ಈ ಪ್ರಪಂಚದಲ್ಲಿ ಜನರು ಹಣ ಸಂಪಾದಿಸುತ್ತಾರೆ. ಸಂಪಾದಿಸಿಟ್ಟ ಹಣ ವೃದ್ಧಿಯಾಗಲಿ, ಲಕ್ಷ್ಮಿ ನಮ್ಮ ಮನೆಯಲ್ಲಿಯೇ ಕಾಲು ಮುರಿದುಕೊಂಡು ಬಿದ್ದಿರಲಿ ಎಂಬ ಭ್ರಾಂತಿಯಿಂದ, ಇನ್ನಿಲ್ಲದ  ಹೋಮ, ಹವನ, ದಾನ, ಧರ್ಮ, ಪೂಜೆ, ಪುನಸ್ಕಾರಗಳ ಮೊರೆ ಹೋಗುತ್ತಾರೆ. ಆದರೆ ಇವುಗಳನ್ನೆಲ್ಲ ಮಾಡಿದ ಮೇಲೂ ಯಾರದಾದರೂ ಸಂಪತ್ತು ಇಮ್ಮಡಿಯಾಗಿದೆಯಾ.....? ಇಮ್ಮಡಿಯಾಗುವುದಿರಲಿ, ಶ್ರಮಪಟ್ಟು ಬೆವರು ಹರಿಸಿ ಸಂಪಾದಿಸಿದ ಐಶ್ವರ್ಯದ ಮಡಕೆಗೆ ತೂತು ಉಂಟಾಗಿ ನಿಧಾನಕ್ಕೆ ಸೋರತೊಡಗುತ್ತದೆ. ಇಷ್ಟಾದರೂ, ಈ ಸೂಕ್ಷ್ಮ ಯಾರಿಗೂ ಅರ್ಥವಾಗುತ್ತಿಲ್ಲ!

ಇನ್ವೆಸ್ಚ್ ಮೆಂಟ್‌ ಗುರು ಕುಮಾರ್‌ ಹೇಳುತ್ತಾರೆ,  ``ಕಷ್ಟಪಟ್ಟು ಗಳಿಸಿದ ಸಂಪಾದನೆಯನ್ನು ಸೂಕ್ತ ಸಮಯದಲ್ಲಿ, ಸೂಕ್ತ ಜಾಗದಲ್ಲಿ ಹೂಡಿಕೆ ಮಾಡಿದರೆ, ಖಂಡಿತವಾಗಿಯೂ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು. ಹೂಡಿಕೆಗೆಂದೇ ಸಾಕಷ್ಟು ವಿಪುಲ ಅವಕಾಶಗಳಿದ್ದವು, ಅವುಗಳ ಕುರಿತು ಮುಂದೆ ವಿಸ್ತೃತವಾಗಿ ಚರ್ಚಿಸಲಾಗುವುದು. ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಹೂಡಿಕೆ ಮಾಡಿದಲ್ಲಿ ನಿಮ್ಮ ಬಂಡವಾಳದ ಅಭಿವೃದ್ಧಿಗೆ ಸಂಶಯವಿಲ್ಲ.''

ಎಸ್‌ಐಪಿ ಮತ್ತು ಇಟಿಎಫ್‌

ಮ್ಯೂಚುಯಲ್ ಫಂಡ್‌ನ ಎಸ್‌ಐಪಿ (ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್ ಮೆಂಟ್‌ ಪ್ಲ್ಯಾನ್‌)ಯಲ್ಲಿ ಹಣ ಹೂಡುವುದು ಲಾಭದಾಯಕವಾಗಿರುತ್ತದೆ. ಹೂಡಿಕೆದಾರರಿಗೆ ಮಾರ್ಕೆಟ್‌ ಬಗ್ಗೆ ತಿಳಿವಳಿಕೆ ಇಲ್ಲವಾದರೆ ಅಥವಾ ಮಾರುಕಟ್ಟೆಯನ್ನು ಅಭ್ಯಸಿಸಿ ಹೂಡಿಕೆ ಮಾಡಲು ಸಮಯಾವಕಾಶ ಇಲ್ಲದಿದ್ದರೆ ಇಂತಹ ಅವಕಾಶಗಳಲ್ಲಿ ಹೂಡಿಕೆ ಮಾಡಿ ಷೇರು ಮಾರುಕಟ್ಟೆಯ ಭರಾಟೆಯ ಲಾಭಾಂಶವನ್ನು ತಮ್ಮದಾಗಿಸಿಕೊಳ್ಳಬಹುದು. ಇವನ್ನು ಇಂಡೆಕ್ಸ್ ಆಧಾರಿತ ಇಟಿಎಫ್‌ (ಎಕ್ಸ್ ಚೇಂಜ್‌ ಟ್ರೇಡೆಡ್‌ ಫಂಡ್‌)ನಲ್ಲಿ ಬಂಡವಾಳ ಹೂಡಿ ನಿಶ್ಚಿಂತೆಯಿಂದ ಕುಳಿತುಕೊಳ್ಳಬಹುದು. ಇದರ ವ್ಯವಹಾರ ಕೂಡ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಏರಿಕೆ ಮತ್ತು ಇಳಿಕೆಯಂತೆಯೇ ನಡೆಯುತ್ತದೆ.

ಪಿಪಿಎಫ್

ಪಿಪಿಎಫ್‌ (ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌)ನಲ್ಲಿ ಬಂಡವಾಳ ಹೂಡುವುದರಿಂದ, ಲಾಭದ ಜೊತೆಗೆ ತೆರಿಗೆ ವಿನಾಯಿತಿಯೂ ದೊರೆಯುತ್ತದೆ. ಇದು ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಮತ್ತು ಇದಕ್ಕೆ ಸಿಗುವ ಬಡ್ಡಿ ದರವನ್ನು ಸಾಮಾನ್ಯ ಬ್ಯಾಂಕ್‌ ದರಗಳಿಗೆ ಹೋಲಿಸಿದರೆ ಅಧಿಕವಾಗಿರುತ್ತದೆ. ಕನಿಷ್ಠ 500 ರೂ.ಗಳಿಂದ ಇದರಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.

ಫಿಕ್ಸ್ಡ್ ಡೆಪಾಸಿಟ್

ಬ್ಯಾಂಕ್‌ಗಳಲ್ಲಿ ನಿಗದಿತ ಸಮಯಕ್ಕೆ ಅನುಗುಣವಾಗಿ ಫಿಕ್ಸ್ಡ್ ಡೆಪಾಸಿಟ್‌ ಸ್ಕೀಮ್ ನಲ್ಲಿ ಬಂಡವಾಳ ತೊಡಗಿಸಿ ಉತ್ತಮ ಲಾಭ ಪಡೆಯಬಹುದು.  ಇದರಲ್ಲಿ ಎಷ್ಟು ದೀರ್ಘಕಾಲದವರೆಗೆ ಹಣ ಹೂಡುತ್ತೀರೊ ಅಷ್ಟು ಹೆಚ್ಚು ಬಡ್ಡಿಯ ಲಾಭ ಪಡೆಯಬಹುದು. ಇದರಲ್ಲಿ ಯಾವುದೇ ಅಪಾಯವಿರುವುದಿಲ್ಲ ಮತ್ತು ನಿಮ್ಮ ತುರ್ತು ಪರಿಸ್ಥಿತಿಗಳಲ್ಲಿ ಈ ಫಿಕ್ಸ್ಡ್ ಡೆಪಾಸಿಟ್‌ನ್ನು ಒಡೆದು, ಹಣ ಪಡೆದುಕೊಂಡು ತುರ್ತು ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಅಲ್ಲದೇ, ಇದರಲ್ಲಿ ನೀವು ಹೂಡಿದ ಬಂಡವಾಳದ ಆಧಾರದ ಮೇಲೆ ಕಿರು ಸವಾಲನ್ನೂ ಪಡೆಯಬಹುದು.

ರಿಯಲ್ ಎಸ್ಟೇಟ್

ಇದರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕ, ನಿಜ. ಆದರೆ ಇಲ್ಲಿ ಹೂಡಿಕೆಯ ಬಂಡವಾಳ ಕೊಂಚ ಮಟ್ಟಿಗೆ ದೊಡ್ಡದಾಗಿರುತ್ತದೆ. ಸಾಮಾನ್ಯ ಹೂಡಿಕೆದಾರರಿಗೆ ಇದು ಕಷ್ಟಸಾಧ್ಯದ ವಿಚಾರ. ನಿಮ್ಮ ನಿವ್ವಳ ಸಂಪಾದನೆಯ ಆಧಾರದ ಮೇಲೆ ಬ್ಯಾಂಕ್‌ನಿಂದಾಗಲಿ ಅಥವಾ ಎಲ್ಐಸಿಯಿಂದಾಗಲಿ ಗೃಹಸಾಲ ಪಡೆದುಕೊಂಡು ಮನೆ, ನಿವೇಶನ ಅಥವಾ ಜಮೀನು ಕೊಂಡುಕೊಳ್ಳುವ ಪ್ರಯತ್ನ ಮಾಡಿ. ಇವುಗಳ ಬೆಲೆಗಳು ತೀವ್ರ ಗತಿಯಲ್ಲಿ ಬೆಳೆಯುತ್ತವಲ್ಲದೆ, ಇದರಲ್ಲಿ ಬಂಡವಾಳ ಹೂಡುವವರಿಗೆ ಯಾವುದೇ ಕಷ್ಟದ ಭೀತಿ ಇರುವುದಿಲ್ಲ. ರಿಯಲ್ ಎಸ್ಟೇಟ್‌ನಲ್ಲಿ ಬಂಡವಾಳ ತೊಡಗಿಸುವ ಮುನ್ನ ಸಂಬಂಧಿಸಿದ ಡಾಕ್ಯುಮೆಂಟ್‌ಗಳ ಸಂಪೂರ್ಣ ಪರಿಶೀಲನೆ ಅತ್ಯಗತ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ