ಡಾ. ಜಾಕಿಯಾ ಖಾನ್‌ ಮುಂಬೈನ ಏಕೈಕ ಮಹಿಳಾ ಕಾರ್ಡಿಯಾಲಜಿಸ್ಟ್ ಮತ್ತು ಕ್ಲಿನಿಕ್‌ ಮತ್ತು ನಾನ್‌ ಇನ್‌ವೇಸಿವ್ ‌ವಿಧಾನದಿಂದ ಹಾರ್ಟ್‌ ಸರ್ಜರಿ ಮಾಡುವ ಡಾ. ಜಾಕಿಯಾ ಫೋರ್ಟಿಸ್‌ ಹಾಸ್ಪಿಟಲ್ ನ ಇಂಟರ್‌ ನ್ಯಾಷನ್‌ ಕಾರ್ಡಿಯಾಲಜಿಸ್ಟ್ ಆಗಿದ್ದಾರೆ. ಅವರೊಡನೆ ನಡೆಸಿದ ಮಾತುಕಥೆಯ ಮುಖ್ಯ ಅಂಶಗಳು :

ತೂಕವನ್ನು ಯಾವಾಗಲೂ ನಿಯಂತ್ರಿಸಿಕೊಳ್ಳಿ.

ನಿಯಮಿತವಾಗಿ ವ್ಯಾಯಾಮ ಮಾಡಿ.

30-35ರ ವಯಸ್ಸಿನಿಂದಲೇ ಸಂಪೂರ್ಣ ಹೆಲ್ತ್ ಚೆಕಪ್‌ ಮಾಡಿಸಿ.

ಬ್ಲಡ್‌ ಪ್ರೆಶರ್‌, ಶುಗರ್‌, ಕೊಲೆಸ್ಟ್ರಾಲ್ ಇತ್ಯಾದಿ ನಿಯಮಿತವಾಗಿ ಪರೀಕ್ಷೆ ಮಾಡಿಸಿ. ಏಕೆಂದರೆ ಈ ಕಾಯಿಲೆಗಳೆಲ್ಲ ಸೈಲೈಂಟ್ ಕಿಲ್ಲರ್‌ ಆಗಿವೆ.

ಹಾರ್ಟ್‌ ಡಿಸೀಸ್‌ ಆನುವಂಶೀಯವಾದ್ದರಿಂದ ಇದರ ಅಪಾಯ ಹೆಚ್ಚು.

ಹೆಲ್ದಿ ಡಯೆಟ್‌ ತೆಗೆದುಕೊಳ್ಳಿ. ಹೆಚ್ಚಿನ ಜನರಲ್ಲಿ ಹಾರ್ಟ್‌ ಅಟ್ಯಾಕ್‌ ಬಗ್ಗೆ 1 ವಾರಕ್ಕೆ ಮೊದಲೇ ಸೂಚನೆ ಸಿಗುತ್ತದೆ. ಒಮ್ಮೊಮ್ಮೆ 1 ತಿಂಗಳ ಮೊದಲು. ಜನ ಅದನ್ನು ಅಸಿಡಿಟಿ ಎಂದು ತಿಳಿಯುತ್ತಾರೆ. ಕೆಲವು ಲಕ್ಷಣಗಳು ಕೆಳಗಿನಂತಿವೆ :

ಇದ್ದಕ್ಕಿದ್ದಂತೆ ಎದೆಯಲ್ಲಿ  ಉರಿ, ನೋವುಂಟಾಗುವುದು.

ಬೆವರು ಸುರಿಯುವುದು.

ಮೆಟ್ಟಿಲು ಹತ್ತುವಾಗ ಏದುಸಿರು ಬಿಡುವುದು.

ವಾಕಿಂಗ್‌ಗೆ ಹೋಗಲಾಗದಿರುವುದು.

ಎದೆ ಭಾರವಾಗುವಿಕೆ

ಈ  ಎಲ್ಲ ಲಕ್ಷಣಗಳು ಅಲಾರ್ಮಿಂಗ್‌ ಆಗಿರುತ್ತವೆ ಮತ್ತು ಹಾರ್ಟ್‌ ಅಟ್ಯಾಕ್‌ ಆಗುವ ಬಗ್ಗೆ ಸಂಕೇತ ನೀಡುತ್ತವೆ. ಇವನ್ನು ಅಸಿಡಿಟಿ ಎಂದು ತಿಳಿದು ಸಮಯ ಹಾಳುಮಾಡಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ