ಇಂಥ ಪಾರ್ಟಿಗಳಲ್ಲಿ ಸೀರೆ, ದಾವಣಿ, ಲೆಹಂಗಾಗಳ ಜೊತೆ ಈ ಸಲದ ದೀಪಾವಳಿಗೆ ಇಂಡೋವೆಸ್ಟರ್ನ್‌ ಔಟ್‌ಫಿಟ್ಸ್ ಜೊತೆ ನಿಮ್ಮ ಮೇಕಪ್‌ ಹೇಗಿರಬೇಕೆಂದು ಎಕ್ಸ್ ಪರ್ಟ್ಸ್ ಸಲಹೆ ಪಡೆಯೋಣವೇ?

ಫೇಶಿಯಲ್ ಇದಕ್ಕಾಗಿ ನಿಮ್ಮ ನಿಮ್ಮ ಚರ್ಮಕ್ಕೆ ತಕ್ಕಂತೆ ಫೇಶಿಯಲ್ ಮಾಡಿಸಿ. ನಿಮ್ಮ ಚರ್ಮಕ್ಕೆ ಸೂಕ್ತ ಎನಿಸುವುದಾದರೆ ಪ್ರತಿದಿನ ವೈನ್‌ ಫೇಶಿಯಲ್ ಮಾಡಿಸಿ. ಇದರಲ್ಲಿ ಗುಲಾಬಿ ದಳಗಳೊಂದಿಗೆ ಲೈನ್‌ ಬೆರೆಸಿ ಫೇಶಿಯಲ್ ಮಾಡಲಾಗುತ್ತದೆ. ಈ ಫೇಶಿಯಲ್‌ನಿಂದ ಚರ್ಮದ ಡೆಡ್‌ ಸೆಲ್ಸ್ ದೂರವಾಗುತ್ತವೆ ಹಾಗೂ ರಕ್ತ ಸಂಚಾರ ಚುರುಕಾಗುತ್ತದೆ. ರೆಡ್‌ ವೈನ್‌ನಲ್ಲಿರುವ ಕೆಮಿಕಲ್ಸ್ ಪಿಗ್ಮೆಂಟೇಶನ್‌ ಕಡಿಮೆ ಮಾಡಲು ನೆರವಾಗುತ್ತದೆ. ಇದರಿಂದ ಟ್ಯಾನಿಂಗ್‌ ಸಹ ದೂರಾಗುತ್ತದೆ. ಗುಲಾಬಿ ದಳಗಳಿಂದ ಕೆಲವು ದಿನಗಳ ಮೊದಲೇ ಈ ಫೇಶಿಯಲ್ ಮಾಡಿಸಿಕೊಳ್ಳಿ, ಆಗ ದೀಪಾವಳಿ ಹಬ್ಬದಲ್ಲಿ ಮುಖ ಉತ್ತಮ ಗ್ಲೋ ಗಳಿಸುತ್ತದೆ.

ಕ್ಲೆನ್ಸಿಂಗ್‌ನ ಚಮತ್ಕಾರ

ಮೇಕಪ್‌ಗೆ ಮೊದಲು ಚರ್ಮವನ್ನು ಅದಕ್ಕಾಗಿ ಸಿದ್ಧಗೊಳಿಸುವುದು ಬಲು ಅವಶ್ಯಕ. ಇದಕ್ಕಾಗಿ ಮುಖದ ಜೊತೆಗೆ ಕುತ್ತಿಗೆಯನ್ನೂ ಶುಚಿಗೊಳಿಸಬೇಕಾಗುತ್ತದೆ. ಹೀಗಾಗಿ ನೀಟಾಗಿ ಕ್ಲೆನ್ಸಿಂಗ್‌ ಕ್ಲೆನ್ಸರ್‌ ಬಳಸಬಹುದು.

ನಿಮ್ಮ ಚರ್ಮ ಬಹಳ ಡ್ರೈ ಆಗಿದ್ದರೆ, ನೀವು ಮಾಯಿಶ್ಚರೈಸರ್‌ ಕಂಟೆಂಟ್‌ವುಳ್ಳ ಕ್ಲೆನ್ಸರ್‌ನ್ನೇ ಬಳಸಬೇಕು. ಇದರಿಂದ ಚರ್ಮದ ಬ್ಯಾಲೆನ್ಸ್ ಸರಿಯಾಗಿರುತ್ತದೆ, ಸ್ಕಿನ್‌ ಡ್ರೈ ಆಗುವುದಿಲ್ಲ. ನಿಮ್ಮ ಸ್ಕಿನ್‌ ಆಯ್ಲಿ ಆಗಿದ್ದರೆ ನಿಂಬೆ, ಬೇವಿನ ಅಂಶವುಳ್ಳ ಕ್ಲೆನ್ಸರ್ ಬಳಸಬೇಕು.

ಕ್ಲೆನ್ಸಿಂಗ್‌ಗಾಗಿ ಮನೆಮದ್ದು

ಹೋಂ ಮೇಡ್‌ ಕ್ಲೆನ್ಸರ್‌ಗಾಗಿ ಹಸಿ ಹಾಲಿನಲ್ಲಿ ಹತ್ತಿ ಅದ್ದಿಕೊಂಡು ಮುಖ ಮತ್ತು ಕುತ್ತಿಗೆ ಪೂರ್ತಿ ಒರೆಸಿಕೊಳ್ಳಿ. ಇದು ಎಲ್ಲಾ ಬಗೆಯ ಚರ್ಮಕ್ಕೂ ಅನ್ವಯಿಸುತ್ತದೆ. ನಿಮ್ಮ ಚರ್ಮ ಹೆಚ್ಚು ಆಯ್ಲಿ ಆಗಿದ್ದರೆ, ಬಳಸಿದ ಟೀಬ್ಯಾಗ್‌ ಯೂಸ್‌ ಮಾಡಿ. ಟೀ ಬ್ಯಾಗ್‌ ಚರ್ಮದಿಂದ ಹೆಚ್ಚುವರಿ ಜಿಡ್ಡನ್ನು ಹೀರಿಬಿಡುತ್ತದೆ. ಜೊತೆಗೆ 1 ಚಮಚ ನಿಂಬೆ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಕ್ಲೆನ್ಸರ್‌ ತರಹ ಮುಖಕ್ಕೆ ಹಚ್ಚಿ ಬಳಸಿರಿ.

ಕ್ಲೆನ್ಸಿಂಗ್‌ ನಂತರ ಟೋನಿಂಗ್‌ ಅತಿ ಅಗತ್ಯ. ಇದಕ್ಕಾಗಿ ಗುಲಾಬಿ ಜಲ ಬಳಸಿಕೊಳ್ಳಿ. ಮೇಕಪ್‌ ಬಹಳ ಹೊತ್ತು ಬಾಳಿಕೆ ಬರಬೇಕೆಂದರೆ, ಬೆವರು ಜಿನುಗಬಾರದೆಂದರೆ, ಮುಖವನ್ನು ಐಸ್‌ ಕ್ಯೂಬ್‌ನಿಂದ ನೀಟಾಗಿ ಒರೆಸಬೇಕು. ಐಸ್‌ನ ಕೂಲಿಂಗ್‌ನಿಂದ ಬೆವರು ಜಿನುಗದು. ಇದೂ ಸಹ ಒಂದು ರೀತಿಯಲ್ಲಿ ಟೋನರ್‌ ಕೆಲಸ ಮಾಡುತ್ತದೆ.

ಕ್ಲೆನ್ಸಿಂಗ್‌ ನಂತರ ಮಾಯಿಶ್ಚರೈಸರ್‌ ಯಾವುದೇ ಮೇಕಪ್‌ ಮಾಡುವ ಮೊದಲು ಮಾಯಿಶ್ಚರೈಸರ್‌ ಹಚ್ಚುವುದು ಅತ್ಯಗತ್ಯ. ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಲಭ್ಯವಿರುವ ಪ್ರಾಡಕ್ಟ್ಸ್ ಪ್ರಕಾರ, ಅವು ಮಾಯಿಶ್ಚರೈಸರ್‌ + ಪ್ರೈಮರ್‌ ಎರಡರ ಕೆಲಸವನ್ನೂ ಮಾಡುತ್ತವೆ. ನೀವು ಬಯಸಿದರೆ ಪ್ರೈಮರ್‌ ಬದಲು ಇಂಥದ್ದನ್ನೇ ಕೊಳ್ಳಬಹುದು.

ಪ್ರೈಮರ್‌ ಮಾಯಿಶ್ಚರೈಸರ್‌ ಮತ್ತು ಪ್ರೈಮರ್‌ ಬಳಕೆಯ ಮಧ್ಯೆ 2-3 ನಿಮಿಷಗಳ ಗ್ಯಾಪ್‌ ಕೊಡಿ. ಪ್ರೈಮರ್‌ನ್ನು ಫಿಂಗರ್‌ ಟಿಪ್‌ನಿಂದ ಹಣೆ, ಕಂಗಳ ಕೆಳಗೆ, ಗಲ್ಲದ ಬಳಿ, ಕಿವಿಗಳ ಮೇಲೆ, ಕುತ್ತಿಗೆ ಬಳಿ.... ಡಾಟ್‌ ಡಾಟ್‌ ಆಗಿ ಇರಿಸುತ್ತಾ, ತೀಡಿ ಅದರಿಂದಲೇ ಬ್ಲೆಂಡ್ ಮಾಡಿ ಸರಿಪಡಿಸಿ. ಪ್ರೈಮರ್‌ನಿಂದ ಸ್ಕಿನ್‌ ಸ್ಮೂತ್‌ ಆದಾಗ, ಮುಖ ಮೇಕಪ್‌ಗಾಗಿ ಸಿದ್ಧವಾಗುತ್ತದೆ. ಮೇಕಪ್‌ ವಾಟರ್‌ ಪ್ರೂಫ್ ಆದರೆ ಇನ್ನೂ ಒಳ್ಳೆಯದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ