ಧರ್ಮಗುರು ಮಾಡಲಾಗದ್ದು ಏನಾದರೂ ಇದೆಯೇನು? : ರಷ್ಯಾದ ಇತಿಹಾಸದಲ್ಲಿ ಕೊನೆಯ ಆಡಳಿತಗಾರ ಜಾರ್‌ ನಿಕೋಲಸ್‌ನ ಅರಮನೆಯಲ್ಲೇ ನೆಲೆಸಿದ್ದ ಧರ್ಮಗುರು ರಾಸ್ ಪುಟಿನ್‌ ಬಹು ಚರ್ಚಿತ ವ್ಯಕ್ತಿ. ಅಸಲಿಗೆ ಆತನೇ ರಾಜ್ಯಭಾರ ನಡೆಸುತ್ತಿದ್ದ ಎಂಬುದು ಪ್ರತೀತಿ. ಆತ ಮಹಾರಾಣಿ ಝರೀನಾಳನ್ನು ತನ್ನ ಅಂಕೆಯಲ್ಲಿರಿಸಿಕೊಂಡಿದ್ದ. ಆತನ ಕುರಿತು ಹಲವು ಹನ್ನೊಂದು ಸಿನಿಮಾಗಳು ಮೂಡಿಬಂದಿವೆ. ಇತ್ತೀಚೆಗಷ್ಟೆ‌ ಡಿಝ್ನಿ ಕಡೆಯಿಂದ ಒಂದು ಚಿತ್ರ ಬಿಡುಗಡೆಯಾಯಿತು. ಶ್ರೀಮಂತ ಮನೆತನಗಳಲ್ಲಿ ಇಂಥ ಧರ್ಮಗುರುಗಳ ವರ್ಚಸ್ಸು ಬಲು ಮಹತ್ವದ್ದು. ಅವನ ಸಲಹೆ ರಾಜನಿಗೆ ವೇದವಾಕ್ಯ, ರಾಣಿಯರನ್ನು ಲೈಂಗಿಕ ಸುಳಿಯಲ್ಲಿ ಸಿಲುಕಿಸುತ್ತಿದ್ದವು. ಧರ್ಮಗುರು ಏನೆಲ್ಲ ಮಾಡಬಹುದೆಂಬುದಕ್ಕೆ ಆಸಾರಾಮ್ ಮತ್ತು ಅವನ ಮಗನಿಗಿಂತ ಬೇಕೆ?

samachar-darshan-3

ಇದೀಗ ಬಿಕಿನಿ ವರ್ಲ್ಡ್ ಕಪ್‌ : ಬಿಕಿನಿ ಧರಿಸುವುದೇನೂ ಸುಲಭದ ಕೆಲಸವಲ್ಲ. ಜನ ಚುಡಾಯಿಸುತ್ತಾರೆ ಎಂಬ ಕಾರಣಕ್ಕಲ್ಲ, ಬದಲಿಗೆ ಕೆಲವೇ ಕೆಲವು ಮಹಿಳೆಯರು ಮಾತ್ರವೇ ಬಿಕಿನಿಗೆ ಫಿಟ್‌ ಎನಿಸುವುದರಿಂದ! ಇತ್ತೀಚೆಗಂತೂ ಇದರ ವರ್ಲ್ಡ್ ಕಪ್ ಆಸ್ಟ್ರಿಯಾದ ಸೇಂಟ್‌ ಪೋಲ್ಟನ್‌ ನಗರದಲ್ಲಿ ಹೀಗೆ ನಡೆಯಿತು.

samachar-darshan-4

ಎನ್ನ ಸಮಾನರಾರಿಹರು? : ಇದೆಂಥ ಸ್ಟೈಲಿಶ್‌ ಡಾಗಿ ಎಂದು ಇದನ್ನು ಕಂಡು ಸಿಳ್ಳೆ ಹೊಡೆದೀರಿ, ಏಕೆಂದರೆ ಇದರ ಕೂರಲುಗಿನ ಹಲ್ಲು ನಿಮ್ಮ ಮೈಯಲ್ಲಿಳಿದರೆ 14 ಅಲ್ಲ, 1,400 ಇಂಜೆಕ್ಷನ್‌ ಚುಚ್ಚಿಸಿಕೊಳ್ಳಬೇಕಾದೀತು. ಇಡೀ ದೇಶದಲ್ಲಿ ಎಲ್ಲೆಡೆ ಅತ್ಯಾಚಾರಕ್ಕೆ ಒಳಗಾಗುತ್ತಾ ತೆಪ್ಪಗೆ ಸಹಿಸುವ ನಮ್ಮ ಹೆಣ್ಣುಮಕ್ಕಳಂತಲ್ಲ ಈ ಹೆಣ್ಣು ನಾಯಿ.

samachar-darshan-2 - Copy

ಪ್ರಾಣಿಗಳ ಅಸ್ತಿತ್ವಕ್ಕೆ ಬೆಲೆ ಇಲ್ಲವೇ? : ಪ್ರಾಣಿಗಳ ಹಕ್ಕುಗಳ ಕುರಿತಾಗಿ ಈಗ ವಿಶ್ವದೆಲ್ಲೆಡೆ ಕೇಳಿಬರುತ್ತಿದೆ. ರಷ್ಯಾದಲ್ಲಿ 30 ಆ್ಯಕ್ಟಿವಿಸ್ಟ್ ಗಳು ನಾರ್ಥ್‌ ಸೀನಲ್ಲಿ,ಪ್ರಾಣಿಗಳ ಕೊಬ್ಬನ್ನು ಬೇರ್ಪಡಿಸಿ ಸಂಸ್ಕರಿಸುವ ಘಟಕದಲ್ಲಿ ಅವನ್ನು ಸೆರೆಹಿಡಿದಾಗ, ಭಾರತವನ್ನೂ ಒಳಗೊಂಡಂತೆ ಪ್ರಾಣಿಗಳ ಪರವಾಗಿ ಎಲ್ಲೆಡೆ ಕೂಗು ಕೇಳಿಸಿತು. ಎಲ್ಲೆಡೆ ಪ್ರಾಣಿಪರ ಆ್ಯಕ್ಟಿವಿಸ್ಟ್ ಗಳು ತಮ್ಮನ್ನು ತಾವೇ ಕೃತಕ ಜೇಲಿನಲ್ಲಿ ಬಂಧಿಸಿಕೊಂಡು, ರಷ್ಯಾದ ಕರಡಿ ಉಳಿಸಿ ಎಂದು ಹೋರಾಡಿದರು. ಪಬ್ಲಿಕ್‌ ಬೆಂಬಲಕ್ಕೆ ಬೆದರಿ ರಷ್ಯಾ ಸರ್ಕಾರ ಅರನ್ನು ಬಿಡುಗಡೆ ಮಾಡಿತು.

samachar-darshan-5 - Copy

ಪ್ರತಿಷ್ಠೆಗೆ ಬಂದ ಆಪತ್ತು : ಇಟಲಿಯ ರಂಗೀಲಾ ಪ್ರಧಾನಮಂತ್ರಿ ಸಿಲ್ವೂಲೋ ಬರ್ಲುಸ್ಕೋನಿ ನಿಜಕ್ಕೂ ಅಸಾಮಾನ್ಯ ವಿಕ್ಷಿಪ್ತ ವ್ಯಕ್ತಿ. ಸಾವಿರಾರು ಆರೋಪಗಳಿದ್ದರೂ ಪ್ರತಿ ಚುನಾವಣೆಯಲ್ಲೂ ಗೆಲ್ಲುತ್ತಲೇ ಇರುವಾತ. ಅತ್ಯಾಚಾರ, ದಗಾ, ಮೋಸಗಾರಿಕೆ ಕಾರಣ ಶಿಕ್ಷೆ ಪಡೆದಿದ್ದರೂ ಪ್ರಧಾನಮಂತ್ರಿ ಹುದ್ದೆ ಬಿಟ್ಟನಲ್ಲ. ಈಗಂತೂ ಅಲ್ಲಿನ ಸಂಸತ್ತು ಈತನನ್ನು ವಜಾಗೊಳಿಸಿದೆ. ಆದರೆ ಹೆಂಗಸರ ವಿಷಯದಲ್ಲೂ ಈತನಿಗೆ ರಾಜಕೀಯದಲ್ಲಿ ಹೆಚ್ಚಿನ ಪೊಟೆನ್ಸಿ ಇದೆ ಎಂಬುದು ನಿಜ. ಪಕ್ಕದಲ್ಲಿನ ಈತನ ಮಾಜಿ ಪ್ರೇಯಸಿ ಕೇವಲ 17-18 ವರ್ಷದವಳೆಂಬುದು ಗಮನಾರ್ಹ.

samachar-darshan-7 - Copy

ಈಕೆಗೆ ಕೈಕೈ ಮಿಲಾಯಿಸುವ ಎದೆಗಾರಿಕೆಯುಂಟೆ? : ಈಗ ಬಾಡಿ ಬಿಲ್ಡಿಂಗ್‌ನಲ್ಲಿ ಹೆಂಗಸರೇನೂ ಕಡಿಮೆ ಇಲ್ಲ ಬಿಡಿ. ಈಕೆಯ ಮಸಲ್ಸ್, ಬೈಸೆಪ್ಸ್ ಗಮನಿಸಿದರೆ ನಮ್ಮ ಜಿಮ್ ಪಡ್ಡೆಗಳ ಬೆವರು ಕಿತ್ತುಕೊಳ್ಳುವಂತಿದೆ. ಈಕೆಯ ಕೈಹಿಡಿದ ಪತಿ ಮೊದಲ ರಾತ್ರಿ ಯಾವುದಕ್ಕೂ ಹೆಚ್ಚಿನ ಎಚ್ಚರಿಕೆ ವಹಿಸುವುದು ಲೇಸು.

samachar-darshan-6 - Copy

ಕುಳಿತಲ್ಲಿಯೇ ಮಾಲಾಮಾಲ್ : ಇದೋ ಬಂದಿದೆ 70 ಲಕ್ಷ ಡಾಲರ್‌ನ ಹೊಸ ಲಾಟರಿ, ಇಂದೇ ಟಿಕೆಟ್‌ ಖರೀದಿಸಿ! ಲಕ್ಷ ಲಕ್ಷ ಸಿಗುತ್ತೆ ಅಂದಾಗ ಜನ ಕ್ಯೂ ನಿಂತು ಟಿಕೆಟ್‌ ಕೊಳ್ಳುತ್ತಾರೆ. ಜಪಾನಿನ ಈ ಹೊಸ ಲಾಟರಿ ಕೊಂಡು ಕಷ್ಟಪಡದೆ ಆಸ್ತಿ ಮಾಡಿಕೊಳ್ಳಲು ಯಾರಿಗೆ ತಾನೇ ಇಷ್ಟವಿರದು? ಯಾರು ತಮ್ಮ ಬಿಸ್‌ನೆಸ್‌ನಿಂದ ಶ್ರೀಮಂತರಾಗುತ್ತಾರೋ ಇಲ್ಲವೇ, ಲಾಟರಿ ಆಯೋಜಕರಂತೂ ಕೋಟಿ ಕೋಟಿ ಬಾಚಿಕೊಳ್ಳುತ್ತಾರೆ. ಹೀಗಾಗಿ ಲಾಟರಿ ಮಾರಾಟಕ್ಕಾಗಿ ಇನ್ನಿಲ್ಲದ ಸರ್ಕಸ್‌ಮಾಡುತ್ತಾರೆ.

samachar-darshan-8

ಹಾಡಿನ ಜೊತೆ ಮಜಾ ಕೂಡ : ವಿದೇಶೀ ಗಾಯಕಿಯರು ಹಾಡುವುದು ಮಾತ್ರವಲ್ಲ, ವೇದಿಕೆ ಮೇಲೆ ಗ್ಲಾಮರಸ್‌ ಪರ್ಫಾರ್ಮೆನ್ಸ್ ನೀಡುತ್ತಾ, ನಟಿಸಲೂಬೇಕು.ಈ ಪಾಶ್ಚಾತ್ಯ ಗಾಯಕಿ ಲೆಝ್ಲೀ ಗ್ರೇಸ್‌ಳನ್ನೇ ನೋಡಿ, ಗಾಯನದೊಂದಿಗೆ ಸಹನಟರನ್ನೂ ಹೊಂದಿದ್ದು ಶೋ ನಿಭಾಯಿಸಬೇಕಿದೆ. ಆಗಲೇ ಪ್ರೇಕ್ಷಕರಿಗೆ ಹೆಚ್ಚಿನ ಮಜಾ, ಏನಂತೀರಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ