಲಾವಕಾಶ ಕೊಡುತ್ತಿದ್ದರೆ, ಇದನ್ನು ನಿಮ್ಮ ಮುಖ ಕನ್ನಡಿಯಂತೆ ತೋರಿಸಿ ಚರ್ಮದ ಕಾಂತಿ 100% ಪ್ರತಿಬಿಂಬಿಸುತ್ತದೆ. ಹೀಗಾಗಿ ನೈಸರ್ಗಿಕ ವಿಧಾನದಿಂದ ಮುಖದ ಕಾಂತಿ ಬಯಸಿದರೆ, ಉತ್ತಮ ಪೌಷ್ಟಿಕ ಆಹಾರ ಮತ್ತು ಧಾರಾಳ ನಿದ್ದೆಗೆ ಅವಕಾಶ ಕೊಡಿ, ಚರ್ಮ ನಳನಳಿಸುತ್ತದೆ.

ಈ ಗುಣಗಳೇ ಮುಖ್ಯ ಆಯುರ್ವೇದಿಕ್‌ ಕ್ಲೆನ್ಸರ್‌ ಮತ್ತು ಡೇ ಕ್ರೀಂ ಅಮೂಲ್ಯ ಗುಣಗಳ ಭಂಡಾರವಾಗಿದೆ. ಇದರಲ್ಲಿ ಚರ್ಮದ ಸೌಂದರ್ಯ ಉಳಿಸಿಕೊಡುವ ಉತ್ತಮ ಉತ್ಪನ್ನಗಳು ಅಡಗಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ